ವಾಟ್ಸಪ್‌, ಟ್ವೀಟರ್‌ನಲ್ಲಿ ಹೇಗೆ ಬರೆಯಬೇಕು? ಇನ್ನು ಪದವಿಯಲ್ಲಿ ಪಾಠ!

By Web Desk  |  First Published Oct 14, 2019, 4:31 PM IST

ವಾಟ್ಸಪ್‌, ಟ್ವೀಟರ್‌ನಲ್ಲಿ ಹೇಗೆ ಬರೆಯಬೇಕು ಎಂಬ ಬಗ್ಗೆ ಇನ್ನು ಪದವಿಯಲ್ಲಿ ಪಾಠ!| ಯುಜಿಸಿಯಿಂದ ಪದವಿಯಲ್ಲಿ ‘ಜೀವನ ಕೌಶಲ್ಯ’ ಎಂಬ ಹೊಸ ಪಠ್ಯ| ಇದರಲ್ಲಿ ಯೋಗ-ಪ್ರಾಣಾಯಾಮ, ಸ್ವವಿವರ ಬರಹದ ಬಗ್ಗೆಯೂ ಅರಿವು ಮೂಡಿಸುವ ಅಂಶ


ನವದೆಹಲಿ[ಅ.14]: ಸಾಮಾಜಿಕ ಮಾಧ್ಯಮಗಳಲ್ಲಿ ನಡೆದುಕೊಳ್ಳಬೇಕಾದ ನೀತಿಗಳು ಹಾಗೂ ಶಿಷ್ಟಾಚಾರ, ಗೂಗಲ್‌ ಸಚ್‌ರ್‍ ಎಂಜಿನ್‌ ಹೇಗೆ ಬಳಸಬೇಕು, ಯೋಗ ಹಾಗೂ ಪ್ರಾಣಾಯಾಮ ಮತ್ತು ನೌಕರಿಗೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ಸ್ವವಿವರ ಹೇಗೆ ಬರಿಯಬೇಕು ಎಂಬುವು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಿದ್ಧಪಡಿಸಿರುವ ‘ಜೀವನ ಕೌಶಲ್ಯಗಳು’ ಪಠ್ಯಕ್ರಮದ ಭಾಗವಾಗಿವೆ.

‘ಜೀವನ ಕೌಶಲ್ಯ’ ಎಂಬ ಕೌಶಲ್ಯ ಆಧರಿತ ಪಠ್ಯವನ್ನು ಪದವಿ ತರಗತಿಗಳಲ್ಲಿ ಯುಜಿಸಿ ಅಳವಡಿಸಿದೆ. ಅದರಲ್ಲಿ ವಿದ್ಯಾರ್ಥಿಗಳು ಹೇಗೆ ವಾಟ್ಸಪ್‌, ಟ್ವೀಟರ್‌, ಫೇಸ್‌ಬುಕ್‌ನಂತಹ ಆಧುನಿಕ ಸಾಮಾಜಿಕ ಮಾಧ್ಯಮದಲ್ಲಿ (ಸೋಷಿಯಲ್‌ ಮೀಡಿಯಾ) ಸಂವಹನ ನಡೆಸಬೇಕು? ಹೇಗೆ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂಬೆಲ್ಲಾ ವಿವರಗಳಿವೆ.

Tap to resize

Latest Videos

ಎರಡು ವರ್ಷಗಳ ಬಳಿಕ ಜಿಯೋ ಗ್ರಾಹಕರಿಗೆ ಶಾಕ್: ಇನ್ನು ಕರೆಗಳು ಫ್ರೀ ಅಲ್ಲ!

‘ಇಂದು ನಾವು ಸಂವಹನ ಹಾಗೂ ಬರವಣಿಗೆ ಶೈಲಿಯ ಬಗ್ಗೆ ಸಾಕಷ್ಟುಪಾಠ ಮಾಡಬಹುದು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ಬರೆಯಬೇಕು ಎಂಬುದನ್ನು ಕಡೆಗಣಿಸುವಂತಿಲ್ಲ. ಇದು ಸಂವಹನಕ್ಕೆ ಉತ್ತಮ ಮಾಧ್ಯಮ. ಆದರೆ ಇದರ ಗುಣ ಹಾಗೂ ಅವಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಾಗುತ್ತದೆ’ ಎಂದು ಯುಜಿಸಿ ಅಧಿಕಾರಿಯೊಬ್ಬರು ಹೇಳಿದರು.

‘ಹಾಗೆಯೇ ರೆಸ್ಯೂಮ್‌, ಬಯೋಡೇಟಾ ಹಾಗೂ ಕರಿಕ್ಯುಲಂ ವಿಟೆ (ಸಿವಿ) ಮಧ್ಯೆ ಇರುವ ವ್ಯತ್ಯಾಸ ವಿದ್ಯಾರ್ಥಿಗಳಿಗೆ ಗೊತ್ತಿರುವುದಿಲ್ಲ. ಹೀಗಾಗಿ ಉತ್ತಮ ಸ್ವವಿವರ ಹೇಗೆ ಬರಿಯಬೇಕು ಎಂಬುದು ಕೂಡ ಜೀವನ ಕೌಶಲ್ಯ. ಇದರ ಬಗ್ಗೆ ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ’ ಎಂದು ಅವರು ಹೇಳಿದರು.

ಸೆಂಟರ್ ಆಫ್ ಮಿಲ್ಕಿ ವೇ ನೋಡಿ: ಅಂತಿಂಥದ್ದಲ್ಲ ‘ದೊಡ್ಮನೆ’ ಮೋಡಿ!

ಯೋಗದಲ್ಲಿನ ವಿವಿಧ ಆಸನಗಳು, ಪ್ರಾಣಾಯಾಮದ ಬಗ್ಗೆ ಪಠ್ಯದಲ್ಲಿ ವಿವರಿಸಲಾಗಿದೆ. ‘ಪರೀಕ್ಷೆಗೂ ಮುನ್ನ ಯಾವ ಆಸನಗಳನ್ನು ಮಾಡಿದರೆ ಉತ್ತಮ’ ಎಂಬ ಬಗ್ಗೆ ಪಠ್ಯದಲ್ಲಿ ವಿವರಿಸಲಾಗಿದೆ.

ವಿದ್ಯಾರ್ಥಿಯು ಹೇಗೆ ಒಂದು ತಂಡದ ನಾಯಕನಾಗಿ ಬೆಳೆಯಬಹುದು? ಇತರ ವಿದ್ಯಾರ್ಥಿಗಳ ಜತೆ ಹೇಗೆ ಸೌಹಾರ್ದತೆಯಿಂದ ಇರಬೇಕು ಎಂಬ ಬಗ್ಗೆಯೂ ತಿಳಿಸಿಕೊಡುವ ಅಂಶಗಳು ಪಠ್ಯದಲ್ಲಿವೆ.

click me!