ಈತನ ಫೋಟೋವನ್ನು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಸೈನಿ, ‘ಧನ್ಯವಾದಗಳು. ನಮ್ಮ ಈ ಸಣ್ಣ ಉದ್ಯಮದಿಂದ ನಾವು ಹೊಸ ಭಾರತ ನಿರ್ಮಿಸುವಲ್ಲಿ ಕೈಜೋಡಿಸಲು ಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ರಸ್ತೆ ಬದಿಯ ಅಂಗಡಿಗಳಲ್ಲಿ ಡಿಜಿಟಲ್ ಹಣ (Digital Currency) ಪಾವತಿ ಬಂದು ಬಹಳ ದಿನವಾಯ್ತು. ಇದೀಗ ಮಾಹಿತಿ ತಂತ್ರಜ್ಞಾನ ರಾಜಧಾನಿ (IT Capital) ಬೆಂಗಳೂರಿನಲ್ಲಿ (Bengaluru) ರಸ್ತೆ ಬದಿ ಚಹಾ ಮಾರುವ (Tea Stall) ವ್ಯಕ್ತಿಯೊಬ್ಬ, ಇಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ರೂಪದಲ್ಲೇ ಹಣ ಸ್ವೀಕರಿಸಲಾಗುವುದು ಎಂದು ಬೋರ್ಡ್ ಹಾಕಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಬಿಸಿಎ ವಿದ್ಯಾರ್ಥಿಯಾಗಿದ್ದ ಶುಭಂ ಸೈನಿ (Shubham Saini), ಕಾಲೇಜು ಬಿಟ್ಟು ಬೆಂಗಳೂರಿನ ರಸ್ತೆ ಬದಿ ಫ್ರಸ್ಟ್‌ರೇಟೇಡ್ ಡ್ರಾಪ್‌ಔಟ್ (Frustrated Dropout) ಎಂಬ ಹೊಸ ಚಹಾ ಅಂಗಡಿ ತೆರೆದಿದ್ದಾನೆ. ಅದರಲ್ಲಿ ಚಹಾ ಕುಡಿದವರು ಕ್ರಿಪ್ಟೋಕರೆನ್ಸಿ ರೂಪದಲ್ಲೂ ಹಣ ಪಾವತಿಸಬಹುದು ಎಂದು ಬೋರ್ಡ್ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.
ಈತನ ಫೋಟೋವನ್ನು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ (Harsh Goenka) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಸೈನಿ, ‘ಧನ್ಯವಾದಗಳು. ನಮ್ಮ ಈ ಸಣ್ಣ ಉದ್ಯಮದಿಂದ ನಾವು ಹೊಸ ಭಾರತ ನಿರ್ಮಿಸುವಲ್ಲಿ ಕೈಜೋಡಿಸಲು ಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾನೆ. ಚಹಾ ಅಂಗಡಿ ಆರಂಭಕ್ಕೂ ಮುನ್ನ ಸೈನಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಮಾಡುತ್ತಿದ್ದನಂತೆ.
undefined
ಇದನ್ನು ಓದಿ: ಹಿಂಗೆಲ್ಲಾ ಕಾಫಿ ಮಾಡಿದ್ರೆ ಕುಡಿಯೋದಾದ್ರು ಹೆಂಗೆ... ನೀವೇ ಹೇಳಿ
The new India….. pic.twitter.com/MQjO6FHiOY
— Harsh Goenka (@hvgoenka)ವೈರಲ್ ಪೋಸ್ಟ್‌ಗಳ ಬಗ್ಗೆ ಹಾಗೂ ಆಹಾರ, ಮಾರ್ಕೆಟಿಂಗ್ ಮುಂತಾದವುಗಳ ಬಗ್ಗೆ ಉದ್ಯಮಿ ಹರ್ಷ್ ಗೋಯೆಂಕಾ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುತ್ತಿರುತ್ತಾರೆ. ಅವರು ಟ್ವಿಟ್ಟರ್‌ನಲ್ಲೂ ಹೆಚ್ಚು ಸಕ್ರಿಯರಾಗಿರುತ್ತಾರೆ.
