BRATA Malware: ನಿಮ್ಮ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೇ ಈ ಮಾಲ್ವೇರ್, ಹುಷಾರ್!

By Suvarna News  |  First Published Jan 27, 2022, 4:24 PM IST

*ಸದ್ಯ ಈ ಬ್ರಾಟ್ ಮಾಲ್ವೇರ್ ಇಂಗ್ಲೆಂಡ್, ಸ್ಪೇನ್, ಚೀನಾ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ
*ಈ ಮಾಲ್ವೇರ್ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕದ್ದು ಸೈಬರ್ ಕ್ರಿಮಿನಲ್ಸ್‌ಗೆ ರವಾನಿಸುತ್ತದೆ
*ಯಾವುದೇ ಅಪರಿಚಿತ ಲಿಂಕ್ ಕ್ಲಿಕ್ ಮಾಡಲು ಹೋಗಬೇಡಿ, ಆಪ್ ಡೌನ್‌ಲೋಡ್ ಮಾಡುವ ಮುನ್ನ ಇರಲಿ ಎಚ್ಚರ


Tech Desk: ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಂಡ್ರಾಯ್ಡ್  (Android) ಆಪರೇಟಿಂಗ್ ಮತ್ತು ಐಒಎಸ್‌ (iOS)ಗಳೇ ಹೆಚ್ಚು ಬಳಕೆಯಾಗುತ್ತಿರುವ ಆಪರೇಟಿಂಗ್ ಸಿಸ್ಟಮ್‌ಗಳು. ಈ ಪೈಕಿ ಆಂಡ್ರಾಯ್ಡ್  (Android) ಶೇ.85ರಷ್ಟು ಪಾಲನ್ನು ಪ ಡೆದುಕೊಂಡಿದೆ. ಪರಿಣಾಮ ಸಹಜವಾಗಿಯೇ ಸೈಬರ್ ಖದೀಮರು ಕನ್ನ ಹಾಕಲು ಇದೇ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾರೆ. ಅವರು, ಐಒಎಸ್‌ಗಿಂತಲೂ ಆಂಡ್ರಾಯ್ಡ್ ಸಾಧನಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಳ್ಳುತ್ತಿದ್ದಾರೆಂಬುದು ಈಗ ಜಗಜ್ಜಾಹೀರು. ಯಾಕೆಂದರೆ, ಆಂಡ್ರಾಯ್ಡ್ ಒಎಸ್ ಓಪನ್ ಸೋರ್ಸ್ ಆಗಿದ್ದು, ಬಳಕೆದಾರರು ಥರ್ಡ್ ಪಾರ್ಟಿ ಆಪ್‌ (Third Party Apps)ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತದೆ.

ಆದರೆ, ಗೂಗಲ್ ಸ್ಟೋರ್‌ (Google Store)ನಿಂದಲೇ ಕಡ್ಡಾಯವಾಗಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ತನ್ನ ಬಳಕೆದಾರರಿಗೆ ಕಡ್ಡಾಯ ಮಾಡಿದೆ. ಇಲ್ಲದಿದ್ದರೆ, ಬೇರೆ ಮೂಲಗಳಿಂದ ನೀವು ಆಪ್ ಡೌನ್‌ಲೋಡ್ ಮಾಡಿದರೆ, ನಿಮ್ಮ ಫೋನ್ ಮಾಹಿತಿಯನ್ನು ಕದಿಯುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ, ಸೈಬರ್ ಕ್ರಿಮಿನಲ್ಸ್ ಇದೇ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ಫೋನ್‌ನಲ್ಲಿ ಮಾಲ್ವೇರ್ ಇನ್‌ಸ್ಟಾಲ್ ಮಾಡುವ ಅಪಾಯವೇ ಹೆಚ್ಚು. ಈ ಪೈಕಿ ಬ್ರಾಟ(BRATA) ಕೂಡ ಅಂಥದ್ದೇ ಮಾಲ್ವೇರ್ ಆಗಿದೆ.

Latest Videos

undefined

 ಇದನ್ನೂ ಓದಿ: Meta Fastest Super Computer: ಫೇಸ್‌ಬುಕ್‌ನಿಂದ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್!  

ಕಂಪ್ಯೂಟರ್ ಸೆಕ್ಯುರಿಟಿ ಕಂಪನಿಯ ಪ್ರಕಾರ, ಈ ಮಾಲ್ವೇರ್ ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿದ್ದರೆ, ಅದು ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಕದ್ದು, ಡೇಟಾ ಎಲ್ಲ ಅಳಿಸಿ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ, ಈ ಬಗ್ಗೆ ಬ ಳಕೆದಾರರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಬ್ರಾಟ(BRATA) ಒಂದು ರಿಮೋಟಲೀ ಅಕ್ಸೆಸ್ ಪಡೆಯುವ ಟ್ರಾಸನ್ ಆಗಿದ್ದು, ನಿಮ್ಮ ಮಾಹಿತಿಯನ್ನು ಎಗರಿಸಬಹುದು. ಇದೊಂದು ವೈರಸ್ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಒಳಗೆ ನುಗ್ಗಿ, ನಿಮ್ಮ ಎಲ್ಲ ಬ್ಯಾಂಕಿಂಗ್ ಮಾಹಿತಿಯನ್ನು ಕಲೆ ಹಾಕಿ, ಅದನ್ನು ತನ್ನ ಮಾಲೀಕ(ಸೈಬರ್ ಕ್ರಿಮಿನಲ್ಸ್)ರಿಗೆ ರವಾನಿಸುವ ಅಪಾಯಕಾರಿ ಕೆಲಸವನ್ನು ಮಾಡುತ್ತದೆ.

