ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಶಾಕ್, ಭಾರತ ಸೇರಿ ವಿಶ್ವದಲ್ಲೇ ಸರ್ವರ್ ಸಮಸ್ಯೆ, ಹಲವರ ಖಾತೆ ಸಸ್ಪೆಂಡ್!

By Suvarna News  |  First Published Oct 31, 2022, 10:12 PM IST

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರು ಪರದಾಡಿದ್ದಾರೆ. ಒಂದೆಡೆ ಸರ್ವರ್ ಡೌನ್ ಸಮಸ್ಯೆ ಎದುರಾದರೆ ಮತ್ತೊಂದೆಡೆ ಹಲವರ ಖಾತೆ ಅಮಾನತುಗೊಂಡಿದೆ. 
 


ನವದೆಹಲಿ(ಅ.31): ಸಾಮಾಜಿಕ ಜಾಲತಾಣಗಳ ಪೈಕಿ ಫೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಂ ಮತ್ತೆ ಸರ್ವರ್ ಸಮಸ್ಯೆ ಎದುರಿಸಿದೆ. ಆದರೆ ಈ ಬಾರಿ ಸರ್ವರ್ ಸಮಸ್ಯೆ ಜೊತೆ ಬಳಕೆದಾರರಿಗೆ ಶಾಕ್ ನೀಡಿದೆ. ಒಂದೆಡೆ ಇನ್‌ಸ್ಟಾಗ್ರಾಂ ಬಳಕೆದಾರರು ಸರ್ವರ್ ಡೌನ್ ಸಮಸ್ಯೆ ಎದುರಿಸಿದರೆ, ಮತ್ತೊಂದೆಡೆ ಹಲವರ ಖಾತೆಗಳು ಅಮಾನತುಗೊಂಡಿದೆ. ಈ ಕುರಿತು ಈಗಾಗಲೇ ಬಳೆಕೆದಾರರು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ವಿಶ್ವದ ಬಹುತೇಕ ಕಡೆಗಳಲ್ಲಿ ಇನ್‌ಸ್ಟಾಗ್ರಾಂ ಸರ್ವರ್ ಸಮಸ್ಯೆ ಎದುರಿಸಿದೆ. ಬಳಕೆದಾರರು ಖಾತೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ಹಲವರ ಖಾತೆಗಳು ಅಮಾನತುಗೊಂಡಿರುವುದು ಬೆಳಕಿಗೆ ಬಂದಿದೆ.

3,000ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಇದರ ಬೆನ್ನಲ್ಲೇ ಹಲವು ಟ್ವಿಟರ್ ಮೂಲಕ ಇನ್‌ಸ್ಟಾಗ್ರಾಂ ಡೌನ್ ಎಂದು ದೂರು ನೀಡಿದ್ದಾರೆ. ಸರ್ವರ್ ಡೌನ್ ಬೆನ್ನಲ್ಲೇ ಹಲವರು ಖಾತೆಗಳು ಅಮಾನತ್ತಾಗಿದೆ. ಹೀಗಾಗಿ ಟ್ವಿಟರ್‌ನಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರಿಗೆ ಎಚ್ಚರಿಕೆ ಸಂದೇಶದ ಮೂಲಕ ಖಾತೆಯನ್ನು ಅಮಾನತುಗೊಳಿಸಲಾಗಿದೆ.

Tap to resize

Latest Videos

undefined

 

We're aware that some of you are having issues accessing your Instagram account. We're looking into it and apologize for the inconvenience.

— Instagram Comms (@InstagramComms)

 

ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ದೂರು ಹೆಚ್ಚಾಗುತ್ತಿದ್ದಂತೆ ಇನ್‌ಸ್ಟಾಗ್ರಾಂ ಖುದ್ದು ಪ್ರತಿಕ್ರಿಯೆ ನೀಡಿದೆ. ಹಲವರಿಗೆ ಇನ್‌ಸ್ಟಾಗ್ರಾಂ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಅಡಚಣೆಗಾಗಿ ಕ್ಷಮಿಸಿ ಎಂದು ಇನ್‌ಸ್ಟಾಗ್ರಾಂ ಹೇಳಿದೆ. ಇಷ್ಟೇ ಅಲ್ಲ ಯಾರ ಖಾತೆಗಳು ಅಮಾನತ್ತಾಗಿದೆ, ಅವರ ಇಮೇಲ್ ಐಡಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೇಳಿದೆ.

WhatsApp Restored: ಒಂದೂವರೆ ಗಂಟೆಗಳ ಬಳಿಕ ವಾಟ್ಸ್‌ಅಪ್‌ಗೆ ಹಿಡಿದ ಗ್ರಹಣ ಮುಕ್ತಿ!

ಇತ್ತೀಚೆಗೆ ವ್ಯಾಟ್ಸಆ್ಯಪ್ ಡೌನ್
ಅಕ್ಟೋಬರ್ 25 ರಂದು ಅಂದರೆ ಸೂರ್ಯಗ್ರಹಣದ ದಿನ ವ್ಯಾಟ್ಸ್ಆ್ಯಪ್ ಡೌನ್ ಸಮಸ್ಯೆ ಎದುರಿಸಿತ್ತು. ಸರಿಸುಮಾರು ಒಂದೂರೆ ಗಂಟೆಗಳ ಕಾಲ ವ್ಯಾಟ್ಸ್ಆ್ಯಪ್ ಸೇವೆ ಸ್ಥಗಿತಗೊಂಡಿತ್ತು. ಪ್ರಮುಖವಾಗಿ ಭಾರತದಲ್ಲಿ ವ್ಯಾಟ್ಸ್ಆ್ಯಪ್ ಸಮಸ್ಯೆ ಎದುರಾಗಿತ್ತು. ಅದರಲ್ಲೂ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ವ್ಯಾಟ್ಸ್ಆ್ಯಪ್ ಸೇವೆ ಸ್ಥಗಿತಗೊಂಡಿತ್ತು. ಈ ಕುರಿತು ಹಲವು ಬಳಕೆದಾರರು ದೂರು ನೀಡಿದ್ದರು. 

click me!