ಗೂಗಲ್ ಕ್ರೋಮ್ ಬಹುತೇಕರು ಬಳಕೆ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರ ಗೂಗಲ್ ಕ್ರೋಮ್ ಬಳಕೆದಾರರಿಗೆ ಹೈ ರಿಸ್ಕ್ ಸೆಕ್ಯೂರಿಟಿ ವಾರ್ನಿಂಗ್ ನೀಡಿದೆ. ಕ್ರೋಮ್ ಬಳಕೆದಾರರು ಏನು ಮಾಡಬೇಕು?
ನವದೆಹಲಿ(ಮಾ.27) ಭಾರತ ಸೇರಿದಂತೆ ವಿಶ್ವದಲ್ಲೇ ವೆಬ್ ಬ್ರೌಸರ್ ಆಗಿ ಗೂಗಲ್ ಕ್ರೂಮ್ ಹೆಚ್ಚಾಗಿ ಬಳಸುತ್ತಾರೆ. ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಮೊಬೈಲ್‌ಗಳಲ್ಲೂ ಗೂಗಲ್ ಕ್ರೋಮ್ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದೀಗ ಇದೀಗ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ(CERT-In) ಇದೀಗ ಗೂಗಲ್ ಕ್ರೋಮ್ ಬಳಕೆದಾರಿಗೆ ಹೈ ರಿಸ್ಕ್ ವಾರ್ನಿಂಗ್ ನೀಡಿದೆ. ವಿಶೇಷವಾಗಿ ವಿಂಡೋಸ್ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್ ಬಳಕೆ ಮಾಡುತ್ತಿರುವವ ಯೂಸರ್ ಡೇಟಾ ಹಾಗೂ ಡಿವೈಸ್ ರಿಸ್ಕ್‌ನಲ್ಲಿದೆ ಎಂದು CERT-In ಎಚ್ಚರಿಸಿದೆ. ಹೀಗಾಗಿ ತಕ್ಷಣವೇ ವೆಬ್ ಬ್ರೌಸರ್ ಅಪ್‌ಡೇಟ್ ಮಾಡಲು ಸೂಚನೆ ನೀಡಿದೆ.
ಸಾಫ್ಟ್‌ವೇರ್ ರಿಸ್ಕ್
ವಿಂಡೋಸ್ ಡೆಸ್ಕ್‍ಟಾಪ್ ಗೂಗಲ್ ಕ್ರೋಮ್ ವರ್ಶನ್ 134.0.6998.177/.178 ಮೇಲೆ ಸುಲಭವಾಗಿ ಸೈಬರ್ ದಾಳಿಯಾಗುವ ಸಾಧ್ಯತೆ ಇದೆ. ಬಳಕೆದಾರರ ಡಿವೈಸ್ ಹಾಗೂ ಡೇಟಾ ರಿಸ್ಕ್‌ನಲ್ಲಿದೆ. ಇದರಿಂದ ಬಳಕೆದಾರರು ಬ್ರೌಸರ್ ಅಪ್‌ಡೇಟ್ ಮಾಡಲು CERT-In ಸೂಚಿಸಿದೆ. ದಾಳಿಕೋರರು ಕೆಲ ಬ್ರೌಸರ್ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ ಎಂದು CERT-In ಹೇಳಿದೆ.
ಬರುತ್ತಿದೆ OpenAI ಬ್ರೌಸರ್, ಗೂಗಲ್ ಕ್ರೋಮ್ ಪ್ರಾಬಲ್ಯ ಮುಗಿಸುತ್ತಾ ಆರ್ಟಿಫೀಶಿಯಲ್ ಇಂಟಲಿಜೆನ್ಸ್?
