ಸುರಕ್ಷತೆ ಖಚಿತಪಡಿಸಿ; 5G ಕೆನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ!

By Suvarna NewsFirst Published May 31, 2021, 6:04 PM IST
Highlights
  • 5ಜಿ ತಂತ್ರಜ್ಞಾನ ಪರೀಕ್ಷಿಸದೆ ಅಳವಡಿಕೆ ಕುರಿತು ಜೂಹಿ ಚಾವ್ಲಾ ಕಳವಳ
  • ಸುರಕ್ಷತೆ ಖಚಿತ ಪಡಿಸಲು ಆಗ್ರಹಿಸಿದ ಬಾಲಿವುಡ್ ನಟಿ
  • 5ಜಿ ಕನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜೂಹಿ
     

ನವದೆಹಲಿ(ಮೇ.31):  ಭಾರತ 4G ಟೆಕ್ನಾಲಜಿಯಿಂದ ಇದೀಗ 5Gಯತ್ತೆ ಹೆಜ್ಜೆ ಇಟ್ಟಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಗಿಂತಲೂ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. 2ಜಿಯಿಂದ 4ಜಿ ಬರವುಷ್ಟರ ಹೊತ್ತಿಗೆ ಹಲವು ಪ್ರಾಣಿಸಂಕುಲವನ್ನೇ ಭಾರತ ಕಳೆದುಕೊಂಡಿದೆ. ಇದೀಗ 5ಜಿ ಮತ್ತಷ್ಟು ಆಪಾಯ ಹಾಗೂ ಆತಂಕಕಾರಿ. ಹೀಗಾಗಿ ಪರೀಕ್ಷಿಸದೇ, ಸುರಕ್ಷತೆ ಖಚಿತಪಡಿಸದ 5ಜಿ ಅನುಷ್ಠಾನದ ವಿರುದ್ಧ ಬಾಲಿವುಡ್ ನಟಿ ಜೂಹಿ ಚಾವ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

5ಜಿ ಸೇವೆ ದೊರತೆರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?

5ಜಿ ತಂತ್ರಜ್ಞಾನ ಸುರಕ್ಷಿತ ಎಂದು ಪ್ರಮಾಣೀಕರದೇ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಜೂಹಿ ಚಾವ್ಲಾ, ವಿರೇಶ್ ಮಲಿಕ್ ಹಾಗೂ ಟೀನಾ ವಾಚನಿ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.  ಈ ಅರ್ಜಿಯಲ್ಲಿ 5ಜಿ ತಂತ್ರಜ್ಞಾನದಿಂದ ಆರೋಗ್ಯದ ಮೇಲಾಗುವ ಪರಿಣಾಣದ ಕುರಿತು ಬೆಳುಕು ಚೆಲ್ಲಿದ್ದಾರೆ. 

4ಜಿ ತಂತ್ರಜ್ಞಾನ ಪ್ರಾಣಿಸಂಕುಲದ ಆರೋಗ್ಯಕ್ಕೆ ಮಾರಕವಾಗಿದೆ. ಇದೀಗ 5ಜಿ ತಂತ್ರಜ್ಞಾನದ ರೆಡಿಯೋಫ್ರಿಕ್ವೆನ್ಸಿ ರೇಡಿಯೇಶನ್ 10 ರಿಂದ 100 ಪಟ್ಟು ಹೆಚ್ಚಿದೆ. ಇದರಿಂದ ಭೂಮಿ ಮೇಲಿನ ಮನುಷ್ಯ, ಪ್ರಾಣಿಸಂಕುಲ ಹಾಗೂ ಸಸ್ಯಗಳು ಈ ರಿಡೇಯೇಶನ್‌ಗೆ  ನಶಿಸಿ ಹೋಗಲಿದೆ ಎಂದು ದೂರಿನಲ್ಲಿ ಚಾವ್ಲಾ ಉಲ್ಲೇಖಿಸಿದ್ದಾರೆ.

5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?

5ಜಿ ತಂತ್ರಜ್ಞಾನ ಭೂಮಿ ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮನುಷ್ಯರ ಜೀವಕೋಶ, ಅಂಗಾಗಗಳನ್ನು 5ಜಿ ರೇಡಿಯೇಶನ್ ಹಾನಿಮಾಡಲಿದೆ ಅನ್ನೋದು ಕ್ಲಿನಿಕಲ್ ಟ್ರಯಲ್‌ನಲ್ಲಿ ಪತ್ತೆಯಾಗಿದೆ. ರೆಡಿಯೇಶನ್ ಪ್ರಮಾಣ ಹೆಚ್ಚಾಗಿರುವ ಕಾರಣ ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಾಗಿದೆ. ಈ ಕುರಿತು ಅಧ್ಯಯನದ ಅವಶ್ಯಕತೆ ಇದೆ. ಹೀಗಾಗಿ ಮಾರಕವಾಗಿರುವ 5ಜಿ ಅನುಷ್ಠಾನಕ್ಕೂ ಮೊದಲು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜೂಹಿ ಜಾವ್ಲಾ ಆಗ್ರಹಿಸಿದ್ದಾರೆ. 

ನಾನು 5ಜಿ ತಂತ್ರಜ್ಞಾನದ ವಿರುದ್ಧ ಅಲ್ಲ. ಆದರೆ ಸುರಕ್ಷಿತವೇ ಅನ್ನೋದನ್ನು ಅಧ್ಯಯನ ನಡೆಸಬೇಕು. ಸದ್ಯದ ಅಧ್ಯಯನದಲ್ಲಿ 5ಜಿ ಇಡೀ ಸಂಕುಲಕ್ಕೆ ಮಾರಕವಾಗಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ರೇಡಿಯೇಶನ್‌ನಿಂದ ಪಕ್ಷಿಗಳ ಸಂತತಿ ಸಂಪೂರ್ಣ ನಶಿಸಲಿದೆ. ಇದಕ್ಕೆ ಮೊಬೈಲ್ ಟವರ್ ಆಗಮಿಸಿದ ಕಾಲದಿಂದ ಗುಬ್ಬಚ್ಚಿ ಹಕ್ಕಿಗಳು ವಿನಾಶದ ಅಂಚಿಗೆ ತಲುಪಿರುವುದನ್ನು ನಾವು ಗಮನಿಸಿಬಹುದು.

click me!