*ಡಿ.31ಕ್ಕೆ ಮಹಾನಗರಗಳಲ್ಲಿ ಪ್ರಯೋಗ ಪೂರ್ಣ
*13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ
*4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್
ನವದೆಹಲಿ (ಡಿ. 28) : ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಮುಂಬೈ, ದೆಹಲಿ, ಅಹಮದಾಬಾದ್ ಸೇರಿದಂತೆ ದೇಶದ 13 ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್ ಸೇವೆ 5ಜಿ ಸೇವೆ (5G Internet Services) ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ಸಂಬಂಧ 2022ರ ಮಾರ್ಚ್ -ಏಪ್ರಿಲ್‌ನಲ್ಲಿ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 5ಜಿ ಸ್ಪೆಕ್ಟ್ರಂನ ಮೂಲ ದರ, ಬ್ಯಾಂಡ್ ಪ್ಲ್ಯಾನ್, ಬ್ಲಾಕ್ ಗಾತ್ರ, ಎಷ್ಟುಪ್ರಮಾಣದ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು ಎಂಬ ವಿಷಯದ ಬಗ್ಗೆ ಶಿಫಾರಸು ಮಾಡುವಂತೆ ದೂರ ಸಂಪರ್ಕ ಇಲಾಖೆಯು, ಟ್ರಾಯ್‌ಗೆ (TRAI) ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಉದ್ಯಮ ವಲಯದ (Telecom) ಪಾಲುದಾರರ ಜೊತೆ ಸಮಾಲೋಚನೆ ನಡೆಸಿದ್ದ ಟ್ರಾಯ್ ಕೆಲವೊಂದಿಷ್ಟುಶಿಫಾರಸುಗಳನ್ನು ಮಾಡಿತ್ತು.
ಎಲ್ಲೆಲ್ಲಿ ಆರಂಭ?
undefined
ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಲಖನೌ, ಚೆನ್ನೈ, ಹೈದ್ರಾಬಾದ್, ಪುಣೆ, ಗಾಂಧೀ ನಗರ
5ಜಿ ಲಾಭ ಏನು?
*4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್
*ಅತ್ಯಂತ ವೇಗದ ಸೇವೆ, ನಿರ್ವಹಣಾ ವೆಚ್ಚ ಕಡಿಮೆ
*ಹೆಚ್‌ಡಿ (HD) ಚಲನಚಿತ್ರ ಸೆಕೆಂಡ್‌ಗಳಲ್ಲೇ ಡೌನ್‌ಲೋಡ್
*ಗೇಮಿಂಗ್, ವೀಡಿಯೋ ಉದ್ಯಮಕ್ಕೆ ಹೊಸ ಅವಕಾಶ
ಅದರನ್ವಯ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್‌ಟೆಲ್ (Airtel) , ರಿಲಯನ್ಸ್ ಜಿಯೋ (Reliance Jio), ವೊಡಾಫೋನ್-ಐಡಿಯಾ (Vodafone Idea) ಈಗಾಗಲೇ ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಲಖನೌ, ಚೆನ್ನೈ, ಹೈದ್ರಾಬಾದ್, ಪುಣೆ ಮತ್ತು ಗಾಂಧೀ ನಗರಗಳಲ್ಲಿ ಟೆಲಿಕಾಂ ಇಲಾಖೆ ನೆರವಿನಿಂದ ನಡೆಸಲಾದ 5ಜಿ ಸ್ಪೆಕ್ಟ್ರಂ ಪ್ರಯೋಗ ನಡೆಸಿದ್ದು, ಅದು ಡಿ.31ಕ್ಕೆ ಪೂರ್ಣಗೊಳ್ಳಲಿದೆ. ಹೀಗೆ ಪ್ರಯೋಗ ಪೂರ್ಣಗೊಂಡ 13 ನಗರಗಳಲ್ಲಿ 2022ರಿಂದ ಮೊದಲ ಹಂತದಲ್ಲಿ ಅತಿ ವೇಗದ 5ಜಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.
