Used Mobile Phone trade ಬಳಸಿದ ಮೊಬೈಲ್ ಫೋನ್ ಮಾರಾಟಕ್ಕೆ ಫ್ಲಿಪ್‌ಕಾರ್ಟ್‌ನಿಂದ ಸೆಲ್ ಬ್ಯಾಕ್ ಸೇವೆ!

By Suvarna News  |  First Published Feb 14, 2022, 6:09 PM IST
  • ಇ-ತ್ಯಾಜ್ಯ ಉತ್ಪಾದನೆ ಕಡಿವಾಣಕ್ಕೆ ಫ್ಲಿಪ್‌ಕಾರ್ಟ್ ಮಹತ್ವದ ಹೆಜ್ಜೆ
  • ಪ್ರತಿವರ್ಷ ಭಾರತದಲ್ಲಿ 125 ಮಿಲಿಯನ್‌ಗೂ ಅಧಿಕ ಬಳಕೆ ಮಾಡಿದ ಫೋನ್ ಲಭ್ಯ
  • ಮಾರುಕಟ್ಟೆ ಬರುತ್ತಿರುವುದು ಬಳಕೆ ಮಾಡಿದ 20 ಮಿಲಿಯನ್ ಫೋನ್ 

ಬೆಂಗಳೂರು(ಫೆ.14): ಭಾರತದಲ್ಲಿ ಮೊಬೈಲ್ ಫೋನ್(Mobile Phone Market) ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಇದರಿಂದ ಇ ತ್ಯಾಜ್ಯವೂ(e waste) ಹೆಚ್ಚಾಗಿದೆ. ಬಳಸಿದ ಫೋನ್‌ಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಇಲ್ಲದ ಕಾರಣ ತ್ಯಾಜ್ಯವಾಗಿ ಹಾಗೇ ಉಳಿದುಬಿಡುತ್ತಿದೆ ಇದಕ್ಕೆ ಪರಿಹಾರ ಸೂಚಿಸಲು ಇದೀಗ ಫ್ಲಿಪ್‌ಕಾರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಫ್ಲಿಪ್‌ಕಾರ್ಟ್(Flipkart) ಗ್ರಾಹಕರಿಂದ ಬಳಸಿದ ಮೊಬೈಲ್ ಫೋನ್ ಗಳನ್ನು ಖರೀದಿಸುವ `ಸೆಲ್ ಬ್ಯಾಕ್ ಪ್ರೋಗ್ರಾಂ ಆರಂಭಿಸಿದೆ. 

ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ಮೂಲಕ ಗ್ರಾಹಕರು ಸೂಕ್ತ ಬೆಲೆಗೆ ತಮ್ಮ ಹಳೆಯ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಬಹುದಾಗಿದೆ. ಇದರ ಮೌಲ್ಯಕ್ಕೆ ಸಮನಾದ ಫ್ಲಿಪ್ ಕಾರ್ಟ್ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್ ಅನ್ನು ಫ್ಲಿಪ್ ಕಾರ್ಟ್ ನೀಡಲಿದೆ. ಗ್ರಾಹಕರು ಈ ಹಿಂದೆ ಮೊಬೈಲ್ ಫೋನ್ ಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದ್ದಾಗಿರಬಹುದು ಅಥವಾ ಇಲ್ಲದಿರಬಹುದು. ಎಲ್ಲಾ ಹಳೆಯ ಮೊಬೈಲ್ ಫೋನ್ ಗಳನ್ನು ಫ್ಲಿಪ್ ಕಾರ್ಟ್ ಖರೀದಿಸಲಿದೆ. ಇದೇ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚುವರಿ ವಿಭಾಗಗಳಿಗೆ ಈ ಸೇವೆಯನ್ನು ವಿಸ್ತರಣೆ ಮಾಡಲಿದೆ. ದೆಹಲಿ, ಕೊಲ್ಕತ್ತಾ ಮತ್ತು ಪಾಟ್ನಾ ಸೇರಿದಂತೆ ವಿವಿಧ ನಗರಗಳ 1,700 ಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ ಈ ಮಾರಾಟ ಸೇವೆಯನ್ನು ಪಡೆಯಬಹುದಾಗಿದೆ. ಫ್ಲಿಪ್ ಕಾರ್ಟ್ ತನ್ನ ಗ್ರಾಹಕರ ಕೊಡುಗೆಗಳನ್ನು ಹೆಚ್ಚಿಸುವ ಮತ್ತು ಮರು ಮಾರಾಟದ ವ್ಯವಹಾರವನ್ನು ಬಲಪಡಿಸುವ ಸಂದರ್ಭದಲ್ಲಿ ಗ್ರಾಹಕರಿಗೆ ಆರ್ಥಿಕತೆಯ ಕೊಡುಗೆ ನೀಡಲು ಪ್ರಯತ್ನಿಸುತ್ತದೆ.

Tap to resize

Latest Videos

undefined

ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ್‌ ಪರಿಕಲ್ಪನೆಗೆ ಕೈಜೋಡಿಸಿದ ಫ್ಲಿಪ್‌ಕಾರ್ಟ್!

