ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಪರ್ಸನಲ್‌ ಚಾಟ್‌ಗೆ ಸೀಕ್ರೆಟ್ ಕೋಡ್ ಹಾಕೋಕೆ ಅವಕಾಶ

By Vinutha PerlaFirst Published Dec 1, 2023, 12:56 PM IST
Highlights

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮತ್ತಷ್ಟು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರ ಪ್ರಕಾರ, ಇನ್ಮುಂದೆ ಪರ್ಸನಲ್‌ ಚಾಟ್‌ಗೆ ಸೀಕ್ರೆಟ್ ಕೋಡ್ ಹಾಕಲು ಅವಕಾಶವಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮೊಬೈಲ್‌ ಫೋನ್ ಆವಿಷ್ಕಾರದಿಂದ ಜನಜೀವನ ಸೋಷಿಯಲ್ ಮೀಡಿಯಾಗೆ ಅಡಿಕ್ಟ್ ಆಗಿಬಿಟ್ಟಿದೆ. ಫೇಸ್‌ಬುಕ್‌, ವಾಟ್ಸಾಪ್‌ಗಳಿಲ್ಲದೆ ಬದುಕೇ ನಡೆಯಲ್ಲ ಅನ್ನೋ ಪರಿಸ್ಥಿತಿ. ವೈಯುಕ್ತಿಕ, ಔದ್ಯೋಗಿ, ಬಿಸಿನೆಸ್ ಹೀಗೆ ಹಲವು ರೀತಿಯ ಮೆಸೇಜ್‌ಗಳನ್ನು ಇವುಗಳ ಮೂಲಕ ಕಳುಹಿಸಬಹುದು. ಎಲ್ಲಾ ಕ್ಷೇತ್ರದಲ್ಲೂ ಸುಲಭವಾಗಿ ಉಪಯೋಗಿಸಬಹುದಾದ ಕಾರಣ ಎಲ್ಲರೂ ವಾಟ್ಸಾಪ್ ಆಪ್‌ನ್ನು ಬಳಸುತ್ತಾರೆ. ಹೀಗಾಗಿಯೇ ಜನರ ಬಳಕೆಗೆ ಹೆಚ್ಚು ಅನುಕೂಲವಾಗುವಂತೆ ಈ ಅಪ್ಲಿಕೇಶನ್‌ನ್ನು ಆಗಾಗ ಅಪ್‌ಡೇಟ್ ಮಾಡಲಾಗುತ್ತದೆ. ಸದ್ಯ ವಾಟ್ಸಾಪ್‌ ಬಳಕೆದಾರರಿಗೆ ಹೆಚ್ಚು ಪ್ರೈವೆಸಿ ದೊರಕುವಂತೆ ವಾಟ್ಸಾಪ್‌ನ್ನು ಅಪ್‌ಡೇಟ್ ಮಾಡಲಾಗಿದೆ.

WhatsApp ಚಾಟ್‌ಗಳಿಗಾಗಿ ಹೊಸ ಸೀಕ್ರೆಟ್ ಕೋಡ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದು ಗೌಪ್ಯತೆಯ ವಿಷಯದಲ್ಲಿ ಪ್ರಮುಖ ನವೀಕರಣಗಳಲ್ಲಿ ಒಂದಾಗಿದೆ. ಬಳಕೆದಾರರು ಈಗಾಗಲೇ WhatsAppನಲ್ಲಿ  ಪರ್ಸನಲ್ ಚಾಟ್‌ಗಳಿಗೆ ಲಾಕ್‌ನ್ನು ಸೇರಿಸಲು ಅವಕಾಶವಿದೆ. ಆದರೆ ಇದರಲ್ಲಿ ಕೆಲವು ಅನಾನುಕೂಲಗಳಿವೆ. ಜನರು ತಮ್ಮ ಫೋನ್‌ನ್ನು ಅನ್‌ಲಾಕ್ ಮಾಡಲು ಬಳಸುವ ಅದೇ ಫಿಂಗರ್‌ಪ್ರಿಂಟ್‌ನ್ನು WhatsAppನ ಖಾಸಗಿ ಚಾಟ್‌ಗಳಿಗೆ  ಪಾಸ್‌ವರ್ಡ್ ಆಗಿ ಇರಿಸಿಕೊಳ್ಳಬೇಕಿತ್ತು. ಇದರರ್ಥ ಯಾರಾದರೂ ಈಗಾಗಲೇ ನಿಮ್ಮ ಫೋನ್‌ನಲ್ಲಿ ತಮ್ಮ ಫಿಂಗರ್‌ಪ್ರಿಂಟ್‌ನ್ನು ನೋಂದಾಯಿಸಿದ್ದರೆ ಅವರು ಸುಲಭವಾಗಿ WhatsApp ಚಾಟ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಒಂದೇ ವ್ಯಾಟ್ಸ್ಆ್ಯಪ್ ಖಾತೆಯಲ್ಲಿ ಎರಡೆರಡು ಪ್ರೊಫೈಲ್, ಡಿಪಿ, ಹೆಸರು ಬಳಸಲು ಅವಕಾಶ!

