Tech Ind FY22 ಕೊರೋನಾ ಹೊಡೆತ ನಡುವೆ ಭಾರತದ ಐಟಿ ಆದಾಯ 227 ಶತಕೋಟಿ ಡಾಲರ್‌ಗೆ ಹೆಚ್ಚಳ!

By Suvarna News  |  First Published Feb 15, 2022, 4:18 PM IST
  • 2022 ಆರ್ಥಿಕ ವರ್ಷದಲ್ಲಿ ಐಟಿ ಆದಾಯದಲ್ಲಿ ಗಣನೀಯ ಪ್ರಗತಿ
  • ಶೇಕಡಾ 15.5 ರಷ್ಟು ಬೆಳವಣಿ ದಾಖಲಿಸಲಿದೆ ಎಂದು ನಾಸ್ಕಾಮ್
  • FY'22 ರಲ್ಲಿ USD 227 ಶತಕೋಟಿ ಡಾಲರ್ ಉದ್ಯಮ

ನವದೆಹಲಿ(ಫೆ.15); ಕೊರೋನಾ ವೈರಸ್, ಲಾಕ್‌ಡೌನ್, ನಿರ್ಬಂಧ, ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಇಂಧನ ದರ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಬಹುತೇಕಾ ಎಲ್ಲಾ ಕ್ಷೇತ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ ಸಮಸ್ಯೆಗಳ ನಡುವೆ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ(India’s information technology sector) ಆರ್ಥಿಕ ವರ್ಷ 2022ರಲ್ಲಿ ಬರೋಬ್ಬರಿ 227 ಬಿಲಿಯನ್ ಅಮೆರಿಕನ್ ಡಾಲರ್ ಉದ್ಯಮವಾಗಿ ಬೆಳೆಯಲಿದೆ ಎಂದು ನಾಸ್ಕಮ್(Nasscom) ಹೇಳಿದೆ.

2022ರ ಆರ್ಥಿಕ ವರ್ಷದಲ್ಲಿ ಭಾರತದ ಐಟಿ ಆದಾಯ(IT revenues) ಶೇಕಡಾ 15.5 ರಷ್ಟು ಬೆಳವಣಿಗೆ(IT growth) ದಾಖಲಿಸಲಿದೆ ಅನ್ನೋದು ಅಂಕಿ ಅಂಶಗಳು ಖಚಿತಪಡಿಸಿದೆ. ಶೇಕಡಾ 15 ರಷ್ಟು ಪ್ರಗತಿ ಕಳೆದ ದಶಕದಲ್ಲಿ ಕಂಡ ಅತ್ಯುತ್ತಮ ಬೆಳವಣಿಗೆಯಾಗಿದೆ. ಕೊರೋನಾ(Coronavirus) ಸಮಯದಲ್ಲಿ ಈ ಪ್ರಗತಿ ಸಾಧಿಸಿರುವುದು ಐಟಿ ಕ್ಷೇತ್ರದಲ್ಲಿ ಪುನರುತ್ಥಾನದ ವರ್ಷ ಎಂದು ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್ ಹೇಳಿದ್ದಾರೆ.

Tap to resize

Latest Videos

undefined

IT ಕ್ಷೇತ್ರದಲ್ಲಿ ಹೆಚ್ಚಿದ ಬೇಡಿಕೆ, ಉದ್ಯೋಗ ನೇಮಕಾತಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ!

2021ರ ಆರ್ಥಿಕ ವರ್ಷದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಆದಾಯ 194 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. 2020ಕ್ಕೆ ಹೋಲಿಸಿದರೆ ಶೇಕಡಾ 2.3 ರಷ್ಟು ಪ್ರಗತಿ ಸಾಧಿಸಿತ್ತು. ಹೊಸ ಆರ್ಥಿಕ ವರ್ಷದಲ್ಲಿ ಐಟಿ ಕ್ಷೇತ್ರ 4.5 ಲಕ್ಷ ಹೊಸ ಉದ್ಯೋಗ ಸೃಷ್ಟಿಸಿದೆ ಈ ಮೂಲಕ ಒಟ್ಟಾರೆ ನೇರ ಉದ್ಯೋಗಿಗಳ ಸಂಖ್ಯೆ 50 ಲಕ್ಷಕ್ಕೆ ಏರಿಕೆಯಾಗಿದೆ. ಐಟಿ ಕ್ಷೇತ್ರ ಹೊಸದಾಗಿ ನೇಮಕಗೊಳಿಸಿರುವ ಉದ್ಯೋಗಿಗಳ ಪೈಕಿ ಶೇಕಡಾ 44 ರಷ್ಟು ಮಹಿಳೆಯರಾಗಿದ್ದಾರೆ. 

