ಉಪರಾಷ್ಟ್ರಪತಿ ಬಳಿಕ RSS ಮುಖ್ಯಸ್ಥರ ಬ್ಲೂ ಬ್ಯಾಡ್ಜ್ ರದ್ದು ಮಾಡಿ ಪೇಚಿಗೆ ಸಿಲುಕಿದ ಟ್ವಿಟರ್!

By Suvarna NewsFirst Published Jun 5, 2021, 4:01 PM IST
Highlights
  • ಹೊಸ ಐಟಿ ನಿಯಮ ಪಾಲಿಸಲು ನಿರಾಕರಿಸಿದ ಟ್ವಿಟರ್‌ನಿಂದ ಮತ್ತೊಂದು ದಾಳ
  • ವೆರಿಫೈಡ್ ಖಾತೆಯ ಬ್ಲೂ ಬ್ಯಾಡ್ಜ್ ತೆಗೆದು ಹಾಕುತ್ತಿದೆ ಟ್ವಿಟರ್
  • ಉಪರಾಷ್ಟ್ರಪತಿ ಬಳಿಕ ಆರ್‌ಎಸ್ಎಸ್ ಮುಖ್ಯಸ್ಥರ ಬ್ಲೂ ಟಿಕ್ ರದ್ದು

ನವದೆಹಲಿ(ಜೂ.05):  ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ಜಟಾಪಟಿ ತೀವ್ರ ಸ್ವರೂಪಕ್ಕೆ ತಲುಪಿದೆ. ಭಾರತದ ಹೊಸ ಐಟಿ ನಿಯಮ ಪಾಲಿಸಲು ಟ್ವಿಟರ್‌ಗೆ ಅಂತಿಮ ನೋಟಿಸ್ ನೀಡಿದೆ. ಇತ್ತ ಕೆರಳಿ ಕೆಂಡವಾಗಿರುವ ಟ್ವಿಟರ್ ಇದೀಗ ಹೊಸ ದಾಳ ಉರುಳಿಸಿದೆ. ವೆರಿಫೈಡ್ ಖಾತೆಯ ಬ್ಲೂ ಬ್ಯಾಡ್ಜ್ ರದ್ದು ಮಾಡುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಳಿಕ ಇದೀಗ RSS ಮುಖ್ಯಸ್ಥ ಮೋಹನ್ ಭಾಗವತ್ ಟ್ವಿಟರ್ ಖಾತೆಯ ಬ್ಲೂ ಬ್ಯಾಡ್ಜ್ ತೆಗೆದು ಹಾಕಿದೆ.

ಟ್ವಿಟರ್‌ನಲ್ಲಿ ರಾಜಕೀಯ ಮಾಡ್ತಿದ್ದವರು ಇದೀಗ ಟ್ವಿಟರ್‌ಗಾಗಿ ರಾಜಕೀಯ'; ಕಾಂಗ್ರೆಸ್‌ಗೆ ತಿರುಗೇಟು!

ಟ್ವಿಟರ್ ಹಲವು ದಿನಗಳಿಂದ ನಿಷ್ಕ್ರೀಯವಾಗಿರುವ ಖಾತೆಗಳ ಬ್ಲೂ ಬ್ಯಾಡ್ಜ್ ತೆಗೆದುಹಾಕುತ್ತಿದೆ. ಇದು ಟ್ವಿಟರ್ ನಿಯಮ ಎಂದಿದೆ. ಈ ಕಾರಣಕ್ಕಾಗಿ ವೆಂಕಯ್ಯ ನಾಯ್ಡು ಖಾತೆ ಜುಲೈ 2020ರಿಂದ ನಿಷ್ಕ್ರೀಯವಾಗಿದೆ. ಹೀಗಾಗಿ ನಾಯ್ಡು ಖಾತೆಯ ಬ್ಲೂ ಬ್ಯಾಡ್ಜ್ ರದ್ದು ಮಾಡಿತು. ಇನ್ನು 2 ಲಕ್ಷ ಫಾಲೋವರ್ಸ್ ಹೊಂದಿರುವ ಮೋಹನ್ ಭಾಗವತ್ ಖಾತೆಯ ಬ್ಲೂ ಬ್ಯಾಡ್ಜ್ ಕೂಡ ಇದೇ ಕಾರಣಕ್ಕೆ ರದ್ದು ಮಾಡಿದೆ.

2019ರಲ್ಲಿ ಮೋಹನ್ ಭಾಗವತ್ ಟ್ವಿಟರ್ ಖಾತೆ ತೆರೆದಿದ್ದರು. ವೈಯುಕ್ತಿ ಖಾತೆ ತೆರೆದಿದ್ದ ಮೋಹನ್ ಭಾಗವತ್ ಯಾವುದೇ ಟ್ವೀಟ್ ಮಾಡಿರಲಿಲ್ಲ. ಆದರೆ ಪ್ರತಿ ದಿನ ಭಾಗವತ್ ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿಷ್ಕ್ರೀಯ ಅನ್ನೋ ಕಾರಣಕ್ಕೆ ಭಾಗವತ್ ಬ್ಲೂ ಟಿಕ್ ರದ್ದಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ವಿದೇಶಿ ಕಂಪನಿಯ ಲಾಭಕ್ಕಲ್ಲ: ಟ್ವಿಟರ್‌ಗೆ ಖಡಕ್ ವಾರ್ನಿಂಗ್ ನೀಡಿದ ಭಾರತ!

ಟ್ವಿಟರ್‌ನಲ್ಲಿ 13 ಲಕ್ಷ ಫಾಲೋವರ್ಸ್  ಹೊಂದಿರುವ ಉಪರಾಷ್ಟ್ರಪತಿ ಅವರ ಖಾತೆಯ ಬ್ಲೂ ಬ್ಯಾಡ್ಜ್ ರದ್ದು ಮಾಡಿದ ಟ್ವಿಟರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಟ್ವಿಟರ್ ನಾಯ್ಡು ಅವರ ಟ್ವಿಟರ್ ಖಾತೆಯ ಬ್ಲೂ ಬ್ಯಾಡ್ಜ್ ಮತ್ತೆ ಮರುಸ್ಥಾಪಿಸಿದೆ. 

ಭಾಗವತ್ ಜೊತೆ ಹಲವು ಆರ್‌ಎಸ್ಎಸ್ ನಾಯಕರ ಟ್ವಿಟರ್ ಖಾತೆಯ ಬ್ಲೂ ಟಿಕ್ ರದ್ದು ಮಾಡಲಾಗಿದೆ. ಬ್ಲೂ ಟಿಕ್ ಅಥವಾ ಬ್ಲೂ ಬ್ಯಾಡ್ಜ್ ಇದ್ದರೆ ಆ ಖಾತೆ ಅಧೀಕೃತವಾಗಿದೆ. ಟ್ವಿಟರ್ ವೆರಿಫೈಡ್ ಮಾಡಿದ ಅಧೀಕೃತ ಖಾತೆ. 

click me!