
ಸಾಮಾಜಿಕ ಜಾಲತಾಣ ದೈತ್ಯ 'ಮೆಟಾ' ತನ್ನ ಪ್ರಮುಖ ಅಪ್ಲಿಕೇಶನ್‌ಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್ ಮತ್ತು ಮೆಟಾ AI ಗಾಗಿ 'ಮೆಟಾ ಒನ್' (Meta One) ಎಂಬ ನೂತನ ಚಂದಾದಾರಿಕೆ ಸೇವೆಯನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸೇವೆಯಡಿಯಲ್ಲಿ ಬಳಕೆದಾರರಿಗೆ 50ಕ್ಕೂ ಹೆಚ್ಚು ಸುಧಾರಿತ ಸೇವೆಯನ್ನು ಒದಗಿಸಲಾಗುತ್ತಿದೆ.
ಮೆಟಾ ಒನ್ ಪರಿಚಯಿಸಿರುವುದರಿಂದ ಅಸ್ತಿತ್ವದಲ್ಲಿರುವ ಉಚಿತ ಸೇವೆಗಳು ಸ್ಥಗಿತಗೊಳ್ಳುವುದಿಲ್ಲ. ಸಾಮಾನ್ಯ ಬಳಕೆದಾರರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಮೆಟಾ AI ನ ಮೂಲ ಆವೃತ್ತಿಗಳು ಎಂದಿನಂತೆ ಉಚಿತವಾಗಿ ಲಭ್ಯವಿರುತ್ತವೆ. ಆದರೆ, ಹೆಚ್ಚಿನ ಗ್ರಾಹಕೀಕರಣ, ವೃತ್ತಿಪರ ಪರಿಕರಗಳು ಹಾಗೂ ಸುಧಾರಿತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯನ್ನು ಬಯಸುವವರಿಗಾಗಿ ಈ ಪಾವತಿಸಿದ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ಮೆಟಾ ಒನ್ ಸೇವೆಯನ್ನು ಮುಖ್ಯವಾಗಿ ವೈಯಕ್ತಿಕ/AI ಪವರ್ ಬಳಕೆದಾರರು ಹಾಗೂ ಕ್ರಿಯೇಟರ್ಸ್ ಮತ್ತು ಉದ್ಯಮಿಗಳು ಎಂಬ ಎರಡು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.
ಇನ್‌ಸ್ಟಾಗ್ರಾಮ್ ಪ್ಲಸ್ ಗೆ ತಿಂಗಳಿಗೆ 3.99 ಡಾಲರ್, ಕಸ್ಟಮ್ ಡಿಎಂ ಹಾಗೂ ಸ್ಟೋರಿ ಫಾಂಟ್‌ಗಳು, ಸ್ಟೋರಿ ವೀಕ್ಷಣೆ ಅಧಿಸೂಚನೆಗಳು ಮತ್ತು ಡಿಎಂ ಪ್ರೀ ವ್ಯೂವ್ ಒಳಗೊಂಡಿದೆ.
ವಾಟ್ಸಾಪ್ ಪ್ಲಸ್ ತಿಂಗಳಿಗೆ 2.99 ಡಾಲರ್, ವಿಶೇಷ ಥೀಮ್‌ಗಳು, ಐಕಾನ್‌ಗಳು, ಎಫೆಕ್ಟ್ ಸ್ಟಿಕ್ಕರ್‌ಗಳು ಹಾಗೂ ಹೆಚ್ಚಿನ ಚಾಟ್‌ಗಳನ್ನು ಪಿನ್ ಮಾಡುವ ಸೌಲಭ್ಯ. ಶೀಘ್ರದಲ್ಲೇ ಚಾಟ್ ಬ್ಯಾಕಪ್ ಮತ್ತು ಫೋಕಸ್ ಶೆಡ್ಯೂಲಿಂಗ್ ವೈಶಿಷ್ಟ್ಯಗಳು ಲಭ್ಯವಾಗಲಿವೆ.
ಫೇಸ್‌ಬುಕ್ ಪ್ಲಸ್ 3.99 ತಿಂಗಳಿಗೆ ಡಾಲರ್, ಕಸ್ಟಮ್ ಆಪ್ ಐಕಾನ್‌ಗಳು, ಸೂಪರ್ ಹಾರ್ಟ್ಸ್, ಮೆಸೆಂಜರ್ ಗ್ರಾಹಕೀಕರಣ ಮತ್ತು ರೀಲ್ಸ್ ಕುರಿತು ಹೆಚ್ಚಿನ ವಿಶ್ಲೇಷಣಾತ್ಮಕ ಮಾಹಿತಿ.
