ಆಕ್ಸಿಡೆಂಟಲ್ ಡಿಲೀಟ್ ಫೀಚರ್ ಪರಿಚಯಿಸಿದ ವಾಟ್ಸಾಪ್, ಇದರಿಂದ ಏನು ಲಾಭ?

By Suvarna News  |  First Published Dec 20, 2022, 2:46 PM IST

*ಡಿಲೀಟ್ ಫಾರ್ ಎವರಿವನ್ ಬದಲಿಗೆ ಡಿಲಿಟ್ ಫಾರ್ ಮಿ ಆಪ್ಷನ್ ಒತ್ತಿ ಫಜೀತಿಗೀಡಾಗಿದ್ದೀರಾ?
*ಬಳಕೆದಾರರ ಈ ಫಜೀತಿಯನ್ನು ತಪ್ಪಿಸುವುದಕ್ಕಾಗಿ ವಾಟ್ಸಾಪ್ ಹೊಸ ಫೀಚರ್ ಪರಿಚಯಿಸಿದೆ
*ಆಕ್ಸಿಡೆಂಟಲ್ ಡಿಲೀಲ್ ಫೀಚರ್ ಅಪ್‌ಡೇಟ್ ಮಾಡಿದ್ದು, ಬಳಕೆದಾರರಿಗೆ ಇದರಿಂದ ಲಾಭವಿದೆ


ವಾಟ್ಸಾಪ್ ಮಾಡುವಾಗ ಕೆಲವೊಮ್ಮೆ ತಪ್ಪಾದ ವ್ಯಕ್ತಿಗೆ ಅಥವಾ ತಪ್ಪಾದ ಗ್ರೂಪಿಗೆ ನಾವು ಸಂದೇಶಗಳನ್ನು ಕಳುಹಿಸುತ್ತೇವೆ. ಬಹುಶಃ ಈ ರೀತಿಯ ತಪ್ಪುಗಳನ್ನು ನಿತ್ಯ ಪ್ರತಿಯೊಬ್ಬರು ಮಾಡುತ್ತಲೇ ಇರುತ್ತಾರೆ.  ಸ್ಮಾರ್ಟ್ಫೋನ್ನಲ್ಲಿ ಸಾಕಷ್ಟು ಗ್ರೂಪ್ಗಳು, ವಾಟ್ಸಾಪ್ ಸಂಖ್ಯೆಗಳಿರುವುದರಿಂದ ಇದು ಸಹಜವೂ ಹೌದು. ಹೀಗೆ ತಪ್ಪಾಗಿ ಹೋದ ಸಂದೇಶವನ್ನು ಡಿಲಿಟ್ ಮಾಡುವಾಗ, ಗಡಿಬಿಡಿಯಲ್ಲಿ ಇನ್ನೊಂದು ತಪ್ಪು ಮಾಡುತ್ತೇವೆ. ನಾವು ಮತ್ತೊಮ್ಮೆ ತಪ್ಪು ಬಟನ್ ಅನ್ನು ಒತ್ತಿ,  ಒತ್ತಡದ ರಿಸ್ಥಿತಿಯನ್ನು ಸೃಷ್ಟಿಸುತ್ತೇವೆ. ಇಂತಹ ಪರಿಸ್ಥಿತಿಯಿಂದ ಬಳಕೆದಾರರನ್ನು ಪಾರು ಮಾಡಲು ವಾಟ್ಸಾಪ್ ಹೊಸ ಫೀಚರ್ ಪರಿಚಯಿಸಿದೆ.  Whats' Appನಲ್ಲಿ ಪರಿಚಯಿಸಲಾಗಿರುವ  ಈ ಹೊಸ ಫೀಚರ್ಗೆ 'ಆಕ್ಸಿಡೆಂಟಲ್ ಡಿಲೀಟ್(Accidental Delete')' ಎಂದು ಹೆಸರಿಸಲಾಗಿದೆ.  ಅಪ್ಲಿಕೇಶನ್ ಪ್ರಕಾರ, ಇದು Whats' App ನಲ್ಲಿ ಬಳಕೆದಾರರಿಗೆ ರಕ್ಷಣೆಯ ಹೊಸ ಸ್ತರವಾಗಿದೆ. 

