ಕ್ಲಿಯರ್ ಫೇಕ್ ಎನ್ನುವ ಮಾಲ್ವೇರ್ ವಿಂಡೋಸ್ ಬಳಕೆದಾರರನ್ನು ತಲುಪಿವೆ. ಹೈಜಾಕ್ ಆಗಿರುವ ಸಫಾರಿ ಅಥವಾ ಕ್ರೋಮ್ ಬ್ರೌಸರ್ ಡೌನ್ಲೋಡ್ ಮಾಡಿಕೊಂಡಾಗ ಅವುಗಳ ಮೂಲಕ ಲ್ಯಾಪ್ ಟಾಪ್ ಪ್ರವೇಶಿಸುವ ಈ ಮಾಲ್ವೇರ್ ನಿಮ್ಮ ಎಲ್ಲ ಖಾಸಗಿ ದತ್ತಾಂಶಗಳನ್ನು ಪಡೆದುಕೊಂಡು ಅಪಾಯ ಸೃಷ್ಟಿಸಬಹುದು. ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಹುಷಾರಾಗಿರಿ.
ಡೀಪ್ ಫೇಕ್ ತಂತ್ರಜ್ಞಾನದಿಂದಾಗುವ ಅನಾಹುತಗಳು ಕಣ್ಣ ಮುಂದಿವೆ. ಚಲನಚಿತ್ರರಂಗದ ಹಲವು ತಾರೆಯರು ಇದರಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದಾರೆ. ಅಶ್ಲೀಲ ವೀಡಿಯೋಗಳನ್ನು ಸೃಷ್ಟಿಸಿ ಅದನ್ನು ಅಂತರ್ಜಾಲದಲ್ಲಿ ಹರಿಬಿಟ್ಟರೆ ಮುಗಿಯಿತು, ಪ್ರಪಂಚದಾದ್ಯಂತ ತಲುಪುತ್ತದೆ. ಅದು ಸತ್ಯವಲ್ಲ, ಸುಳ್ಳು ಎನ್ನುವುದು ತಿಳಿದಿದ್ದರೂ ಅದಕ್ಕೆ ಬಲಿಯಾಗುವವರಿಗೆ ಒಂದಿಷ್ಟು ಮಾನಸಿಕ ಹಿಂಸೆ ತಪ್ಪಿದ್ದಲ್ಲ. ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ಈಗ ಡೀಪ್ ಫೇಕ್ ಬಗ್ಗೆ ಸರಿಸುಮಾರು ಎಲ್ಲರಿಗೂ ತಿಳಿದಿದೆ. ಆದರೆ, ಕ್ಲಿಯರ್ ಫೇಕ್ ಎನ್ನುವ ಮಾಲ್ ವೇರ್ ಕೂಡ ಅಷ್ಟೇ ಅನಾಹುತಕಾರಿಯಾಗಿದ್ದು, ಇದರ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಮ್ಯಾಕ್ ಮತ್ತು ವಿಂಡೋ ಬಳಕೆದಾರರು ಈ ಕ್ಲಿಯರ್ ಫೇಕ್ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಸೂಚನೆ ನೀಡಿರುವುದು ಅಂತರ್ಜಾಲದ ದುರುದ್ದೇಶಪೂರಿತ ಬಳಕೆಯತ್ತ ಹೆಚ್ಚಿನ ಗಮನ ಹರಿಸಲು ಸಕಾಲ.
ಇಂದು ಬಹಳಷ್ಟು ಜನ ಲ್ಯಾಪ್ ಟಾಪ್ (Laptop) ಬಳಸುತ್ತಾರೆ. ಸಾಫ್ಟ್ ವೇರ್ (Software) ತಂತ್ರಜ್ಞರಿಂದ ಹಿಡಿದು ಮನೆಯಲ್ಲೇ ಕೆಲಸ ಮಾಡುವ ಸಾಮಾನ್ಯ ಉದ್ಯೋಗಿಗಳವರೆಗೆ ಎಲ್ಲರಿಗೂ ಲ್ಯಾಪ್ ಟಾಪ್ ಬೇಕು. ಅದರಲ್ಲಿ ಅಂತರ್ಜಾಲದ (Internet) ಜಗತ್ತನ್ನು ಸಂಪರ್ಕಿಸಬಲ್ಲ ಸಫಾರಿ ಅಥವಾ ಕ್ರೋಮ್ ಬ್ರೌಸರ್ (Chrome Browser) ಗಳು ಬೇಕು. ಅವುಗಳಲ್ಲೇ ವೈರಸ್ (Virus) ಇದ್ದರೆ ಪರಿಸ್ಥಿತಿ ಹೇಗಿರುತ್ತದೆ? ಕ್ಲಿಯರ್ ಫೇಕ್ ಮೂಲಕ ಈಗ ಆಗುತ್ತಿರುವುದು ಇದೇ ಆಗಿದೆ.
