4 ಗಂಟೆ ನಿರಂತರ LIVE, ಹೊಸ ಫೀಚರ್ಸ್ ಸೇರಿಸಿದ ಇನ್ಸ್‌ಸ್ಟಾಗ್ರಾಂ!

By Suvarna News  |  First Published Oct 28, 2020, 5:56 PM IST

ಸಾಮಾಜಿಕ ಜಾಲತಾಣಗಳು ಪ್ರಮುಖ ಮಾಧ್ಯಮವಾಗಿದೆ. ನೇರಪ್ರಸಾರ ಸೇರಿದಂತೆ ಹಲವು ಫೀಚರ್ಸ್ ಸಾಮಾಜಿಕ ಜಾಲತಾಣದಲ್ಲಿದೆ. ಇದೀಗ ಇನ್‌ಸ್ಟಾಗ್ರಾಂ LIVE ಫೀಚರ್ಸ್ ಅಪ್‌ಗ್ರೇಡ್ ಮಾಡಿದೆ. ನೂತನ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.


ಬೆಂಗಳೂರು(ಅ.28): ಸೆಲೆಬ್ರೆಟಿಗಳು ಹೆಚ್ಚಾಗಿ ಬಳಸುತ್ತಿದ್ದ ಇನ್‌ಸ್ಟಾಗ್ರಾಂ ಇದೀಗ ಸಾಮಾನ್ಯವಾಗಿದೆ. ಎಲ್ಲರೂ ಇನ್‌ಸ್ಟಾಗ್ರಾಂ ಮೂಲಕ ಸಕ್ರೀಯರಾಗಿದ್ದಾರೆ. ಇದೀಗ ಇನ್‌ಸ್ಟಾಗ್ರಾಂ LIVE(ನೇರಪ್ರಸಾರ) ಫೀಚರ್ಸ್ ಅಪ್‌ಗ್ರೇಡ್ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಇದೀಗ ಇನ್‌ಸ್ಟಾಗ್ರಾಂ ಸತತ 4 ಗಂಟೆ ಕಾಲ ಯಾವುದೇ ಅಡೆ ತಡೆ ಇಲ್ಲದೆ LIVE  ನೀಡುವ ಅವಕಾಶ ಕಲ್ಪಿಸಿದೆ.

ಸುದ್ದಿ ಬ್ರೇಕ್ ಮಾಡುವ  ನಿರೂಪಕಿ, ಅಸಲಿ ವ್ಯಕ್ತಿ ಅಲ್ಲ ಈಕಿ! ವಿಡಿಯೋ!

Tap to resize

Latest Videos

undefined

ಇನ್‌ಸ್ಟಾಗ್ರಾಂ LIVE ಅಪ್‌ಗ್ರೇಡ್ ಮಾಡಿರುವುದು ಬಳಕೆದಾರರ ಸಂತಸ ಇಮ್ಮಡಿಗೊಳಿಸಿದೆ. ಫೀಚರ್ಸ್ ಅಪ್‌ಗ್ರೇಡ್‌ಗೂ ಮುನ್ನ ಇನ್‌ಸ್ಟಾಗ್ರಾಂ ಬಳಕೆದಾರರು 60 ನಿಮಿಷ LIVE ಮಾಡಲು ಅವಕಾಶವಿತ್ತು. ಇದೀಗ ಈ ಅವಧಿಯನ್ನು 4 ಗಂಟೆ ಕಾಲ ವಿಸ್ತರಿಸಲಾಗಿದೆ. ಇನ್ನು LIVE ವಿಶ್ವದೆಲ್ಲೆಡೆ ವೀಕ್ಷಿಸಬಹುದು. ಲಾಕ್‌ಡೌನ್ ಬಳಿಕ ಇನ್‌ಸ್ಟಾಗ್ರಾಂ LIVE ಬಳಕೆ ಹೆಚ್ಚಾಗುತ್ತಿದೆ. ಶೇಕಡಾ 60 ರಷ್ಟು ಏರಿಕೆಯಾಗಿದೆ. ಹೀಗಾಗಿ ಇನ್‌ಸ್ಟಾಗ್ರಾಂ LIVE ಫೀಚರ್ಸ್ ಅಪ್‌ಗ್ರೇಡ್ ಮಾಡಲಾಗಿದೆ.

ವಾಟ್ಸಾಪ್‌ನಲ್ಲಿ ಡಿಲೀಟ್‌ ಆದ ಮೆಸೇಜ್‌ ರಿಕವರಿ‌ ಮಾಡಿಕೊಳ್ಳೋದು ಹೇಗೆ?.

ಲೈವ್ ಮಾಡಿದ ವಿಡಿಯೋವನ್ನು ಸೇವ್ ಮಾಡಿಕೊಳ್ಳಲು ಅವಕಾಶವಿದೆ. 30 ದಿನದ ಸಮಯಾವಕಾಶ ಇನ್‌ಸ್ಟಾಗ್ರಾಂ ನೀಡಲಿದೆ. ಈ ವೇಳೆ ಲೈವ್ ವಿಡಿಯೋವನ್ನು ಸೇವ್ ಮಾಡಿಕೊಳ್ಳಬುಹುದು, ಅಥವಾ IGTVಗೆ ಅಪ್‌ಲೋಡ್ ಮಾಡಿಕೊಳ್ಳಬಹುದು. ಇನ್ನು ಲೈವ್ ಮಾಡಿದ ವಿಡಿಯೋ ಸಂಗ್ರಹ(Archive)ಆಯ್ಕೆಯಲ್ಲಿರಲಿದೆ. 

IGTV ಅಪ್ಲಿಕೇಶನ್‌ಗೆ ಹೊಸ ‘ಲೈವ್ ನೌ’ ವಿಭಾಗ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ‘ಎಕ್ಸ್‌ಪ್ಲೋರ್’ ವಿಭಾಗವೂ ಇದೆ. ಕಂಪನಿಗಳಿಗಾಗಿ ಅಥವಾ ಕಮರ್ಷಿಯಲ್ ಬಳಕೆಗೆ ವಿಡಿಯೋ ಪುಶ್ ಮಾಡುವ ಆಯ್ಕೆಯನ್ನೂ ನೀಡಿದೆ.
 

click me!