ನೀವು ಗೂಗಲ್‌ ಪೇ ಬಳಸ್ತಿದ್ರೆ ಕೂಡಲೇ ನಿಮ್ಮ ಫೋನ್‌ನಿಂದ ಈ ಆ್ಯಪ್‌ಗಳನ್ನು ತೆಗೆದುಹಾಕಿ: ಗೂಗಲ್‌ ಎಚ್ಚರಿಕೆ

By BK Ashwin  |  First Published Nov 23, 2023, 11:10 AM IST

ಗೂಗಲ್‌ ಪೇ ಬಳಸುವುದನ್ನು ಮುಂದುವರಿಸಲು, ಎಲ್ಲಾ ಸ್ಕ್ರೀನ್ ಶೇರಿಂಗ್ ಅಪ್ಲಿಕೇಷನ್‌ಗಳನ್ನು ಮೊದಲು ಕ್ಲೋಸ್‌ ಮಾಡಿ. ನೀವು ಟ್ರಾನ್ಸಾಕ್ಷನ್‌ ಮಾಡುವಾಗ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಎಂದಿಗೂ ಬಳಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. 

google pay users google wants you to not use these apps on your phone ash

ದೆಹಲಿ (ನವೆಂಬರ್ 23, 2023): ದೇಶದ ಅತ್ಯಂತ ಜನಪ್ರಿಯ ಯುಪಿಐ ಪೇಮೆಂಟ್‌ ಅಪ್ಲಿಕೇಶನ್‌ಗಳಲ್ಲಿ ಗೂಗಲ್‌ ಪೇ ಒಂದಾಗಿದೆ. ಭಾರತದಲ್ಲಿನ ಮಾರುಕಟ್ಟೆ ಷೇರಿಗೆ ಸಂಬಂಧಿಸಿದಂತೆ ಈ ಆ್ಯಪ್‌ ಟಾಪ್ 5 ಹೆಚ್ಚು ಬಳಸಿದ UPI ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅಲ್ಲದೆ, ಭಾರತವು ತನ್ನ ಪಾವತಿ ಅಪ್ಲಿಕೇಶನ್‌ಗಾಗಿ ಗೂಗಲ್‌ ಕಂಪನಿಗೆ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಹಿನ್ನೆಲೆ ಗೂಗಲ್‌ ಪೇ ಬಳಕೆದಾರರಿಗೆ ಗೂಗಲ್‌ ಎಚ್ಚರಿಕೆ ನೀಡಿದೆ. 
 
ನೈಜ ಸಮಯದಲ್ಲಿ ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸಲು ಗೂಗಲ್‌ನ ಅತ್ಯುತ್ತಮವಾದ ಕೃತಕ ಬುದ್ಧಿಮತ್ತೆ ಮತ್ತು ವಂಚನೆ ತಡೆಗಟ್ಟುವ ತಂತ್ರಜ್ಞಾನವನ್ನು ಅದು ಬಳಸುತ್ತದೆ. ನಿಮ್ಮನ್ನು ಸುರಕ್ಷಿತವಾಗಿರಿಸುವ ತಂತ್ರಜ್ಞಾನಗಳನ್ನು ನಿರ್ಮಿಸಲು ನಾವು ಉದ್ಯಮದ ಉಳಿದ ಭಾಗಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದು ಗೂಗಲ್‌ ಹೇಳುತ್ತದೆ. 

ಇದನ್ನು ಓದಿ: ಮಣಿಪುರದಲ್ಲಿ ಆತಂಕ ಮೂಡಿಸಿದ ಹಾರುವ ವಸ್ತು: ನಿಗೂಢ ವಸ್ತು ಪತ್ತೆಗೆ ರಫೇಲ್‌ ವಿಮಾನ ನಿಯೋಜನೆ

Tap to resize

Latest Videos

ಈ ಬಗ್ಗೆ ಕಂಪನಿಯು ಮುಖ್ಯ ಪಾತ್ರ ವಹಿಸುತ್ತಿದ್ದು, ಅಲ್ಲದೆ ಬಳಕೆದಾರರು ಜಾಗರೂಕರಾಗಿರುವುದು ಸಹ ಮುಖ್ಯವಾಗಿದೆ ಎಂದು ಗೂಗಲ್‌ ಎಚ್ಚರಿಕೆ ನೀಡಿದೆ. ಹಾಗೂ, ಗೂಗಲ್‌ ಪೇ ಬಳಕೆದಾರರು ಈ ಪ್ರಮುಖ ವಿಚಾರಗಳನ್ನು ಎಂದಿಗೂ ಮಾಡಬಾರದು ಎಂದು ಗೂಗಲ್‌ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.

ಈ ಪೈಕಿ ಪ್ರಮುಖವಾದವುಗಳಲ್ಲಿ ಒಂದು ಹೀಗಿದೆ..  Google Pay ಬಳಸುವುದನ್ನು ಮುಂದುವರಿಸಲು, ಎಲ್ಲಾ ಸ್ಕ್ರೀನ್ ಶೇರಿಂಗ್ ಅಪ್ಲಿಕೇಷನ್‌ಗಳನ್ನು ಮೊದಲು ಕ್ಲೋಸ್‌ ಮಾಡಿ. ನೀವು ಟ್ರಾನ್ಸಾಕ್ಷನ್‌ ಮಾಡುವಾಗ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಎಂದಿಗೂ ಬಳಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. 

ಇದನ್ನೂ ಓದಿ: ಶೀಘ್ರದಲ್ಲೇ 15 ಸಾವಿರ ರೂ. ಗೆ ಬಿಡುಗಡೆಯಾಗಲಿದೆ ಜಿಯೋ 'ಕ್ಲೌಡ್' ಲ್ಯಾಪ್‌ಟಾಪ್!