ಐಟಿ ಆದಾಯ ಪ್ರಗತಿಯಲ್ಲಿ ರಫ್ತು ಆದಾಯದ ಬೆಳವಣಿಗೆ ಶೇಕಡಾ 17.2 ರಷ್ಟು ಏರಿಕೆಯಾಗಿದೆ. ಭಾರತದ ಐಟಿ ರಫ್ತು ಆದಾಯ 178 ಶತಕೋಟಿ ಅಮೆರಿಕ ಡಾಲರ್‌ಗೆ ಏರಿಕೆಯಾಗಿದೆ. ಇನ್ನು ದೇಶಿಯ ಆದಾಯದ ಪ್ರಗತಿ ಶೇಕಡಾ 10 ರಷ್ಟು ದಾಖಲಾಗಿದೆ. ದೇಶಿಯ ಆದಾಯ 49 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ಕೊರೋನಾ ಆರ್ಭಟ ಮಧ್ಯೆಯೂ ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್, ಡಬಲ್ ಹೈಕ್!

ಭಾರತದ ಐಟಿ ಆದಾಯಗಳ ಪ್ರಗತಿಯಲ್ಲಿ ಡಿಜಿಟಲ್ ಪಾಲು ಗಣನೀಯ ಏರಿಕೆ ಕಾಣುತ್ತಿದೆ. ಹೊಸ ಯುಗದ ಸೇವೆ ಎಂದು ಕರೆಯಿಸಿಕೊಳ್ಳುತ್ತಿರುವ ಡಿಜಿಟಲ್ ಸರ್ವೀಸ್ ಪಾಲು ಶೇಕಡಾ 25 ರಷ್ಟು ಏರಿಕೆಯಾಗಿದೆ. ಈ ಮೂಲಕ 13 ಶತಕೋಟಿ ಅಮೆರಿಕ ಡಾಲರ್ ಆದಾಯ ಹರಿದುಬಂದಿದೆ ಎಂದು ದೇಬ್ಜಾನಿ ಘೋಷ್ ಹೇಳಿದ್ದಾರೆ.

 

Tech Ind FY22 - Resilience to Resurgence:
1. $227B Rev - $30B added in the year! 15.5% YoY growth - highest since FY2011
2. $178 Bn exports - 51% share of services exports
3. Largest pvt sector employer of women - 1.8M
4. 9% relative share of India's GDP (including ecommerce) pic.twitter.com/GmNB8ij3x9

— debjani ghosh (@debjani_ghosh_)

2022ರ ಆರ್ಥಿಕ ವರ್ಷ ಐಟಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲಿದೆ. ಕೊರೋನಾ ಸೇರಿದಂತೆ ಹಲವು ಅಡೆತಡೆಗಳ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಐಟಿ ಕ್ಷೇತ್ರ ಯಶಸ್ವಿಯಾಗಿದೆ. ಕೊರೋನಾ ನಡುವೆ ಹೊಸ ಮಾದರಿ ಮೂಲಕ ಐಟಿ ತನ್ನ ಸೇವೆ ನೀಡುತ್ತಿದೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತಿದೆ. ಐಟಿ ರಫ್ತುವಿನಲ್ಲಿ ಗಣನೀಯ ಪ್ರಗತಿ ಹೊಸದಿಕ್ಕಿನತ್ತ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ದೇಬ್ಜಾನಿ ಘೋಷ್ ಹೇಳಿದ್ದಾರೆ

2022ರ ಆರ್ಥಿಕ ವರ್ಷದ ಸಮೀಕ್ಷೆಯಲ್ಲಿ ಐಟಿ ಕ್ಷೇತ್ರದ ಆದಾಯ ಪ್ರಗತಿ ಖಚಿತ. ಕಳೆದ ವರ್ಷಕ್ಕಿಂತ ಗಣನೀಯ ಸಾಧನೆ ಭಾರತ ಮಾಡಲಿದೆ ಎಂದು ಸಮೀಕ್ಷೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ 2026ರ ವೇಳೆಗೆ ಐಟಿ ಆದಾಯ 350 ಬಿಲಿಯನ್ ಅಮೆರಿಕನ್ ಡಾಲರ್ ತಲುಪಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ದೇಬ್ಜಾನಿ ಘೋಷ್ ಹೇಳಿದ್ದಾರೆ. ಈ ಮೂಲಕ ಸುಸ್ಥಿರ ಹಾಗೂ ಅಭಿವೃದ್ಧಿಯ ಭಾರತ ನಿರ್ಮಾಣವಾಗಲಿದೆ. ಇದೀಗ ವಿಶ್ವಕ್ಕೆ ಐಟಿ ರಫ್ತು ಮಾಡುತ್ತಿರುವ ಭಾರತ ಅಗ್ರಸ್ಥಾನದತ್ತ ದಾಪುಲಾಗಲಿಡುತ್ತಿದೆ ಎಂದು ಘೋಷ್ ಹೇಳಿದ್ದಾರೆ.

click me!