ಸಂಶೋಧಕರು ಆಟಾಮಿಕ್ ಮ್ಯಾಕ್ ಓಎಸ್ ಸ್ಟೀಲರ್ ಎನ್ನುವ ಸೊಫಿಸ್ಟಿಕೇಟೆಡ್ ವೈರಸ್ ಅನ್ನು ಗುರುತಿಸಿದ್ದಾರೆ. ಆರಂಭದಲ್ಲಿ ಇದರ ಗುರಿ ಆಪಲ್ ಬಳಕೆದಾರರಾಗಿದ್ದರು. 2023ರ ಆರಂಭದಲ್ಲಿ ಭಾರೀ ಸೈಬರ್ (Cyber) ಅಪಾಯ ತಂದೊಡ್ಡಿತ್ತು. ಒಮ್ಮೆ ಇನ್ ಸ್ಟಾಲ್ ಆದ ಬಳಿಕ ಈ ಎಎಮ್ ಒಎಸ್, ಆ ನಿರ್ದಿಷ್ಟ ಬಳಕೆದಾರರ ಖಾಸಗಿ ದತ್ತಾಂಶಗಳನ್ನು, ಮಾಹಿತಿಗಳನ್ನು (Information) ತೆಗೆದುಕೊಳ್ಳಬಲ್ಲದು. ಕ್ರೆಡಿಟ್ ಕಾರ್ಡ್ ಸಂಖ್ಯೆ, ಕ್ರಿಪ್ಟೊಕರೆನ್ಸಿ ವ್ಯಾಲೆಟ್ ಪಾಸ್ ವರ್ಡ್ಗಳು ಸೇರಿದಂತೆ ಇತರೆ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳಬಲ್ಲದು. ಹೀಗಾಗಿ, ಈ ಮಾಲ್ವೇರ್ (Malware) ಭದ್ರತೆಗೆ ಅಪಾಯ ತಂದೊಡ್ಡಿದೆ. ಇತ್ತೀಚಿನ ದಿನಗಳಲ್ಲಿ ಇದೇ ಮಾಲ್ವೇರ್ ಅನ್ನು ಹ್ಯಾಕರ್ ಗಳು ಫೋನ್ ಬ್ರೌಸರ್ ಗಳಿಗೂ ಪ್ರವೇಶ ಮಾಡಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ.
ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತದ ನೂತನ ಬಿಲಿಯನೇರ್ ಆಗಿ ಹೊರಹೊಮ್ಮಿದ 60 ವರ್ಷದ ಇಂಜಿನಿಯರ್!
ಏನಿದು ಕ್ಲಿಯರ್ ಫೇಕ್?
