ಪ್ರತಿ ಗಂಟೆಗೆ 14 ಸಾವಿರ ಕೀ.ಮಿ ವೇಗದ ವಿಮಾನ; ಭೂಮಿಯ ಯಾವುದೇ ಮೂಲೆ ತಲುಪಲು 1 ಗಂಟೆ ಸಾಕು!

By Suvarna NewsFirst Published Jun 1, 2021, 6:30 PM IST
Highlights
  • ಅತೀ ವೇಗದ ಹೈಪರ್‌ಸಾನಿಕ್ ವಿಮಾನ ಅಭಿವೃದ್ಧಿ
  • 1 ಗಂಟೆಗೆ 14,000 ಕಿಲೋಮೀಟರ್ ವೇಗದ ವಿಮಾನ
  • ಭೂಮಿಯ ಯಾವುದೇ ಮೂಲೆಗೆ ತೆರಳಲು ನಿಮಿಷಗಳು ಸಾಕು

ಟೆಕ್ಸಾಸ್(ಜೂ.01): ಸಾಮಾನ್ಯ ವಿಮಾನಗಳು ಪ್ರತಿ ಗಂಟೆಗೆ ಸರಾಸರಿ 900 ಕಿ.ಮೀ ವೇಗದಲ್ಲಿ ಚಲಿಸಲಿದೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಉದಾಹರಣೆಗೆ ಲಾಸ್ ಎಂಜಲೀಸ್‌ನಿಂದ ಟೊಕಿಯೋ ಪ್ರಯಾಣಕ್ಕೆ ಕನಿಷ್ಠ 11 ರಿಂದ 13 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ ಇದೇ ಪ್ರಯಾಣವನ್ನು 1 ಗಂಟೆಗಿಂತಲೂ ಕಡಿಮೆ ಅವದಿಯಲ್ಲಿ ಪ್ರಯಾಣಿಸುವ ನೂತನ ಹೈಪರ್‌ಸಾನಿಕ್ ವಿಮಾನ ಅಭಿವೃದ್ಧಿ ಪಡಿಸಲಾಗುತ್ತಿದೆ.

ವಿಮಾನಕ್ಕಿಂತ 2 ಪಟ್ಟು ವೇಗ, ಹೈಪರ್‌ ಲೂಪ್‌ನಲ್ಲಿ ಮಾನವ ಸಂಚಾರ ಯಶಸ್ವಿ!.

ವೇನಸ್ ಏರೋಸ್ಪೋಸ್ ಕಾರ್ಪ್ ಅತ್ಯಾಧುನಿಕ ತಂತ್ರಜ್ಞಾನದ ಹೈಪರ್‌ಸಾನಿಕ್ ವಿಮಾನ ಅಭಿವೃದ್ಧಿಪಡಿಸುತ್ತಿದೆ. ಈ ಹೈಪರ್‌ಸಾನಿಕ್ ವಿಮಾನದ ವೇಗ ಪ್ರತಿ ಗಂಟೆಗೆ  14,484 ಕಿಲೋಮೀಟರ್. ಈ ವಿಮಾನದ ಮೂಲಕ ವಿಶ್ವದ ಯಾವುದೇ ಮೂಲೆಗೂ ಒಂದು ಗಂಟೆಯಲ್ಲಿ ಸಂಚರಿಸಲು ಸಾಧ್ಯವಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತೀ ವೇಗದ ಸಾರಿಗೆ; ಹೈಪರ್‌ಲೂಪ್ ಜೊತೆ BIAL ಒಪ್ಪಂದ!.

ಕಂಪನಿಯು ವರ್ಜಿನ್ ಆರ್ಬಿಟ್ ಎಲ್ಎಲ್ ಸಿ ಮಾಜಿ ಉದ್ಯೋಗಿಗಳಾದ ಸಾರಾ ಡಗ್ಲೆಬಿ (ಕೋಡ್-ರೈಟಿಂಗ್ ಲಾಂಚ್ ಎಂಜಿನಿಯರ್) ಅವರ ಪತಿ ಆಂಡ್ರ್ಯೂ ಡಗ್ಲೆಬಿ (ಉಡಾವಣಾ, ಪೇಲೋಡ್ ಮತ್ತು ಪ್ರೊಪಲ್ಷನ್ ಕಾರ್ಯಾಚರಣೆ ವಿಭಾಗ)ಅವರ ಕನಸಿನ ಕೂಸು ಇದಾಗಿದೆ. 

ಅತೀ ವೇಗದ ವಿಮಾನ ಅಭಿವೃದ್ಧಿ ಹಿಂದಿನ ಕಾರಣ
ಅತೀ ವೇಗದ ವಿಮಾನ ಅಭಿವೃದ್ಧಿಪಡಿಸಲು ಒಂದು ಕಾರಣವಿದೆ. ಸಾರಾ ದಂಪತಿ ತಮ್ಮ ಅಜ್ಜಿಯ 95ನೇ ಹುಟ್ಟುಹಬ್ಬ ಸಂಭ್ರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಕಾರಣ ಅತೀ ದೂರ ಪ್ರಯಾಣ, ನಿಗದಿತ ಸಮಯದಲ್ಲಿ ಅಜ್ಜಿ ಬಳಿ ತಲುಪಲು ಸಾಧ್ಯವಾಗಿರಲಿಲ್ಲ. ಸಾರಾ ದಂಪತಿ ಅಜ್ಜಿಯ ಬಳಿ ತಲುಪುವಾಗ ಹುಟ್ಟು ಹಬ್ಬ ಸಂಭ್ರಮವೇ ಮುಗಿದು ಹೊಸ ದಿನ ಪ್ರಾರಂಭವಾಗಿತ್ತು. ಹೀಗಾಗಿ ದೇಶದ ಯಾವುದೇ ಮೂಲೆ ತಲುಪಲು ಹೆಚ್ಚು ಸಮಯ ವ್ಯಯಿಸದ ವಿಮಾನದ ಆವಿಷ್ಕಾರ ಚಿಂತನೆ ಆರಂಭಗೊಂಡಿತ್ತು.

15 ಸದಸ್ಯರ ತಂಡ ಈ ವಿಮಾನ ಅಭಿವೃದ್ಧಿ ಪಡಿಸಿದೆ. ಬಾಹ್ಯಾಕಾಶದ ಅನುಭವಿ ವಿಜ್ಞಾನಿಗಳು, ತಜ್ಞರ ತಂಡ ಈ ಆವಿಷ್ಕಾರದಲ್ಲಿ ಭಾಗಿಯಾಗಿದೆ. ಈ ಹಿಂದೆ ಈ ರೀತಿಯ ಅತೀ ವೇಗದ ವಿಮಾನ ಅಭಿವೃದ್ಧಿ ಕೆಲಸಗಳು ನಡೆದಿದೆ. ಆದರೆ ನಮ್ಮ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಗಿದೆ.  ಲ್ಯಾಂಡಿಂಗ್ ಗೇರ್ ಮತ್ತು ಎಂಜಿನ್‌ಗಳಿಂದ ಬರುವ ಹೆಚ್ಚುವರಿ ತೂಕವನ್ನು ಉತ್ತಮವಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ  ಎಂದು ಡಗ್ಲೆಬಿ ಹೇಳಿದ್ದಾರೆ.

click me!