60 ದೇಶಗಳಲ್ಲಿ 5ಜಿ ಸೇವೆ ಲಭ್ಯ!
ಹಾಲಿ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ 5ಜಿ ಸೇವೆ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. ಅತ್ಯಂತ ವೇಗದ ಇಂಟೆರ್ನೆಟ್ ಸೇವೆ ಒದಗಿಸಲು ಅನುವು ಮಾಡಿಕೊಡುವ 5ಜಿ ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡುವ ಅಪರಿಮಿತ ಅವಕಾಶವನ್ನು ಹೊಂದಿದೆ. ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ ಹಲವು ಸೇವೆಗಳನ್ನು ಅತ್ಯಂತ ವೇಗವಾಗಿ ಪಡೆಯಲು ಈ ಸೇವೆ ಅವಕಾಶ ಕಲ್ಪಿಸಲಿದೆ.
ಫೋನ್ ಕರೆ, ಕಾಲ್ ಡೇಟಾ ಮಾಹಿತಿ 2 ವರ್ಷ ಸಂಗ್ರಹಿಸಿಡಲು ಸರ್ಕಾರ ಆದೇಶ!
ಗ್ರಾಹಕರ ಫೋನ್ ಕರೆಗಳು (Phone Calls) ಹಾಗೂ ಇಂಟರ್‌ನೆಟ್ ಬಳಕೆ ಮಾಹಿತಿಯನ್ನು ಎರಡು ವರ್ಷಗಳ ಕಾಲ ಸಂಗ್ರಹಿಸಿಡುವಂತೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ದೂರಸಂಪರ್ಕ ಇಲಾಖೆ (The Department of Telecommunications) ಆದೇಶಿಸಿದೆ. ಈವರೆಗೆ ಒಂದು ವರ್ಷದವರೆಗೆ ದತ್ತಾಂಶ ಸಂಗ್ರಹಿಸಿಡಬೇಕೆಂಬ ನಿಯಮವಿತ್ತು.
ಇದೀಗ ಭದ್ರತಾ ಕಾರಣಗಳಿಂದಾಗಿ ಈ ಅವಧಿಯನ್ನು 2 ವರ್ಷಗಳಿಗೆ ವಿಸ್ತರಿಸಲಾಗಿದೆ. ಟೆಲಿಕಾಂ ಪರವಾನಗಿ ಹೊಂದಿರುವ ಕಂಪೆನಿಗಳು ಎಲ್ಲಾ ವಾಣಿಜ್ಯ ಮಾಹಿತಿಗಳು, ಕರೆಗಳು, ಕಾಲ್ ರೆಕಾರ್ಡ್, ಐಪಿ ಮಾಹಿತಿ, ನೆಟ್‌ವರ್ಕ್ ವಿನಿಮಯ ಅಥವಾ ಹಂಚಿಕೊಂಡ ಮಾಹಿತಿಗಳು, ಇಂಟರ್‌ನೆಟ್ ಬಳಕೆ ಈ ಎಲ್ಲಾ ಮಾಹಿತಿಗಳನ್ನು 2 ವರ್ಷಗಳ ಕಾಲ ಡಿಲೀಟ್ ಮಾಡದಂತೆ ಸೂಚಿಸಲಾಗಿದ್ದು, ಎರಡು ವರ್ಷಗಳ ಬಳಿಕ ಮಾಹಿತಿಯನ್ನು ಅಳಿಸಬಹುದಾಗಿದೆ.
ಇದನ್ನೂ ಓದಿ:
1) Round Up 2021: ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ 2021 ರ ಟಾಪ್ 5 ವೈರಲ್ ವಿಡಿಯೋಗಳು
2) WhatsApp group admin ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ; ಆತಂಕ ದೂರ ಮಾಡಿದ ಹೈಕೋರ್ಟ್!
3) Huawei Smart Glasses: ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!