ನಾವು ನಮ್ಮ ನೀತಿ ಅನುಸರಿಸುತ್ತೇವೆ; ಸಂಸದೀಯ ಸಮಿತಿ ಮುಂದೆ ಟ್ವಿಟರ್ ವಾದ!

Published : Jun 18, 2021, 07:35 PM IST
ನಾವು ನಮ್ಮ ನೀತಿ ಅನುಸರಿಸುತ್ತೇವೆ; ಸಂಸದೀಯ ಸಮಿತಿ ಮುಂದೆ ಟ್ವಿಟರ್ ವಾದ!

ಸಾರಾಂಶ

ಮೊಂಡುವಾದ ಮುಂದುವರಿಸಿದ ಟ್ವಿಟರ್ ಇಂಡಿಯಾ ಭಾರತದ ಕಾನೂನು ಪಾಲಿಸುತ್ತೀರಾ ಪ್ರಶ್ನೆಗೆ ವ್ಯತಿರಿಕ್ತ ಉತ್ತರ ನೀಡಿದ ಟ್ವಿಟರ್ ನಮ್ಮ ನೀತಿ ಅನುಸರಿಸುತ್ತೇವೆ ಎಂದ ಟ್ವಿಟರ್

ನವದೆಹಲಿ(ಜೂ.18): ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ಇಂಡಿಯಾ ನಡುವಿನ ಜಟಾಪಟಿ ಮುಂದುವರಿದಿದೆ. ಟ್ವಿಟರ್ ಮತ್ತೆ ತನ್ನ ಮೊಂಡು ವಾದ ಮುಂದುವರಿಸಿದ್ದು, ಸಮರ್ಪಕ ಉತ್ತರ ನೀಡಲು ಹಿಂದೇಟು ಹಾಕಿದೆ. ಸಾಮಾಜಿಕ ಮಾಧ್ಯಮ ವೇದಿಕೆ ದುರುಪಯೋಗ ಹಾಗೂ ನಾಗರೀಕ ಹಕ್ಕುಗಳ ಸಂರಕ್ಷಣೆ ಕುರಿತು ನೀಡಲಾಗಿದ್ದ ನೋಟಿಸ್‌ಗೆ ಉತ್ತರ ನೀಡಲು ಟ್ವಿಟರ್ ಇಂಡಿಯಾದ ಇಬ್ಬರು ಪ್ರತಿನಿಧಿಗಳು ಇಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿ ಮುಂದೆ ಹಾಜರಾದ ಟ್ವಿಟರ್ ಮುಂದೆ ಖಡಕ್ ಪ್ರಶ್ನೆ ಕೇಳಲಾಗಿದೆ. ಟ್ವಿಟರ್ ಇಂಡಿಯಾ ಈ ನೆಲ ಹಾಗೂ ಭಾರತೀಯ ಕಾನೂನು ಅನುಸರಿಸುತ್ತೀರಾ ಎಂದು ಪ್ರಶ್ನಿಸಿದೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿದ ಟ್ವಿಟರ್ ಅಧಿಕಾರಿಗಳು  ನಾವು ನಮ್ಮ ನೀತಿ ಪಾಲಿಸುವುದಾಗಿ ಹೇಳಿದ್ದಾರೆ. 

ಭಾರತದ ಕಾನೂನು ಗೌರವಿಸುವ ಹಾಗೂ ಪಾಲಿಸುವ ಕುರಿತು ನಿಖರ ಉತ್ತರ ನೀಡಿದ ಟ್ವಿಟರ್, ತಮ್ಮ ನೀತಿ ನಿಯಮಗಳ ಕುರಿತು ವಿವರಣೆ ನೀಡಲು ಪ್ರಯತ್ನಿಸಿದೆ. ಆದರೆ ಸಂಸದೀಯ ಸಮತಿ ಟ್ವಿಟರ್ ಉತ್ತರಕ್ಕೆ ತೃಪ್ತಿ ಪಟ್ಟಿಲ್ಲ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.

ಐಟಿ ನಿಯಮ ಪಾಲಿಸದೆ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್‌!...

ನೂತನ ಐಟಿ ನಿಯಮ ಪಾಲಿಸಲು ಹಿಂದೇಟು ಹಾಕಿರುವ ಟ್ವಿಟರ್ ಭಾರತ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಇತ್ತ ಗಾಝಿಯಾಬಾದ್ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಕುರಿತು ವಿಡಿಯೋ ಕುರಿತು ಸಂಸದೀಯ ಸಮತಿ ಪ್ರಶ್ನಿಸಿದೆ ಎಂದು ಮೂಲಗಳು ಹೇಳಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?