ಬೆಂಗಳೂರು(ನ.09): ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲು ಮತ್ತು ರಾಜ್ಯದಲ್ಲಿ ಡಿಜಿಟಲ್ ಅಸ್ತಿತ್ವವನ್ನು ಬಲಪಡಿಸಲು, ಭಾರತೀಯ ಜನತಾ ಪಕ್ಷದ (BJP) ಇತರ ಎಲ್ಲಾ ಪಕ್ಷಗಳಿಗಿಂತ ಮುಂದಿದೆ. ಸಾಮಾಜಿಕ ಜಾಲತಾಣದ(Social Media) ಮೂಲಕ ಹೊಸ ಕ್ರಾಂತಿ ಮಾಡಿರುವ ಬಿಜೆಪಿ ಇದೀಗ ಮೈಕ್ರೋ ಬ್ಲಾಗಿಂಗ್ ಪ್ಲಾಫಾರ್ಮ್ ಕೂನಲ್ಲೂ(Koo App) ಸಕ್ರಿಯವಾಗಿದೆ. ಇದೀಗ ಕರ್ನಾಟಕ ಬಿಜೆಪಿ ಕನ್ನಡಿಗರ(Karnataka) ಜೊತೆ ಕನ್ನಡದಲ್ಲೇ(Kannada) ಸಂವಾದ ನಡೆಸಲು ಕೂನಲ್ಲಿ ತನ್ನ ಖಾತೆ ತೆರಿದಿದೆ.
@BJP4Karnataka ಹ್ಯಾಂಡಲ್ ಮೂಲಕ BJP ಪಕ್ಷ ಹೊಸ ಖಾತೆ ತೆರಿದಿದೆ. ಈಗಾಗಲೇ ಸಾಕಷ್ಟು ವಿಚಾರಗಳನ್ನು ಬಿಜೆಪಿ ಕರ್ನಾಟಕ ವೇದಿಕೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಪ್ರಮುಖ ಕೂಗಳೆಂದರೆ “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನ ಅತ್ಯಂತ ನೆಚ್ಚಿನ ಜನನಾಯಕನಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಜಗತ್ತಿನಾದ್ಯಂತದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ದಿಗ್ಗಜ ನಾಯಕರ ಪೈಕಿ ಪ್ರಧಾನಿ ಮೋದಿ ಉನ್ನತ ಸ್ಥಾನದಲ್ಲಿದ್ದಾರೆ’ ಎಂದು ಬಿಜೆಪಿ ಕರ್ನಾಟಕ ಕೂ ಮಾಡಿದೆ.
undefined
ಕೂ ಆ್ಯಪ್ ಸೇರಿದ 15 ದಿನಗಳಲ್ಲೇ 1 ಲಕ್ಷ ಫಾಲೋವರ್ಸ್ ಪಡೆದ ಸೆಹ್ವಾಗ್ !
ದೀಪಾವಳಿ(Diwali Fesitival) ಹಬ್ಬಕ್ಕೆ ಕರ್ನಾಟಕ ಬಿಜೆಪಿ ಕೂಆ್ಯಪ್ ಮೂಲಕ ಮೊದಲ ಕೂ ಮಾಡಿದೆ. ದೀಪಾವಳಿಗೆ ಶುಭಕೋರುತ್ತಾ ಬಿಜೆಪಿ ಕೂ ಆರಂಭಿಸಿದೆ. ನಾಲ್ಕೇ ದಿನಕ್ಕೆ 7 ಸಾವಿಕ್ಕೂ ಅಧಿಕ ಹಿಂಬಾಲಕರನ್ನು ಪಡೆದು ಮುನ್ನುಗ್ಗುತ್ತಿದೆ.
'ಬಿಜೆಪಿ ಕರ್ನಾಟಕ ನಮ್ಮ ಬಹುಭಾಷಾ ವೇದಿಕೆಗೆ ಬಂದಿರುವುದು ಸಂತೋಷಕರ. ಇದು ಸ್ಥಳೀಯ ಭಾರತೀಯ ಭಾಷೆಗಳಾದ್ಯಂತ ಅಭಿವ್ಯಕ್ತಿಯನ್ನು ಶಕ್ತಗೊಳಿಸುತ್ತದೆ. ಕರ್ನಾಟಕದ ಜನರು ಈಗ ತಮ್ಮ ನೆಚ್ಚಿನ ಪಕ್ಷದೊಂದಿಗೆ ನೇರವಾಗಿ ಚರ್ಚಿಸಬಹುದಾಗಿದೆ ಮತ್ತು ಪಕ್ಷದ ಕುರಿತ ಎಲ್ಲ ಮಾಹಿತಿಯನ್ನು ಅವರ ಮಾತೃಭಾಷೆಯಲ್ಲೇ ತಿಳಿದುಕೊಳ್ಳಬಹುದಾಗಿದೆ' ಎಂದು ಕೂ ವಕ್ತಾರರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ಮುಕ್ತ ಹಾಗೂ ನೇರ ಸಂವಾದದಲ್ಲಿ ಪಾಲ್ಗೊಳ್ಳುತ್ತಿರುವ ಬಿಜೆಪಿ ಲಭ್ಯವಿರುವ ಎಲ್ಲಾ ವೇದಿಕೆಗಳನ್ನು ಬಲಸಿಕೊಳ್ಳುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡಿತ್ತು. ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಮೂಲಕ ದೇಶದ ಚಿತ್ರಣನ್ನೇ ಬದಲಿಸಿದೆ. ಇದರಿಂದ ದೇಶದಲ್ಲಿ ಡಿಜಿಟಲ್ ಕ್ರಾಂತಿ ಆಗಿದೆ.
ಕಂಗನಾ ರಣಾವತ್ ಹಾದಿ ಹಿಡಿದ ಅನುಷ್ಕಾ ಶೆಟ್ಟಿ; 'Koo'ನಲ್ಲಿ ಕಾರುಬಾರು ಶುರು!
ದೇಸಿ ಆ್ಯಪ್ ಕೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಕ್ರೀಡಾತಾರೆಯರು , ಸಿನಿಮಾ ತಾರೆಯರು ಮತ್ತು ಕ್ಷೇತ್ರಗಳಾದ್ಯಂತದ ವ್ಯಕ್ತಿಗಳ ಜೊತೆಗೆ, ಕರ್ನಾಟಕದ ರಾಜಕೀಯ ನಾಯಕರು ಕನ್ನಡದಲ್ಲಿ 'ಕೂ' ಮಾಡುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) , ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(BS Yediyurappa) ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ(HD Devegowda), ಕರ್ನಾಟಕ ಕಾಂಗ್ರೆಸ್(Karnataka Congress), ಮತ್ತು ಜನತಾ ದಳ(JDS), ಸೇರಿದಂತೆ ಈಗಾಗಲೇ ಕರ್ನಾಟಕದ ಅನೇಕ ಗಣ್ಯರು ಕೂ ಆ್ಯಪ್ ಪ್ರವೇಶಿಸಿದ್ದಾರೆ.
ಕೂ ಆ್ಯಪ್ ಕುರಿತು:
ಮಾರ್ಚ್ 2020ರಲ್ಲಿ 'ಕೂ' ಸ್ಥಾಪನೆಯಾಯಿತು. ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ, ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹಲವಾರು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಬಹುದು. ಭಾರತದಂತಹ ಕೇವಲ 10% ಇಂಗ್ಲಿಷ್ ಮಾತನಾಡುವ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಮ್ಮ ಸ್ವಂತ ಭಾಷೆಯ ಅನುಭವಗಳನ್ನು ನೀಡಲು ಮತ್ತು ಜನರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.