WhatsApp group admin ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ; ಆತಂಕ ದೂರ ಮಾಡಿದ ಹೈಕೋರ್ಟ್!

By Suvarna News  |  First Published Dec 27, 2021, 9:00 PM IST
  • ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್ ಆತಂಕ ಅಂತ್ಯಗೊಳಿಸಿದ ಕೋರ್ಟ್
  • ಗ್ರೂಪ್ ಸದಸ್ಯರ ಅಸಂಬದ್ಧ ಪೋಸ್ಟ್‌ಗೆ ಆಡ್ಮಿನ್ ಹೊಣೆಯಲ್ಲ
  • ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ(ಡಿ.27):  ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದಂತೆ ಸಮಸ್ಯೆಗಳೂ ಕೂಡ ಹೆಚ್ಚಾಗಿದೆ. ಅದರಲ್ಲೂ ವ್ಯಾಟ್ಸ್ಆ್ಯಪ್(whatsapp) ಅದೆಷ್ಟು ಒಳಿತು ತಂದಿದೆಯೋ ಅಷ್ಟೆ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್‌ಗಿದ್ದ(WhatsApp group admin) ಬಹುದೊಡ್ಡ ಆತಂಕವನ್ನು ಮದ್ರಾಸ್ ಹೈಕೋರ್ಟ್ ದೂರ ಮಾಡಿದೆ. ಹೌದು,  ವ್ಯಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿರುವ ಸದಸ್ಯರು ಹಾಕುವ ಆಸಂಬದ್ಧ ಪೋಸ್ಟ್, ನಿಯಮ ಉಲ್ಲಂಘನೆ ಪೋಸ್ಟ್‌ಗಳಿಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಮುದ್ರಾಸ್ ಹೈಕೋರ್ಟ್‌ನ(Madras High Court) ಮಧುರೈ ಪೀಠ ಇತ್ತೀಚೆಗೆ ಬಾಂಬೆ ಹೈಕೋರ್ಟ್(Bombay High Court) ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ಗ್ರೂಪ್ ಸದಸ್ಯರ ಆಕ್ಷೇಪಾರ್ಹ ವಿಷಯಗಳಿಗೆ ಗ್ರೂಪ್ ಅಡ್ಮಿನ್ ಹೊಣೆಯಲ್ಲ. ಗ್ರೂಪ್ ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌‌ಗಳ ಹಿಂದೆ ಗ್ರೂಪ್ ಅಡ್ಮಿನ್ ಕೈವಾಡ ಇಲ್ಲದಿದ್ದರೆ ಅದಕ್ಕೆ ಅಡ್ಮಿನ್ ಹೊಣೆಯಾಗುವುದಿಲ್ಲ ಎಂದು ಮಧುರೈ ಪೀಠ ಹೇಳಿದೆ.

Tap to resize

Latest Videos

WhatsApp Group Adminಗಳಿಗೆ ಹೆಚ್ಚಿನ ಅಧಿಕಾರ:‌ ಶೀಘ್ರದಲ್ಲೇ ಸದಸ್ಯರ ಮೆಸೇಜ್‌ ಡೀಲಿಟ್‌ ಮಾಡುವ ಸೌಲಭ್ಯ!

ಗ್ರೂಪ್ ಅಡ್ಮಿನ್‌ಗಳ ಮೇಲಿದ್ದ ಹಲವು FIR ಕುರಿತು ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಕುರಿತು ವಿಚಾರಣೆ ನಡೆಸಿದ ಮಧುರೈ ಪೀಠ ಈ ತೀರ್ಪು ನೀಡಿದೆ. ಸಮಾಜ ಸ್ವಾಸ್ಥ ಕೆಡಿಸಿದ, ಕೋಮು ಸೌಹಾರ್ಧತೆ ಕೆಡಿಸಿದ ಹಾಗೂ ಪ್ರಚೋದನೆ ನೀಡಿ ಹಲವು ಸಂದೇಶಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ವ್ಯಾಟ್ಸ್‌ಆ್ಯಪ್ ಗ್ರೂಪ್ ಆಡ್ಮಿನ್ ಹೆಸರನ್ನು FIRನಲ್ಲಿ ಉಲ್ಲೇಖಿಸಲಾಗಿತ್ತು. ಈ FIRನಿಂದ ಯಾವುದೇ ತಪ್ಪೆಸಗದ ಗ್ರೂಪ್ ಅಡ್ಮಿನ್‌ಗಳ ಕೋರ್ಟ್‌ಗೆ ಮನವಿ ಮಾಡಿದ್ದರು. ತಮ್ಮ ಹೆಸರನ್ನು FIRನಿಂದ ತೆಗೆದು ಹಾಕುವಂತೆ ಕೋರಲಾಗಿತ್ತು.

ಈ ಮನವಿಯಲ್ಲಿ ಗ್ರೂಪ್ ಸದಸ್ಯರ ಹಾಕುವ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಗ್ರೂಪ್ ಆಡ್ಮಿನ್ ಜವಾಬ್ದಾರರಲ್ಲ. ಅವರಿಗೆ ಸದಸ್ಯರ ಪೋಸ್ಟ್‌ಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಹೀಗಾಗಿ ವ್ಯಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಕೈವಾಡವಿಲ್ಲದಿದ್ದರೆ ಅಂತಹ ಪ್ರಕರಣಗಳಿಂದ ಗ್ರೂಪ್ ಆಡ್ಮಿನ್‌ನ್ನು ಕೈಬಿಡಬೇಕು ಎಂದು ಮನವಿ ಮಾಡಲಾಗಿತ್ತು.