ಸಾಫ್ಟ್‌ವೇರ್‌ನಲ್ಲಿದ್ದ ಕೆಲ ನ್ಯೂನತೆಗಳನ್ನು ಬಳಸಿಕೊಂಡು ಸೈಬರ್ ಆ್ಯಟಾಕ್ ನಡೆಯುವ ಸಾಧ್ಯತೆ ಹೆಚ್ಚಿದೆ.ಹೀಗಾಗಿ ಬಳಕೆದಾರರು ಸುಲಭವಾಗಿ ಕ್ರೋಮ್ ಅಪ್‌ಡೇಟ್ ಮಾಡಿ ತಮ್ಮ ಡಿವೈಸ್ ಹಾಗೂ ಡೇಟಾ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದಿದೆ ಅಪ್‌ಡೇಟ್ ಮಾಡದೇ ಹೋದರೆ ಗೂಗಲ್ ಕ್ರೋಮ್‌ನಲ್ಲಿ ಸುರಕ್ಷಿತವಾಗಿರುವ ನಿಮ್ಮ ಡೇಟಾಗಳು, ಖಾತೆಗಳನ್ನು ಹ್ಯಾಕರ್ಸ್ ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆ ಇದೆ. ಜೊತೆಗೆ ಮಾಲ್‌ವೇರ್ ಲಿಂಕ್ ಮೂಲಕ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಬಳಕೆದಾರರು ಏನು ಮಾಡಬೇಕು
ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಲು ಬಳಕೆದಾರರು ಏನು ಮಾಡಬೇಕು, ಹಂತ ಹಂತವಾಗಿ ಅಪ್‌ಡೇಟ್ ವಿಧಾನ ತಿಳಿದುಕೊಳ್ಳಿ
ಡೆಸ್ಕ್‌ಟಾಪ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವುದು ಹೇಗೆ?
ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಓಪನ್ ಮಾಡಿ
ಮೆನು ಐಕಾನ್ ಬಳಿ ಇರುವ ಮೂರು ಡಾಟ್ ಕ್ಲಿಕ್ ಮಾಡಿ( ಬಲಭಾಗದ ಮೂಲೆಯಲ್ಲರುವ ಬ್ರೌಸರ್‌ನಲ್ಲಿರುವ ಮೂರು ಡಾಟ್)
ಗೂ ಟು ಹೆಲ್ಪ್ ಕ್ಲಿಕ್ ಮಾಡಿ(ಡ್ರಾಪ್ ಡೌನ್ ಮೆನುವಿನಲ್ಲಿರುವ ಹೆಲ್ಪ್ ಕ್ಲಿಕ್ ಮಾಡಿ ಬಳಿಕ ಗೂಗಲ್ ಕ್ರೋಮ್ ಕ್ಲಿಕ್ ಮಾಡಿ)
ಚೆಕ್ ಅಪ್‌ಡೇಟ್: ಕ್ರೋಮ್ ಆಟೋಮ್ಯಾಟಿಕ್ ಆಗಿ ಅಪ್‌ಡೇಟ್ ಚೆಕ್ ಮಾಡಲಿದೆ. ಯಾವುದೇ ಅಪ್‌ಡೇಟ್ ಇದ್ದರೆ ಆಟ್ಯೋಮಾಟಿಕ್ ಆಗಿ ಅಪ್‌ಡೇಟ್ ಆದ ಬಳಿಕ ಇನ್‌ಸ್ಟಾಲ್ ಆಗಲಿದೆ.
ರಿಸ್ಟಾರ್ಟ್ ಕ್ರೋಮ್: ಅಪ್‌ಡೇಟ್ ಹಾಗೂ ಇನ್‌ಸ್ಟಾಲ್ ಆದ ಬಳಿಕ ರಿ ಲಾಂಚ್ ಬಟನ್ ಕ್ಲಿಕ್ ಮಾಡಿ
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನಿಮ್ಮ ಕ್ರೋಮ್ ಬ್ರೌಸರ್ ಆಟೋಮ್ಯಾಟಿಕ್ ಆಗಿ ಎಲ್ಲಾ ಸುರಕ್ಷತಾ ಫೀಚರ್ಸ್ ಅಪ್‌ಡೇಟ್ ಆಗಲಿದೆ.
ಮಾರಾಟವಾಗುತ್ತಾ ಗೂಗಲ್ ಕ್ರೋಮ್? ಸರ್ಚ್ ಎಂಜಿನ್ ಎಕಸ್ವಾಮ್ಯ ಮುರಿಯಲು DOJ ಶಿಫಾರಸು!