ಕ್ಲಿಯರ್ ಫೇಕ್ (ClearFake) ಎನ್ನುವುದು ಡೀಪ್ ಫೇಕ್ (DeepFake) ನಂತೆಯೇ ಮಷಿನ್ ಲರ್ನಿಂಗ್ (Machine Learning) ಮೂಲಕ ಸೃಷ್ಟಿಸಿರುವ ಒಂದು ತಂತ್ರಜ್ಞಾನ. ಭಾವಚಿತ್ರ, ವೀಡಿಯೋ ಅಥವಾ ವೆಬ್ ಸೈಟ್ ಗಳನ್ನು ಅವು ಹೇಗಿದೆಯೋ ಹಾಗೆಯೇ ಚೂರೂ ಅನುಮಾನಕ್ಕೆ ಆಸ್ಪದವಿಲ್ಲದಂತೆ ನಿರ್ಮಿಸುತ್ತದೆ. ಇಮೇಜ್ ಸ್ಲೈಸಿಂಗ್, ಫೇಷಿಯಲ್ ರೆಕಗ್ನಿಷನ್, ವಾಯ್ಸ್ ಸಿಂಥೆಸಿಸ್ ನಂತಹ ಹಲವು ತಂತ್ರಗಳನ್ನೂ ಬಳಕೆ ಮಾಡುವುದರಿಂದ ನೈಜತೆಯ ಮುಖದ ಮೇಲೆ ಹೊಡೆದಂತಿರುತ್ತದೆ. ದುರುದ್ದೇಶಪೂರಿತ ಜಾವಾ ಸ್ಕ್ರಿಪ್ಟ್ ಕೋಡ್ ಮೂಲಕ ಕೃತಕ ವೆಬ್ ಸೈಟ್ ಗಳನ್ನು ಸೃಷ್ಟಿಸಲಾಗುತ್ತದೆ. ಬಳಕೆದಾರರಿಗೆ ಇದು ಮೇಲ್ನೋಟಕ್ಕೆ ಅಧಿಕೃತ ಸಫಾರಿ (Safari) ಅಥವಾ ಕ್ರೋಮ್ ಬ್ರೌಸರ್ ನಂತೆಯೇ ಗೋಚರಿಸುತ್ತದೆ. ಮೂಲ ತಿಳಿಯದೆ ಇವುಗಳನ್ನು ಡೌನ್ ಲೋಡ್ (Download) ಮಾಡಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿಯೇ, ಯಾವುದೇ ಬ್ರೌಸರ್ ಗಳನ್ನು ಅಪ್ ಡೇಟ್ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಲು ತಿಳಿಸಲಾಗುತ್ತಿದೆ.
ಒಂದರ್ಥದಲ್ಲಿ ಇದು ಡೀಪ್ ಫೇಕ್ ಗಿಂತಲೂ ಹೆಚ್ಚು ಅಪಾಯಕಾರಿ (Dangerous). ಅಗಾಧ ಪ್ರಮಾಣದ ಜನ ಇದಕ್ಕೆ ಸಿಲುಕಬಲ್ಲರು. ಕ್ಲಿಯರ್ ಫೇಕ್ ಮಾಲ್ವೇರ್ ನಿಮ್ಮ ಲ್ಯಾಪ್ ಟಾಪ್ ನಲ್ಲಿ ಇನ್ ಸ್ಟಾಲ್ ಆಗಿದೆ ಎನ್ನುವುದೂ ತಿಳಿಯದೇ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಎದುರಾಗಬಲ್ಲದು. ಫೇಕ್ ನ್ಯೂಸ್ ಸ್ಟೋರಿಗಳು, ತಪ್ಪು ಮಾಹಿತಿಗಳು, ವೀಡಿಯೋಗಳ ತಪ್ಪು ಬಳಕೆ ಇದರಿಂದ ಹೆಚ್ಚಾಗಬಹುದು. ಪ್ರಸ್ತುತ, ಹ್ಯಾಕರ್ ಗಳು ಕ್ಲಿಯರ್ ಫೇಕ್ ಮೂಲಕ, ಎಎಂಓಎಸ್ ನಿಂದ ಮ್ಯಾಕ್ ಬಳಕೆದಾರರನ್ನು (Users) ತಲುಪಿವೆ.
ಸೋಷಿಯಲ್ ಮೀಡಿಯಾದಲ್ಲಿ ಡೀಪ್‌ಫೇಕ್ ಸಂಚಲನ: ಪ್ರಧಾನಿ ಮೋದಿಯನ್ನೂ ಬಿಟ್ಟಿಲ್ಲ ಈ ವಿಡಿಯೋ !
ಹೇಗೆ ರಕ್ಷಣೆ ಸಾಧ್ಯ?
ಅನಧಿಕೃತ ಮೂಲಗಳಿಂದ ಸಾಫ್ಟ್ ವೇರ್ ಡೌನ್ಲೋಡ್ ಮಾಡಿಕೊಳ್ಳಬೇಡಿ. ಆಪ್ ಮೂಲಕವೇ ಸಫಾರಿ ಮತ್ತು ಕ್ರೋಮ್ ಬ್ರೌಸರ್ ಡೌನ್ಲೋಡ್ ಮಾಡಿ. ಆಪ್ (App) ನ ಅಧಿಕೃತ ಮೂಲಕವನ್ನು ಚೆಕ್ ಮಾಡಿ.