"ನಾವು ತಪ್ಪು ವ್ಯಕ್ತಿ ಅಥವಾ ಗುಂಪಿಗೆ ಸಂದೇಶವನ್ನು ಕಳುಹಿಸುತ್ತೇವೆ ಮತ್ತು ಆಕಸ್ಮಿಕವಾಗಿ 'ಎಲ್ಲರಿಗೂ ಅಳಿಸು(Delete for Everyone)' ಬದಲಿಗೆ 'ನನ್ನಿಗಾಗಿ ಅಳಿಸು(Delete for me)' ಕ್ಲಿಕ್ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಆಕ್ಸಿಡೆಂಟಲ್ ಡಿಲೀಟ್ ಎನ್ನುವುದು ಹೊಸ ವೈಶಿಷ್ಟ್ಯವಾಗಿದ್ದು, ಅದು ನಿಮ್ಮನ್ನು ಈ ಟ್ರಿಕಿ ಸನ್ನಿವೇಶಗಳಿಂದ ದೂರವಿಡುತ್ತದೆ" ಎಂದು ವಾಟ್ಸಾಪ್ ಹೇಳಿಕೊಂಡಿದೆ.

ಗೂಗಲ್ ಚಾಲಿತ ಕ್ಯಾಮೆರಾ ಇರುವ Nokia C31 ಫೋನ್ ಲಾಂಚ್

Tap to resize

Latest Videos

undefined

ಹೆಚ್ಚುವರಿಯಾಗಿ,  ತಪ್ಪಾಗ ಬಟನ್ ಒತ್ತಿದಾಗ ಉಂಟಾಗುವ ಹಾನಿಯನ್ನು ತಪ್ಪಿಸುವುದಕ್ಕಾಗಿ ಈ ಹೊಸ ಫೀಚರ್ ಬಳಕೆದಾರರಿಗೆ ಐದು ಸೆಕೆಂಡ್ ಟೈಮ್ ನೀಡುತ್ತದೆ. ಆಗ ಬಳಕೆದಾರರು ಡಿಲೀಟ್ ಫಾರ್ ಎವರೀ ವನ್ ಆಪ್ಷನ್ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಎದುರಾಗುವ ಮುಜುಗರದಿಂದ ತಪ್ಪಿಸಿಕೊಳ್ಳಬಹುದು ಎಂದು ವಾಟ್ಸಾಪ್ ಹೇಳಿಕೊಂಡಿದೆ. 

ನೀವು ಆಕಸ್ಮಿಕವಾಗಿ 'Delete for everyone' ಬದಲಿಗೆ 'Delete for me' ಆಯ್ಕೆಮಾಡಿದರೆ ಅಳಿಸಿದ ಸಂದೇಶವನ್ನು ತ್ವರಿತವಾಗಿ ರದ್ದುಗೊಳಿಸುವ ಮೂಲಕ ನಿಮ್ಮ ತಪ್ಪನ್ನು ಸರಿಪಡಿಸಲು ಇದು ನಿಮಗೆ ಸಹಾಯ ಮಾಡುತ್ತದೆ. 'ಆಕ್ಸಿಡೆಂಟಲ್ ಡಿಲೀಟ್' ವೈಶಿಷ್ಟ್ಯವು ಎಲ್ಲಾ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿದೆ. 

ಏತನ್ಮಧ್ಯೆ, WhatsApp ವಿಂಡೋಸ್ ಬೀಟಾದಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತರಲು ಪ್ರಾರಂಭಿಸಿದೆ ಅದು ಬಳಕೆದಾರರಿಗೆ ಕರೆ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಲು ಅನುಮತಿಸುತ್ತದೆ. WABetaInfo ಪ್ರಕಾರ, Microsoft Store ನಲ್ಲಿ ಲಭ್ಯವಿರುವ Windows 2.2250.4.0 ನವೀಕರಣಕ್ಕಾಗಿ WhatsApp ಬೀಟಾವನ್ನು ಸ್ಥಾಪಿಸಿದ ನಂತರ WhatsApp ಕರೆಗಳಿಗೆ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಬೀಟಾ ಬಳಕೆದಾರರಿಗೆ ನೀಡಲಾಗಿದೆ.