ವಾಟ್ಸಾಪ್ ಅಡ್ಮಿನ್‌ಗಳೇ ಎಚ್ಚರವಿರಲಿ, ಗ್ರೂಪ್‌ಗಳ ಮೇಲೆ ನಿಗಾ

ಅರ್ಜಿ ವಿಲೇವಾರಿಗೂ ಮೊದಲು ಜಸ್ಟೀಸ್ ಸ್ವಾಮಿನಾಥನ್ ಬಾಂಬೆ ಹೈಕೋರ್ಟ್ ನೀಡಿದ ವ್ಯಾಟ್ಸ್ಆ್ಯಪ್ ಆಡ್ಮಿನ್ ಕುರಿತು ತೀರ್ಪು ನೆನಪಿಸಿಕೊಂಡರು. ಬಾಂಬೆ ಹೈಕೋರ್ಟ್‌ನಲ್ಲಿ ಇದೇ ವಿಚಾರ ಭಾರಿ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಆಕ್ಷೇಪಾರ್ಪ ಪೋಸ್ಟ್‌ಗಳಿಗೆ ಗ್ರೂಪ್ ಆಡ್ಮಿನ್ ಕ್ರಿಮಿನಲ್ ಹೊಣೆಗಾರರಾಗಬಹುದೇ ಎಂಬ ಪ್ರಶ್ನೆ ಎದ್ದಿತ್ತು.  ಬಳಿಕ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಗ್ರೂಪ್ ಆಡ್ಮಿನ್ ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಆಡ್ಮಿನ್ ಹೊಣೆಗಾರರಲ್ಲ ಎಂದಿತ್ತು.

ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್ ಗ್ರೂಪ್ ಖಾತೆ ತೆರೆದು ಸದಸ್ಯರನ್ನು ಸೇರಿಸುವ ಹಾಗೂ ತೆಗೆದು ಹಾಕುವ ಅಧಿಕಾರ ಹೊಂದಿರುತ್ತಾರೆ. ಆದರೆ ಗ್ರೂಪ್‌ನಲ್ಲಿರುವ ಸದಸ್ಯರು ಯಾವ ಪೋಸ್ಟ್ ಹಾಕುತ್ತಾರೆ, ಅದರ ಮೇಲೆ ಯಾವ ನಿಯಂತ್ರಣ ಕೂಡ ಆಡ್ಮಿನ್‌ಗೆ ಇರುವುದಿಲ್ಲ. ಕೇವಲ ಮನವಿ ಮಾಡಬಹದುಷ್ಟೆ. ಹೀಗಾಗಿ ಗ್ರೂಪ್‌ನಲ್ಲಿ ಹರಡುವ ಕೆಟ್ಟ ಸಂದೇಶ, ಆಕ್ಷೇಪಾರ್ಹ ಸಂದೇಶಗಳಿಗೆ ಗ್ರೂಪ್ ಅಡ್ಮಿನ್ ಹೊಣೆಯಾಗುವುದಿಲ್ಲ. ಇಲ್ಲಿ ಗ್ರೂಪ್ ಅಡ್ಮಿನ್ ಕೈವಾಡವಿಲ್ಲದಿದ್ದರೆ ಮಾತ್ರ ಆಡ್ಮಿನ್ ಹೊಣೆಯಾಗುವುದಿಲ್ಲ ಎಂದು ಬಾಂಬೈ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಆಕ್ಷೇಪಾರ್ಹ ಪೋಸ್ಟ್‌ಗೆ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಹೊಣೆ ಅಲ್ಲ!

ಗ್ರೂಪ್ ಸದಸ್ಯರ ಪೋಸ್ಟ್ ಹಿಂದೆ ಪೂರ್ವನಿಯೋಜಿತ ಯೋಜನೆ ಇದ್ದರೆ, ಗ್ರೂಪ್ ಅಡ್ಮಿನ್ ಸೂಚನೆಯಂತೆ ಸದಸ್ಯರು ಪೋಸ್ಟ್ ಹಾಕಿದ್ದಲ್ಲಿ ಗ್ರೂಪ್ ಆಡ್ಮಿನ್ ಹೊಣೆಯಾಗುತ್ತಾರೆ ಎಂದು ತೀರ್ಪು ಹೇಳಿದೆ. ಇಷ್ಟೇ ಅಲ್ಲ ವ್ಯಾಟ್ಸಆ್ಯಪ್ ಗ್ರೂಪ್ ಆಡ್ಮಿನ್ ಸದಸ್ಯರನ್ನು ಗುಂಪಿಗೆ ಸೇರಿಸುವಾಗ ಅವರ ಕ್ರಿಮಿನಲ್ ಹಿಸ್ಟರಿ ತಿಳಿದಿರಬೇಕು ಎಂದಿಲ್ಲ, ಅಥವಾ ತಿಳಿಯದೆ ಗುಂಪಿಗೆ ಸೇರಿಸುವ ಸಾಧ್ಯತೆಗಳು ಇವೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಬಾಂಬೆ ಹೈಕೋರ್ಟ್ ತೀರ್ಪನ್ನು ಇದೀಗ ಮದ್ರಾಸ್ ಹೈಕೋರ್ಟ್ ಪುನರುಚ್ಚರಿಸಿದೆ.

click me!