ಟ್ವಿಟರ್‌ನಲ್ಲಿ ವಿಡಿಯೋ, ಆಡಿಯೋ ಕಾಲ್ ಫೀಚರ್, ವ್ಯಾಟ್ಸ್ಆ್ಯಪ್‌ಗೆ ಶಾಕ್ ನೀಡಿದ ಮಸ್ಕ್!

By Suvarna NewsFirst Published Aug 31, 2023, 1:59 PM IST
Highlights

ಎಲಾನ್ ಮಸ್ಕ್ ಇದೀಗ X(ಟ್ವಿಟರ್) ಹೊಸ ಫೀಚರ್ ಘೋಷಿಸಿದ್ದಾರೆ. ಇನ್ನು ಮುಂದೆ ಟ್ವಿಟರ್‌ನಲ್ಲೇ ವಿಡಿಯೋ, ಆಡಿಯೋ ಕಾಲ್ ಮಾಡಲು ಸಾಧ್ಯವಿದೆ.  ಹೊಸ ಫೀಚರ್ ಪರಿಚಯಿಸುವ ಮೂಲಕ ವ್ಯಾಟ್ಸ್ಆ್ಯಪ್‌ಗೆ ಮಸ್ಕ್ ಠಕ್ಕರ್ ನೀಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ(ಆ.31) ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಹೊಸ ನಿಯಮ, ಹೊಸ ಫೀಚರ್ಸ್ ಪರಿಚಯಿಸಲಾಗಿದೆ.  ಇತ್ತೀಚೆಗೆ   X ಎಂದು ನಾಮಕರಣ ಮಾಡಿರುವ ಎಲಾನ್ ಮಸ್ಕ್ ಇದೀಗ ಗ್ರಾಹಕರಿಗೆ ಅನೂಕೂಲವಾಗುವಂತೆ ಹೊಸ ಫೀಚರ್ ಪರಿಚಯಿಸುತ್ತಿದ್ದಾರೆ.  ಇನ್ನು ಮುಂದೆ  X  ಮೂಲಕ ಬಳಕೆದಾರರು ವಿಡಿಯೋ, ಆಡಿಯೋಕಾಲ್ ಮಾಡಲು ಸಾಧ್ಯವಿದೆ. ಟ್ವಿಟರ್‌ನಲ್ಲಿ ಇದೀಗ ಆಡಿಯೋ ಹಾಗೂ ವಿಡಿಯೋ ಕಾಲ್ ಫೀಚರ್ ಪರಿಚಯಿಸಲಾಗುತ್ತಿದೆ. ವಿಶೇಷ ಅಂದರೆ ಈ ವಿಡಿಯೋ, ಆಡಿಯೋ ಕಾಲ್‌ಗೆ ಫೋನ್ ನಂಬರ್ ಅಗತ್ಯವಿಲ್ಲ. ಟ್ವಿಟರ್ ಲಾಗಿನ್ ಆಗಿದ್ದರೆ ಸಾಕು. 

ಹೊಸ ಫೀಚರ್ ಕುರಿತು ಖುದ್ದು ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ. X ಇದೀಗ ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ. X  ಮೂಲಕ ಬಳಕೆದಾರರು ವಿಡಿಯೋ, ಆಡಿಯೋ ಕಾಲ್ ಮಾಡಬಹುದು. ಈ ವಿಶೇಷ ಫೀಚರ್‌ಗೆ ಯಾವುದೇ ಫೋನ್ ನಂಬರ್ ಅಗತ್ಯವಿಲ್ಲ. ಯಾರಿಗೆ ಕರೆ ಮಾಡಬೇಕು, ಅವರ X ಖಾತೆ ಕ್ಲಿಕ್ ಮಾಡಿ ಆಡಿಯೋ ಅಥವಾ ವಿಡಿಯೋ ಕಾಲ್ ಆಯ್ಕೆ ಮಾಡಿಕೊಂಡರೆ ಸಾಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

20ಕ್ಕೂ ಹೆಚ್ಚು ಜಾಗತಿಕ ಸಂಸ್ಥೆಗಳಿಗೆ ಭಾರತೀಯರೇ ಬಾಸ್‌: ಇಂಡಿಯನ್ ಸಿಇಒಗಳ ಉದ್ದ ಪಟ್ಟಿಗೆ ಭೇಷ್ ಎಂದ ಮಸ್ಕ್

