ಕೈಗೆಟುಕುವ ದರದಲ್ಲಿ ಫೋನ್; ಭಾರತದಲ್ಲಿ ಪ್ಲಾನ್ ಬದಲಾಯಿಸಿದ OnePlus!

By Suvarna NewsFirst Published Jul 6, 2020, 6:43 PM IST
Highlights

ಒನ್‌ಪ್ಲಸ್ ಭಾರತದಲ್ಲಿ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ. ಕೊಂಚ ದುಬಾರಿಯಾಗಿದ್ದ ಒನ್‌ಪ್ಲಸ್ ಇದೀಗ ಕೈಗೆಟುಕುವ ದರದಲ್ಲಿ ಫೋನ್ ಬಿಡುಗಡೆ ಮಾಡುತ್ತಿದೆ. ಒನ್‌ಪ್ಲಸ್ ನಾರ್ಡ್ ಫೋನ್ ಕೆಲ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ನೂತನ ಫೋನ್ ಬೆಲೆ ಹಾಗೂ ಭಾರತದಲ್ಲಿ ಕಡಿಮೆ ಬೆಲೆ ಫೋನ್ ಲಾಂಚ್ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ.

ನವದೆಹಲಿ(ಜು.06): OnePlus ಭಾರತದಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಒನ್‌ಪ್ಲಸ್ ನಾರ್ಡ್ ಹೆಸರಿನ ಈ ಫೋನ್ ಹಲವು ವಿಶೇಷತೆಗಳನ್ನೂ ಒಳಗೊಂಡಿದೆ. ಐಫೋನ್ SEಗೆ ಪ್ರತಿಸ್ಪರ್ಧಿಯಾಗಿ ಒನ್‌ಪ್ಲಸ್ ನಾರ್ಡ್ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿರುವ ಒನ್‌ಪ್ಲಸ್ ಇದೀಗ ಭಾರತೀಯರ ಬೇಡಿಕೆಗೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಫೋನ್ ಬಿಡುಗಡೆ ಮಾಡಿದೆ.

ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!

OnePlus ನಾರ್ಡ್ ಬೆಲೆ 24,990 ರೂಪಾಯಿ. ಈ ಮೂಲಕ ತನ್ನ ಎಂಟ್ರಿ ಲೆವೆಲ್ ಮಾಡೆಲ್ ಫೋನ್ ಬೆಲೆ ಇದೀಗ 20,000 ರೂಪಾಯಿ ಇಳಿಕೆಯಾಗಿದೆ. ಇಷ್ಟೇ ಅಲ್ಲ ಇದು ವಿಶ್ವದ ಅತ್ಯಂತ ಕಡಿಮೆ ಬೆಲೆ 5G ಫೋನ್ ಆಗಿದೆ. ಜೊತೆಗೆ ಸ್ನಾಪ್‌ಡ್ರಾಗನ್ 765G ಚಿಪ್‌ಸೆಟ್, 90Hz AMOLED ಪ್ಯಾನೆಲ್ ಹಾಗೂ ಡ್ಯುಯೆಲ್ ಸೆಲ್ಫಿ ಕ್ಯಾಮರ ಹೊಂದಿದೆ.

59 ಚೀನಾ ಆ್ಯಪ್‌ ಜೊತೆ Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲಕ್ಕೆ ಇಲ್ಲಿದೆ ಉತ್ತರ!

ಒನ್ ಪ್ಲಸ್ ಫೋನ್‌ಗಳ ಬೆಲೆ 35,000 ದಿಂದ 40,000 ರೂಪಾಯಿಯಿಂದ ಆರಂಭಗೊಳ್ಳುತಿತ್ತು. ಆದರೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಈ ಬೆಲೆಯಲ್ಲಿ ಸಾಧ್ಯವಿಲ್ಲ. ಒನ್‌ಫ್ಲಸ್ ಆದಾಯದಲ್ಲಿ 3ನೇ ಒಂದು ಭಾಗ ಬರುತ್ತಿರುವುದು ಭಾರತದಿಂದ. ಹೀಗಾಗಿ ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಇದೀಗ ಕಡಿಮೆ ಬೆಲೆಯ ಫೋನ್ ಬಿಡುಗಡೆ ಮಾಡುತ್ತಿದೆ.

ಐಫೋನ್ SE ಫೋನ್ ಫೀಚರ್ಸ್ ಹಾಗೂ ಅತ್ಯಾಧುನಿಕ ಸ್ನಾಪ್‌ಡ್ರಾಗನ್ 765G ಚಿಪ್‌ಸೆಟ್ ಮೂಲಕ ಒನ್‌ಪ್ಲಸ್ ಭಾರತದಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ. ಬೆಲೆ ಕೂಡ ಕಡಿಮೆ ಇರುವುದರಿಂದ ಒನ್‌ಪ್ಲಸ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು ಮುಂದಾಗಿದೆ.

click me!