ಪಾಸ್‌ಕೋಡ್ ಜೊತೆ ಚಾಟ್‌ ಸೀಕ್ರೆಟ್ ಮಾಡಲು ಅವಕಾಶ
ಆದರೆ ಹೊಸ ವೈಶಿಷ್ಟ್ಯದಲ್ಲಿ ಇವೆಲ್ಲವೂ ಬದಲಾಗಿದೆ. WhatsApp ಬಳಸುವ ವ್ಯಕ್ತಿ ಮಾತ್ರ ತಿಳಿದಿರುವ ಪಾಸ್‌ಕೋಡ್‌ನೊಂದಿಗೆ ಚಾಟ್‌ಗಳನ್ನು ಸುರಕ್ಷಿತಗೊಳಿಸಬಹುದು. ಅಷ್ಟೇ ಅಲ್ಲ ಯಾವುದೇ ಪದ ಅಥವಾ ಎಮೋಜಿ ಬಳಸಿ ಪಾಸ್‌ವರ್ಡ್ ರಚಿಸಬಹುದು. ಕುತೂಹಲಕಾರಿಯಾಗಿ, ಕಂಪನಿಯ ಉನ್ನತ ಕಾರ್ಯನಿರ್ವಾಹಕರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ಹುಡುಕಾಟ ಬಾರ್‌ನಲ್ಲಿ ರಹಸ್ಯ ಕೋಡ್‌ನ್ನು ಟೈಪ್ ಮಾಡುವ ಮೂಲಕ ಲಾಕ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಲು ಸೆಟ್ಟಿಂಗ್‌ಗಳನ್ನು ಹೊಂದಿಸಬಹುದು.

WhatsAppನಲ್ಲಿ ಚಾಟ್ ಲಾಕ್‌ಗೆ ರಹಸ್ಯ ಕೋಡ್ ಫೀಚರ್ ಅಳವಡಿಸಲಾಗುತ್ತದೆ. ಇದರಿಂದ ನೀವು ಸಪರೇಟ್‌ ಪಾಸ್‌ವರ್ಡ್‌ ಇಟ್ಟುಕೊಳ್ಳಬಹುದು. ಈಗ ನೀವು ಸರ್ಚ್‌ ಬಾರ್‌ನಲ್ಲಿ ಸೀಕ್ರೇಟ್‌ ಕೋಡ್‌ನ್ನು ಟೈಪ್ ಮಾಡಿದಾಗ ಲಾಕ್ ಮಾಡಿದ ಚಾಟ್‌ಗಳನ್ನು ಕಾಣುವಂತೆ ಮಾಡಬಹುದು. ಇದರಿಂದ ನೀವಲ್ಲದೆ ಮತ್ಯಾರೂ ನಿಮ್ಮ ಖಾಸಗಿ ಮೆಸೇಜ್‌ಗಳನ್ನು ಓದಲಾಗುವುದಿಲ್ಲ' ಎಂದು ಮೆಟಾ ಸಿಇಒ ಮಾಹಿತಿ ನೀಡಿದ್ದಾರೆ.

ವಾಟ್ಸಾಪ್‌ನಲ್ಲಿ ಯಾರಾದ್ರೂ ನಿಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ತಿಳ್ಕೊಳ್ಳೋದು ಹೇಗೆ ಗೊತ್ತಾ? ಇಲ್ಲಿದೆ ವಿವರ..

