Zoomಗೆ ಹೊಡೆತ ನೀಡಿದ ಮುಖೇಶ್ ಅಂಬಾನಿ; Jiomeet ಲಾಂಚ್!

Suvarna News   | Asianet News
Published : Jul 03, 2020, 10:53 PM IST
Zoomಗೆ ಹೊಡೆತ ನೀಡಿದ ಮುಖೇಶ್ ಅಂಬಾನಿ;  Jiomeet ಲಾಂಚ್!

ಸಾರಾಂಶ

ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಕಚೇರಿ ಕೆಲಸಗಳು ಸೇರಿದಂತೆ ಬಹುತೇಕರ ಎಲ್ಲಾ ಚಟುವಟಿಕೆಗಳು ಮನೆಯಿಂದಲೇ ನಡೆಯುತ್ತಿದೆ. ಹೀಗಾಗಿ ಕಚೇರಿಯ ಮೀಟಿಂಗ್, ಸ್ನೇಹಿತರ ಚಾಟಿಂಗ್ ಎಲ್ಲವನ್ನೂ Zoom ವಿಡಿಯೋ ಮೀಟಿಂಗ್ ಮೂಲಕವೇ ನಡೆಯುತ್ತಿದೆ. ಇದೀಗ ಇದಕ್ಕೆ ಪ್ರತಿಯಾಗಿ ಮುಖೇಶ್ ಅಂಬಾನಿ ಜಿಯೋ ಮೀಟ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಎಲ್ಲವೂ ಫೀ...ಫ್ರೀ..

ಮುಂಬೈ(ಜು.03): ವರ್ಕ್ ಫ್ರಮ್ ಹೋಮ್, ಗೆಳೆಯರ ಮಾತುಕತೆ ಸೇರಿದಂತೆ ಕೊರೋನಾ ವೈರಸ್ ಸಂದರ್ಭದಲ್ಲಿ ಬಹುತೇಕರು Zoom ವಿಡಿಯೋ ಮೀಟಿಂಗ್ ಆ್ಯಪ್  ಮೊರೆ ಹೋಗಿದ್ದಾರೆ. ಆದರೆ ಸರ್ಕಾರ ಝೂಮ್ ಬಳಸದಂತೆ ಸೂಚಿಸಿತ್ತು. ಝೂಮ್ ಮೂಲ ಅಮೆರಿಕವಾಗಿದ್ದರೂ, ಚೀನಾದ ಬಹುತೇಕರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಝೂಮ್ ಅಬ್ಬರ ಹೆಚ್ಚಾಗುತ್ತಿದ್ದಂತೆ ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಆಂದೋಲನಗಳು ನಡೆಯತೊಡಗಿದೆ. ಇದರ ನಡುವೆ ಇದೀಗ ಭಾರತಲ್ಲಿ ಜಿಯೋ ಮೂಲಕ ಟಿಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಮುಖೇಶ್ ಅಂಬಾನಿ ಜೂಮ್‌ಗೆ ಪ್ರತಿಸ್ಪರ್ಧಿಯಾಗಿ ಜಿಯೋ ಮೀಟ್ ಲಾಂಚ್ ಮಾಡಿದ್ದಾರೆ.

4.5 ಲಕ್ಷ ಕೋಟಿ ಆಸ್ತಿ: ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ!.

ಜೂಮ್‌ಗೆ ಪ್ರತಿಸ್ಪರ್ಧಿಯಾಗಿರುವ Jiomeet ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ವಿಡಿಯೋ ಮೀಟಿಂಗ್ ಸೇವೆಗಿಂತ ಉತ್ತಮವಾಗಿದೆ. ಜೂಮ್, ಗೂಗಲ್ ಮೀಟ್ ಸೇರಿದಂತೆ ಕೆಲ ವಿಡಿಯೋ ಕಾಲ್ ಮೀಟಿಂಗ್ ಸೇವೆಯನ್ನು ತಡೆರಹಿತವಾಗಿ ಬಳಸಲು ಪಾವತಿಸಬೇಕು. ಇಲ್ಲವಾದಲ್ಲಿ 40 ನಿಮಿಷ ಪೂರ್ಣಗೊಳ್ಳುತ್ತಿದ್ದಂತೆ ಝೂಮ್ ಸೇವೆ ಕಡಿತಗೊಳ್ಳಲಿದೆ. ಆದರೆ ಜಿಯೋಮೀಟ್ ಸತತ 24 ಗಂಟೆ ಉಚಿತವಾಗಿ ಹಾಗೂ ನಿರಂತರವಾಗಿ ಸೇವೆ ನೀಡಲಿದೆ. ಇಷ್ಟೇ ಅಲ್ಲ ಯಾವುದೇ ಪಾವತಿ ಇಲ್ಲ.

ಲಾಕ್‌ಡೌನ್‌ನ 58 ದಿನದಲ್ಲಿ 1.68 ಲಕ್ಷ ಕೋಟಿ ರೂ ಸಂಗ್ರಹಿಸಿ ದಾಖಲೆ ಬರೆದ ರಿಲಾಯನ್ಸ್!.

ಏಕ ಕಾಲದಲ್ಲಿ 100 ಮಂದಿ Jiomeetನಲ್ಲಿ ಪಾಲ್ಗೊಳ್ಳಬಹುದು. ನೂತನವಾಗಿ ಲಾಂಚ್ ಮಾಡಿರುವ ಎಲ್ಲವೂ ಉಚಿತವಾಗಿದೆ. ಗ್ರಾಹಕರ ಸುರಕ್ಷತೆ, ಮಾಹಿತಿ ಎಲ್ಲವೂ ಭದ್ರ.  ಪ್ರತಿ ಕಾಲ್‌ಗೂ ಪಾಸ್‌ವರ್ಡ್ ಸೇರಿದಂತೆ ಹಲವು ಸುರಕ್ಷತಾ ವಿಧಾನ ನಮೂದಿಸಬೇಕು. ಸದ್ಯ ಭಾರತದಲ್ಲಿ 35 ಮಿಲಿಯನ್ ಸಕ್ರಿಯ ಜಿಯೋ ಬಳಕೆದಾರಿದ್ದಾರೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?