Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

By BK Ashwin  |  First Published Nov 2, 2022, 1:45 PM IST

ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ ಎಕ್ಸಿಕ್ಯುಟಿವ್‌ಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಪರಿಹಾರದ ಹಣವನ್ನು ಕೊಡದಂತೆ ಹೇಗೆ ತಪ್ಪಿಸಬಹುದೆಂದು ನೋಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆ ಎಲಾನ್‌ ಮಸ್ಕ್‌ ಪರಿಹಾರದ ಹಣ ಹಾಗೂ ಇತರೆ ಸ್ಟಾಕ್‌ ಬಹುಮಾನದ ಮೊತ್ತವನ್ನು ಅವರಿಗೆ ನೀಡದಿದ್ದರೆ, ಅವರು ಮತ್ತೊಂದು ಕಾನೂನು ಮೊಕದ್ದಮೆಯನ್ನು ಸಹ ಎದುರಿಸಬೇಕಾಗಬಹುದು.


ಎಲಾನ್‌ ಮಸ್ಕ್‌ (Elon Musk) ಸದ್ಯ ಟ್ವಿಟ್ಟರ್‌ನ (Twitter) ಅಧಿಪತಿಯಾಗಿದ್ದಾರೆ. ಅವರು ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಪರಾಗ್‌ ಅಗರ್ವಾಲ್‌ (Parag Agrawal), ನೆಡ್‌ ಸೇಗಲ್‌ (Ned Segal) ಹಾಗೂ ವಿಜಯ ಗಡ್ಡೆ (Vijaya Gadde) ತಾವು ಟ್ವಿಟ್ಟರ್‌ನಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕಂಪನಿಯಿಂದ ಅವರನ್ನು ಹೊರಕ್ಕೆ ಹಾಕುವುದು ನಿಶ್ಚಿತವಾಗಿದ್ದರೂ ಈವರೆಗೆ ಯಾವುದೇ ಅಧಿಕೃತ ಸಂವಹನ  ಬಂದಿಲ್ಲ. ಟ್ವಿಟ್ಟರ್‌ ಸಿಇಒ ಆಗಿದ್ದ ಪರಾಗ್‌ ಅಗರ್ವಾಲ್‌ನ ಬಯೋ ಈಗ @vintweeta ವನ್ನು ಹಿಂಬಾಲಿಸುತ್ತಿರುವ ಡಿವೈಸ್‌ ಎಂದು ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ, ಕಂಪನಿಯ ನೀತಿಯ ಮಾಜಿ ಮುಖ್ಯಸ್ಥ ಗಡ್ಡೆ ಅವರ ಟ್ವಿಟ್ಟರ್‌ ಖಾತೆಯಲ್ಲಿ ‘’ಬೋರ್ಡ್‌ ಆಫ್‌ @GuardantHealth [Guardant Health], @planet [Planet] and @mercycorps [Mercy Corps] ಎಂದು ಬದಲಿಸಿಕೊಂಡಿದ್ದಾರೆ. ಈ ಮಧ್ಯೆ, ಮಾಜಿ ಸಿಟಿಒ ಸೇಗಲ್‌ ತಾನು ಟ್ವಿಟ್ಟರ್‌ನ ಭಾಗವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ತಾನು ಈಗಲೂ ಸಹ ಟ್ವಿಟ್ಟರ್‌ನ ಫ್ಯಾನ್‌ ಎಂದು ಹೇಳಿಕೊಂಡಿದ್ದಾರೆ. 

ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು ಸ್ವಾಧೀನಪಡಿಸಿಕೊಂಡ ದಿನವೇ ಪರಾಗ್‌ ಅಗರ್ವಾಲ್‌, ನೆಡ್‌ ಸೇಗಲ್‌ ಹಾಗೂ ವಿಜಯ ಗಡ್ಡೆಯನ್ನು ಕಿತ್ತೊಗೆಯಲಾಗಿದೆ ಎಂದು ಹಲವು ವರದಿಗಳು ಹೇಳಿವೆ. ಅಲ್ಲದೆ, ಈ ಮೂವರು ಸಂಸ್ಥೆಯಿಂದ ಹೊರಹೋಗಿರುವುದರಿಂದ ದೊಡ್ಡ ಮೊತ್ತದ ಪರಿಹಾರದ ಹಣ ಪಡೆಯಲು ಅರ್ಹರಾಗಿದ್ದಾರೆ ಎಂದು ಟ್ವಿಟ್ಟರ್‌ನ ಎಸ್‌ಇಸಿ ಫೈಲಿಂಗ್ (SEC Filing) ಹಾಗೂ ಹಲವು ವರದಿಗಳು ಸಹ ತಿಳಿಸಿವೆ. 

