ಜಿಯೋ ಗ್ರಾಹಕರಿಗೆ ಬೊಂ‘ಬಾಟ್’ ಸೇವೆ; ಭಾರತದಲ್ಲಿ ಇದೇ ಮೊದಲ ಹೆಜ್ಜೆ!

By Web DeskFirst Published Oct 17, 2019, 7:42 PM IST
Highlights

ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC-2019) ನಲ್ಲಿ ರಿಲಯನ್ಸ್ ಜಿಯೋ ಹೊಸ ಸೇವೆಯನ್ನು ಪ್ರದರ್ಶನಕ್ಕಿಟ್ಟಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ. ವ್ಯಾಪಾರ-ವಹಿವಾಟು ಮಾಡುವ ಕೋಟ್ಯಾಂತರ ಮಂದಿಗೆ ಇದು ಸಹಕಾರಿಯಾಗಲಿದೆ. 

ಬೆಂಗಳೂರು (ಅ.17): ಮೊಬೈಲ್,ಡೇಟಾ ಮತ್ತು ಇಂಟರ್ನೆಟ್ ಸೇವೆಗಳಿಗೆ ಜನಪ್ರಿಯವಾಗಿರುವ ರಿಲಯನ್ಸ್ ಜಿಯೋ ಈಗ ಹೊಸ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ.

ಜಿಯೋ ಈಗ ವಿಡಿಯೋ ಕಾಲ್ ಅಸಿಸ್ಟೆಂಟ್ ಎಂಬ ಬಾಟ್ ಸೇವೆಯನ್ನು ದೇಶಕ್ಕೆ ಅರ್ಪಿಸುತ್ತಿದೆ.ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕೆಲಸ ಮಾಡುವ ಈ ಬಾಟ್‌ನಿಂದ ಏನು ಪ್ರಯೋಜನ ಅಂತೀರಾ? ಬಾಟ್ ಎಂದರೆ ರೋಬೋಟ್ ಮಾದರಿಯಲ್ಲಿ ಕೆಲಸ ಮಾಡುವ ವ್ಯವಸ್ಥೆ. 

ನೀವು ಒಂದು ಉದ್ದಿಮೆ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ಉದ್ದಿಮೆ  ಬಗ್ಗೆ ಗ್ರಾಹಕರಿಗೆ ಪ್ರಶ್ನೆಗಳಿರಬಹುದು. ನಿಮ್ಮ ಪ್ರಾಡಕ್ಟ್ ಅಥವಾ ಸೇವೆಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿರಬಹುದು. ಅದಕ್ಕೆಂದೇ ನೀವು ಕಾಲ್ ಸೆಂಟರ್ ಹೊಂದುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಅಥವಾ ಅದು ನಿಮಗೆ ಅನಗತ್ಯವೂ ಆಗಿರಬಹುದು. 

ಆದರೆ, ಗ್ರಾಹಕರು ಮಾಡುವ ಕರೆಗಳಿಗೆ ಸ್ಪಂದಿಸುವವರು ಯಾರು? ನೀವು ಖುದ್ದು 24 ಗಂಟೆ ಫೋನ್ ರಿಸೀವ್ ಮಾಡಿ, ಉತ್ತರಿಸುತ್ತಾ ಕೂರುವ ಹಾಗಿಲ್ಲ. ಅದಕ್ಕೆಂದೇ ಜಿಯೋ ಪರಿಹಾರವನ್ನು ಹುಡುಕಿದೆ. ಆಗ ನೀವು ವಿಡಿಯೋ ಕಾಲ್ ಅಸಿಸ್ಟೆಂಟ್ ಸೇವೆ ಆರಂಭಿಸಬಹುದು. 

ಇದನ್ನೂ ಓದಿ | ಜಿಯೋ ದೀಪಾವಳಿ ಉಡುಗೊರೆ; ಇಂಥಾ ಆಫರ್ ಯಾರ್ ಬಿಡ್ತಾರೆ!...

ನೀವು ಕೊಟ್ಟ್ ನಂಬರ್ ಗೆ ಗ್ರಾಹಕರು ಕರೆ ಮಾಡಿ ಪ್ರಶ್ನೆಗಳನ್ನು ಕೇಳಿದರೆ, ಅಟೊಮ್ಯಾಟಿಕ್ ಆಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಉತ್ತರ ದೊರೆಯುತ್ತದೆ. 

ಗ್ರಾಹಕರ ಪ್ರಶ್ನೆಗಳನ್ನು ಕೇಳಲು ಮತ್ತು ಅವುಗಳಿಗೆ ಹೆಚ್ಚು ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಜಿಯೋ ವೀಡಿಯೊ ಬಾಟ್ ಸಶಕ್ತವಾದ AI ಆಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ. ಇದರಲ್ಲಿ ವಿಶಿಷ್ಟವಾದ ಸ್ವಯಂ-ಕಲಿಕೆಯ ಸಾಮರ್ಥ್ಯವೂ ಇದ್ದು ಉತ್ತರಗಳ ನಿಖರತೆಯನ್ನು ಸುಧಾರಿಸಲು ಅದು ನೆರವಾಗುತ್ತದೆ, ಎಂದು ಕಂಪನಿಯು ಹೇಳಿದೆ.

ಉದ್ಯಮಗಳು ತಮ್ಮ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಅನುವುಮಾಡಿಕೊಡುವ ನವೀನ ಮತ್ತು ಉಪಯುಕ್ತ ಡಿಜಿಟಲ್ ಪರಿಹಾರಗಳನ್ನು ಪರಿಚಯಿಸಲು ಜಿಯೋ ಬದ್ಧವಾಗಿದೆ ಹಾಗೂ ಭಾರತದಲ್ಲಿನ ಲಕ್ಷಾಂತರ ಉದ್ಯಮಗಳಿಗೆ ಅಂತಹ ಉತ್ಪನ್ನಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ವೀಡಿಯೊ ಕಾಲ್ ಅಸಿಸ್ಟೆಂಟ್ ಒಂದು ಉದಾಹರಣೆಯಾಗಿದೆ. ಸಣ್ಣ-ದೊಡ್ಡ ಉದ್ಯಮಗಳೆಲ್ಲ ಹೊಸ ಹಾಗೂ ವಿಕಾಸಗೊಳ್ಳುತ್ತಿರುವ ತಂತ್ರಜ್ಞಾನಗಳ ಪ್ರಯೋಜನ ಪಡೆದುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಎಐ ಅನ್ನು ಎಲ್ಲರಿಗೂ ಎಟುಕುವಂತೆ ಮಾಡಲು ರ್‍ಯಾಡಿಸಿಸ್ ಸಂಸ್ಥೆಯು ನಮಗೆ ಸಹಾಯ ಮಾಡುತ್ತಿದೆ, ಎಂದು ರಿಲಯನ್ಸ್ ಜಿಯೋ ಇನ್‌ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್ ಹೇಳಿದ್ದಾರೆ.  

ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC-2019) ನಲ್ಲಿ ರಿಲಯನ್ಸ್ ಜಿಯೋ ಇದನ್ನು ಪ್ರದರ್ಶನಕ್ಕಿಟ್ಟಿದ್ದು, ಪೇಟೆಂಟ್ ಗೆ ಅರ್ಜಿ ಸಲ್ಲಿಸಿದೆ.
 

click me!