WhatsApp Feature ಗ್ರೂಪ್ ಅಡ್ಮಿನ್‌ಗೆ ಸದಸ್ಯರ ಮೆಸೇಜ್ ಡಿಲೀಟ್ ಮಾಡಲು ಅನುಮತಿ, ವ್ಯಾಟ್ಸ್ಆ್ಯಪ್ ಹೊಸ ಫೀಚರ್!

By Suvarna News  |  First Published Jan 28, 2022, 4:31 PM IST
  • ವ್ಯಾಟ್ಸ್ಆ್ಯಪ್ ಫೀಚರ್‌ಗೆ ಮತ್ತೊಂದು ಸೇರ್ಪಡೆಗೆ ತಯಾರಿ
  • ಗ್ರೂಪ್ ಅಡ್ಮಿನ್‌ಗೆ ಸದಸ್ಯರ ಸಂದೇಶ ಅಳಿಸಲು ಅನುಮತಿ
  • ಶೀಘ್ರದಲ್ಲೇ WhatsApp ನೂತನ ಫೀಚರ್ಸ್ ಕಾರ್ಯರೂಪಕ್ಕೆ
     

ನವದೆಹಲಿ(ಜ.28): ವಿಶ್ವದ ಅತೀ ದೊಡ್ಡ ಮೆಸೇಜ್ ಸರ್ವೀಸ್ ಆ್ಯಪ್ ವ್ಯಾಟ್ಸ್ಆ್ಯಪ್(WhatsApp) ಕಾಲ ಕಾಲಕ್ಕೆ ತನ್ನ ಫೀಚರ್ಸ್, ನಿಯಮಗಳನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾ ಬಂದಿದೆ. ಬಳಕೆದಾರರ ಸುರಕ್ಷತೆ(User Safety), ಬಳಕೆದಾರರ ಅನಕೂಲತೆಗೆ ಅನುಗುಣವಾಗಿ ಹಲವು ಫೀಚರ್ಸ್ ಸೇರ್ಪಡಿಸಲಾಗಿದೆ. ಇದೀಗ ಕಳೆದ ಹಲವು ದಿನಗಳಿಂದ ಬಾರಿ ಚರ್ಚೆಯಾಗುತ್ತಿರುವ ವ್ಯಾಟ್ಸ್ಆ್ಯಪ್ ಗ್ರೂಪ್, ಗ್ರೂಪ್ ಸದಸ್ಯರು ಹಾಗೂ ಮೆಸೇಜ್‌ಗೆ ತಾರ್ಕಿಕ ಅಂತ್ಯ ನೀಡಲು ವ್ಯಾಟ್ಸ್ಆ್ಯಪ್ ಮುಂದಾಗಿದೆ. ಇದಕ್ಕಾಗಿ ಗ್ರೂಪ್ ಅಡ್ಮಿನ್‌ಗೆ(group admins) ಸದಸ್ಯರ ಮೆಸೇಜ್ ಡಿಲೀಟ್(Delete) ಮಾಡುವ ಅನುಮತಿಯನ್ನು ಹೊಸ ಫೀಚರ್‌ನಲ್ಲಿ ನೀಡಲಾಗುತ್ತಿದೆ.

ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸದಸ್ಯರೊಬ್ಬರ ಸಂದೇಶದಿಂದ ಅಡ್ಮಿನ್ ಮೇಲೆ ಕೇಸು ದಾಖಲಾದ ಹಲವು ಉದಾಹಣೆಗಳಿವೆ. ಗ್ರೂಪ್‌ನಲ್ಲಿ ಸದಸ್ಯ ಹಾಕಿದ ಒಂದು ಸಂದೇಶ ಹಲವು ಗ್ರೂಪ್‌ಗಳಲ್ಲಿ ಹರಿದಾಡಿದ ಕೋಲಾಹಲ ಸೃಷ್ಟಿಸಿದ ಅನೇಕ ಉದಾಹರಣೆಗಳು ಭಾರತದಲ್ಲಿದೆ. ಇದೀಗ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್(WhatsApp New Feature) ಕೊಂಚ ಮಟ್ಟಿಗೆ ಈ ಸಮಸ್ಯೆಗೆ ಬ್ರೇಕ್ ಹಾಕಲಿದೆ. ಗ್ರೂಪ್‌ನಲ್ಲಿ ಸದಸ್ಯರು ಹಾಕುವ ಅಸಂಬದ್ಧ, ಅನಗತ್ಯ, ಪ್ರಚೋದಿತ ಅಥವಾ ಇನ್ಯಾವುದೇ ಮೆಸೇಜನ್ನು(messages ) ಇದುವರೆಗೂ ಅಡ್ಮಿನ್‌ಗೆ ಡಿಲೀಟ್ ಮಾಡುವ ಅವಕಾಶ ಇರಲಿಲ್ಲ. ಮೆಸೇಜ್ ಹಾಕಿ ವ್ಯಕ್ತಿಯೆ ಡಿಲೀಟ್ ಫಾರ್ ಆಲ್ ನೀಡಿದರೆ ಮಾತ್ರ ಗ್ರೂಪ್‌ನಿಂದ ಮೆಸೇಜ್ ಅಳಿಸಿ ಹೋಗುತ್ತಿತ್ತು. ಆದರೆ ಇನ್ಮುಂದೆ ಗ್ರೂಪ್ ಅಡ್ಮಿನ್‌ಗೆ ವ್ಯಾಟ್ಸ್ಆ್ಯಪ್ ಈ ಅನುಮತಿಯನ್ನು ನೀಡುತ್ತಿದೆ. ಗ್ರೂಪ್‌ನ ಯಾವುದೇ ಸದಸ್ಯನ ಮೆಸೇಜನ್ನು ಅಳಿಸುವ ಸ್ವಾತಂತ್ರ್ಯವನ್ನು ಅಡ್ಮಿನ್‌ಗೆ ನೀಡಲಾಗುತ್ತಿದೆ.

Tap to resize

Latest Videos

undefined

WhatsApp Features: ಮೇಸೆಜ್‌ ನೋಟಿಫಿಕೇಶನ್‌ ಜತೆ ಪ್ರೊಫೈಲ್ ಫೋಟೋ ತೋರಿಸಲಿರುವ ವಾಟ್ಸಾಪ್‌!

ನೂತನ ಫೀಚರ್ಸ್ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಹೊಸ ಫೀಚರ್ಸ್ ಯಾವಾಗ ಜಾರಿಗೆ ಬರಲಿದೆ ಅನ್ನೋದನ್ನು  WhatsApp ಅಧಿಕೃತವಾಗಿ ಹೇಳಿಲ್ಲ. ಆದರೆ  Android ಮತ್ತು iOS ಗಾಗಿ WhatsApp ನ ಮುಂಬರುವ ಬೀಟಾ ಆವೃತ್ತಿಗಳಲ್ಲಿ ಬರುವ ನಿರೀಕ್ಷೆಯಿದೆ.

ಹೊಸ ಫೀಚರ್ಸ್ ಕುರಿತು ವ್ಯಾಟ್ಆ್ಯಪ್ ಫೀಚರ್ ಟ್ರಾಕರ್ WABetaInfo ಸ್ಕ್ರೀನ್‌ಶಾಟ್ ಹಂಚಿಕೊಂಡಿದೆ. ಈ ಮೂಲಕ WhatsAppನಲ್ಲಿ ಗ್ರೂಪ್ ಸದಸ್ಯ ಹಾಕಿದ ಯಾವುದೇ ಮೆಸೇಜ್ ಅಡ್ಮಿನ್ ಡಿಲೀಟ್ ಮಾಡಲು ಅವಕಾಶ ನೀಡಲಾಗಿದೆ. ಈಗಾಗಲೇ ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್ ಅಡ್ಮಿನ್‌ಗೆ ಸದಸ್ಯರ ಮೆಸೇಜ್ ಡಿಲೀಟ್ ಮಾಡುವ ಅವಕಾಶ ನೀಡಲಾಗಿದೆ. ಇದೇ ಫೀಚರ್ಸ್ ಇದೀಗ ವ್ಯಾಟ್ಸ್‌ನಲ್ಲೂ ಕಾರ್ಯರೂಪಕ್ಕೆ ಬರುತ್ತಿದೆ.