ಈ ಫೀಚರ್ಸ್ ಕೇವಲ ಆ್ಯಪ್‌ಗೆ ಮಾತ್ರ ಸೀಮಿತವಾಗಿಲ್ಲ.  iOS, ಆ್ಯಂಡ್ರಾಯ್ಡ್, ಮ್ಯಾಕ್ ಹಾಗೂ ಪಿಸಿಗೂ ಈ ಫೀಚರ್ ಅನ್ವಯವಾಗಲಿದೆ. ಇದು ವಿಶೇಷ ಫೀಚರ್ ಆಗಿದೆ. ಕಾರಣ  X ಗ್ಲೋಬಲ್ ವಿಳಾಸದ ಮೂಲಕ ಕರೆಮಾಡಲು ಸಾಧ್ಯ ಎಂದು ಎಲಾನ್ ಮಸ್ಕ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಹೊಸ ಫೀಚರ್ ಕುರಿತ ಟೆಸ್ಟಿಂಗ್ ಯಶಸ್ವಿಯಾಗಿ ನಡೆದಿದೆ. ಈ ಕುರಿತು ಟ್ವಿಟರ್ ಡಿಸೈನರ್ ಆ್ಯಂಡ್ರಿಯಾ ಕೊನ್ವೇ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ಕಾಲ್ ಫೋಟೋ ಹಂಚಿಕೊಂಡು ರಿಂಗ್ ರಿಂಗ್ ಎಂದು ಟ್ವೀಟ್ ಮಾಡಿದ್ದಾರೆ.  

 

Video & audio calls coming to X:

- Works on iOS, Android, Mac & PC
- No phone number needed
- X is the effective global address book

That set of factors is unique.

— Elon Musk (@elonmusk)

 

ಇತ್ತೀಚೆಗೆ ಎಲಾನ್ ಮಸ್ಕ್ ಟ್ವಿಟರ್ ಲೋಗವನ್ನು  X  ಎಂದು ಬದಲಿಸಿದ್ದರು. ನೀಲಿ ಹಕ್ಕಿಗಳ ಲೋಗೋ ಇದೀಗ ಬದಲಾಗಿದೆ. ಇನ್ನು ಟ್ವೀಟ್ ಎಂದು ಕರೆಯುತ್ತಿದ್ದ ಸಂದೇಶಗಳಿಗೆ ಇನ್ನು ಮುಂದೆ ಎಕ್ಸಸ್ ಎಂದು ಕರೆಯಬಹುದುಎಂದು ಮಸ್ಕ್ ಹೇಳಿದ್ದರು.   ಹೊಸ ಲೋಗೋ ಹಲವು ವಿವಾದಕ್ಕೂ ಕಾರಣವಾಗಿತ್ತು.  X ಲೋಗೋ ಅಡಿಯಲ್ಲಿ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಕಾಪಿ ರೈಟ್ ಸಮಸ್ಯೆಯೂ ಕಾಡಿತ್ತು. ಇತ್ತ ಟ್ವಿಟರ್  ಕೇಂದ್ರ ಕಚೇರಿಯಲ್ಲಿ ಅತೀ ದೊಡ್ಡ X ಲಾಂಛನ ಹಾಕಿ ಸ್ಥಳೀಯರ ಆಕ್ರೋಶಕ್ಕೂ ಕಾರಣರಾಗಿದ್ದರು.

ಮಸ್ಕ್‌ಗೆ ಸಂಕಷ್ಟ ತಂದ X; ವಾರ್ನಿಂಗ್ ಬಳಿಕ ಕಚೇರಿಯಲ್ಲಿ ಅಳವಡಿಸಿದ್ದ ಲೋಗೋ ತೆಗೆದ ಕಂಪನಿ!

ಎಲಾನ್‌ ಮಸ್ಕ್ ‘ಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಟೆಕ್ನಾಲಜೀಸ್‌ ಕಾಪ್‌ರ್‍’ ಎಂಬ ರಾಕೆಟ್‌ ಕಂಪನಿ ಹೊಂದಿದ್ದಾರೆ. ಅದನ್ನು ‘ಸ್ಪೇಸ್‌ಎಕ್ಸ್‌’ ಎಂದೂ ಕರೆಯಲಾಗುತ್ತದೆ. 1999ರಲ್ಲಿ ಮಸ್ಕ್  ಆನ್‌ಲೈನ್‌ ಹಣಕಾಸು ಸೇವೆ ಒದಗಿಸಲು‘ಎಕ್ಸ್‌.ಕಾಂ’ ಎಂಬ ಸ್ಟಾರ್ಟಪ್‌ ಆರಂಭಿಸಿದ್ದರು. ಅದು ಈಗ ‘ಪೇಪಾಲ್‌’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದೆ. ‘ಎಕ್ಸ್‌’ ಜತೆ ಮಸ್ಕ್ಕ ಅವರಿಗೆ ನಂಟು ಹೆಚ್ಚು.  

click me!