ವಾಟ್ಸಾಪ್‌ ಚಾಟ್‌ಗಳನ್ನು ತ್ವರಿತವಾಗಿ ಲಾಕ್ ಮಾಡುವುದು ಹೇಗೆ?
ಹೊಸ ಫೀಚರ್‌ನ ಪ್ರಕಾರ, ಚಾಟ್‌ನ್ನು ಲಾಕ್ ಮಾಡಲು ನೀವು ವೈಯಕ್ತಿಕ ಚಾಟ್ ಸೆಟ್ಟಿಂಗ್‌ಗೆ ಹೋಗಬೇಕಾಗಿಲ್ಲ. ಬದಲಿಗೆ ಚಾಟ್‌ನ್ನು ಲಾಂಗ್‌ ಪ್ರೆಸ್‌ ಮಾಡಿದರೆ ಸಾಕು, ಲಾಕ್ ಆಗುತ್ತದೆ.

ಹೊಸ WhatsApp ಸೀಕ್ರೆಟ್ ಕೋಡ್ ವೈಶಿಷ್ಟ್ಯವನ್ನು ಪ್ರವೇಶಿಸುವುದು ಹೇಗೆ?
WhatsAppನಲ್ಲಿ ನಿಮ್ಮ ಚಾಟ್‌ಗಳನ್ನು ಖಾಸಗಿಯಾಗಿ ಇರಿಸಲು, ನೀವು ಲಾಕ್ ಮಾಡಿದ ಚಾಟ್‌ಗಳ ಲಿಸ್ಟ್‌ನ್ನು ತೆರೆಯಬೇಕು. ಮೇಲ್ಭಾಗದಲ್ಲಿರುವ ಮೂರು ಡಾಟ್‌ ಟ್ಯಾಪ್ ಮಾಡಬೇಕಾಗುತ್ತದೆ. ಇದರ ನಂತರ, ಚಾಟ್ ಲಾಕ್ ಸೆಟ್ಟಿಂಗ್‌ಗಳಿಗೆ ಹೋಗಿ, 'ಲಾಕ್ ಮಾಡಿದ ಚಾಟ್‌ಗಳನ್ನು ಮರೆಮಾಡಿ' ಅನ್ನೋ ಆಪ್ಶನ್ ಆನ್ ಮಾಡಿ. ಇಲ್ಲಿ ನಿಮ್ಮ ಸೀಕ್ರೇಟ್ ಕೋಡ್ ಎಂಟರ್ ಮಾಡಿ.

ಇದರ ನಂತರ, ನಿಮ್ಮ ಲಾಕ್ ಮಾಡಿದ ಚಾಟ್‌ಗಳು ಮುಖ್ಯ ಚಾಟ್ ವಿಂಡೋದಲ್ಲಿ ಕಾಣಿಸುವುದಿಲ್ಲ, ಚಾಟ್ ಸ್ಕ್ರೀನ್‌ನಲ್ಲಿ ಕೆಳಗೆ ಸ್ವೈಪ್ ಮಾಡುವಾಗ ಲಾಕ್ ಮಾಡಿದ ಚಾಟ್‌ಗಳಿಗೆ ಶಾರ್ಟ್‌ಕಟ್ ಅನ್ನು ಪ್ರದರ್ಶಿಸುವ ಪ್ರಸ್ತುತ WhatsApp ವಿನ್ಯಾಸಕ್ಕಿಂತ ಹೆಚ್ಚಿನ ಗೌಪ್ಯತೆಯನ್ನು ಒದಗಿಸುತ್ತದೆ. ನಿಮ್ಮ ಲಾಕ್ ಆಗಿರುವ ಚಾಟ್‌ಗಳನ್ನು ನೋಡಲು ನೀವು ಬಯಸಿದರೆ, ಸರ್ಚ್‌ ಬಾರ್‌ನಲ್ಲಿ ರಹಸ್ಯ ಕೋಡ್ ಅನ್ನು ನಮೂದಿಸಬೇಕು.

WhatsApp ಸೀಕ್ರೆಟ್ ಕೋಡ್ ಯಾವಾಗಿನಿಂದ ಲಭ್ಯ?
WhatsApp ಇಂದಿನಿಂದ ಈ ವೈಶಿಷ್ಟ್ಯವನ್ನು ಹೊರತರಲು ಪ್ರಾರಂಭಿಸಿದೆ. ಇದು ಎಲ್ಲಾ ಬಳಕೆದಾರರನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಈ ಸ್ಪೆಷಲ್ ಫೀಚರ್ ತಮ್ಮ ಮೊಬೈಲ್‌ನಲ್ಲಿ ಲಭ್ಯವಾಗಲು ಜನರು ಕೆಲವು ದಿನಗಳ ವರೆಗೆ ಕಾಯಬೇಕು.

click me!