ಹಬ್ಬದ ನಡುವೆ ಬಂಪರ್ ಆಫರ್, ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಶನ್ ಪ್ಲಾನ್ ಘೋಷಿಸಿದ ಜಿಯೋ!

By Suvarna News  |  First Published Aug 29, 2023, 4:04 PM IST

ರಕ್ಷಾ ಬಂಧನ, ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ನಡುವೆ ಜಿಯೋ ಬಂಪರ್ ಆಫರ್ ಘೋಷಿಸಿದೆ. ಹೊಸ ‌'ಜಿಯೋ-ನೆಟ್‌ಫ್ಲಿಕ್ಸ್ ಪ್ರಿಪೇಯ್ಡ್ ಯೋಜನೆಗಳನ್ನು ಘೋಷಿಸಿದೆ. ಈ ಆಫರ್ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ಆ.29) ರಿಲಯನ್ಸ್ ಜಿಯೋ ಸಾಲು ಸಾಲು ಹಬ್ಬಗಳ ನಡುವೆ ಬಂಪರ್ ಆಫರ್ ಘೋಷಿಸಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಮೊಬೈಲ್ ಪ್ರೀಪೇಯ್ಡ್ ಯೋಜನೆ ಜೊತೆಗೆ ನೆಟ್ ಫ್ಲಿಕ್ಸ್ ಸಬ್‌ಸ್ಕ್ರಿಪ್ಶನ್ ಪರಿಚಯಿಸಿದೆ.  1099 ರೂಪಾಯಿ ಬೆಲೆಯ ಯೋಜನೆಯೊಂದಿಗೆ ಗ್ರಾಹಕರು ದಿನಕ್ಕೆ 2 ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಇದೇ ರೀತಿ 1499 ರೂಪಾಯಿಗಳ ಯೋಜನೆಯೊಂದಿಗೆ, ಕಂಪನಿಯು ದಿನಕ್ಕೆ 3 ಜಿಬಿ ಡೇಟಾವನ್ನು ನೀಡುತ್ತಿದೆ. ಎರಡೂ ಯೋಜನೆಗಳ ಮಾನ್ಯತೆ 84 ದಿನಗಳು ಆಗಿರುತ್ತದೆ. ಆಯ್ದ ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಶನ್ ಈಗಾಗಲೇ ಲಭ್ಯವಿದ್ದರೂ ಪ್ರಿಪೇಯ್ಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಲಭ್ಯವಿರುವುದು ಇದೇ ಮೊದಲಾಗಿದೆ.

ವಿಶ್ವದಲ್ಲೇ ಮೊದಲ ಬಾರಿಗೆ ನೆಟ್‌ಫ್ಲಿಕ್ಸ್ ಅನ್ನು ಪ್ರೀಪೇಯ್ಡ್ ಪ್ಲಾನ್ ಜತೆಗೆ ನೀಡುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಜಿಯೋದ 400 ಮಿಲಿಯನ್, ಅಂದರೆ ನಲವತ್ತು ಕೋಟಿ ಪ್ರಿಪೇಯ್ಡ್ ಗ್ರಾಹಕರು ನೆಟ್‌ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಜತೆಗೆ ಯೋಜನೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತಾರೆ. ನೆಟ್‌ಫ್ಲಿಕ್ಸ್‌ನೊಂದಿಗೆ ಗ್ರಾಹಕರು ಹಾಲಿವುಡ್‌ನಿಂದ ಬಾಲಿವುಡ್ ತನಕ ಜನಪ್ರಿಯ ಟಿವಿ ಶೋಗಳು, ಭಾರತೀಯ ಪ್ರಾದೇಶಿಕ ಚಲನಚಿತ್ರಗಳು ಮತ್ತು ಇನ್ನೂ ಹೆಚ್ಚಿನದನ್ನು ತಮ್ಮ ಮೊಬೈಲ್ ಸಾಧನದಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಸಾಧ್ಯವಾಗುತ್ತದೆ. ಜಿಯೋದ ಇತರ ಯೋಜನೆಗಳಂತೆ ಗ್ರಾಹಕರು ಆನ್‌ಲೈನ್ ಅಥವಾ ಆಫ್‌ಲೈನ್ ರೀಚಾರ್ಜ್ ಸೌಲಭ್ಯವನ್ನು ಎರಡೂ ಯೋಜನೆಗಳಲ್ಲಿ ಪಡೆಯುತ್ತಾರೆ.

