ಜಿಯೋ ಕರೆಗಳು ಇನ್ನು ಫ್ರೀ ಅಲ್ಲ!| ಜಿಯೋದಿಂದ ಬೇರೆ ನೆಟ್‌ವರ್ಕ್ಗೆ ಮಾಡುವ ಕರೆಗೆ ಶುಲ್ಕ| ಶುಲ್ಕ ವಿಧಿಸಿದ್ದಕ್ಕೆ ಬದಲಾಗಿ ಅಷ್ಟೇ ಮೌಲ್ಯದ ಉಚಿತ ಡಾಟಾ
ನವದೆಹಲಿ[ಅ.10]: ಉಚಿತ ಕರೆಗಳ ಮೂಲಕ ಮೊಬೈಲ್‌ಫೋನ್ ವಲಯದಲ್ಲಿ ಸಂಚಲನ ಮೂಡಿಸಿದ ಮುಕೇಶ್ ಅಂಬಾನಿ ಅವರ ‘ರಿಲಯನ್ಸ್ ಜಿಯೋ’ ಕಂಪನಿ, ಇದೇ ಮೊದಲ ಬಾರಿಗೆ ಇತರೆ ಕಂಪನಿಗಳ ಮೊಬೈಲ್‌ಗೆ ಮಾಡುವ ಕರೆಗಳಿಗೆ ದರ ವಿಧಿಸಲು ನಿರ್ಧರಿಸಿದೆ. ಈ ನಿರ್ಧಾರದ ಅನ್ವಯ ಅ.10ರಿಂದಲೇ ಜಾರಿಗೆ ಬರುವಂತೆ ರಿಲಯನ್ಸ್ ಜಿಯೋದಿಂದ ಬೇರೆ ನೆಟ್‌ವರ್ಕ್ಗಳಿಗೆ ಮಾಡುವ ವಾಕ್ಸ್ ಕಾಲ್‌ಗಳಿಗೆ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು.
ಈ ದರವು ಇತರೆ ಕಂಪನಿಗಳಿಗೆ ಮಾಡುವ ವಾಯ್‌್ಸ ಕಾಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಜಿಯೋ ನೆಟ್‌ವರ್ಕ್ಗೇ ಮಾಡುವ ಕರೆಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಡಾಟಾ ಬಳಸಿ ವಾಟ್ಸಪ್, ಫೇಸ್‌ಟೈಮ್‌ನಂತಹ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುವ ಕರೆಗಳಿಗೆ ಅನ್ವಯಿಸುವುದಿಲ್ಲ. ಅವು ಉಚಿತವಾಗಿಯೇ ಇರಲಿವೆ.
ಜಿಯೋ ದೀಪಾವಳಿ ಉಡುಗೊರೆ; ಇಂಥಾ ಆಫರ್ ಯಾರ್ ಬಿಡ್ತಾರೆ!
ಆದರೆ ತಾನು ವಿಧಿಸುವ 6 ಪೈಸೆ ಶುಲ್ಕವನ್ನು ಅದು ಗ್ರಾಹಕರಿಗೆ ಇನ್ನೊಂದು ರೀತಿಯಲ್ಲಿ ಪರಿಹಾರ ರೂಪದಲ್ಲಿ ನೀಡಲು ನಿರ್ಧರಿಸಿದೆ. ಶುಲ್ಕ ವಿಧಿಸಿದ್ದಕ್ಕೆ ಬದಲಾಗಿ ಅಷ್ಟೇ ಮೌಲ್ಯದ (6 ಪೈಸೆ) ಉಚಿತ ಡಾಟಾವನ್ನು ಅದು ಚಂದಾದಾರರಿಗೆ ನೀಡಲಿದೆ. ಹೀಗಾಗಿ ಗ್ರಾಹಕರು ಈಗ ಹೊಂದಿರುವ ಪ್ಲ್ಯಾನ್ ಜೊತೆಗೆ, ಇತರೆ ನೆಟ್‌ವರ್ಕ್ಗಳಿಗೆ ಕರೆ ಮಾಡಲು ಪ್ರತ್ಯೇಕ ರೀಚಾರ್ಜ್ ಮಾಡಿಸಬೇಕು. ಇಂಥ ರೀಚಾರ್ಜ್‌ಗಾಗಿ ಕನಿಷ್ಠ 10 ರು.ನಿಂದ ಟಾಪಪ್ ಸಿಗಲಿದೆ ಎಂದು ಕಂಪನಿ ಹೇಳಿದೆ.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ಟ್ರಾಯ್’ ಆದೇಶಾನುಸಾರ ಬೇರೆ ನೆಟ್‌ವರ್ಕ್ಗಳಿಗೆ ಮಾಡಿದ ಕರೆಗಳಿಗೆ ಕಂಪನಿಯು ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕು. ಈವರೆಗೆ ಬೇರೆ ನೆಟ್‌ವರ್ಕ್ಗೆ ಉಚಿತ ಕರೆ ನೀಡಿ 13,500 ಕೋಟಿ ರು. ವೆಚ್ಚವನ್ನು ಜಿಯೋ ತಾನೇ ಭರಿಸುತ್ತಿತ್ತು. ಆದರೆ ಈಗ ಇದೇ ಮೊದಲ ಸಲ ಈ ನಷ್ಟವನ್ನು ಗ್ರಾಹಕರಿಗೆ ಶುಲ್ಕ ವಿಧಿಸಿ ಸರಿದೂಗಿಸಿಕೊಳ್ಳಲು ಜಿಯೋ ನಿರ್ಧರಿಸಿದೆ.
ಹುವೈ ಹೊಸ ಮೀಡಿಯಾ ಪ್ಯಾಡ್; ಥಿಯೇಟರ್ ಎಫೆಕ್ಟ್ ನೀಡುತ್ತೆ ಈ ಟ್ಯಾಬ್!