ಇದನ್ನು ಓದಿ: ಪರಿಸರ ಸ್ನೇಹಿ ಪ್ಯಾಕೇಜಿಂಗ್ ಗೆ ಬಾಳೆ ಎಲೆ ಬಳಕೆ ಶ್ಲಾಘಿಸಿದ ಹರ್ಷ ಗೋಯೆಂಕಾ!
ಕ್ರಿಪ್ಟೋದಿಂದ 30 ಲಕ್ಷ ಸಂಪಾದನೆ
ಚಹಾ ಅಂಗಡಿ ತೆರೆಯುವ ಮೊದಲು ಸೈನಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ (College Student) ತಮ್ಮ ಪಾಕೆಟ್ ಮನಿ ಹಾಗೂ ಉಳಿತಾಯ ಮಾಡಿದ್ದೆಲ್ಲ ಹಣವನ್ನು ಸೇರಿಸಿ ಕ್ರಿಪ್ಟೋ ಕರೆನ್ಸಿ ಖರೀದಿಸಿದರು. ‘1.5 ಲಕ್ಷವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೆ. ಕೆಲವೇ ತಿಂಗಳುಗಳಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ 1000ಪಟ್ಟು ಏರಿಕೆ ಕಂಡು ಬಂತು. ಹೀಗಾಗಿ 1.5 ಲಕ್ಷದ ಹೂಡಿಕೆ ಮಾಡಿದ್ದ ಕ್ರಿಪ್ಟೋ ವಾಲೆಟ್ 30 ಲಕ್ಷಕ್ಕೆ ಏರಿಕೆಯಾಯಿತು. ಈ ಹಣದಿಂದ ಐಷಾರಾಮಿ ಜೀವನ ನಡೆಸಬೇಕು ಎಂದುಕೊಂಡಿದ್ದೆ. ಆದರೆ ಮತ್ತೆ 2021 ಏಪ್ರಿಲ್‌ನಲ್ಲಿ ಕ್ರಿಪ್ಟೋ ದರದಲ್ಲಿ ಶೇ.90 ರಷ್ಟು ಕುಸಿತ ಕಂಡು ಬಂತು. ಆಗ 30 ಲಕ್ಷಕ್ಕೇರಿಕೆಯಾಗಿದ್ದ ವ್ಯಾಲೆಟ್ ಮತ್ತೆ 1 ಲಕ್ಷಕ್ಕೆ ಇಳಿಕೆಯಾಯಿತು. ಒಂದೇ ರಾತ್ರಿ ಕ್ರಿಪ್ಟೋ ಮೌಲ್ಯ ಇಳಿಕೆಯಾಗಿದ್ದೇ ಅದರೊಂದಿಗೆ ನನ್ನ ಎಲ್ಲ ಕನಸುಗಳು ನುಚ್ಚು ನೂರಾದವು. ಖರ್ಚು ನೀಗಿಸಲು ಐಫೋನ್ ಕೂಡಾ ಮಾರಿದೆ. ಬಳಿಕ ಕಾಲೇಜು ಬಿಟ್ಟು ಚಹಾ ಅಂಗಡಿ ಉದ್ಯಮಕ್ಕೆ ಕೈಹಾಕಿದೆ’ ಎಂದಿದ್ದಾರೆ.
ಇದನ್ನೂ ಓದಿ: Cryptocurrency: ಮಹಿಳೆಯ ಖಾತೆಗೆ ಆಕಸ್ಮಿಕವಾಗಿ ₹ 83 ಕೋಟಿ ವರ್ಗಾಯಿಸಿದ ಕ್ರಿಪ್ಟೋ ಸಂಸ್ಥೆ..!