ಐಫೋನ್ ಗ್ರಾಹಕರು ತಮ್ಮ ನಿಷ್ಠೆ ಬದಲಿಸಿದ್ರಾ? ಆಂಡ್ರಾಯ್ಡ್‌ನತ್ತ ಲಗ್ಗೆ ಇಟ್ಟ ಬಳಕೆದಾರರು!

By Suvarna News  |  First Published Jun 5, 2021, 3:30 PM IST

ಐಫೋನ್ ಗ್ರಾಹಕರು ಆಂಡ್ರಾಯ್ಡ್‌ನತ್ತ ವಾಲುತ್ತಿದ್ದಾರೆ ಎಂಬ ಮಾಹಿತಿಯು ಆಪಲ್‌ನ ಮಾರುಕಟ್ಟೆ ತಂಡ ಸಿದ್ಧಪಡಿಸಿದ ವರದಿಯಲ್ಲಿ ತಿಳಿದು ಬಂದಿದೆ. 2020ರಲ್ಲಿ ಶೇ.26ರಷ್ಟು ಐಫೋನ್ ಬಳಕೆದಾರರು ತಮ್ಮ ನಿಷ್ಠೆಯನ್ನು ಬದಲಿಸಿಕೊಂಡು ಆಂಡ್ರಾಯ್ಡ್‌ ಸಾಧನಗಳಿಗೆ ಮಾರು ಹೋಗಿದ್ದಾರಂತೆ!


ಆಪಲ್‌ ತನ್ನ ಉತ್ಕೃಷ್ಟ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಸರುವಾಸಿಯಾಗಿದೆ. ಆದರೆ, ಆಪಲ್‌ನ ಬಳಕೆದಾರರು ಆಪಲ್ ಸ್ಮಾರ್ಟ್‌ಫೋನ್ ಬಿಟ್ಟು, ಆಂಡ್ರಾಯ್ಡ್ ಪರ ವಾಲುತ್ತಿದ್ದಾರೆಯೇ?

ಇಂಥದೊಂದು ಅನುಮಾನಗಳು ಮೂಡಲು ಕಾರಣವಿದೆ. ವರದಿಯೊಂದರ ಪ್ರಕಾರ, ಐಫೋನ್ ಬಳಕೆದಾರರು ನಿಧಾನವಾಗಿ ತಮ್ಮ ಆದ್ಯತೆಯನ್ನು ಬದಲಿಸಿಕೊಳ್ಳುತ್ತಿದ್ದಾರೆ. ಉತ್ಕೃಷ್ಟ ಎನಿಸಿಕೊಂಡಿದ್ದ ಆಪಲ್ ಸೇವೆಯನ್ನು ತೊರೆದು ಅವರು ಆಂಡ್ರಾಯ್ಡ್ ಒದಗಿಸುವ ಸೇವೆಗೆ ಮಾರು ಹೋಗುತ್ತಿದ್ದಾರೆ. ಹಾಗಾಗಿ, ಐಫೋನ್ ಬಳಕೆದಾರರ ಸಂಖ್ಯೆಯಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ ಎನ್ನಬಹುದು. 

Tap to resize

Latest Videos

undefined

ಕಳೆದ ವರ್ಷ ಶೇ.26ರಷ್ಟು ಐಫೋನ್ ಬಳಕೆದಾರರು ಇದೀಗ ಆಂಡ್ರಾಯ್ಡ್ ಪರ ವಾಲಿದ್ದಾರೆ. ಆ ಮೂಲಕ ಆಂಡ್ರಾಯ್ಡ್ ವರ್ಸಸ್ ಐಒಎಸ್ ಸಂಘರ್ಷದಲ್ಲಿ ಆಂಡ್ರಾಯ್ಡ್ ಒಂದು ಮೇಲುಗೈ ಸಾಧಿಸಿದಂತಾಗಿದೆ. ಆಂಡ್ರಾಯ್ಡ್‌ನಲ್ಲಿ ದೊರೆಯುವ ಅತ್ಯುತ್ತಮ ಬಳಕೆದಾರ ಅನುಭವ ಮತ್ತು ಹೆಚ್ಚಿನ ಫೀಚರ್‌ಗಳಿಂದಾಗಿ ಐಫೋನ್ ಬಳೆಕದಾರರು ಆಂಡ್ರಾಯ್ಡ್ ಸೇವೆ, ಸಾಧನಗಳತ್ತ ವಾಲುತ್ತಿದ್ದಾರೆ. 

