ಟೂಲ್‌ಕಿಟ್ ಜಟಾಪಟಿ: ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹೇಳಿಕೆಗೆ ದೆಹಲಿ ಪೊಲೀಸರ ತಿರುಗೇಟು!

By Suvarna News  |  First Published May 27, 2021, 6:44 PM IST
  • ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹೇಳಿಕೆಗೆ ದೆಹಲಿ ಪೊಲೀಸರ ತಿರುಗೇಟು
  • ಗೊಂದಲ ಹಾಗೂ ತಿರುಚಿದ ಹೇಳಿಕಿಗೆ ಸ್ಪಷ್ಟನೆ ನೀಡಿದ ಪೊಲೀಸ್
  • ಮಾಧ್ಯಮ ಪ್ರಕಟಣೆಯಲ್ಲಿ ಸಾರ್ವಜನಿಕ ವೇದಿಕೆಯ ಪಾರದರ್ಶಕತೆ ಬಯಲು

ನವದೆಹಲಿ(ಮೇ.27): ಭಾರತದಲ್ಲಿ ಇದೀಗ ಸಾಮಾಜಿಕ ಮಾಧ್ಯಮ ಹಾಗೂ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಒಂದೆಡೆ ಹೊಸ ಡಿಜಿಟಲ್ ನಿಯಮ, ಮತ್ತೊಂದೆಡೆ ದೆಹಲಿ ಪೊಲೀಸರಿಂದ ಟ್ವಿಟರ್ ಕಚೇರಿ ಮೇಲೆ ದಾಳಿಗೆ ಭಾರತದ ಸಾಮಾಜಿಕ ಮಾಧ್ಯಮ ಬೆಚ್ಚಿ ಬಿದ್ದಿದೆ. ರಕ್ಷಣೆಗಾಗಿ ಹೈಕೋರ್ಟ್ ಮೊರೆ ಹೋಗಿದೆ. ಇದರ ನಡುವೆ ಟ್ವಿಟರ್ ಗೊಂದಲ ಸೃಷ್ಟಿಸುವ ಹಾಗೂ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದೆ. ಟ್ವಿಟರ್ ಹೇಳಿಕೆಗೆ ಉತ್ತರವಾಗಿ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. 

ಟೂಲ್ ಕಿಟ್ ಪ್ರಕರಣ; ಟ್ವಿಟರ್ ಕಚೇರಿ ಮೇಲೆ ದೆಹಲಿ ಪೊಲೀಸ್ ದಾಳಿ!

Tap to resize

Latest Videos

undefined

ಕಾಂಗ್ರೆಸ್ ಟೂಲ್‌ಟೂಲ್ ಪ್ರಕರಣ ಕುರಿತು ದಾಖಲಾದ ದೂರಿನ ಅನ್ವಯ ದೆಹಲಿ ಪೊಲೀಸರು ತನಿಖೆಗೆ ಟ್ವಿಟರ್ ಕಚೇರಿ ಮೇಲೆ ದಾಳಿ ನಡೆಸಿತ್ತು. ಕಚೇರಿ ಮೇಲಿನ ಪೊಲೀಸರ ದಾಳಿಯನ್ನು ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದಿದೆ. ಜೊತೆಗೆ ಈ ರೀತಿಯ ಬೆದರಿಕೆ ತಂತ್ರ ಆತಂಕಕಾರಿ ಎಂದು ಟ್ವಿಟರ್ ನೇರವಾಗಿ ದೆಹಲಿ ಪೊಲೀಸ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿತ್ತು. ಈ ಆರೋಪಗಳಿಗೆ ದೆಹಲಿ ಪೊಲೀಸರು ಉತ್ತರ ನೀಡಿದ್ದಾರೆ.  ಟ್ವಿಟರ್ ಸಾರ್ವಜನಿಕ ವೇದಿಕೆಯಾಗಿದೆ. ಹೀಗಾಗಿ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಅತ್ಯವಶ್ಯಕ. ಟ್ವಿಟರ್ ಪ್ರತಿ ನಡೆ ಕೂಡ ಸಾರ್ವಜನಿಕರಲ್ಲಿ ಪರಿಣಾಮ ಬೀರಲಿದೆ. ಹೀಗಾಗಿ ಸಾರ್ವಜನಿಕ ಕ್ಷೇತ್ರದ ವಿಷಯಗಳ ಕುರಿತು ಸ್ಪಷ್ಟತೆ ಇರಬೇಕು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಟ್ವಿಟರ್ ಇಂಡಿಯಾ ನೀಡುತ್ತಿರುವ ಹೇಳಿಕೆಗಳು ಕಾನೂನುಬದ್ಧ ವಿಚಾರಣೆಗೆ ಅಡ್ಡಿಯನ್ನುಂಟುಮಾಡುತ್ತಿವೆ. ಟ್ವಿಟರ್ ತನಿಖಾ ಪ್ರಾಧಿಕಾರ ಹಾಗೂ ತೀರ್ಪು ನೀಡುವ ಪ್ರಾಧಿಕಾರಕ್ಕೆ ಯಾವುದೇ ಕಾನೂನಿನ ಅನುಮತಿ ಇಲ್ಲ. ತನಿಖೆ ನಡೆಸಲು ಹಾಗೂ ತೀರ್ಪು ನೀಡವುದು ನ್ಯಾಯಾಲಯಗಳು. ಕಾನೂನಿನಿಂದ ಅಧಿಕಾರ ಪಡೆದ ಏಕೈಕ ಘಟಕ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. 