ಮೆಟಾ ಒನ್ ಕೋರ್ : ತಿಂಗಳಿಗೆ ₹549. ಇದು ಎಲ್ಲಾ ಅಪ್ಲಿಕೇಶನ್‌ಗಳ ಸಂಯೋಜಿತ ವೈಶಿಷ್ಟ್ಯಗಳೊಂದಿಗೆ ಮೂಲಭೂತ AI ಬಳಕೆಗೆ ಅವಕಾಶ ನೀಡುತ್ತದೆ.
ಮೆಟಾ ಒನ್ ಪ್ರೀಮಿಯಂ : ತಿಂಗಳಿಗೆ ₹1,960. ಇದು ಸಂಯೋಜಿತ ಅಪ್ಲಿಕೇಶನ್ ವೈಶಿಷ್ಟ್ಯಗಳ ಜೊತೆಗೆ ಹೆಚ್ಚಿನ ಕಂಪ್ಯೂಟಿಂಗ್ ಸಾಮರ್ಥ್ಯದ ಉನ್ನತ ಮಟ್ಟದ AI ಪರಿಕರಗಳನ್ನು ಒದಗಿಸುತ್ತದೆ.
ವ್ಯಾಪಾರ ವೃದ್ಧಿ ಮತ್ತು ಸುಧಾರಿತ ಪಬ್ಲಿಷಿಂಗ್ ಪರಿಕರಗಳನ್ನು ಬಯಸುವವರಿಗಾಗಿ ಮೆಟಾ ಒನ್ ಎಸೆನ್ಷಿಯಲ್, ಅಡ್ವಾನ್ಸ್ಡ್, ಎಕ್ಸ್‌ಪರ್ಟ್ ಮತ್ತು ಮ್ಯಾಕ್ಸ್ ಎಂಬ ವಿಭಾಗಗಳನ್ನು ಪರಿಚಯಿಸಲಾಗಿದೆ.
ಎಸೆನ್ಷಿಯಲ್ ಪ್ಲಾನ್: ತಿಂಗಳಿಗೆ ₹639 ರಿಂದ ಪ್ರಾರಂಭ.
ಅಡ್ವಾನ್ಸ್ಡ್ ಪ್ಲಾನ್: ತಿಂಗಳಿಗೆ ₹2,099.
ಈ ಯೋಜನೆಗಳು ಮೆಟಾ ಬಿಸಿನೆಸ್ ಏಜೆಂಟ್ ಹಾಗೂ ಸುಧಾರಿತ ವಿಷಯ ಪ್ರಕಟಣೆಯ ಸಾಮರ್ಥ್ಯಗಳನ್ನು ಒಳಗೊಂಡಿರುತ್ತವೆ.
ಮೆಟಾ AI ಬಳಕೆಯ ಸೌಲಭ್ಯ: ಮೆಟಾ AI ನ ದಿನನಿತ್ಯದ ಸಾಮಾನ್ಯ ಬಳಕೆಯು ಸಂಪೂರ್ಣ ಉಚಿತವಾಗಿರುತ್ತದೆ. ಆದರೆ 'ಮ್ಯೂಸ್' ಮಾದರಿ ಆಧಾರಿತ ಇಮೇಜ್ ಕ್ರಿಯೇಷನ್, ಇಮೇಜ್ ಎಡಿಟಿಂಗ್, ವೀಡಿಯೊ ಜನರೇಷನ್ ಮತ್ತು ಇನ್‌ಸ್ಟಾಗ್ರಾಮ್ ನ 'ರೆಸ್ಟೈಲ್' ನಂತಹ ಸಂಕೀರ್ಣ ಕಾರ್ಯಗಳಿಗೆ ಮೆಟಾ ಒನ್ ಚಂದಾದಾರಿಕೆ ಅಗತ್ಯವಿರುತ್ತದೆ.
ಮುಂದಿನ ಹಂತದ ವಿಸ್ತರಣೆ: ಮುಂಬರುವ ದಿನಗಳಲ್ಲಿ ಈ ಚಂದಾದಾರಿಕೆ ಸೇವೆಯನ್ನು ಮೆಟಾದ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್ 'ಎಡಿಟ್ಸ್', AI ಗ್ಲಾಸ್‌ಗಳು ಹಾಗೂ ಇತರ ಸಾಧನಗಳಿಗೆ ವಿಸ್ತರಿಸಲು ಕಂಪನಿ ಯೋಜಿಸಿದೆ. ಶೀಘ್ರದಲ್ಲೇ 'ಎಡಿಟ್ಸ್ ಪ್ಲಸ್' ಹೆಸರಿನಲ್ಲಿ ಹೆಚ್ಚಿನ ಕ್ಲೌಡ್ ಸ್ಟೋರೇಜ್ ಮತ್ತು AI ಅಸಿಸ್ಟೆಂಟ್ ಸೌಲಭ್ಯವನ್ನು ಬಿಡುಗಡೆ ಮಾಡುವುದಾಗಿ ಮೆಟಾ ತಿಳಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.