ಬೊಂಬಾಟ್ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ರಿಯಲ್‌ಮೀ

2020ರ ಆರ್ಥಿಕ ವರ್ಷದ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ.26ರಷ್ಟು ಐಫೋನ್ ಬಳಕೆದಾರರು ಆಪಲ್ ಬಿಟ್ಟು ಆಂಡ್ರಾಯ್ಡ್ ಸಾಧನಗಳ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದ ಆಪಲ್ ತಯಾರಿಸಿದ ಡೇಟಾದಿಂದಲೇ ಗೊತ್ತಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ತಮ್ಮದೇ ಫ್ಯಾನ್ ಫಾಲೋಯಿಂಗ್ ಹೊಂದಿದೆ ಎಂಬುದು ಗಮನಾರ್ಹ.

ಆಪಲ್ ಮಾರ್ಕೆಟ್  ರಿಸರ್ಚ್ ಟೀಮ್‌ ಸಿದ್ಧಪಡಿಸಿದ ಡೇಟಾ ಉಲ್ಲೇಖಿಸಿ ಆಂಡ್ರಾಯ್ಡ್ ಸೆಂಟ್ರಲ್ ಈ ಬಗ್ಗೆ ವರದಿ ಮಾಡಿದೆ. ಆಪಲ್ ಎಪಿಕ್ ಟ್ರಯಲ್ ವೇಳೆ ಡೇಟಾವನ್ನು ಬಿಡುಗಡೆ ಮಾಡಲಾಗಿತ್ತು. 2019 ಮತ್ತು 2020ರಲ್ಲಿ ತಮ್ಮ ಗ್ರಾಹಕರ ನಿಷ್ಠೆಯನ್ನ ಗುರುತಿಸುವ ಸಲುವಾಗಿ ಈ ಆಪಲ್ ಮಾರುಕಟ್ಟೆ ಸಂಶೋಧನೆಯನ್ನು ಕೈಗೊಂಡಿತ್ತು. ಈ ವೇಳೆ, ಆಪಲ್ ಗ್ರಾಹಕರು ನಿಧಾನವಾಗಿ ಆಂಡ್ರಾಯ್ಡ್‌ನತ್ತು ವಾಲುತ್ತಿರುವುದು ಬೆಳಕಿಗೆ ಬಂದಿದೆ. 

ಆಪಲ್ ಸಿದ್ಧಪಡಿಸಿರುವ ಡೇಟಾ ಪ್ರಕಾರ, 2019ರ ಮೂರರಿಂದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.19ರಷ್ಟು ಐಫೋನ್ ಬಳಕೆದಾರರು ಆಂಡ್ರಾಯ್ಡ್ ಆಯ್ಕೆ ಮಾಡಿಕೊಂಡರೆ, 2020ರ ಒಂದನೇ ತ್ರೈಮಾಸಿಕದಿಂದ ಎರಡನೇ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ.26ರಷ್ಟಿದೆ. ಅಂದರೆ, ನಿಧಾನವಾಗಿ ಗ್ರಾಹಕರು ಆಂಡ್ರಾಯ್ಡ್‌ನತ್ತ ವಾಲುತ್ತಿರುವುದು ಸ್ಪಷ್ಟವಾಗುತ್ತದೆ. 

ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!

