ಗಣೇಶ ಹಬ್ಬಕ್ಕೆ ಜಿಯೋ ಏರ್ ಫೈಬರ್ ಸೇವೆ ಆರಂಭ,ಇಲ್ಲಿದೆ ಡೇಟಾ ಸ್ಪೀಡ್, ಬೆಲೆ ವಿವರ!

By Suvarna News  |  First Published Aug 28, 2023, 5:52 PM IST

ಗಣೇಶ ಹಬ್ಬಕ್ಕೆ ಜಿಯೋ ಏರ್ ಫೈಬರ್ ಸೇವೆ ಆರಂಭಗೊಳ್ಳುತ್ತಿದೆ. ಅತೀ ವೇಗದ ಇಂಟರ್ನಟ್, ವೈಯರ್‌ಲೆಸ್ ಸಂಪರ್ಕ, ಕೈಗೆಟುಕುವ ದರ ಸೇರಿದಂತೆ ಹಲವು ವಿಶೇಷಗಳ ಏರ್ ಫೈಬರ್ ಸೇವೆ ಭಾರತದಲ್ಲಿ ಹೊಸ ಕ್ರಾಂತಿ ಮಾಡಲಿದೆ.


ನವದೆಹಲಿ(ಆ.28) ಬಹುನಿರೀಕ್ಷಿತ ಜಿಯೋ ಏರ್ ಫೈಬರ್ ಸೇವೆ ಆರಂಭಗೊಳ್ಳುತ್ತಿದೆ. ಗಣೇಶ ಚತುರ್ಥಿಯಂದು ಅಂದರೆ ಸೆಪ್ಟೆಂಬರ್ 19 ರಂದು ಜಿಯೋ ಏರ್ ಫೈಬರ್ ಸೇವೆಯನ್ನು ಆರಂಭಿಸಲಾಗುತ್ತದೆ. ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚೇರ್ಮೆನ್ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. 1Gbps ಸ್ಪೀಡ್ ಡೇಟಾ ಸಂಪರ್ಕ ಹೊಸ ಕ್ರಾಂತಿ ಮಾಡಲಿದೆ. ಜಿಯೋ ಏರ್ ಫೈಬರ್ 5ಜಿ ನೆಟ್‌ವರ್ಕ್ ಮತ್ತು ಅತ್ಯಾಧುನಿಕ ವೈರ್‌ಲೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಗಳು ಮತ್ತು ಕಚೇರಿಗಳಿಗೆ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುತ್ತದೆ. ಜಿಯೋ ಏರ್ ಫೈಬರ್ ಆರಂಭದಿಂದಾಗಿ ದೂರಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಉಂಟಾಗುವ ಸಾಧ್ಯತೆ ಇದೆ.

• 20 ಕೋಟಿ ಮನೆಗಳು ಮತ್ತು ಕಚೇರಿಗಳನ್ನು ತಲುಪಲು ಯೋಜನೆ
• ಪ್ರತಿದಿನ 1.5 ಲಕ್ಷ ಸಂಪರ್ಕಗಳನ್ನು ಕಲ್ಪಿಸಬಹುದು
• 'ಜಿಯೋ ಟ್ರೂ 5ಜಿಡೆವಲಪರ್ ಪ್ಲಾಟ್‌ಫಾರ್ಮ್' ಮತ್ತು 'ಜಿಯೋ ಟ್ರೂ 5ಜಿ ಲ್ಯಾಬ್ 
• ಜಿಯೋ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು 1.5 ಮಿಲಿಯನ್ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ

Tap to resize

Latest Videos

ರಿಲಯನ್ಸ್ ಮಂಡಳಿಯಿಂದ ನೀತಾ ಅಂಬಾನಿ ಹೊರಕ್ಕೆ , ಮಕ್ಕಳಿಗೆ ಹೊಸ ಹೊಣೆ!

