13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ

By Suvarna NewsFirst Published Oct 27, 2020, 7:43 PM IST
Highlights

ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿರುವ ರಿಯಲ್‌ಮೀ ಸಿ17 ಫೋನ್ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಭಾರತದಲ್ಲಿ ಸಿಗಲಿದೆ

ಚೀನಾ ಮೂಲದ ಮತ್ತೊಂದು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ರಿಯಲ್‌ಮೀ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದಿನಗಳಲ್ಲಿ ಹಿರಿದಾದ ಪ್ರಭಾವವನ್ನು ದಾಖಲಿಸಿದೆ. ಈಗಾಗಲೇ ರಿಯಲ್‌ಮೀ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಕಂಪನಿ ಇದೀಗ ಹೊಸ ವಿನ್ಯಾಸದ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಸಾಲಿಗೆ ರಿಯಲ್‌ಮೀ ಸಿ 17 ಕೂಡ ಸೇರುತ್ತದೆ. 

ಈ ರಿಯಲ್‌ಮೀ ಸಿ17 ಸ್ಮಾರ್ಟ್‌ಫೋನ್ ಈಗಾಗಲೆ ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದು ಜನಪ್ರಿಯಗಳಿಸುತ್ತಿದೆ. ಅದೇ ಫೋನ್ ನವೆಂಬರ್ ಕೊನೆಯ ಭಾಗದಲ್ಲಿ ಅಥವಾ ಡಿಸೆಂಬರ್‌ ತಿಂಗಳ ಆರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು. ಅಕ್ಟಾ-ಕೋರ್  ಸ್ನ್ಯಾಪ್‌ಡ್ರಾಗನ್ 460 ಎಸ್ಒಸಿ ಪ್ರೊಸೆಸರ್ ಹೊಂದಿರುವ ಈ ಸಿ17 ಫೋನ್‌ನ ಬ್ಯಾಕ್‌ಸೈಡ್‌ನಲ್ಲಿ ಕ್ವಾಡ್ ರಿಯರ್ ಕ್ಯಾಮರಾ ಸೆಟ್‌ ಅಪ್ ಇರಲಿದೆ. ರಿಯಲ್‌ಮೀ ಎಕ್ಸ್‌7 ಸರಣಿ ಫೋನ್‌ಗಳ ಜೊತೆಗೆ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಾಟ್ಸ್ಆ್ಯಪ್‌ಗೆ ಶೀಘ್ರ ಫೇಶಿಯಲ್ ರೆಕಗ್ನಿಷನ್?

ಸ್ಮಾರ್ಟ್‌ಫೋನ್ ಜಗತ್ತಿನ ಮೇಲೆ ನಿಗಾವಹಿಸುವ ಮುಕುಲ್ ಶರ್ಮಾ ಎಂಬುವವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಕೊನೆಯ ಗಳಿಗೆಯಲ್ಲಿನ ಬದಲಾವಣೆಗಳನ್ನು ಹೊರತುಪಡಿಸಿ, ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್‌ನ ಆರಂಭದಲ್ಲಿ ರಿಯಲ್‌ಮೀ ಸಿ17 ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.  ಬಾಂಗ್ಲಾದೇಶದಲ್ಲಿ ಈ ಫೋನ್ ಬೆಲೆ 15,999 ಬಿಡಿಟಿ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದರ ಮೌಲ್ಯ ಅಂದಾಜು 13,900ರಷ್ಟಾಗುತ್ತದೆ.  ರಿಯಲ್‌ಮೀ ನಿಮಗೆ ಲೇಕ್ ಗ್ರೀನ್ ಮತ್ತು ನೇವಿ ಬ್ಲೂ ಬಣ್ಣಗಳಲ್ಲಿ ದೊರೆಯಲಿದ್ದು, 6ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಿಗಲಿದೆ.

