ಮಹತ್ವದ ಬದಲಾವಣೆ ಮಾಡಿದ ಟ್ವಿಟರ್, ಪ್ರಧಾನಿ ಮೋದಿ, ಶಾ ಖಾತೆಯಿಂದ ಬ್ಲೂ ಟಿಕ್ ಔಟ್!

Published : Dec 20, 2022, 07:01 PM IST
ಮಹತ್ವದ ಬದಲಾವಣೆ ಮಾಡಿದ ಟ್ವಿಟರ್, ಪ್ರಧಾನಿ ಮೋದಿ, ಶಾ ಖಾತೆಯಿಂದ ಬ್ಲೂ ಟಿಕ್ ಔಟ್!

ಸಾರಾಂಶ

ಎಲನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಪ್ರತಿ ದಿನ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮತ್ ಶಾ ಟ್ವಿಟರ್ ಖಾತೆಯ ಬ್ಲೂ ಟಿಕ್ ತೆಗೆಯಲಾಗಿದೆ.   

ನವೆದೆಹಲಿ(ಡಿ.20): ಉದ್ಯಮಿ ಎಲನ್ ಮಸ್ಕ್ ಟ್ವಿಟರ್ ಮಾಲೀಕರಾದ ಬಳಿಕ ಹೊಸ ಹೊಸ ಬದಲಾವಣೆಯಾಗಿದೆ. ಹೊಸ ನಿಯಮಗಳು ಜಾರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಅಧಿಕೃತ ಖಾತೆಗೆ ಟ್ವಿಟರ್ ನೀಡುತ್ತಿದ್ದ ಬ್ಲೂಟಿಕ್ ಭಾರಿ ಚರ್ಚೆಯಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟರ್ ಖಾತೆಯಿಂದ ಬ್ಲೂ ಟಿಕೆಟ್ ತೆಗೆಯಲಾಗಿದೆ. ಇದರ ಬದಲು ಬೂದು ಬಣ್ಣದ ಟಿಕ್ ನೀಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವಿಟರ್ ಖಾತೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೋದಿ ಹಾಗೂ ಅಮಿತ್ ಶಾ ಖಾತೆಗಳಲ್ಲಿ ಮಹತ್ವದ ಬದಲಾವಣೆಯಾಗಿದೆ. 

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟ್ವಿಟರ್ ಖಾತೆಯ ಬ್ಲೂ ಟಿಕ್ ಬದಲು ಬೂದು ಬಣ್ಣದ ಟಿಕ್ ನೀಡಲು ಕಾರಣವಿದೆ. ಈಗಾಗಲೇ ಟ್ವಿಟರ್ ಟಿಕ್ ಮಾರ್ಕ್‌ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಇಷ್ಟು ದಿನ ಅಧಿಕೃತ ಟ್ವಿಟರ್ ಖಾತೆಗಳಿಗೆ ಬ್ಲೂ ಟಿಕ್ ನೀಡಲಾಗುತ್ತಿತ್ತು. ಪ್ರಧಾನಿಯಾಗಿರಲಿ, ಸೆಲೆಬ್ರೆಟಿಯಾಗಿರಲಿ, ಕ್ರೀಡಾಪಟುವಾಗಿರಲಿ ಅಥವಾ ಉದ್ಯಮಿಯಾಗಿರಲಿ ಎಲ್ಲಾ ಅಧಿಕೃತ ಖಾತೆಗಳಿಗೆ ಬ್ಲೂ ಟಿಕ್ ನೀಡಲಾಗುತ್ತಿತ್ತು. ಇನ್ನು ಮುಂದೆ ಬ್ಯೂಸಿನೆಸ್ ಅಕೌಂಟ್‌ಗೆ ಗೋಲ್ಡನ್ ಕಲರ್ ಟಿಕ್ ನೀಡಲಾಗುತ್ತದೆ. ಸರ್ಕಾರಿ ಅಧಿಕೃತ ಟ್ವಿಟರ್, ಸಚಿವರು ಖಾತೆಗಳಿಗೆ ಬೂದು ಬಣ್ಣದ ಟಿಕ್ ನೀಡಲಾಗುತ್ತದೆ.

 

Twitter ಮುಖ್ಯಸ್ಥ ಸ್ಥಾನಕ್ಕೆ ಗುಡ್‌ಬೈ ಹೇಳ್ತಾರಾ ಎಲಾನ್‌ ಮಸ್ಕ್..? ಜನರ ಒಲವು ಹೀಗಿದೆ ನೋಡಿ..

