*ಏಸಿ, ವಾಷಿಂಗ್ ಮೆಶಿನ್ ತಯಾರಿಕಾ ಘಟಕ ಉದ್ಘಾಟನೆ
*ರಾಜಸ್ಥಾನದ ಗಿಲೋತ್ ಕೈಗಾರಿಕಾ ಪ್ರದೇಶ ಕಾರ್ಯಾಚರಣೆ
*ಸುಮಾರು 50 ಎಕರೆಗಳಷ್ಟುವಿಶಾಲವಾದ ಪ್ರದೇಶ
Tech Desk: ರಾಜಸ್ಥಾನದ ಗಿಲೋತ್ (Ghiloth) ಕೈಗಾರಿಕಾ ಪ್ರದೇಶದಲ್ಲಿ ಹ್ಯಾವೆಲ್ಸ್‌ನ ಲಾಯ್ಡ್ ಬ್ರಾಂಡ್‌ನ ವಾಷಿಂಗ್ ಮೆಶಿನ್ (Havells India) ಉತ್ಪಾದನಾ ಘಟಕ ಆರಂಭವಾಗಿದೆ. 4.0 ಕಾನ್ಸೆಪ್ಟ್‌ನಲ್ಲಿರುವ ಈ ಘಟಕದ ವಿಶೇಷತೆ ಅಂದರೆ ವಾಷಿಂಗ್ ಮೆಶಿನ್ ತಯಾರಿಕೆಗೆ ಬೇಕಾಗುವ ಶೇ.95ರಷ್ಟುಉತ್ಪಾದನಾ ಸಾಮಗ್ರಿಗಳು ಇದೇ ಜಾಗದಲ್ಲೇ ಸಿದ್ಧಗೊಳ್ಳುತ್ತವೆ. ಅತ್ಯಾಧುನಿಕ ಮೆಶಿನರಿಗಳ ಜೊತೆಗೆ ರೊಬೋಟಿಕ್ ತಂತ್ರಜ್ಞಾನವನ್ನೂ (Robotic Technology) ಇಲ್ಲಿ ಅಳವಡಿಸಲಾಗಿದೆ. ಇದರಿಂದ ಗುಣಮಟ್ಟದ ಉತ್ಪನ್ನ ತಯಾರಿಸಿ ಈ ಮೂಲಕ ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಕಾಂಸೆಪ್ಟ್ ಅನ್ನು ನನಸು ಮಾಡುತ್ತಿರುವ ಖುಷಿಯಲ್ಲಿ ಹ್ಯಾವೆಲ್ಸ್ ಇದೆ.
ಸುಮಾರು 50 ಎಕರೆಗಳಷ್ಟುವಿಶಾಲವಾದ ಪ್ರದೇಶದಲ್ಲಿರುವ ಈ ಘಟಕದಲ್ಲಿ ವಾರ್ಷಿಕ 3 ಲಕ್ಷ ವಾಷಿಂಗ್ ಮೆಶಿನ್ ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ. 2017ರಲ್ಲಿ ಆರಂಭವಾಗಿರುವ ಏರ್ ಕಂಡೀಶನರ್ ಘಟಕವೂ ಹೀಗೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಸುಮಾರು 3 ಲಕ್ಷಕ್ಕೂ ಅಧಿಕ ಏಸಿಗಳು ಇಲ್ಲಿ ಉತ್ಪಾದನೆ ಆಗುತ್ತವೆ.
undefined
500 ಕೋಟಿ ರು. ವೆಚ್ಚದಲ್ಲಿ ಘಟಕ ಆರಂಭ!
ಹ್ಯಾವೆಲ್ಸ್‌ನ ವಾಷಿಂಗ್ ಮೆಶಿನ್ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದ ನೀತಿ ಆಯೋಗದ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್, ‘ದೇಶದಲ್ಲಿರುವ ಕೈಗಾರಿಕೆಗಳಿಗೆ ಮಾದರಿಯಾಗುವಂಥಾ ಕಾರ್ಯವನ್ನು ಹ್ಯಾವೆಲ್ಸ್ ಮಾಡಿದೆ. ಈ ಮೂಲಕ ದೇಶವನ್ನು ಸ್ವತಂತ್ರ ರಾಷ್ಟ್ರವಾಗಿಸುವ ಪ್ರಧಾನಿಗಳ ಕನಸಿಗೆ ನೀರೆರೆದಿದೆ’ ಎಂದರು.
