
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವ್ಯಾಟ್ಸಾಪ್ ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್. ಇದೀಗ ಮೂರು ಪ್ಲಾಟ್‌ಫಾರ್ಮ್ ಮತ್ತಷ್ಟು ಹತ್ತಿರವಾಗುತ್ತಿದೆ. ಇನ್ಮುಂದೆ ನೀವು ರೀಲ್ಸ್ ಹಂಚಿಕೊಳ್ಳುವಾಗ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮಾತ್ರವಲ್ಲ, ಡೌನ್ಲೋಡ್ ಮಾಡದೇ ನೇರವಾಗಿ ವ್ಯಾಟ್ಸಾಪ್‌ಗೂ ಹಂಚಿಕೊಳ್ಳಲು ಸಾಧ್ಯವಿದೆ. ಮೆಟಾ ಇದೀಗ ಕ್ರಾಸ್ ಪ್ಲಾಟ್‌ಫಾರ್ಮ ಫೀಚರ್ ನೀಡುತ್ತಿದೆ. ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಖಾತೆಯಿಂದ ವಿಡಿಯೋ, ಸ್ಟೋರಿಸ್, ಪೋಸ್ಟ್ , ರೀಲ್ಸ್‌ಗಳನ್ನು ನೇರವಾಗಿ ವ್ಯಾಟ್ಸಾಪ್‌ನಲ್ಲೂ ಪೋಸ್ಟ್ ಮಾಡಲು ಸಾಧ್ಯವಾಗಲಿದೆ.
ಬಳಕೆದಾರರು ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂ ಖಾತೆ ತೆರೆದು ಅಲ್ಲಿನ ಪೋಸ್ಟ್, ಫೋಟೋ ಅಥವಾ ರೀಲ್ಸ್ ಡೌನ್ಲೋಡ್ ಮಾಡಿ ಬಳಿಕ ವ್ಯಾಟ್ಸಾಪ್ ಸ್ಟೋರಿಸ್, ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡುವ ಅಗತ್ಯವಿಲ್ಲ. ವ್ಯಾಟ್ಸಾಪ್ ಮೂಲಕವೇ ನಿಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯ ಪೋಸ್ಟ್ ಲಭ್ಯವಾಗಲಿದೆ. ವ್ಯಾಟ್ಸಾಪ್‌ನಲ್ಲಿ ಹಂಚಿಕೊಳ್ಳಲು ಬಯಸಿದರೆ ಶೇರ್ ಆಯ್ಕೆ ಕ್ಲಿಕ್ ಮಾಡಿದರೆ ಸಾಕು. ನೇರವಾಗಿ ವ್ಯಾಟ್ಸಾಪ್‌ನಲ್ಲಿ ಪೋಸ್ಟ್ ಆಗಲಿದೆ.
ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಫೀಚರ್ ಬೀಟಾ ವರ್ಶನ್‌ಲ್ಲಿದೆ. ಬೀಟಾ ವರ್ಶನ್ ಮೂಲಕ ಈ ಫೀಚರ್ ಈಗಲೇ ಪ್ರಯತ್ನಿಸಲು ಸಾಧ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾಗಲಿದೆ. ವ್ಯಾಟ್ಸಾಪ್ ಮೀಡಿಯಾ ಪಿಕರ್ ಮೂಲಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ. ಹೊಸ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ದಿನಾಂಕ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಹೊಸ ಫೀಚರ್ ಲಭ್ಯವಾಗಲಿದೆ.
ಈ ಫೀಚರ್ ಮೂಲಕ ಇನ್‌ಸ್ಟಾಗ್ರಾಂ ಅಥವಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಹೊಸ ವಿಡಿಯೋ, ಫೋಟೋ, ರೀಲ್ಸ್ ಮಾತ್ರವಲ್ಲ, ಈಗಾಗಲೇ ಪೋಸ್ಟ್ ಮಾಡಿರುವ ಹಳೇ ಪೋಸ್ಟ್‌ಗಳನ್ನು ನೇರವಾಗಿ ವ್ಯಾಟ್ಸಾಪ್‌ನಲ್ಲಿ ಶೇರ್ ಮಾಡಲು ಸಾಧ್ಯವಿದೆ. ಹೊಸ ಫೀಚರ್ ಬಳಕೆದಾರರಿಗೆ ಅಡೆ ತಡೆ ಇಲ್ಲದೆ ತಮ್ಮ ಸ್ಟೋರಿಸ್, ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವ್ಯಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ.
ಈ ಫೀಚರ್ ಬಳಕೆ ಮಾಡಲು ಬಳಕೆದಾರರು ಲಿಂಕ್ ಪ್ರೊಸೆಸ್ ಪೂರ್ಣಗೊಳಿಸಬೇಕು. ವ್ಯಾಟ್ಸಾಪ್ ಖಾತೆಯನ್ನು ಮೆಟಾ ಖಾತೆ ಜೊತೆಗೆ ಲಿಂಕ್ ಮಾಡಬೇಕು. ಇದು ಸಂಪೂರ್ಣವಾಗಿ ಸ್ವತಂತ್ರ ಆಯ್ಕೆಯಾಗಿದೆ. ವ್ಯಾಟ್ಸಾಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂರು ಪ್ಲಾಟ್‌ಫಾರ್ಮ್ ಲಿಂಕ್ ಮಾಡಲು ಬಯಸಿದರೆ ಮಾತ್ರ ಪ್ರಕ್ರಿಯೆ ಪೂರ್ಣಗೊಳಿಸಬೇಕು. ವ್ಯಾಟ್ಸಾಪ್ ಖಾತೆಯನ್ನು ಮೆಟಾ ಸೆಂಟರ್ ಜೊತೆ ಲಿಂಕ್ ಮಾಡಲು ಬಯಸದಿದ್ದರೆ ದೂರ ಉಳಿಯಬಹುದು. ಕಡ್ಡಾಯವಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.