2019ರಲ್ಲಿ ಮೊದಲ ಬಾರಿಗೆ ಸೈಬರ್ ಸೆಕ್ಯುರಿಟಿ ಕಂಪನಿಯಾಗಿರುವ ಕ್ಯಾಸ್ಪರ್ಸಿಕಿ ಈ ವೈರಸ್ ಅನ್ನು ಪತ್ತೆ ಹಚ್ಚಿತು. ಆಂಡ್ರಾಯ್ಡ್ ಆರ್‌ಎಟಿ ಎಂದು ಗುರುತಿಸಲಾಗಿತ್ತು. ಆ ಸಮಯದಲ್ಲಿ ಈ ಮಾಲ್ವೇರ್ ಬ್ರೆಜಿಲಿಯನ್ ಬಳಕೆದಾರರನ್ನು ಇದು ಗುರಿಯಾಗಿಸಿಕೊಂಡಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಈ ಮಾಲ್ವೇರ್ ಇಂಗ್ಲೆಂಡ್, ಚೀನಾ ಮತ್ತು ಸ್ಪೇನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. 

 ಇದನ್ನೂ ಓದಿ: NASA JW Telescope: ಭೂಮಿಯಿಂದ 15,00,000 ಕಿ.ಮೀ ದರೂದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಸ್ಥಿರ!

Cleafy ವರದಿಯ ಪ್ರಕಾರ, ಈ ಮಾಲ್ವೇರ್, ಜಿಪಿಎಸ್ (GPS) ಟ್ರಾಕಿಂಗ್ ಮತ್ತು ಫ್ಯಾಕ್ಟರಿ ರಿಸೆಟ್ ಮಾಡುವ ಸಾಮರ್ಥ್ಯದ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಅಂದರೆ, ಈ ಬ್ರಾಟ ಮಾಲ್ವೇರ್ ನಿಮ್ಮ ಎಲ್ಲ ಮಾಹಿತಿಯನ್ನು ಕದ್ದು ಮತ್ತು ಸ್ಮಾರ್ಟ್‌ಫೋನ್ ನಲ್ಲಿ ಸ್ಟೋರ್ ಆಗಿರುವ ಎಲ್ಲ ಡೇಟಾವನ್ನು  ಡಿಲಿಟ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದರ್ಥ. ಅಂದರೆ, ಒಮ್ಮೆ ಈ ಮಾಲ್ವೇರ್ ಏನಾದರೂ ನಿಮ್ಮ ಫೋನಿನಲ್ಲಿ ಇನ್‌ಸ್ಟಾಲ್ ಆದರೆ ನಿಮ್ಮ ಎಲ್ಲ ಮಾಹಿತಿಗೆ ಕನ್ನ ಬಿತ್ತೆಂದೇ ಅರ್ಥ. ಹಾಗಾಗಿ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. 

ಈ ರೀತಿಯ ಮಾಲ್ವೇರ್‌ಗಳಿಂದ ನಿಮ್ಮ ಫೋನ್ ಸುರಕ್ಷಿತವಾಗಿಡಬೇಕಾದದ್ದು ಬಳಕೆದಾರರಾದ ನಿಮ್ಮದೇ ಹೊಣೆಯಾಗಿರುತ್ತದೆ. ಇಲ್ಲದಿದ್ದರೆ ನಿಮ್ಮ ಎಲ್ಲ ಮಾಹಿತಿಯು ಖದೀಮರ ಪಾಲಾಗುತ್ತದೆ. ಈ ವಿಷಯದಲ್ಲಿ ಬಹಳಷ್ಟು ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಇದಕ್ಕಾಗಿ ಬಳಕೆದಾರರು ಯಾವುದೇ ರೀತಿಯ ಅನುಮಾನಾಸ್ಪದವಾಗಿರುವ ಆಪ್‌ಗಳನ್ನು ಸ್ಮಾರ್ಟ್‌ಫೋನ್ ಡೌನ್‌ಲೋಡ್ ಮಾಡಿಕೊಳ್ಳಲು ಹೋಗಬಾರದು. 

ಬ್ರಾಟನಂಥ ಮಾಲ್ವೇರ್‌ಗಳಿಂದ ಸುರಕ್ಷಿತವಾಗಿರಬೇಕಿದ್ದರೆ, ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮುನ್ನ ಅದರ ಅಸಲಿಯತನ್ನು ಪರೀಕ್ಷಿಸಬೇಕು. ಯಾವುದೇ ಆಪ್ ಆಗಿರಲಿ ಅದು ನಂಬಿಗಸ್ಥ ಡೆವಲ್‌ಪರ್‌ಗಳಿಂದ ಇರುವುದೇ ಎಂಬುದನ್ನು ಪತ್ತೆ ಹಚ್ಚಿಕೊಳ್ಳಬೇಕು. ಅಪರಿಚಿತ ಮೂಲಗಳಿಂದ ಬರುವ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡುವುದನ್ನು ಮೊದಲು ಬಿಟ್ಟುಬಿಡಬೇಕು. ಇಂಥ ಲಿಂಕ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮಾಲ್ವೇರ್‌ಗಳನ್ನು ಇನ್‌ಸ್ಟಾಲ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹಾಗಾಗಿ, ಬಳಕೆದಾರರು ಈ ವಿಷಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ, ನೀವು ಆರ್ಥಿಕ ನಷ್ಟವನ್ನು ಅನುಭವಿಸಬೇಕಾದೀತು.

click me!