ಟ್ವೀಟರ್‌ ಬಳಿಕ ಈಗ ಯುಟ್ಯೂಬ್‌ನಲ್ಲೂ NFT: ಹೊಸ ವೈಶಿಷ್ಟ್ಯದ ‌ಸುಳಿವು ನೀಡಿದ ಸಿಇಓ!

By Suvarna News  |  First Published Jan 27, 2022, 11:19 AM IST

ಟ್ವೀಟರ್‌ ಬಳಿಕ ಮತ್ತೊಂದು ಸಾಮಾಜಿಕ ಜಾಲತಾಣ ಶೀಘ್ರದಲ್ಲೇ NFTಗಳ ಜಗತ್ತನ್ನು ಪ್ರವೇಶಿಸುವ ಸಾಧ್ಯತೆ ಇದೆ.  ಈ ಬಗ್ಗೆ ಸುಳಿವು ನೀಡಿರುವ ಯೂಟ್ಯೂಬ್‌ ಸಿಐಓ "ಕಂಪನಿ ತನ್ನ ಕಂಟೆಂಟ್‌ ಕ್ರಿಯೆಟರ್ಸ್‌ಗಳಿಗೆ ಪ್ರಯೋಜನಕಾರಿಯಾಗಬಹುದಾದ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ" ಎಂದು ಹೇಳಿದ್ದಾರೆ


Tech Desk: ವಿಡಿಯೋ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿರುವ ಯುಟ್ಯೂಬ್ (YouTube) ತನ್ನ ಕಂಟೆಂಟ್‌ ಕ್ರಿಯೆಟರ್ಸ್‌ ಬೇಸ್‌ಗಾಗಿ ಎನ್‌ಎಫ್‌ಟಿ‌ ಫೀಚರ್ (NFT Feature) ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಯುಟ್ಯೂಬ್‌ ಸಿಇಓ ಸುಳಿವು ನೀಡಿದ್ದು ಶೀಘ್ರದಲ್ಲೇ ಎನ್‌ಎಫ್‌ಟಿ ವೈಶಿಷ್ಟ್ಯ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ  ಬಿಡುಗಡೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈಗಾಲೇ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಎನ್‌ಟಫ್‌ಟಿ ವೈಶಿಷ್ಟ್ಯಗಳನ್ನು ನೀಡಿದ್ದು ಯುಟ್ಯೂಬ್‌ ಕೂಡ ಎನ್‌ಎಫ್‌ಟಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. 

ಕಳೆದ ವಾರ ಟ್ವೀಟರ್‌ (Twitter) ಕೂಡ ಎನ್‌ಎಫ್‌ಟಿ ಪ್ರೋಫೈಲ್‌ ಪಿಕ್ಚರ್‌ ವೈಶಿಷ್ಟ್ಯವನ್ನು ತನ್ನ ಟ್ವೀಟರ್ ಬ್ಲೂ ಚಂದಾದಾರರಿಗೆ ಬಿಡುಗಡೆ ಮಾಡಿತ್ತು. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸಹ ಇದೇ ರೀತಿಯ ಪರಿಕಲ್ಪನೆಯತ್ತ ಕಾರ್ಯನಿರ್ವಹಿಸುತ್ತಿವೆ ಎಂದು ದಿ ವರ್ಜ್ ವರದಿ ಮಾಡಿದೆ

Tap to resize

Latest Videos

undefined

ಇದನ್ನೂ ಓದಿ: Selfies NFT: ತನ್ನ 1000 ಸೆಲ್ಫಿ ಮಾರಾಟ ಮಾಡಿ ಕೋಟ್ಯಧಿಪತಿಯಾದ ಇಂಡೋನೇಷಿಯನ್ ವಿದ್ಯಾರ್ಥಿ!

ಉದಯೋನ್ಮುಖ ತಂತ್ರಜ್ಞಾನ ಬಳಕೆ:  ಹೊಸ ವೈಶಿಷ್ಟ್ಯದ ಕಲ್ಪನೆಯ ಕುರಿತು ಯಾವುದೇ ವಿವರಗಳನ್ನು ಹಂಚಿಕೊಳ್ಳದೆಯೇ, ಯೂಟ್ಯೂಬ್ ಸಿಇಓ ಸುಸಾನ್ ವೊಜ್ಸಿಕಿ (Susan Wojcicki) ಇತ್ತೀಚೆಗೆ ಕಂಪನಿಯು ಭವಿಷ್ಯದಲ್ಲಿ ಅದರ ರಚನೆಕಾರ ಸಮುದಾಯಕ್ಕೆ ಆದಾಯದ  ಮೂಲವಾಗಿ ಎನ್‌ ಎಫ್‌ಟಿಗ ಬಿಡುಗಡೆಗೆ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಯುಟ್ಯೂಬ್ ಸಮುದಾಯಕ್ಕೆ ಬರೆದ ಪತ್ರದಲ್ಲಿ, ಕಂಪನಿಯು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೊಜ್ಸಿಕಿ ಉಲ್ಲೇಖಿಸಿದ್ದಾರೆ, ನಿರ್ದಿಷ್ಟವಾಗಿ ಎನ್‌ಎಫ್‌ಟಿಗಳನ್ನು ಅವುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾರೆ.

"ಉದಯೋನ್ಮುಖ ತಂತ್ರಜ್ಞಾನಗಳ ಮೂಲಕ ಕ್ರಿಯೆಟರ್ಸ್ ಸಹಾಯ ಮಾಡಲು ಯುಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ಎನ್‌ಎಫ್‌ಟಿ ವೈಶಿಷ್ಟ್ಯಗಳನ್ನು ತರಲು ತಂಡವು ಕಾರ್ಯನಿರ್ವಹಿಸುತ್ತಿದೆ" ಎಂದು ವೊಜ್ಸಿಕಿ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯೂಟ್ಯೂಬ್ ಎನ್‌ಎಫ್‌ಟಿ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: World’s First SMS: ವಿಶ್ವದ ಮೊದಲ ಎಸ್‌ಎಮ್‌ಎಸ್ 'Merry Christmas' ₹91 ಲಕ್ಷಕ್ಕೆ ಮಾರಾಟ!