ರಿಯಲ್‌ಮೀ ಸಿ17 ಅನೇಕ ವಿಶೇಷತೆಗಳನ್ನು ಹೊಂದಿದ್ದು, ಬಳಕೆದಾರರಿಗ ಅತ್ಯಾನಂದದ ಅನುಭವ ನೀಡಲಿವೆ. ರಿಯಲ್‌ಮೀ ಸಿ17 ಸ್ಮಾರ್ಟ್‌ಫೋನ್, 90ಎಚ್‌ಜಡ್ ರಿಫ್ರೆಸ್ ರೇಟ್‌ನೊಂದಿಗೆ 6.5 ಇಂಚ್‌ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 720x1,600 ಪಿಕ್ಸೆಲ್ ರೆಸೂಲೆಷನ್‌ ಇರಲಿದೆ. ಗೊರಿಲ್ಲಾ ಗ್ಲಾಸ್ ಇರಲಿದ್ದು, ನಿಮಗೆ ಒಳ್ಳೆಯ  ಲುಕ್ ನೀಡಲಿದೆ. ಆಂಡ್ರಾಯ್ಡ್ 10 ಆಧಾರಿತ ರಿಯಲ್‌ಮೀ ಯುಐ ಆಪರೇಟಿಂಗ್ ಸಾಫ್ಟ್‌ವೇರ್ ಕಾರ್ಯಾಚರಣೆ ಇರಲಿದೆ. 6ಜಿಬಿ ರ್ಯಾಮ್ ಹಾಗೂ 128ಜಿಬಿ ಸ್ಟೋರೇಜ್ ಇದ್ದು ಅದನ್ನು ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕವೂ ವಿಸ್ತರಿಸಿಕೊಳ್ಳಬಹುದು. 

ವಿವೋ ವಿ20 ಆಯಿತು, ವಿ20ಪ್ರೋ, ವಿ20 ಎಸ್‌ಇ ಬಿಡುಗಡೆಗೆ ಸಿದ್ಧತೆ

ಕ್ಯಾಮರಾ ಸಾಮರ್ಥ್ಯ
ಫೋನ್‌ನಲ್ಲಿ ಕ್ವಾಡ್ ರಿಯರ್ ಸೆಟ್ ಅಪ್ ಇದ್ದು, ಇದರಲ್ಲಿ ಎಫ್‌/2.2ಲೆನ್ಸ್ ಒಳಗೊಂಡ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 8 ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, ಅಲ್ಟ್ರಾ ವೈಡ್ ಆಂಗಲ್‌ಗಾಗಿ ಎಫ್ /2.2 ಲೆನ್ಸ್‌ ಇರಲಿದೆ. ಜೊತೆಗೆ ಮ್ಯಾಕ್ರೋ ಶೂಟರ್‌ಗಾಗಿ 2 ಮೆಗಾಪಿಕ್ಸೆಲ್ ಕಾಮರಾ ನೀಡಲಾಗಿದೆ. ಇನ್ನೂ ಸೆಲ್ಫಿಪ್ರಿಯರಿಗೂ ಈ ಫೋನ್ ಇಷ್ಟವಾಗಲಿದೆ. ಯಾಕೆಂದರೆ, ಫೋನ್‌ನ ಫ್ರಂಟ್‌ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮರಾ ಕೊಡಲಾಗಿದೆ.

ಬ್ಯಾಟರಿ ಸಾಮರ್ಥ್ಯ
ರಿಯಲ್‌ಮೀ ಸಿ17 ಫೋನ್‌ನಲ್ಲಿ 5000ಎಂಎಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ. ಇದು 18 ವ್ಯಾಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. 

ಕೆನೆಕ್ಟಿವಿಟಿ
ಈ ಫೋನ್‌ನಲ್ಲಿ ಕೆನೆಕ್ಟಿವಿಟಿಗಾಗಿ ಎಲ್‌ಟಿಇ, ವೈ ಫೈ,  ಬ್ಲೂಟೂಥ್ 5.0, ಜಿಪಿಎಸ್/ಎ-ಜಿಪಿಎಸ್, 3.5 ಎಂ ಎಂ ಹೆಡ್‌ಫೋನ್ ಜಾಕ್, ಯುಎಸ್‌ಬಿ ಟೈ ಸಿ ಪೋರ್ಟ್ ಕೊಡಲಾಗಿದೆ. ಜೊತೆಗೆ ಆಂಬಿಯಿಂಟ್ ಲೈಟ್, ಪ್ರಾಕ್ಸಿಮಿಟಿ, ಮ್ಯಾಗ್ನೆಟಿಕ್ ಇಂಡಕ್ಷನ್, ಎಕ್ಸೆಲರಮೋಟರ್ ಮತ್ತು ರಿಯರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ನೀಡಲಾಗಿದೆ.

5,499 ರೂಪಾಯಿಗೆ ಜಿಯೊನೀ ಸ್ಮಾರ್ಟ್‌ಫೋನ್! ಏನೀದರ ವಿಶೇಷತೆ

click me!