 

If you are a group admin, you will be able to delete any message for everyone in your groups, in a future update of WhatsApp beta for Android.

A good moderation, finally. pic.twitter.com/Gxw1AANg7M

— WABetaInfo (@WABetaInfo)

FACT Check ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು WhatsAppನಿಂದ 3ನೇ ಬ್ಲೂಟಿಕ್, ಸತ್ಯಾಂಶವೇನು?

ಫೇಕ್ ನ್ಯೂಸ್, ಸಾಮರಸ್ಯ ಹಾಳುವ ಮಾಡುವ ಸಂದೇಶ, ಹಿಂಸೆಗೆ ಪ್ರಚೋದನೆ ನೀಡುವ ಸಂದೇಶಗಳು ಗ್ರೂಪ್‌ಗಳಲ್ಲಿ ಹರಿದಾಡಿ ಅತೀ ದೊಡ್ಡ ಅವಾಂತರ ಸೃಷ್ಟಿಸಿದೆ. ಈ ಕುರಿತ ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದೆ. ಇತ್ತೀಚೆಗೆ ಬಾಂಬೆ ಹೈಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್, ಗ್ರೂಪ್‌ನಲ್ಲಿ ಸದಸ್ಯರು ಹಾಕುವ ಸಂದೇಶಕ್ಕೆ ಅಡ್ಮಿನ್ ಹೊಣೆಯಲ್ಲ ಎಂದು ತೀರ್ಪು ನೀಡಿತ್ತು. ಕಾರಣ ಗ್ರೂಪ್‌ನಲ್ಲಿ ಸದಸ್ಯರು ಹಾಕುವ ಯಾವುದೇ ಮೆಸೇಜ್ ನಿರ್ಬಂಧಿಸುವ, ಅಳಿಸುವ ಅಧಿಕಾರ ಅಡ್ಮಿನ್‌ಗೆ ಇಲ್ಲ ಎಂದು ಕೋರ್ಟ್ ಹೇಳಿತ್ತು.

WhatsApp group admin ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ; ಆತಂಕ ದೂರ ಮಾಡಿದ ಹೈಕೋರ್ಟ್!

ಸದ್ಯ ವ್ಯಾಟ್ಸ್ಆ್ಯಪ್ ಬಳಕೆದಾರ ಗ್ರೂಪ್‌ನಲ್ಲಿ ಅಥವಾ ಇತರರಿಗೆ ವೈಯುಕ್ತಿಕವಾಗಿ ಕಳುಹಿಸಿದ ಸಂದೇಶವನ್ನು  4,096 ಸೆಕೆಂಡ್ಸ್ ಒಳಗೆ ಡಿಲೀಟ್ ಮಾಡಲು ಅವಕಾಶ ನೀಡಲಾಗಿದೆ. ಅಂದರೆ ಒಂದು ಗಂಟೆ 8 ನಿಮಿಷ ಹಾಗೂ 16 ಸೆಕೆಂಡ್‌ಗಳಲ್ಲಿ ಮಸೇಜ್ ಡಿಲೀಟ್ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇದೀಗ ಗ್ರೂಪ್ ಅಡ್ಮಿನ್‌ಗೆ ಮೆಸೇಡ್ ಡಿಲೀಟ್ ಮಾಡುವ ಸಮಯಾವಕಾಶವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಇದರಿಂದ ಗ್ರೂಪ್ ಅಡ್ಮಿನ್ ಗಮನಿಸಿದೆ ಹೋದ ಸಂದೇಶವನ್ನು ಅರಿವಿಗೆ ಬಂದ ಬಳಿಕ ಹುಡುಕಿ ಡಿಲೀಟ್ ಮಾಡಲು ಸಾಧ್ಯವಾಗಲಿದೆ. 
 

click me!