65 ಇಂಚಿನ ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್ಇಡಿ 4ಕೆ ಟಿವಿ ಬಿಡುಗಡೆ

Suvarna News   | Asianet News
Published : Jun 21, 2021, 04:27 PM IST
65 ಇಂಚಿನ ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್ಇಡಿ 4ಕೆ ಟಿವಿ ಬಿಡುಗಡೆ

ಸಾರಾಂಶ

ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಖ್ಯಾತವಾಗಿರುವ ಸೋನಿ ಭಾರತದಲ್ಲಿ ಹೊಸ ಟಿವಿಯೊಂದನ್ನು ಲಾಂಚ್ ಮಾಡಿದೆ. 65 ಇಂಚು  ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್ಇಡಿ 4ಕೆ ಟಿವಿಯ ಬೆಲೆ 2,99,990 ರೂಪಾಯಿಯಾಗಿದೆ. ನೋಡುಗರಿಗೆ ವಿಶಿಷ್ಟ ಅನುಭವವನ್ನು ಇದು ನೀಡುತ್ತದೆ.

ಭಾರತೀಯ ಮಾರುಕಟ್ಟೆಗೆ ನೂತನ ಸೋನಿ ಬ್ರಾವಿಯಾ ಎಕ್ಸ್‌ಆರ್ ಎ80ಜೆ ಒಎಲ್ಇಡಿ ಟಿವಿ  ಬಿಡುಗಡೆಯಾಗಿದೆ. ಈ ಟಿವಿಯ ವಿಶೇಷ ಏನೆಂದರೆ, ಕಾಗ್ನಿಟಿವ್ ಪ್ರೊಸೆರ್ ಎಕ್ಸ್‌ಆರ್ ಆಧರಿತವಾಗಿದೆ. ಇದರಿಂದಾಗಿ ನೋಡುಗರಿಗೆ ಟಿವಿ ಅದ್ಭುತ ಅನುಭವವನ್ನು ಒದಗಿಸಲು ಸಾಧ್ಯವಾಗುತ್ತದೆ. ಜೊತೆಗೆ, ಈ ಟಿವಿಯು ಅತ್ಯುತ್ತಮ ಆಡಿಯೊ ಕ್ವಾಲಿಟಿ ಅನುಭವವನ್ನು ನೋಡುಗರಿಗೆ ನೀಡುವುದಕ್ಕಾಗಿ ಸೌಂಡ್ ಫ್ರಂ ಪಿಕ್ಚರ್ ರಿಯಾಲ್ಟಿಗೆ ಸಪೋರ್ಟ್ ಮಾಡುತ್ತದೆ. ಹಾಗಾಗಿ, ಈ ಸೆಗ್ಮೆಂಟ್‌ನಲ್ಲಿ ತನ್ನೆಲ್ಲ ಪ್ರತಿಸ್ಪರ್ಧಿ ಟಿವಿಗಳಿಗಿಂತಲೂ ಈ ವಿಷಯದಲ್ಲಿ ಮುಂದಿದೆ ಭಿನ್ನವಾಗಿದೆ. 

ಆಗಸ್ಟ್ 3ಕ್ಕೆ ಹಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಲಾಂಚ್?

