ಮೊಬೈಲ್‌ ಡೇಟಾ ಶುಲ್ಕ ಹೆಚ್ಚಳ ಕಳ​ವ​ಳ​ಕಾ​ರಿ​: ರಾಜೀವ್‌ ಚಂದ್ರಶೇಖರ್‌

By Kannadaprabha NewsFirst Published Jan 26, 2023, 3:06 PM IST
Highlights

ಈ ಹಂತದಲ್ಲಿ ದರ ಹೆಚ್ಚಳ ಕಳವಳಕಾರಿ. ಹೀಗಾಗಿ ಈ ಹೆಚ್ಚಳವು ಅಲ್ಪಾ​ವಧಿ ಮತ್ತು ದೀರ್ಘಾ​ವ​ಧಿಯಲ್ಲಿ ಹೇಗೆ ಪರಿ​ಣಾಮ ಬೀರ​ಲಿದೆ ಎಂಬು​ದರ ಬಗ್ಗೆ ಟ್ರಾಯ್‌ ನೀಡುವ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ನವ​ದೆ​ಹ​ಲಿ (ಜನವರಿ 26, 2023): ಮೊಬೈಲ್‌ಗಳು ಹಾಗೂ ಮೊಬೈಲ್‌ ಡೇಟಾ ಶುಲ್ಕ​ಗಳು ಹೆಚ್ಚ​ಳ​ವಾ​ಗಿ​ರು​ವು​ದಕ್ಕೆ ಎಲೆ​ಕ್ಟ್ರಾ​ನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರ​ಶೇಖರ್​ ಕಳ​ವಳ ವ್ಯಕ್ತ​ಪ​ಡಿ​ಸಿ​ದ್ದಾರೆ. ಇದು ಒಟ್ಟಾ​ರೆ​ಯಾಗಿ ಡಿಜಿ​ಟ​ಲೀ​ಕ​ರ​ಣದ ಮೇಲೆ ದು​ಷ್ಪ​ರಿ​ಣಾಮ ಬೀರ​ಲಿದೆ ಎಂದು ಅವರು ಹೇಳಿ​ದ್ದಾರೆ. ಪ್ರಮುಖ ಟೆಲಿಕಾಂ ಸಂಸ್ಥೆ​ಯಾದ ಭಾರ್ತಿ ಏರ್‌ಟೆಲ್‌ ಇತ್ತೀ​ಚಿಗೆ ತನ್ನ ಕನಿಷ್ಠ ಡೇಟಾ ಶುಲ್ಕವನ್ನು ಶೇ.57 ರಷ್ಟು ಹೆಚ್ಚಳ ಮಾಡಿ​ರುವ ಬೆನ್ನಲ್ಲೇ ಸಚಿ​ವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏರ್‌ಟೆಲ್‌ ಶುಲ್ಕ ಹೆಚ್ಚಳ ಮಾಡಿ​ರು​ವುದು ನನ್ನ ಅರಿ​ವಿಗೆ ಬಂದಿಲ್ಲ. 2025ರ ವೇಳೆಗೆ 120 ಕೋಟಿ ಜನರನ್ನು ಡಿಜಿಟಲೀಕರಣದ ವ್ಯಾಪ್ತಿಗೆ ತರುವ ಉದ್ದೇಶ ಸರ್ಕಾರಕ್ಕಿದೆ. ಸದ್ಯ 83 ಕೋಟಿ ಜನ ಈ ವ್ಯಾಪ್ತಿಗೆ ಬಂದಿದ್ದಾರೆ. ಈ ಹಂತದಲ್ಲಿ ದರ ಹೆಚ್ಚಳ ಕಳವಳಕಾರಿ. ಹೀಗಾಗಿ ಈ ಹೆಚ್ಚಳವು ಅಲ್ಪಾ​ವಧಿ ಮತ್ತು ದೀರ್ಘಾ​ವ​ಧಿಯಲ್ಲಿ ಹೇಗೆ ಪರಿ​ಣಾಮ ಬೀರ​ಲಿದೆ ಎಂಬು​ದರ ಬಗ್ಗೆ ಟ್ರಾಯ್‌ ನೀಡುವ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಏರ್‌ಟೆಲ್‌ನಿಂದ (Airtel) ಮೊಬೈಲ್ ಸೇವೆಗಳ (Mobile Services) ದರಗಳ ಹೆಚ್ಚಳದ ಬಗ್ಗೆ ತನಗೆ ನಿಖರವಾಗಿ ತಿಳಿದಿಲ್ಲ ಮತ್ತು ಹೆಚ್ಚಳವು ಅಲ್ಪಾವಧಿ ಅಥವಾ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆಯೇ ಎಂದು ಪರಿಶೀಲಿಸಲು ಸಚಿವಾಲಯವು ಟೆಲಿಕಾಂ ನಿಯಂತ್ರಕ TRAI ಅನ್ನು ಸಂಪರ್ಕಿಸಬಹುದು ಎಂದೂ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Union Minister Rajeev Chandrashekar) ಅವರು ಹೇಳಿದರು. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ (Russia Ukraine War) ವಿಶ್ವಾದ್ಯಂತ ಬೆಲೆಗಳ ಮೇಲೆ ಪರಿಣಾಮ ಬೀರಿದೆ ಮತ್ತು ಡೇಟಾ ಬೆಲೆಯ ಪರಿಣಾಮವನ್ನು ಪರಿಶೀಲಿಸಬೇಕಾಗಿದೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಸುದ್ದಿಗೆ ಫೇಸ್‌ಬುಕ್‌, ಗೂಗಲ್‌ ಹಣ ನೀಡಲಿ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಭಾರ್ತಿ ಏರ್‌ಟೆಲ್‌ (Bharti Airtel) 28 ದಿನ ಅವ​ಧಿಯ ಕನಿಷ್ಠ ಮೊಬೈಲ್‌ ಶುಲ್ಕ​ವನ್ನು ಇತ್ತೀ​ಚಿಗೆ ಶೇ.57ರಷ್ಟು ಹೆಚ್ಚು ಮಾಡಿದೆ. ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ ಪಶ್ಚಿಮ ಸೇರಿದಂತೆ ಎಂಟು ವಲಯಗಳಲ್ಲಿ 99 ರೂ.ನ ಕನಿಷ್ಠ ರೀಚಾರ್ಚ್‌ ಅನ್ನು 155 ರೂ.ಗೆ ಹೆಚ್ಚಳ ಮಾಡಿದೆ. ಕಂಪನಿಯು ತನ್ನ ಕನಿಷ್ಟ 99 ರೂ. ಗಳ ರೀಚಾರ್ಜ್ ಯೋಜನೆಯನ್ನು ನಿಲ್ಲಿಸಿದೆ. 99 ರೂ. ರೀಚಾರ್ಜ್‌ ಪ್ಲ್ಯಾನ್‌ನಡಿ ಸೆಕೆಂಡಿಗೆ 2.5 ಪೈಸೆ ದರದಲ್ಲಿ 200 ಮೆಗಾಬೈಟ್ ಡೇಟಾ ಮತ್ತು ಕರೆಗಳನ್ನು ನೀಡುತ್ತಿತ್ತು. ಹರಿಯಾಣ ಮತ್ತು ಒಡಿಶಾದಲ್ಲಿ, ಏರ್‌ಟೆಲ್ ಈಗ ರೂ 155 ಯೋಜನೆಯನ್ನು ಅನಿಯಮಿತ ಕರೆ, 1 ಜಿಬಿ ಡೇಟಾ ಮತ್ತು 300 ಎಸ್‌ಎಂಎಸ್‌ಗಳೊಂದಿಗೆ ನೀಡಲು ಪ್ರಾರಂಭಿಸಿದೆ.

ಇದನ್ನೂ ಓದಿ: ಇಂಟರ್ನೆಟ್‌ ಭವಿಷ್ಯಕ್ಕೆ ಭಾರತದ ಪ್ರತ್ಯೇಕ ನೀತಿ; ಸೂಕ್ತ ಮಾನದಂಡ ರಚಿಸಲು ಸಿದ್ಧ: ರಾಜೀವ್‌ ಚಂದ್ರಶೇಖರ್‌

click me!