ದಾವಣಗೆರೆ, ಶಿವಮೊಗ್ಗ ಸೇರಿ ಕರ್ನಾಟಕದ 5 ನಗರದಲ್ಲಿ ಜಿಯೋ 5ಜಿ ಸೇವೆ!

By Suvarna News  |  First Published Jan 18, 2023, 9:10 PM IST

ಕರ್ನಾಟಕದ ಜಿಯೋ ಬಳಕೆದಾರರು ಇದೀಗ 14 ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಆನಂದಿಸಬಹುದು. ಈ ಬಾರಿ  ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಸೇರಿದಂತೆ ಹಲವು ನಗರಗಳಲ್ಲಿ 5ಜಿ ಸೇವೆ ಆರಂಭಿಸಲಾಗಿದೆ.

Davanagere to Shivamogga Reliance jio launch true 5G in Karnataka 11 cities ckm

ಬೆಂಗಳೂರು(ಜ.17) :  ಕರ್ನಾಟಕದ ಮತ್ತಷ್ಟು ಜಿಲ್ಲೆ ಹಾಗೂ ನಗರಗಳಿಗೆ ರಿಲಯನ್ಸ್ ಜಿಯೋ 5ಜಿ ಸೇವೆ ಲಭ್ಯವಾಗಿದೆ. ಇದೀಗ ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ, ಬೆಟಗೇರಿಯಲ್ಲಿ ಜಿಯೋ ಟ್ರು 5ಜಿ ಸೇವೆ ಆರಂಭಗೊಂಡಿದೆ. ಕರ್ನಾಟಕದ ಜೊತೆಗೆ ಆಂಧ್ರ ಪ್ರದೇಶದ ಕಾಕಿನಾಡ, ಕರ್ನೂಲ್, ಅಸ್ಸಾಂನ ಸಿಲ್ಚಾರ್, ಕೇರಳದ ಮಲಪ್ಪುರಂ ಸೇರಿದಂತೆ 16 ನಗರದಲ್ಲಿ ಟ್ರು5ಜಿ ಸೇವೆ ಆರಂಭಿಸಿದೆ.   ಇದರಲ್ಲಿ ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು (ಕೇರಳ), ತಿರುಪ್ಪೂರ್ (ತಮಿಳುನಾಡು), ನಿಜಾಮಾಬಾದ್, ಖಮ್ಮಂ (ತೆಲಂಗಾಣ), ಮತ್ತು ಬರೇಲಿ (ಉತ್ತರ ಪ್ರದೇಶ) ಸಹ ಒಳಗೊಂಡಿದೆ.

ರಿಲಯನ್ಸ್ ಜಿಯೋ ಇಂದು ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ ಮತ್ತು ಇತರ 11 ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆಯನ್ನು ಘೋಷಿಸಿದೆ. ರಿಲಯನ್ಸ್ ಜಿಯೋ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ ಸೇವೆಯನ್ನು ಪಡೆಯುವುದಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಮ್ ಕೊಡುಗೆಗೆ ಆಹ್ವಾನಿಸಲಾಗುತ್ತದೆ.

Tap to resize

Latest Videos

ಸಂಕ್ರಾಂತಿ ಹಬ್ಬಕ್ಕೆ ಜಿಯೋ ಕೊಡುಗೆ, ಉಡುಪಿ, ಬಳ್ಳಾರಿ ಸೇರಿ ಕರ್ನಾಟಕ 5 ನಗರದಲ್ಲಿ ಜಿಯೋ 5ಜಿ ಆರಂಭ!

7 ರಾಜ್ಯಗಳಾದ್ಯಂತ 16 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ, ಇದರೊಂದಿಗೆ ಒಟ್ಟು ಸಂಖ್ಯೆಯನ್ನು 134 ನಗರಗಳಿಗೆ ಕೊಂಡೊಯ್ದಿದ್ದೇವೆ. 2023ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿ ಜಿಯೋ ಬಳಕೆದಾರರು ಆನಂದಿಸಲು ನಾವು ಬಯಸುತ್ತೇವೆ. ಏಕೆಂದರೆ ನಾವು ದೇಶದಾದ್ಯಂತ ಟ್ರೂ 5ಜಿ ಜಾರಿಯ ‌‌ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ ಎಂದು  ಜಿಯೋ ವಕ್ತಾರರು ಹೇಳಿದ್ದಾರೆ.

ಹೊಸದಾಗಿ ಪ್ರಾರಂಭಿಸಲಾದ ಈ ಟ್ರೂ 5ಜಿ ನಗರಗಳು ಪ್ರಮುಖ ಪ್ರವಾಸೋದ್ಯಮ ಮತ್ತು ವಾಣಿಜ್ಯ ತಾಣಗಳು ಹಾಗೂ ನಮ್ಮ ದೇಶದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರೆ ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ.

ಜಿಯೋದಿಂದ ಬಂಪರ್ ಆಫರ್, ಕೇವಲ 61 ರೂಪಾಯಿಗೆ 5G ಡೇಟಾ ಪ್ಯಾಕ್!

ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಈ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.

ಇತ್ತೀಚೆಗೆ ಜಿಯೋ ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಮಂಗಳೂರು, ಬೆಳಗಾವಿಯಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿತು. ಮತ್ತು ಇಂದೇ ಇತರ ರಾಜ್ಯಗಳ ಪ್ರಮುಖ ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆ ಘೋಷಿಸಿತು.ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರಷ್ಟೇ ಅಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು  ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ.

vuukle one pixel image
click me!
vuukle one pixel image vuukle one pixel image