Deepavali Gift: ಈ 7 ಗ್ಯಾಜೆಟ್ ಕೊಡಬಹುದು, ಜೇಬಿಗೂ ಹೊರೆಯಿಲ್ಲ!

By Suvarna News  |  First Published Nov 4, 2021, 4:42 PM IST

ಕುಟುಂಬಸ್ಥರು, ಸ್ನೇಹಿತರು ಮತ್ತು ಪ್ರೀತಿ ಪಾತ್ರರಿಗೆ ಹಬ್ಬಗಳ ಸಂದರ್ಭದಲ್ಲಿ ಕಾಣಿಕೆ ನೀಡುವುದು ಸಾಮಾನ್ಯ. ಅದರಲ್ಲಿ ದೀಪಾವಳಿ ಬಂದಾಗಲ್ಲಂತೂ ಏನಾದರೂ ಉಡುಗೋರೆ ಕೊಟ್ಟೇ ಕೊಡುತ್ತಾರೆ. ಈ ಬಾರಿ ನೀವು 2000 ರೂ. ಒಳಗೆ ಇರುವ ಹಲವು ಗ್ಯಾಜೆಟ್‌ಗಳನ್ನು ಉಡುಗೋರೆಯಾಗಿ ಕೊಡಬಹುದು. 


ದೀಪಾವಳಿ ಹಬ್ಬ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ದೀಪಾವಳಿ ಹಬ್ಬಕ್ಕೆ ಪ್ರೀತಿ ಪಾತ್ರರಿಗೆ ಏನಾದರೂ ಕಾಣಿಕೆಯನ್ನು ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಾನಾ ತರಹದ ಉಡುಗೋರೆಗಳನ್ನು ನೀಡುವ ಪರಿಪಾಠವಿದೆ. ಈ ಬಾರಿ ನೀವೇನಾದರೂ ಗ್ಯಾಜೆಟ್‌ಗಳನ್ನು ಕಾಣಿಕೆಯಾಗಿ ನೀಡಲು ಯೋಜಿಸಿದ್ದರೆ ನಾವು ಇಲ್ಲಿ ನೀಡುವ ನೀಡುವ ಮಾಹಿತಿ ನಿಮಗೆ ನೆರವು ಒದಗಿಸಬಹುದು. ಇಲ್ಲಿ ನೀಡಲಾಗಿರುವ ಮಾಹಿತಿಯು ದೀಪಾವಳಿ ಉಡುಗೊರೆ ಕಲ್ಪನೆಗಳ ಈ ಪಟ್ಟಿಯು ಗ್ಯಾಜೆಟ್‌ಗಳನ್ನು ಒಳಗೊಂಡಿದೆ, ಅದು ತುಂಬಾ ಉಪಯುಕ್ತ ಮತ್ತು ಕೈಗೆಟುಕುವ ದರದಲ್ಲೇ ಖರೀದಿಸಬಹುದಾಗಿದೆ. ಅಂದರೆ, 2000 ರೂಪಾಯಿ  ಬೆಲೆ ವಿಭಾಗದ ಅಡಿಯಲ್ಲಿ ಖರೀದಿಸಬಹುದು. ಇದರಿಂದ ನಿಮ್ಮ ಜೇಬಿಗೂ ಹೊರೆ ಬೀಳುವುದಿಲ್ಲ ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ನಿಮ್ಮ ಈ ಆಶ್ಚರ್ಯಕರ ಗೀಫ್ಟ್‌ಗಳ ಮೂಲಕ ಸಂತೋಷ ಪಡಿಸಬಹುದು.

ಸ್ಪೀಕರ್ (Speaker)
ಸಂಗೀತವನ್ನು ಇಷ್ಟು ಪಡುವ ನಿಮ್ಮ ಪ್ರೀತಿ ಪಾತ್ರರಿಗೆ ಇದು ಪರಿಪೂರ್ಣ ಕೊಡುಗೆಯಾಗಿದೆ. Amazon, Flipkart, Myntra ಇತ್ಯಾದಿಗಳಲ್ಲಿ, ಸ್ಪೀಕರ್‌ಗಳ ಮೇಲೆ ಅನೇಕ ರಿಯಾಯಿತಿಗಳು 2000 ರೂ. ಕ್ಕಿಂತ ಕಡಿಮೆಯೇ ಇದೆ. Realme ನ ಕೋಬಲ್ ಸ್ಪೀಕರ್ ವಿಶೇ,ವಾಗಿದೆ ಮತ್ತು ಇದು 1,399 ರೂ.ನಲ್ಲಿ ಸಿಗಲಿದೆ. ಅದೇ ರೀತಿ, JBL ನ Go PLus ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳು 1,599 ರೂ. ಮತ್ತು ಹೆಚ್ಚಿನ ಬೆಲೆಗೆ ಲಭ್ಯವಿದೆ. ಶಾಪಿಂಗ್ ಸೈಟ್‌ಗಳನ್ನು ಪರಿಶೀಲಿಸಿ.