Latest Videos

undefined

 

ಗಣೇಶ ಹಬ್ಬಕ್ಕೆ ಜಿಯೋ ಏರ್ ಫೈಬರ್ ಸೇವೆ ಆರಂಭ,ಇಲ್ಲಿದೆ ಡೇಟಾ ಸ್ಪೀಡ್, ಬೆಲೆ ವಿವರ!

ಗ್ರಾಹಕರು ನೆಟ್‌ಫ್ಲಿಕ್ಸ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬಹುದು. ಅದೇ ಲಾಗಿನ್ ಕ್ರೆಡೆನ್ಷಿಯಲ್ಸ್ ಗಳೊಂದಿಗೆ ಬಳಕೆ ಮಾಡಬಹುದು. ಆದರೆ ಇದನ್ನು ಒಂದು ಸಮಯದಲ್ಲಿ-  ಒಂದು ಸಾಧನದಲ್ಲಿ ಮಾತ್ರ ವೀಕ್ಷಿಸಬಹುದು. ರೂ. 1499 ರ ಯೋಜನೆಯಲ್ಲಿ ಟಿವಿ ಅಥವಾ ಲ್ಯಾಪ್‌ಟಾಪ್‌ನಂತಹ ಯಾವುದೇ ದೊಡ್ಡ ಪರದೆಯ ಮೇಲೆ ನೆಟ್‌ಫ್ಲಿಕ್ಸ್ ಅನ್ನು ಸ್ಟ್ರೀಮ್ ಮಾಡಬಹುದು.

ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್‌ನ ಪ್ರಾರಂಭವು ನಮ್ಮ ಸಂಕಲ್ಪವನ್ನು ತೋರಿಸುವಂಥ ಮತ್ತೊಂದು ಹಂತವಾಗಿದೆ ಎಂದು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್ ಹೇಳಿದ್ದಾರೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರರೊಂದಿಗೆ ನಮ್ಮ ಸಹಭಾಗಿತ್ವವು ಬಲವಾಗಿ ಬೆಳೆದಿದೆ ಎಂದಿದ್ದಾರೆ. 

ರಿಲಯನ್ಸ್ ಮಂಡಳಿಯಿಂದ ನೀತಾ ಅಂಬಾನಿ ಹೊರಕ್ಕೆ , ಮಕ್ಕಳಿಗೆ ಹೊಸ ಹೊಣೆ!

ಜಿಯೋ ಜೊತೆಗಿನ ನಮ್ಮ ಸಂಬಂಧವನ್ನು ವಿಸ್ತರಿಸಲು ನಾವು ರೋಮಾಂಚಿತರಾಗಿದ್ದೇವೆ. ವರ್ಷಗಳಲ್ಲಿ, ನಮ್ಮ ಹಲವಾರು ಯಶಸ್ವಿ ಸ್ಥಳೀಯ ಶೋಗಳು, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳನ್ನು ಭಾರತದಾದ್ಯಂತ ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ ಎಂದು ನೆಟ್‌ಫ್ಲಿಕ್ಸ್‌ನ ಏಷ್ಯಾ ಪೆಸಿಫಿಕ್ (ಎಪಿಎಸಿ) ಪಾಲುದಾರಿಕೆಗಳ ಉಪಾಧ್ಯಕ್ಷ ಟೋನಿ ಜೆಮ್‌ಕೋವ್ ಸ್ಕಿ ಹೇಳಿದ್ದಾರೆ. ಜಿಯೋ ಜೊತೆಗಿನ ನಮ್ಮ ಹೊಸ ಪ್ರಿಪೇಯ್ಡ್  ಜತೆಗೆ ನೀಡುವಂಥ ಈ ಯೋಜನೆ ಪಾಲುದಾರಿಕೆಯು ಗ್ರಾಹಕರಿಗೆ ಭಾರತೀಯ ಕಂಟೆಂಟ್ ಮತ್ತು ಪ್ರಪಂಚದಾದ್ಯಂತದ ಕಂಟೆಂಟ್ ಗಳಿಗೆ ಸಂಪರ್ಕವನ್ನು ನೀಡುತ್ತದೆ ಎಂದಿದ್ದಾರೆ.

click me!