ನಮ್ಮ ಆಪ್ಟಿಕಲ್ ಫೈಬರ್ ಸೇವೆಯಾದ ಜಿಯೋ ಫೈಬರ್‌ 10 ದಶಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಹೊಂದಿದೆ. ಇನ್ನೂ ಲಕ್ಷಾಂತರ ಮನೆಗಳಿಗೆ ಬೇಡಿಕೆ ಇದ್ದು, ಅಲ್ಲಿ ತಂತಿ ಸಂಪರ್ಕ ಕಲ್ಪಿಸುವುದು ಕಷ್ಟಕರವಾಗಿದೆ. ಈ ತೊಂದರೆಯನ್ನು ಜಿಯೋ ಏರ್ ಫೈಬರ್ ನಿವಾರಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಾಮಾನ್ಯ ಸಭೆಯಲ್ಲಿ  ಮುಕೇಶ್ ಅಂಬಾನಿ ಹೇಳಿದ್ದಾರೆ.  ಈ ಮೂಲಕ ನಾವು 20 ಕೋಟಿ ಮನೆ ಮತ್ತು ಕಚೇರಿಗಳನ್ನು ತಲುಪುವ ನಿರೀಕ್ಷೆಯಲ್ಲಿದ್ದೇವೆ. ಜಿಯೋ ಏರ್ ಫೈಬರ್ ಆರಂಭದೊಂದಿಗೆ, ಜಿಯೋ ವಲಯಕ್ಕೆ ಪ್ರತಿದಿನ 1.5 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಜಿಯೋದ ಆಪ್ಟಿಕಲ್ ಫೈಬರ್ ಸೌಲಭ್ಯವು ಭಾರತದಾದ್ಯಂತ 15 ಲಕ್ಷ ಕಿಮೀಗಳಷ್ಟು ಹರಡಿದೆ. ಆಪ್ಟಿಕಲ್ ಫೈಬರ್‌ನಲ್ಲಿ ಗ್ರಾಹಕರು ತಿಂಗಳಿಗೆ ಸರಾಸರಿ 280 ಜಿಬಿಗಿಂತ ಹೆಚ್ಚಿನ ಡೇಟಾವನ್ನು ಬಳಸುತ್ತಾರೆ. ಇದು ಜಿಯೋದ ತಲಾ ಮೊಬೈಲ್ ಇಂಟರ್ನೆಟ್ ಡೇಟಾ ಬಳಕೆಗಿಂತ 10 ಪಟ್ಟು ಹೆಚ್ಚು. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಏರ್ ಫೈಬರ್ ಜೊತೆಗೆ ಜಿಯೋ ಟ್ರೂ 5 ಜಿ ಡೆವಲಪರ್ ಪ್ಲಾಟ್‌ಫಾರ್ಮ್ ಮತ್ತು ಜಿಯೋ ಟ್ರೂ 5ಜಿ ಲ್ಯಾಬ್‌ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ.

ಇಶಾಳನ್ನು ಮೆಚ್ಚಿ ಆಕೆಗಾಗಿ 5,000 ಕೋಟಿ ರೂ ಹೂಡಿಕೆ ಮಾಡಿದ ಅಂಬಾನಿ

ಭಾರತೀಯ ಉದ್ಯಮಗಳು, ಸಣ್ಣ ಉದ್ಯಮಗಳು ಮತ್ತು ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳು ಡಿಜಿಟಲ್ ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನವನ್ನು ಪರಿವರ್ತಿಸುವ ವೇದಿಕೆಯನ್ನು ನಾವು ನಿರ್ಮಿಸುತ್ತಿದ್ದೇವೆ ಎಂದು ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.  ಉದ್ಯಮಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಜಿಯೋ 5ಜಿ ನೆಟ್‌ವರ್ಕ್, ಎಡ್ಜ್ ಕಂಪ್ಯೂಟಿಂಗ್ ಮತ್ತು ಅಪ್ಲಿಕೇಶನ್‌ಗಳನ್ನು ಸಂಯೋಜಿಸುವ ಸಮಗ್ರ ವೇದಿಕೆಯನ್ನು ರಚಿಸಿದೆ. ಮತ್ತೊಂದೆಡೆ, 'ಜಿಯೋ ಟ್ರೂ 5ಜಿ ಲ್ಯಾಬ್‌' ನಲ್ಲಿರುವ ನಮ್ಮ ತಂತ್ರಜ್ಞಾನ ಪಾಲುದಾರರು ಉದ್ಯಮ-ನಿರ್ದಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸಬಹುದು, ಪರೀಕ್ಷಿಸಬಹುದು ಮತ್ತು ಸಹ-ನಿರ್ಮಾಣದಲ್ಲಿ ಜತೆಗೂಡಬಹುದು ಎಂದಿದ್ದಾರೆ.  
 

click me!