Tap to resize

Latest Videos

undefined

ಬ್ಯಾಕ್‌ಪ್ಯಾಕ್ (Backpack)
ಬ್ಯಾಕ್‌ಪ್ಯಾಕ್‌ಗಳನ್ನೂ ನೀಡಬಹುದು. 1500 ರೂ.ಗೆಲ್ಲ ನೀವು ಸೊಗಸಾದ ರೇನ್ ಪ್ರೂಫ್ ಬ್ಯಾಕ್‌ಪ್ಯಾಕ್ ನೀಡಬಹುದು. ವಿಶೇಷವಾಗಿ ಶಿಯೋಮಿಯ ಎಂಐ ಬ್ರ್ಯಾಂಡಿನಲ್ಲಿ ನಿಮಗೆ 799 ರೂ.ವರೆಗೆ ಸಿಗಲಿದೆ. ಬೇರೆ ಬೇರೆ ಕಂಪನಿಗಳು ಬ್ಯಾಕ್‌ಪ್ಯಾಕ್‌ಗಳನ್ನು ಪರಿಗಣಿಸಬಹುದು.

ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ (Wireless keyboard and Wireless keyboard and mouse)
ನಮ್ಮಲ್ಲಿ ಹಲವರು ಇನ್ನೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಲಾಜಿಟೆಕ್‌ನ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ ಅತ್ಯುತ್ತಮ ಉಡುಗೊರೆ ಆಯ್ಕೆಯಾಗಿದೆ. ಈಗ Amazon ತಾಣಧಲ್ಲೂ ಈ ಬಗ್ಗೆ ಪರಿಶೀಲಿಸಬಹುದು.

ದೀಪಾವಳಿಗೆ Jiophone Next ಲಾಂಚ್, ಊಹೆಗೆ ನಿಲುಕದ ಬೆಲೆ ಸ್ಮಾರ್ಟ್‌ಫೋನ್?

ಎಲ್ಇಡಿ ದೀಪ (LED light)
ನಿಮ್ಮ ಅಧ್ಯಯನ ಕೊಠಡಿಯನ್ನು ಪ್ರಕಾಶಮಾನವಾಗಿ ಮತ್ತು ವರ್ಣಮಯವಾಗಿಸುವ ಅನೇಕ LED ದೀಪಗಳನ್ನು ನೀವು ಆನ್‌ಲೈನ್‌ನಲ್ಲಿ ಪಡೆಯಬಹುದು. 1500 ಮತ್ತು 2000 ರ ವ್ಯಾಪ್ತಿಯಲ್ಲಿ ಇದು ಅತ್ಯುತ್ತಮ ದೀಪಾವಳಿ ಉಡುಗೊರೆ ಆಯ್ಕೆಗಳಲ್ಲಿ ಒಂದಾಗಿದೆ. Xiaomi ಯ Mi ಬ್ರ್ಯಾಂಡ್‌ನ LED ಲ್ಯಾಂಪ್ ರಾತ್ರಿಯಲ್ಲಿ ಓದಲು ಉತ್ತಮವಾಗಿದೆ.

ಪವರ್ ಬ್ಯಾಂಕ್ (Power Bank)
Xiaomi, Redmi, Ambrane, Realme ಮತ್ತು ಇತರರಿಂದ ನೀವು ಪವರ್ ಬ್ಯಾಂಕ್‌ಗಳ ಬೆಲೆ ಶ್ರೇಣಿಯನ್ನು 1000 ರಿಂದ 2000 ರೂ.ವರೆಗೆ ಖರೀದಿಸಬಹುದು. ಕೆಲವು ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಕೆಲವು ಉತ್ತಮ ಕೊಡುಗೆಗಳನ್ನು ಪರಿಶೀಲಿಸಬಹುದಾಗಿದೆ.
 

ಉಡುಗೊರೆ ಕಾರ್ಡ್‌ಗಳು (Gift Cards)
ಗ್ಯಾಜೆಟ್‌ಗಳ ಪೈಕಿ ಯಾವುದನ್ನು ನೀವು ಉಡುಗೋರೆ ನೀಡಲು ಗೊತ್ತಾಗದಿದ್ದರೆ ಕಾಮರ್ಸ್ ತಾಣಗಳಲ್ಲಿ ದೊರೆಯುವ ಉಡುಗೋರೆ ಕಾರ್ಡ್‌ಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀಡಬಹುದು. ಎರಡೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಉಡುಗೊರೆ ಕಾರ್ಡ್‌ಗಳನ್ನು ಖರೀದಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. 

ನ.1ರಿಂದ ಈ ಫೋನಲ್ಲಿ What's App ಇರೋಲ್ಲ, ಲಿಸ್ಟಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ?

ಇಯರ್‌ಫೋನ್‌ಗಳು (Earphones)
ವೈರ್ ಸಹಿತ ಇಯರ್‌ಫೋನ್‌ಗಳ ಸೆಟ್ ಅತ್ಯುತ್ತಮ ಉಡುಗೊರೆ ಗ್ಯಾಜೆಟ್ ಆಗಿಬಹುದು.  ನೀವು ಬೋಟ್‌ನ BassHeads 220 ಇಯರ್‌ಫೋನ್‌ಗಳನ್ನು ಗಿಫ್ಟ್ ಆಗಿ ಕೊಡಬಹುದು.  ಇದು ಫ್ಲಿಪ್‌ಕಾರ್ಟ್‌ನಲ್ಲಿ ರೂ 499 ಕ್ಕೆ ಲಭ್ಯವಿದೆ. ಇಯರ್‌ಫೋನ್‌ಗಳು ಕೆಂಪು, ಬಿಳಿ, ಹಸಿರು, ಕಪ್ಪು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. 

ರಿಬ್ರ್ಯಾಂಡಿಂಗ್ ಕಸರತ್ತು, ಫೇಸ್‌ಬುಕ್ ಹೆಸರು ಮೆಟಾ- Meta!

click me!