Social Media NFT: ಇಲ್ಲಿಯವರೆಗೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಎನ್‌ಎಫ್‌ಟಿ ವೈಶಿಷ್ಟ್ಯಗಳು NFTಯನ್ನು ಹೊಂದಿದ ವ್ಯಕ್ತಿಗೆ ತಮ್ಮ ಅಮೂಲ್ಯವಾದ ಆಸ್ತಿಯನ್ನು ಪ್ರದರ್ಶಿಸಲು ವಿವಿಧ ರೀತಿಯಲ್ಲಿ ಅನುವು ಮಾಡಿಕೊಟ್ಟಿವೆ. ಮೌಲ್ಯಯುತ ಡಿಜಿಟಲ್ ಆಸ್ತಿಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಾದ್ಯಂತ  ಪ್ರೊಫೈಲ್ ಚಿತ್ರವಾಗಿ ಇದನ್ನು ಬಳಸಬಹುದು. ಆದರೆ ಯೂಟ್ಯೂಬ್‌ ಎನ್‌ಎಫ್‌ಟಿ ಯಾವ ರೀತಿ ಕೆಲಸ ಮಾಡಲಿದೆ ಎಂಬ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ.

ಟ್ವೀಟರ್‌ ಎನ್‌ಎಫ್‌ಟಿ ಆಕ್ಟಿವೇಟ್‌ ಮಾಡಲು ಕ್ರಿಪ್ಟೋ ವ್ಯಾಲೆಟನ್ನು ಟ್ವೀಟರ್‌ಗೆ ಕನೆಕ್ಟ್ ಮಾಡುವ ಮತ್ತು ಅದರ ವಿಳಾಸವನ್ನು ಪರಿಶೀಲಿಸುವ ಅಗತ್ಯವಿದೆ.‌ ಈ ಮೂಲಕ ನಿಮ್ಮ ಟ್ವಿಟರ್ ಖಾತೆಯು ನಿಮ್ಮ ಪ್ರಸ್ತುತ ಮತ್ತು ಈ ಹಿಂದಿನ ಕ್ರಿಪ್ಟೋ ವ್ಯಾಲೆಟ್ ವಹಿವಾಟುಗಳು ಮತ್ತು ಆ ವ್ಯಾಲೆಟ್‌ನಲ್ಲಿರುವ ಎಲ್ಲಾ ಇತರ ಎನ್‌ಎನ್ಎಫ್‌ಟಿಗಳನ್ನು ಒಳಗೊಂಡಂತೆ ಇತರ ಮಾಹಿತಿಯೊಂದಿಗೆ ಸಂಯೋಜಿಸಲ್ಪಡುತ್ತದೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಐಒಎಸ್ ಬಳಕೆದಾರರಿಗಾಗಿ ಮೊದಲು ಎನ್‌ಎಫ್‌ಟಿ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಿದೆ. ಆಂಡ್ರಾಯ್ಡ್ ಮತ್ತು ವೆಬ್ ಆವೃತ್ತಿಗಳು ಮುಂದಿನ ದಿನಗಳಲ್ಲಿ ಅದನ್ನು ಪಡೆಯಬಹುದು ಎಂದು ವರದಿಗಳು ತಿಳಿಸಿವೆ. ಆದರೆ, ಐಒಎಸ್ ಬಳಕೆದಾರರು ಅಪ್‌ಲೋಡ್ ಮಾಡಿರುವ ಹೊಸ ಷಡ್ಭುಜಾಕೃತಿಯ ಚಿತ್ರವನ್ನು ಟ್ವಿಟರ್‌ನಲ್ಲಿರುವ ಪ್ರತಿಯೊಬ್ಬರೂ ಪರಿಶೀಲಿಸಲು ಸಾಧ್ಯವಾಗುತ್ತದೆ.

ಎನ್‌ಎಫ್‌ಟಿ ಡಿಜಿಟಲ್ ವಸ್ತುಗಳ ಮಾಲೀಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಡಿಜಿಟಲ್ 'ಸ್ವತ್ತು'ಗಳಿಗೆ ಮಾಲೀಕತ್ವದ ರಚನೆ, ಸಂಗ್ರಹಣೆ ಮತ್ತು ವರ್ಗಾವಣೆಗೆ ಇದು ವೇದಿಕೆಯನ್ನು ಒದಗಿಸುತ್ತದೆ. ಇದು ಸಹಿಯನ್ನು ರಚಿಸಲಾದ (Digital Signature) ಸ್ವತ್ತನ್ನು ಪ್ರತಿನಿಧಿಸುವ ಡೇಟಾದ ಘಟಕವಾಗಿದೆ. ಡೇಟಾದ ಈ ಘಟಕಗಳನ್ನು ಬ್ಲಾಕ್‌ಚೈನ್‌ನಲ್ಲಿ (Block Chain) ಸಂಗ್ರಹಿಸಲಾಗಿರುತ್ತದೆ ಮತ್ತು ಪರಸ್ಪರ ಬದಲಾಯಿಸಲಾಗುವುದಿಲ್ಲ. ಯಾವುದೇ ವಸ್ತುವಿನ ಡಿಜಿಟಲ್ ಸಿಗ್ನೇಚರ್ ಇನ್ನೊಬ್ಬರಿಗೆ ಮಾರಬಹುದು ಅಥವಾ ನೀಡಬಹುದು.

click me!