ಈ ಟಿವಿಯ ಮತ್ತೊಂದು ವಿಶೇಷ ಏನೆಂದರೆ, ಇದರಲ್ಲಿ ಪ್ರತ್ಯೇಕವಾದ ಗೇಮ್ ಮೋಡ್ ಕೂಡ ಇದೆ. ಅಲ್ಟ್ರಾ ಸೌಂಡ್ ಸ್ಮೂಥ್ ಅನುಭವವನ್ನು ಅದು ನೀಡುತ್ತದೆ. ಜೊತೆಗೆ ಇದು ಎಚ್‌ಡಿಎಂಐ 2.0 ಮತ್ತು 4ಕೆ 120ಪಿಎಫ್‌ಎಸ್ ವಿಡಿಯೋಗೂ ಸಪೋರ್ಟ್ ಮಾಡುತ್ತದೆ. ಎಕ್ಸ್‌ಆರ್ ಒಎಲ್ಇಡಿ ಕಾಂಟ್ರಾಸ್ಟ್, ಎಕ್ಸ್‌ಆರ್ ಟ್ರಿಲ್ಯುಮಿನೋಸ್ ಪ್ರೋ, ಎಕ್ಸ್‌ಆರ್ ಮೋಷನ್ ಕ್ಲಾರಿಟಿ ಸೇರಿದಂತೆ ಇನ್ನಿತರ ಫೀಚರ್‌ಗಳು ನೋಡುಗರ ಗಮನ ಸೆಳೆಯುತ್ತವೆ. ಅತ್ಯುತ್ತಮ ದೃಶ್ಯ ಹಾಗೂ ಆಡಿಯೋ ಅನುಭವವನ್ನು ನೀಡುವುದಕ್ಕಾಗಿ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಆಟ್ಮೋಸ್ ತಂತ್ರಜ್ಞಾನಕ್ಕೂ ಈ ಹೊಸ ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್‌ಇಡಿ ಟಿವಿ ಸಪೋರ್ಟ್ ಮಾಡುತ್ತದೆ.

ಎಕ್ಸ್ಆರ್ 65ಎ80ಜೆ ಮಾಡೆಲ್‌ ನಂಬರ್‌ನೊಂದಿಗೆ ಬರುವ ಈ ಹೊಸ ಸೋನಿ ಬ್ರಾವಿಯಾ ಎಕ್ಸ್‌ಆರ್ ಎ80ಜೆ ಒಎಲ್ಇಡಿ ಟಿವಿಯ ಪ್ರೀಮಿಯಂ ಟಿವಿಯಾಗಿದೆ.  ಹಾಗಾಗಿ, ಇದರ ಬೆಲೆಯೂ ಕೂಡಾ ಹೆಚ್ಚಾಗಿದೆ. ಭಾರತದಲ್ಲಿ ಈ ಟಿವಿಯ ಬೆಲೆ 2,99,990 ರೂಪಾಯಿಯಾಗಿದೆ. 65 ಇಂಚಿನ 4ಕೆ ಟಿವಿ ಸೋನಿ ಬ್ರಾವಿಯಾ ಮಾರಾಟವು ಎಲ್ಲ ಸೋನಿ ಸೆಂಟರ್‌ ಔಟ್‍ಲೆಟ್‍ಗಳಲ್ಲಿ ನಡೆಯಲಿದೆ. ಇವುಗಳ ಜತೆಗೆ ಪ್ರಮುಖ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು, ಇ ಕಾಮರ್ಸ್ ಪೋರ್ಟಲ್‌ಗಳಲ್ಲೂ ಈ ಸೋನಿ ಬ್ರಾವಿಯಾ ಎಕ್ಸ್‌ಆರ್ ಎ80ಜೆ ಒಎಲ್‌ಇಡಿ ಟಿವಿ ಮಾರಾಟಕ್ಕೆ ಸಿಗಲಿದೆ. 

ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್ಇಡಿ 4ಕೆ ಟಿವಿಯ ಎಲ್ಲ ಬದಿಗಳಲ್ಲೂ ತೆಳುವಾದ ಬೆಜಲ್‍ಗಳಿದ್ದು, ಟಿವಿಯ ಕೆಳಭಾಗವು ಸ್ವಲ್ಪ ದಪ್ಪವಿದೆ. ಕಾಗ್ನಿಟಿವ್ ಪ್ರೊಸೆಸರ್ ಎಕ್ಸ್ಆರ್ ಆಧಾರಿತವಾಗಿರುವ ಈ ಟಿವಿಯಲ್ಲಿ, ಗೇಮಿಂಗ್‌ಗಾಗಿಯೇ ಪ್ರತ್ಯೇಕ ಮೋಡ್ ಕೂಡಲಾಗಿದೆ. ಈ ಟಿವಿಯು ಎಕ್ಸ್ಆರ್  ಒಎಲ್ಇಡಿ ಕಾಂಟ್ರಾಸ್ಟ್‌ಗೆ ಸಪೋರ್ಟ್ ಮಾಡುತ್ತದೆ.

ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ

ಸ್ವಾಭಾವಿಕವಾಗಿ ಸುಂದರವಾದ ಬಣ್ಣಗಳಿಗಾಗಿ ಮಾನವ ಬುದ್ಧಿಮತ್ತೆಯೊಂದಿಗೆ 3D ಬಣ್ಣವನ್ನು ಪುನರುತ್ಪಾದಿಸುವ ಎಕ್ಸ್‌ಆರ್ ಟ್ರಿಲುಮಿನೋಸ್ ಪ್ರೊಗೆ ಇದು ಸಪೋರ್ಟ್ ಮಾಡುತ್ತದೆ. ಎಕ್ಸ್‌ಆರ್ ಮೋಷನ್ ಸ್ಪಷ್ಟತೆ ತಂತ್ರಜ್ಞಾನವು ಹೆಚ್ಚಿನ ವೇಗದ ದೃಶ್ಯಗಳ ಸಮಯದಲ್ಲಿ ಮಸುಕನ್ನು ಕಡಿಮೆ ಮಾಡಲು ಚಲಿಸುವ ಚಿತ್ರಗಳನ್ನು ನಿಖರವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಎರಡು ಕಾರಣಗಳಿಂದಾಗಿ ಈ ಟಿವಿಯ ನೋಡುವ ಅನುಭವವ ವಿಶಿಷ್ಟವಾಗಿರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಕೋಸ್ಟಿಕ್ ಸರ್ಫೇಸ್ ಆಡಿಯೋ ಮತ್ತು ಡಾಲ್ಬಿ ಅಟ್ಮೋಸ್ ಮತ್ತು ಡಾಲ್ಬಿ ವಿಷನ್‌ಗೂ ಸಪೋರ್ಟ್ ಮಾಡಬಲ್ಲ 3ಡಿ ಸರೌಂಡ್‌ನೊಂದಿಗೆ ಎಕ್ಸ್‌ಆರ್ ಸರೌಂಡ್ ಆಡಿಯೋವನ್ನು ಈ ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್ಇಡಿ ಟಿವಿ ಹೊಂದಿದೆ. 

ಈ ಹೊಸ ಟಿವಿಯು ಗೂಗಲ್ ಅಸಿಸ್ಟಂಟ್, ಅಲೆಕ್ಸಾ, ಆಪಲ್‌ ಏರ್‌ಪ್ಲೇ 2, ಹೋಮ್‌ಕಿಟ್‌ಗೂ ಸಪೋರ್ಟ್ ಮಾಡುತ್ತದೆ. ಇದರಲ್ಲಿ ಎಚ್‌ಡಿಎಂಐ 2.1 ಪೋರ್ಟ್ ಇದ್ದು ಅಧು 4ಕೆ 120ಎಫ್‌ಪಿಎಸ್ ವಿಡಿಯೋಗೆ ಸಪೋರ್ಟ್ ಮಾಡುತ್ತದೆ. ಲೈಟ್ ಸೆನ್ಸರ್, ಆಕೋಸ್ಟಿಕ್ ಆಟೋ ಕ್ಯಾಲಿಬ್ರಷನ್ ಟೆಕ್ನಾಲಜಿ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಈ ಟಿವಿ ಹೊಂದಿದೆ.

ಭಾರತೀಯ ಮಾರುಕಟ್ಟೆಗೆ OnePlus TV U1S ಟಿವಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಸೋನಿ ಬ್ರಾವಿಯಾ ಎಕ್ಸ್‌ಆರ್ ಎ80ಜೆ ಒಎಲ್ಇಡಿ ಟಿವಿಯು ಪ್ರೀಮಿಯಂ ಟಿವಿಯಾಗಿದ್ದು, ನೋಡುಗರಿಗೆ ಅತ್ಯುದ್ಭತವಾದ ಅನುಭವವನ್ನು ನೀಡುತ್ತದೆ. ಇದರಲ್ಲಿರುವ ಹಲವು ಹೊಸ ತಂತ್ರಜ್ಞಾನಗಳು ಟಿವಿ ನೋಡುವ ರೀತಿಯನ್ನು ಬದಲಿಸುತ್ತದೆ ಎಂದು ಹೇಳಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?