ಸ್ಕ್ರೀನ್ ಶೇರಿಂಗ್ ಅಪ್ಲಿಕೇಶನ್‌ಗಳು ಯಾವುವು
ನೀವು ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ - ಯಾವುದನ್ನು ಬಳಸುತ್ತಿದ್ದರೂ ನಿಮ್ಮ ಸಾಧನದ ಸ್ಕ್ರೀನ್‌ನಲ್ಲಿ ಏನಿದೆ ಎಂಬುದನ್ನು ನೋಡಲು ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳು ಇತರ ಜನರಿಗೆ ಅನುಮತಿಸುತ್ತದೆ. ಈ ಅಪ್ಲಿಕೇಶನ್‌ಗಳನ್ನು ಮೂಲತಃ ಫೋನ್‌ನಲ್ಲಿನ ಸಮಸ್ಯೆಗಳನ್ನು ದೂರದಿಂದಲೇ ಸರಿಪಡಿಸಲು ಬಳಸಲಾಗುತ್ತಿತ್ತು. ಈ ಆ್ಯಪ್‌ಗಳು ನಿಮ್ಮ ಫೋನ್/ಸಾಧನದ ಸಂಪೂರ್ಣ ಪ್ರವೇಶ ಮತ್ತು ನಿಯಂತ್ರಣವನ್ನು ಅನುಮತಿಸುತ್ತದೆ. ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳ ಉದಾಹರಣೆಗಳೆಂದರೆ Screen Share, AnyDesk ಮತ್ತು TeamViewer.

ಬಳಕೆದಾರರು ಗೂಗಲ್‌ ಪೇ ಜೊತೆಗೆ ಸ್ಕ್ರೀನ್ ಶೇರಿಂಗ್ ಅಪ್ಲಿಕೇಶನ್‌ಗಳನ್ನು ಏಕೆ ಬಳಸಬಾರದು
ಗೂಗಲ್‌ ಪೇ ಬಳಕೆದಾರರು ಸ್ಕ್ರೀನ್ ಹಂಚಿಕೆ ಆ್ಯಪ್‌ಗಳನ್ನು ಯಾಕೆ ಬಳಸಬಾರದೆಂದರೆ ವಂಚಕರು ಈ ಅಪ್ಲಿಕೇಶನ್‌ಗಳನ್ನು ಬಳಸಬಹುದು:

  • ನಿಮ್ಮ ಬದಲು ಟ್ರಾನ್ಸಾಕ್ಷನ್‌ ಮಾಡಲು ನಿಮ್ಮ ಫೋನ್ ಅನ್ನು ನಿಯಂತ್ರಿಸಬಹುದು.
  • ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ನೋಡಬಹುದು
  • ನಿಮ್ಮ ಫೋನ್‌ಗೆ ಕಳುಹಿಸಲಾದ OTP ಅನ್ನು ನೋಡಬಹುದು ಮತ್ತು ನಿಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಲು ಅದನ್ನು ಬಳಸಬಹುದು

ಇದನ್ನು ಓದಿ: ಭೂಮಿಯಲ್ಲಿ ಇನ್ನೆಷ್ಟು ವರ್ಷ ಇರುತ್ತೆ ಆಮ್ಲಜನಕ? ಆಮೇಲೆ ಮಾನವರು ಜೀವಿಸೋದೇಗೆ: ಬೆಚ್ಚಿಬೀಳಿಸುವ ಅಂಶ ಇಲ್ಲಿದೆ..

ಅಲ್ಲದೆ, ಯಾವುದೇ ಕಾರಣಕ್ಕಾಗಿ ಥರ್ಡ್‌ ಪಾರ್ಟಿ ಆ್ಯಪ್‌ ಡೌನ್‌ಲೋಡ್ ಮಾಡಲು ಅಥವಾ ಇನ್‌ಸ್ಟಾಲ್ ಮಾಡಲು ಗೂಗಲ್‌ ಪೇ ಎಂದಿಗೂ ಕೇಳುವುದಿಲ್ಲ ಎಂಬುದನ್ನು ಗಮನಿಸಿ ಎಂದು ಸಹ ಗೂಗಲ್‌ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ, ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ, ಗೂಗಲ್‌ ಪೇ ಬಳಸುವ ಮೊದಲು, ಅವುಗಳನ್ನು ಕ್ಲೋಸ್‌ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಒಂದು ವೇಳೆ, ಯಾರಾದರೂ ಗೂಗಲ್‌ ಪೇ ಪ್ರತಿನಿಧಿಯಂತೆ ಪೋಸ್ ನೀಡಿದರೆ ಮತ್ತು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಸೂಚಿಸಿದರೆ, ಅವುಗಳನ್ನು ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಡಿಲೀಟ್‌ ಮಾಡಿ. ನೀವು ಈ ಸಮಸ್ಯೆಯನ್ನು ಗೂಗಲ್‌ ಪೇಗೆ ರಿಪೋರ್ಟ್‌ ಮಾಡಬಹುದು ಎಂದೂ ಗೂಗಲ್‌ ಕಂಪನಿ ಹೇಳುತ್ತದೆ. 

2023ರಲ್ಲಿ ಭಾರತೀಯರ ನೆಚ್ಚಿನ ಪಾಸ್‌ವರ್ಡ್‌ ಯಾವ್ದು ನೋಡಿ: ನೀವೂ ಇದನ್ನೇ ಬಳಸ್ತಿದ್ರೆ ಮೊದ್ಲು ಚೇಂಜ್ ಮಾಡಿ!

vuukle one pixel image
click me!
vuukle one pixel image vuukle one pixel image