ಹ್ಯಾವೆಲ್ಸ್ ಇಂಡಿಯಾದ ಮುಖ್ಯಸ್ಥ ಅನಿಲ್ ರಾಯ್ ಗುಪ್ತಾ ಮಾತನಾಡಿ, ‘ನಾವು ಚೈನಾ ಅಥವಾ ಹೊರರಾಷ್ಟ್ರಗಳಿಂದ ಯಾವೊಂದು ಕಚ್ಚಾ ವಸ್ತುವನ್ನೂ ಆಮದು ಮಾಡಿಕೊಂಡಿಲ್ಲ. ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇವೆ. ಸುಮಾರು 500 ಕೋಟಿ ರು. ವೆಚ್ಚದಲ್ಲಿ 4.0 ಕಾಂಸೆಪ್ಟ್‌ನಲ್ಲಿ ಏಸಿ ಹಾಗೂ ವಾಷಿಂಗ್ ಮೆಶಿನ್ ಘಟಕ ಆರಂಭಿಸಿದ್ದಕ್ಕೆ ಹೆಮ್ಮೆ ಇದೆ’ ಎಂದರು. ಲಾಯ್ಡ್ ಬ್ರಾಂಡ್ ಸಿಇಓ ಶಶಿ ಅರೋರಾ ಉಪಸ್ಥಿತರಿದ್ದರು.
13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ
ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಮುಂಬೈ, ದೆಹಲಿ, ಅಹಮದಾಬಾದ್ ಸೇರಿದಂತೆ ದೇಶದ 13 ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್ ಸೇವೆ 5ಜಿ ಸೇವೆ (5G Internet Services) ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ಸಂಬಂಧ 2022ರ ಮಾರ್ಚ್ -ಏಪ್ರಿಲ್‌ನಲ್ಲಿ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
5ಜಿ ಸ್ಪೆಕ್ಟ್ರಂನ ಮೂಲ ದರ, ಬ್ಯಾಂಡ್ ಪ್ಲ್ಯಾನ್, ಬ್ಲಾಕ್ ಗಾತ್ರ, ಎಷ್ಟುಪ್ರಮಾಣದ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು ಎಂಬ ವಿಷಯದ ಬಗ್ಗೆ ಶಿಫಾರಸು ಮಾಡುವಂತೆ ದೂರ ಸಂಪರ್ಕ ಇಲಾಖೆಯು, ಟ್ರಾಯ್‌ಗೆ (TRAI) ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಉದ್ಯಮ ವಲಯದ (Telecom) ಪಾಲುದಾರರ ಜೊತೆ ಸಮಾಲೋಚನೆ ನಡೆಸಿದ್ದ ಟ್ರಾಯ್ ಕೆಲವೊಂದಿಷ್ಟುಶಿಫಾರಸುಗಳನ್ನು ಮಾಡಿತ್ತು.
ಎಲ್ಲೆಲ್ಲಿ ಆರಂಭ?
ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಲಖನೌ, ಚೆನ್ನೈ, ಹೈದ್ರಾಬಾದ್, ಪುಣೆ, ಗಾಂಧೀ ನಗರ
5ಜಿ ಲಾಭ ಏನು?
*4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್
*ಅತ್ಯಂತ ವೇಗದ ಸೇವೆ, ನಿರ್ವಹಣಾ ವೆಚ್ಚ ಕಡಿಮೆ
*ಹೆಚ್‌ಡಿ (HD) ಚಲನಚಿತ್ರ ಸೆಕೆಂಡ್‌ಗಳಲ್ಲೇ ಡೌನ್‌ಲೋಡ್
*ಗೇಮಿಂಗ್, ವೀಡಿಯೋ ಉದ್ಯಮಕ್ಕೆ ಹೊಸ ಅವಕಾಶ
ಇದನ್ನೂ ಓದಿ:
1) WhatsApp group admin ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ; ಆತಂಕ ದೂರ ಮಾಡಿದ ಹೈಕೋರ್ಟ್!
2) Huawei Smart Glasses: ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!
3) ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!