
ನವದೆಹಲಿ (ಸೆ.03) ಹಳೇ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ಗಳು RAM ಸಮಸ್ಯೆಯಿಂದ ಪರ್ಫಾಮೆನ್ಸ್ ಸಮಸ್ಯೆಯಾಗುವುದು ಸಹಜ. 1 ಜಿಬಿ, 2 ಜಿಬಿ RAM ಹಾಗೂ ಕಡಿಮೆ ಸ್ಟೋರೇಜ್‌ಗಳಿಂದ ಪರ್ಫಾಮೆನ್ಸ್ ಸ್ಲೋ ಆಗಲಿದೆ. ಹೀಗಾಗಿ ಹಲವರು ತಮ್ಮ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದೀಗ ಜಿಯೋ ಈ ಸಮಸ್ಯೆಗೆ ಪರಿಹಾರ ನೀಡಿದೆ. ಕೇವಲ 1000 ರೂಪಾಯಿಯಿಂದ ಆರಂಭಗೊಳ್ಳುವ ಈ ಪ್ಲಾನ್ ಮೂಲಕ ನಿಮ್ಮ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಹೈ ಪರ್ಫಾಮೆನ್ಸ್ ಮಾಡಲು ಸಾಧ್ಯವಿದೆ.
ಹಳೆಯ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಸ್ಲೋ ಆಗಿದ್ದರೆ ಹೊಸದನ್ನು ಖರೀದಿಸುವ ಅಗತ್ಯವಿಲ್ಲ. ರಿಲಯನ್ಸ್ ಜಿಯೋಪಿಸಿ (JioPC) ನಿಮ್ಮ ಹಳೆಯ ಕಂಪ್ಯೂಟರ್ ಅನ್ನು ಕ್ಲೌಡ್‌ನ ಶಕ್ತಿಯೊಂದಿಗೆ ಹೈ ಪರ್ಫಾಮೆನ್ಸ್ ಪಿಸಿ ಮಾಡಲಿದೆ. ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್‌ನಲ್ಲಿ 16 ಜಿಬಿ RAM ಮತ್ತು 1TB ವರೆಗೆ ಸಂಗ್ರಹಣೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಯಾವುದೇ ಹಾರ್ಡ್‌ವೇರ್ ಅಪ್‌ಗ್ರೇಡ್ ಬೇಕಿಲ್ಲ.
ಜಿಯೋಪಿಸಿಯ ಸೇವೆಯನ್ನು ಯಾವುದೇ ಇಂಟರ್ನೆಟ್ ಬಳಕೆದಾರರು ಸ್ವತಂತ್ರ ಸಬ್‌ಸ್ಕ್ರಿಪ್ಶನ್ ಆಗಿ ತೆಗೆದುಕೊಳ್ಳಬಹುದು. ಅಂದರೆ, ಇಂಟರ್ನೆಟ್ ಸಂಪರ್ಕವು ಯಾವುದೇ ಟೆಲಿಕಾಂ ಅಥವಾ ಬ್ರಾಡ್‌ಬ್ಯಾಂಡ್ ಕಂಪನಿಗೆ ಸೇರಿದ್ದರೂ ಜಿಯೋಪಿಸಿಯನ್ನು ಬಳಸಬಹುದು. ಇದನ್ನು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಕ್ರಿಯಗೊಳಿಸಬಹುದು. ಡೇಟಾ ಮೈಗ್ರೇಷನ್ ಅಥವಾ ಹೊಸ ಹಾರ್ಡ್‌ವೇರ್ ಅಳವಡಿಸುವ ಅಗತ್ಯವಿಲ್ಲ. ಈ ಹಿಂದೆ ಜಿಯೋ ಹೋಮ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಮಾತ್ರ ಜಿಯೋಪಿಸಿ ಸೀಮಿತವಾಗಿತ್ತು.
ಜಿಯೋಪಿಸಿ, ಹಳೆಯ ಕಂಪ್ಯೂಟರ್‌ಗಳನ್ನು ಎಷ್ಟು ಶಕ್ತಿಯುತವಾಗಿಸಬಲ್ಲದು ಎಂದರೆ ಎಐಗೆ ಸಂಬಂಧಿಸಿದ ಭಾರಿ ಸಂಸ್ಕರಣೆ ಮತ್ತು ಶೇಖರಣಾ ಅಗತ್ಯಗಳನ್ನು ಸಹ ಸುಲಭವಾಗಿ ಪೂರೈಸಬಹುದು. ಇದಕ್ಕಾಗಿ, ಕಂಪ್ಯೂಟಿಂಗ್‌ನ ಹೆಚ್ಚಿನ ಭಾಗವು ಜಿಯೋಪಿಸಿಯ ಕ್ಲೌಡ್‌ನಲ್ಲಿ ಇರುತ್ತದೆ. 8 ವರ್ಷ ಹಳೆಯ ಕಂಪ್ಯೂಟರ್ ಸಹ ಇಂದಿನ ಎಐ-ಚಾಲಿತ ಅಪ್ಲಿಕೇಶನ್‌ಗಳಿಗೆ ಅಗತ್ಯವಾದ ಕಾರ್ಯಕ್ಷಮತೆ, ಸಂಗ್ರಹಣೆ ಮತ್ತು ಸಾಮರ್ಥ್ಯಗಳನ್ನು ಸಾಧಿಸಬಹುದು.
ಜಿಯೋಪಿಸಿಯ ಯೋಜನೆಗಳು 1,000 ರೂ.ಗಳಿಂದ ಪ್ರಾರಂಭವಾಗಲಿವೆ. 8 ಜಿಬಿ RAM ಮತ್ತು 500 ಜಿಬಿ ಸ್ಟೋರೇಜ್ ಹೊಂದಿರುವ ಎರಡು ತಿಂಗಳ ಯೋಜನೆಯು 1,000 ರೂ.ಗೆ ಲಭ್ಯವಿದೆ. ಆದರೆ 16 ಜಿಬಿ RAM ಮತ್ತು 1 ಟಿಬಿ ಸ್ಟೋರೇಜ್ ಹೊಂದಿರುವ ಜಿಯೋಪಿಸಿ ಅಲ್ಟ್ರಾ ಎರಡು ತಿಂಗಳವರೆಗೆ 1,200 ರೂ, ಐದು ತಿಂಗಳ ಯೋಜನೆಗಳು ಕ್ರಮವಾಗಿ 2,000 ಮತ್ತು 2,500 ರೂಪಾಯಿಗೆ ಲಭ್ಯವಿರುತ್ತವೆ. ಅಲ್ಲದೆ, 12 ತಿಂಗಳ ಅಂದರೆ 10+2 ತಿಂಗಳ ಯೋಜನೆಯ ಬೆಲೆ 4,000 ರೂಪಾಯಿ ಮತ್ತು 5,000 ರೂಪಾ.ಿ ಆಗಿದೆ. ಎಲ್ಲಾ ಬೆಲೆಗಳು ಜಿಎಸ್‌ಟಿಯನ್ನು ಒಳಗೊಂಡಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.