ಕೊರೋನಾ ಸಾಂಕ್ರಾಮಿಕ ಹಾಗೂ  ಆರ್ಥಿಕ ಹಿಂಜರಿಕೆಯ ಮಧ್ಯೆಯೂ ಐಫೋನ್‌ಗಳ ಬೆಲೆ ಏರುಗತಿಯಲ್ಲೇರುವುದು ಗ್ರಾಹಕರು ತಮ್ಮ ಮನಸ್ಸು ಬದಲಿಸಿಕೊಳ್ಳಲು ಕಾರಣ ಎನ್ನಲಾಗುತ್ತಿದೆ. ಒಂದೆಡೆ ಐಫೋನ್ ಬೆಲೆ ಏರಿಕೆಯ ಹಾದಿಯಲ್ಲಿದ್ದಾರೆ ಇದಕ್ಕೆ ತದ್ವಿರುದ್ಧವಾಗಿ ಆಂಡ್ರಾಯ್ಡ್ ಸಾಧನಗಳು ಹೆಚ್ಚು ಗ್ರಾಹಕರಿಗೆ ಕೈಗೆಟುಕುವ ರೀತಿಯಲ್ಲಿರುವುದು ಇದಕ್ಕೆ ಕಾರಣ ಎಂಬುದ ಅಧ್ಯಯನದಲ್ಲಿ ತಿಳಿದಿದೆ.  ವಿಶೇಷ ಏನೆದಂರೆ, ಆಪಲ್ ಕಂಪನಿಯ ಐಫೋನ್ 12 ಬಿಡುಗಡೆ ಆಗುವ ಮೂದಲೇ ಬಹುತೇಕ ಗ್ರಾಹಕರು ತಮ್ಮ ನಿಷ್ಠೆಯನ್ನ ಬದಲಿಸಿಕೊಂಡಿದ್ದಾರೆ.

ಇಷ್ಟಾಗಿಯೂ ಗಮನಿಸಬೇಕಾದ ಪ್ರಮುಖ ಸಂಗತಿಯೊಂದಿದೆ. 2020ರ ಮೂರನೇ ತ್ರೈಮಾಸಿಕದ ಬಳಿಕ ಸರಾಸರಿ ಶೇ.88ರಷ್ಟು ಗ್ರಾಹಕರ ನಿಷ್ಠೆ ಆಪಲ್‌ಗೆ ದೊರೆತಿದೆ. ಇದಕ್ಕೆ ಆಪಲ್ ಕಂಪನಿಯು ಬಿಡುಗಡೆ ಮಾಡಿದೆ ಐಫೋನ್ 12 ಸೀರೀಸ್‌ ಎಂದು ಹೇಳಬಹುದು. ಅಸಲಿಗೆ, 2020ರ ಮೊದಲನೇಯ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಹೆಚ್ಚು ಮಾರಾಟ ಕಂಡ ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್ 12 ಮಾಡೆಲ್‌ಗಳಿವೆ.

ಆಪಲ್ ಮತ್ತು ಆಂಡ್ರಾಯ್ಡ್ ಯಾವುದು ಒಳ್ಳೆಯದು ಎಂಬ ವಾದ ಮೊದಲಿನಿಂದಲೂ ಇದೆ. ಉತ್ಕೃಷ್ಟ ಸೇವೆಗೆ ಆಪಲ್ ಐಒಎಸ್ ಹೆಸರಾದರೆ, ಕೈಗೆಟುಕುವ ರೀತಿಯಲ್ಲಿ ಆಂಡ್ರಾಯ್ಡ್ ಸೇವೆ ಮತ್ತು ಸಾಧನಗಳು ದೊರೆಯುತ್ತವೆ. ಹಾಗಾಗಿ, ಆಪಲ್‌ಗೆ ಕಂಪೇರ್ ಮಾಡಿದರೆ ಹೆಚ್ಚಿನ ಗ್ರಾಹಕರನ್ನು ಆಂಡ್ರಾಯ್ಡ್ ಹೊಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಐಫೋನ್ ಗ್ರಾಹಕರು ಕೂಡ ಆಂಡ್ರಾಯ್ಡ್‌ನತ್ತ ವಾಲುತ್ತಿರುವುದು ವಿಶೇಷವಾಗಿದೆ. 

ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?

click me!