ಫ್ಲಿಪ್ ಕಾರ್ಟ್ ಇತ್ತೀಚೆಗೆ ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್ ರೀ-ಕಾಮರ್ಸ್ (ಮರು ವಾಣಿಜ್ಯ) ಕಂಪನಿಯಾದ ಯಾಂತ್ರವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಸೆಲ್ ಬ್ಯಾಕ್ ಪ್ರೋಗ್ರಾಂ ಅನ್ನು ಪರಿಚಯಿಸುತ್ತಿದೆ. ಈ ಯಾಂತ್ರ ಅರ್ಥಪೂರ್ಣವಾದ ರೀತಿಯಲ್ಲಿ ಗ್ರಾಹಕರಿಗೆ ರೀ-ಕಾಮರ್ಸ್ ಕೊಡುಗೆಗಳನ್ನು ನೀಡುವ ಮೂಲಕ ಕೈಗೆಟುಕುವ ಬೆಲೆಯಲ್ಲಿ ನವೀಕರಿಸಿದ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಪ್ರವೇಶವನ್ನು ಹೊಂದುವಂತೆ ಮಾಡುವ ಕಂಪನಿಯಾಗಿದೆ.

ಇತ್ತೀಚೆಗೆ ಐಡಿಸಿ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರತಿವರ್ಷ ಭಾರತದಲ್ಲಿ 125 ಮಿಲಿಯನ್ ಗೂ ಅಧಿಕ ಬಳಕೆ ಮಾಡಿದ ಫೋನ್ ಗಳು ಲಭ್ಯವಿವೆ. ಈ ಪೈಕಿ ಕೇವಲ 20 ಮಿಲಿಯನ್ ಫೋನ್ ಗಳು ಮಾರುಕಟ್ಟೆಗೆ ಬರುತ್ತಿವೆ. ಇದು ಇ-ತ್ಯಾಜ್ಯಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಈ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಹರಿಸಬೇಕಾಗಿದೆ. ಇಂತಹ ಸವಾಲನ್ನು ಪರಿಹರಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ನ ಸೆಲ್ ಬ್ಯಾಕ್ ಪ್ರೋಗ್ರಾಂ ಮೂಲಕ ಗ್ರಾಹಕರಿಗೆ ಸುಲಭ ಮತ್ತು ಸರಳ ವಿಧಾನದೊಂದಿಗೆ ಹಳೆಯ ಡಿವೈಸ್ ಗಳನ್ನು ಮಾರಾಟ ಮಾಡಿ ಅದಕ್ಕೆ ಬದಲಾಗಿ ಫ್ಲಿಪ್ ಕಾರ್ಟ್ ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವ ಅವಕಾಶವನ್ನು ನೀಡುತ್ತಿದೆ.

Moto G51 5G: Motorolaದ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ!

ಫ್ಲಿಪ್ ಕಾರ್ಟ್ ನಲ್ಲಿ ನಮ್ಮ ಗ್ರಾಹಕರಿಗೆ ಇತ್ತೀಚಿನ ಅಪೇಕ್ಷಿತ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಟೆಕ್- ಸಕ್ರಿಯಗೊಳಿಸಲಾದ ಪರಿಹಾರಗಳನ್ನು ನೀಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಜನರು ತಮ್ಮ ಡಿವೈಸ್ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳುವುದನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಅಸಂಘಟಿತರಾಗಿರುವ ಮತ್ತು ನ್ಯಾವಿಗೇಟ್ ಮಾಡಲು ಕಷ್ಟಸಾಧ್ಯವಾಗಿರುವ ಡಿವೈಸ್ ಗಳನ್ನು ಮರು ಮಾರಾಟ ಮಾಡುವ ಮಾರುಕಟ್ಟೆಯು ಬೆಲೆಯುತ್ತಿದೆ. ಫ್ಲಿಪ್ ಕಾರ್ಟ್ ನ ಸೆಲ್ ಬ್ಯಾಕ್ ಪ್ರೋಗ್ರಾಂನೊಂದಿಗೆ ನಾವು ಈ ಮಾರುಕಟ್ಟೆಯನ್ನು ಸಂಘಟಿತವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ದಿಸೆಯಲ್ಲಿ ಹೆಚ್ಚು ಉತ್ಪಾದನೆಯಾಗುತ್ತಿರುವ ಇ-ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಸಹಕಾರಿಯಾಗಲಿದೆ. ಇದು ಸುಸ್ಥಿರ ಆರ್ಥಿಕತೆ ನಿರ್ಮಾಣಕ್ಕೆ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಫ್ಲಿಪ್ ಕಾರ್ಟ್ ಸೀನಿಯರ್ ವೈಸ್ ಪ್ರೆಸಿಡೆಂಟ್  ಪ್ರಕಾಶ್ ಸಿಕಾರಿಯಾ ಹೇಳಿದ್ದಾರೆ.

click me!