ಮತ್ತೊಂದು ವಾರ್ನಿಂಗ್; ಟ್ವಿಟರ್, ಫೇಸ್ ಬುಕ್‌ಗೆ ಕೊನೆ ಮೊಳೆ?

ಟ್ವಿಟರ್ ತನಿಖಾ ಪ್ರಾಧಿಕಾರ ಮತ್ತು ತೀರ್ಪು ನೀಡುವ ನ್ಯಾಯಾಂಗ ಪ್ರಾಧಿಕಾರ ಎಂದು ಹೇಳುತ್ತಿದೆ. ಇದಕ್ಕೆ ಯಾವುದೇ ಕಾನೂನು ಅನುಮತಿ ಇಲ್ಲ. ತನಿಖೆ ನಡೆಸಲು ಮತ್ತು ತೀರ್ಪು ನೀಡುವುದು ನ್ಯಾಯಾಲಯಗಳು ಎಂದು ನ್ಯಾಯಸಮ್ಮತವಾಗಿ ನಿಗದಿಪಡಿಸಿದ ಕಾನೂನಿನಿಂದ ಅಧಿಕಾರ ಪಡೆದ ಏಕೈಕ ಕಾನೂನು ಘಟಕ "ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೋನಾ ವಿಚಾರದಲ್ಲಿ ದೇಶ ಹಾಗೂ ಪ್ರಧಾನಿ ಮೋದಿ ಇಮೇಜ್ ಕೆಡಿಸಲು ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರ ನಡೆಸಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪತ್ರಾ ಟ್ವಿಟರ್ ಮೂಲಕ ಕೆಲ ದಾಖಲೆ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ದೂರು ದಾಖಲಾಗುತ್ತಿದ್ದಂತೆ ಇತ್ತ ಟ್ವಿಟರ್ ಸಂಬಿತ್ ಪಾತ್ರ ಟ್ವೀಟ್  ಮ್ಯಾನಿಪ್ಯುಲೇಟೆಡ್ ಮೀಡಿಯಾ(ತಿರುಚಿದ ದಾಖಲೆ) ಎಂದು ಲೇಬಲ್ ಮಾಡಿತ್ತು. ಈ ಕುರಿತು  ದೆಹಲಿ ಪೊಲೀಸರು ಟ್ವಿಟರ್‌ನಿಂದ ಮಾಹಿತಿ ಕೋರಿದೆ.

ಟ್ವಿಟರ್ ಮಾಹಿತಿಗಳ ಮೇಲೆ ಸಂಪೂರ್ಣ ಹಕ್ಕು ಹೊಂದಿದೆ. ಆದರೆ ತನಿಖೆ ವೇಳೆ  ಆ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬೇಕು. ಆದರೆ ಟ್ವಿಟರ್ ಮಾಹಿತಿ ಒದಗಿಸಿದೆ ಕಾನೂನು ಪ್ರಕಾರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಟ್ವಿಟರ್ ಕಚೇರಿ ಮೇಲಿನ ದಾಳಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ದಾಖಲಾದ FIR ಎಂದು ಬಿಂಬಿಸಲು ಟ್ವಿಟರ್ ಮಾಡಿದ ಪ್ರಯತ್ನ ಸತ್ಯಕ್ಕೆ ದೂರವಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಟ್ವಿಟರ್ ತಿರುಚಿದ ದಾಖಲೆ ಎಂದಿರುವ ಮಾಹಿತಿಗಳು ಮಾನ್ಯತೆ ಪಡೆದ ಕಾನೂನು ಜಾರಿ ಸಂಸ್ಥೆಯಿಂದ  ಪಡೆದ ಮಾಹಿತಿಗಳಾಗಿವೆ. ಇದನ್ನು ಮಾನ್ಯುಪ್ಯುಲೇಟೆಡ್ ಮೀಡಿಯಾ ಎಂದು ಹೇಳಲು ಕಾರಣ ಹಾಗೂ ದಾಖಲೆಯನ್ನು ಪೊಲೀಸರು ಟ್ವಿಟರ್ ಬಳಿ ಕೇಳಿದ್ದಾರೆ.

ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ?.

ತಿರುಚಿದ ದಾಖಲೆ ಟ್ಯಾಗ್ ಬಳಿಕ  ಟ್ವಿಟರ್  ಹೇಳಿಕೆಗಳು ಸಂಶಯಾಸ್ಪದವಾಗಿದೆ. ಈ ದೇಶದ ಕಾನೂನನ್ನು ಅನುಸರಿಸಲು ನಿರಾಕರಿಸುತ್ತಿದ್ದಾರೆ.  ಜೊತೆಗೆ ಮಾಹಿತಿಗಳನ್ನು ಹಂಚಿಕೊಳ್ಳಲು ನಿರಾಕರಿಸುತ್ತಿದೆ. ಇದರಿಂದ ಕಾನೂನುಬದ್ಧ ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ದೆಹಲಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

click me!