ವೆಬ್‌  ಬಳಕೆದಾರರಿಗೆ ಸ್ಕ್ರೀನ್ ಲಾಕ್ ಫೀಚರ್!
ವಾಟ್ಸಾಪ್ (WhatsApp) ಹಲವು ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಈಗ ಈ ಸಾಲಿಗೆ ಟ್ಯಾಬ್ಲೆಟ್‌ಗಳನ್ನು ಶೀಘ್ರದಲ್ಲೇ ಸೇರಿಸಲಾಗುತ್ತಿದೆ. ಇದರ ಮಧ್ಯೆಯೇ ವಾಟ್ಸಾಪ್ ಡೆಸ್ಕ್‌ಟಾಪ್ ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಟ್ಸಾಪ್ ಮತ್ತೊಂದು ಫೀಚರ್ ಶೀಘ್ರವೇ ಪರಿಚಯಿಸಲಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಹೇಗೆ ವಾಟ್ಸಾಪ್ ಸ್ಕ್ರೀನ್ ಲಾಕ್ ಮಾಡಲು ಅವಕಾಶವಿದೆಯೋ ಅದೇ ರೀತಿ, ಡೆಸ್ಕ್‌ಟಾಪ್ ಬಳಕೆದಾರರಿಗೂ ವಾಟ್ಸಾಪ್ ಸ್ಕ್ರೀನ್ ಲಾಕ್ ಫೀಚರ್ ಜಾರಿಗೆ ತರಲಿದೆ.

OnePlus 11 ಮೊದಲ ಅಧಿಕೃತ ಟೀಸರ್ ಲಾಂಚ್! ಏನೆಲ್ಲ ವಿಶೇಷತೆಗಳಿವೆ?

ವೆಬ್ ಬಳಕೆದಾರರ ಸ್ಕ್ರೀನ್ ಲಾಕ್ ಫೀಚರ್, ನಿಮ್ಮ ಸಂವಹನಗಳನ್ನು ಗೂಢಾಚಾರಿಕೆಯ ಕಣ್ಣುಗಳಿಂದ ಮರೆಮಾಡಲಿದೆ. ಇದಕ್ಕಾಗಿ ಅದು ಪಾಸ್ವರ್ಡ್ ಹಾಕುವ ಸೌಲಭ್ಯವನ್ನು ಕಲ್ಪಿಸಲಿದೆ. ಅಂದರೆ, ವಾಟ್ಸಾಪ್ ಅನ್ನು ನೀವು ವೆಬ್ ಆವೃತ್ತಿಯಲ್ಲಿ ಬಳಸುತ್ತಿದ್ದರೆ, ಮೊಬೈಲ್‌ನಂತೆ ಪಾಸ್ವರ್ಡ್ ಹಾಕಿಟ್ಟುಕೊಳ್ಳಬಹುದು. ಇದರಿಂದ ನಿಮ್ಮನ್ನು ಬಿಟ್ಟು ಬೇರೆಯವರು ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಓದಲು ಸಾಧ್ಯಾವಾಗುವುದಿಲ್ಲ. ವಾಟ್ಸಾಪ್ ತನ್ನ ಬಳಕೆದಾರರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಮತ್ತು ಅವರ ವಾಟ್ಸಾಪ್ ಬಳಕೆಯ ಅನುಭವವನ್ನು ಹೆಚ್ಚಿಸುವುದಕ್ಕಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುತ್ತದೆ. ಕಳೆದ ಕೆಲವು ದಿನಗಳಲ್ಲಿ, ವಾಟ್ಸಾಪ್ ಕಮ್ಯುನಿಟಿ ಸೇರಿದಂತೆ ಹಲವಾರು ಹೊಸ ಫೀಚರ್‌ಗಳನ್ನುಸೇರಿಸಲಾಗಿದೆ. ಈಗ ವೆಬ್ ಬಳಕೆದಾರರಿಗೆ ನೆರವಾಗುವ ಫೀಚರ್ ಕಾಣಬಹುದು.

click me!