ಈ ನಿಯಮದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಟ್ವಿಟರ್ ಖಾತೆಗಳಿಗೆ ಬ್ಲೂ ಟಿಕ್ ಬದಲು ಬೂದು ಬಣ್ಣದ ಟಿಕ್ ನೀಡಲಾಗಿದೆ. ಪ್ರತಿ ಅಧಿಕೃತ ಟ್ವಿಟರ್ ಖಾತೆಗಳಿಗೆ ಟ್ವಿಟರ್ ಹೊಸ ನಿಯಮ ರೂಪಿಸಿದೆ. ಉದ್ಯಮಿಗಳಿಗೆ, ಬ್ಯೂಸಿನೆಸ್ ಪಾರ್ಟ್ನರ್ ಸೇರಿದಂತೆ ಇತರ ಖಾತೆಗಳಿಗೆ ಬ್ಲೂ ಸೇರಿದಂತೆ ಕೆಲ ಬಣ್ಣಗಳನ್ನು ನಿರ್ಧರಿಸಲಾಗಿದೆ. ಇದರಂತೆ ಸದ್ಯ ಇರುವ ಬ್ಲೂ ಟಿಕ್ ಅಧಿಕೃತ ಟಿಕ್ ಮಾರ್ಕ್ ಬದಲು ಹೊಸ ನಿಯದನ್ವಯ ಬದಲಾಗಲಿದೆ.

ಹಣ ಪಾವತಿಸಿದ ಚಂದಾದಾರರಿಗೆ ಬ್ಲೂಟಿಕ್‌
ಭಾರೀ ವಿರೋಧದ ಹೊರತಾಗಿಯೂ ಟ್ವೀಟರ್‌ ತನ್ನ ಚಂದಾದಾರರಿಗೆ ಡಿ.12ರಿಂದ ಮಾಸಿಕ ಚಂದಾ ಆಧರಿತ ಬ್ಲೂಟಿಕ್‌ ಸೇವೆ ನೀಡಲು ಮುಂದಾಗಿದೆ. ಬ್ಲೂಟಿಕ್‌ ಪಡೆಯಲು ಇನ್ನು ತಿಂಗಳಿಗೆ ಸುಮಾರು 8 ಡಾಲರ್‌(660 ರು.) ಹಾಗೂ ಐಫೋನ್‌ ಬಳಕೆದಾರರು ತಿಂಗಳಿಗೆ 11 ಡಾಲರ್‌ (908 ರು.) ಪಾವತಿಸಬೇಕಾಗುತ್ತದೆ. ಇದರೊಂದಿಗೆ ಈ ಚಂದಾದಾರಿಗೆ ಕಡಿಮೆ ಜಾಹೀರಾತು ವೀಕ್ಷಣೆ, ಹೆಚ್ಚು ಸಮಯದ ವಿಡಿಯೋ ಪ್ರಸಾರಕ್ಕೆ ಅವಕಾಶ ಮೊದಲಾದ ಇತರೆ ಸೌಲಭ್ಯವನ್ನೂ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ನಕಲಿ ಖಾತೆಗಳ ಹಾವಳಿ ನಿಯಂತ್ರಿಸಲು ಕಂಪನಿಗಳು, ಸೆಲಿಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು, ಪತ್ರಕರ್ತರ ನಿಜವಾದ ಖಾತೆಗಳನ್ನು ಪರಿಶೀಲಿಸಿ ಟ್ವೀಟರ್‌ ಅವರಿಗೆ ಬ್ಲೂಟಿಕ್‌ ನೀಡುತ್ತದೆ. ಈ ಬ್ಲೂಟಿಕ್‌ನಿಂದಾಗಿ ನೈಜ ಖಾತೆ ಹಾಗೂ ನಕಲಿ ಖಾತೆ ನಡುವೆ ವ್ಯತ್ಯಾಸ ಗುರುತಿಸಲು ಸಹಾಯವಾಗುತ್ತದೆ.

ಟ್ವಿಟ್ಟರ್‌ ಬ್ಲೂಟಿಕ್‌ ಸೇವೆ ಜಾರಿ: ಟ್ವೀಟ್‌ ಪದಗಳ ಮಿತಿ 4000ಕ್ಕೆ ಹೆಚ್ಚಳ..!

ಆದರೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್‌ ಮಸ್‌್ಕ ಟ್ವಿಟರ್‌ ಅನ್ನು 3.6 ಲಕ್ಷ ಕೋಟಿ ರು.ಗೆ ಖರೀದಿಸಿದ ಬಳಿಕ ಪರಿಶೀಲಿಸಿದ ಖಾತೆಗಳನ್ನು ಹೊಂದಿರುವವರು ಬ್ಲೂಟಿಕ್‌ ಪಡೆಯಲು ಹಣ ಪಾವತಿಸಬೇಕಾಗುತ್ತದೆ ಎಂದಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?