Tap to resize

Latest Videos

undefined

ಇದನ್ನು ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್‌ ಮಸ್ಕ್‌ ಘೋಷಣೆ

ಉದಾಹರಣೆಗೆ, ಜುಲೈ ತಿಂಗಳ ಎಸ್‌ಇಸಿ ಫೈಲಿಂಗ್‌ಪ್ರಕಾರ ಅಗರ್ವಾಲ್‌ ಅವರನ್ನು ಕೆಲಸದಿಂದ ತೆಗೆದುಹಾಕಿದರೆ ಅವರಿಗೆ 67 ಮಿಲಿಯನ್‌ ಡಾಲರ್‌ (ಅಂದಾಜು 552 ಕೋಟಿ ರೂ.) ಪರಿಹಾರ ಪಡೆಯಲಿದ್ದಾರೆ. ಇನ್ನು, ಗಡ್ಡೆ 54.7 ಮಿಲಿಯನ್‌ ಡಾಲರ್‌ (ಅಂದಾಜು 450 ಕೋಟಿ ರೂ.) ಪರಿಹಾರ ಪಡೆಯಲಿದ್ದಾರೆ. ಒಟ್ಟಾರೆ, ಇವರಿಬ್ಬರಿಗೇ 120 ಮಿಲಿಯನ್‌ ಡಾಲರ್‌ (ಸುಮಾರು 1000 ಕೋಟಿ ರೂ.) ಪರಿಹಾರ ನೀಡಬೇಕಿದೆ. 

ಆದರೆ, ಮಸ್ಕ್‌ ಟ್ವಿಟ್ಟರ್‌ನ ಎಕ್ಸಿಕ್ಯುಟಿವ್‌ಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಪರಿಹಾರದ ಹಣವನ್ನು ಕೊಡದಂತೆ ಹೇಗೆ ತಪ್ಪಿಸಬಹುದೆಂದು ನೋಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆ ಎಲಾನ್‌ ಮಸ್ಕ್‌ ಪರಿಹಾರದ ಹಣ ಹಾಗೂ ಇತರೆ ಸ್ಟಾಕ್‌ ಬಹುಮಾನದ ಮೊತ್ತವನ್ನು ಅವರಿಗೆ ನೀಡದಿದ್ದರೆ, ಅವರು ಮತ್ತೊಂದು ಕಾನೂನು ಮೊಕದ್ದಮೆಯನ್ನು ಸಹ ಎದುರಿಸಬೇಕಾಗಬಹುದು.

ಇದನ್ನೂ ಓದಿ: Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್‌ ಬಾಸ್‌: ಪರಾಗ್‌ ಅಗರವಾಲ್‌ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?
 
ಇತ್ತೀಚೆಗಷ್ಟೇ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನೊಂದಿಗೆ ಕಾನೂನು ಮೊಕದ್ದಮೆ ಎದುರಿಸಿದ್ದಾರೆ. 44 ಬಿಲಿಯನ್‌ ಡಾಲರ್‌ ಸ್ವಾಧೀನ ಒಪ್ಪಂದದಿಂದ ಹೊರಬರುವುದಾಗಿ ಅವರು ಘೋಷಿಸಿದ ಬಳಿಕ ಕಾನೂನು ಮೊಕದ್ದಮೆ ಎದುರಿಸಿದ್ದರು. ಕೊನೆಗೂ ಅವರು ಟ್ವಿಟ್ಟರ್‌ ಖರೀದಿಸಬೇಕಾಗಿ ಬಂತು.  ವಿಚಾರಣೆ ಆರಂಭವಾದ ಬಳಿಕ ಟ್ವಿಟ್ಟರ್‌ ಖರೀದಿಸುವುದಾಗಿ ಅವರೇ ಮುಂದಾದರು.
 
ಆದರೆ, ಪರಾಗ್‌ ಅಗರ್ವಾಲ್‌, ನೆಡ್‌ ಸೇಗಲ್‌ ಹಾಗೂ ವಿಜಯ ಗಡ್ಡೆ ವಿಚಾರದಲ್ಲಿ ಎಲಾನ್‌ ಮಸ್ಕ್‌ ಎಸ್‌ಇಸಿ ಫೈಲಿಂಗ್‌ನಲ್ಲಿರುವಂತೆ ಹಣ ನೀಡಲು ಮುಂದಾಗಬಹುದು. ಅಥವಾ ಎರಡೂ ಕಡೆಯವರು ಮಧ್ಯಸ್ಥಿಕೆ ವಹಿಸಿ ಈ ಹಣವನ್ನು ಕಡಿಮೆ ಮಾಡಬಹುದು ಎಂದೂ ಹೇಳಲಾಗುತ್ತಿದೆ. 

ಇದನ್ನೂ ಓದಿ: Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್‌ ಮಸ್ಕ್‌ಗೆ ಸಡ್ಡು?

click me!