ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್‌ಗೆ ಅಂಬಾನಿ ಸೆಡ್ಡು, ಜಿಯೋ ಗ್ರಾಹಕರಿಗೆ ಉಚಿತ ಕೊಡುಗೆ ಘೋಷಣೆ

ಮುಕೇಶ್ ಅಂಬಾನಿ ಘೋಷಣೆಗೆ ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್ ನಡುಗಿದೆ. ಕಾರಣ ಇದೀಗ ಮುಕೇಶ್ ಅಂಬಾನಿ ಜಿಯೋ ಗ್ರಾಹಕರಿಗೆ ಬರೋಬ್ಬರಿ 50 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಘೋಷಿಸಿದೆ. 
 

Mukesh Ambani challenge google Microsoft apple jio introduce 50GB free could storage

ಮುಂಬೈ(ಮಾ.25) ರಿಲಯನ್ಸ್ ಜಿಯೋ ಭಾರತದಲ್ಲಿ ಈಗಾಗಲೇ ಹಲವು ಆಫರ್ ಘೋಷಿಸಿದೆ. ಬಹುತೇಕ ಎಲ್ಲಾ ಆಫರ್ ಟೆಲಿಕಾಂ ಕ್ಷೇತ್ರಕ್ಕೆ ನೀಡಿದೆ. ಆದರೆ ಈ ಬಾರಿಯ ಮುಕೇಶ್ ಅಂಬಾನಿ ಮಾಡಿದ ಘೋಷಣೆಗೆ ಗೂಗಲ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಆ್ಯಪಲ್‌ನ ಟಿಮ್ ಕುಕ್ ಸೇರಿದಂತೆ ಹಲವು ದಿಗ್ಗಜರನ್ನೇ ಬೆಚ್ಚಿ ಬೀಳಿಸಿದೆ. ಹೌದು, ರಿಲಯನ್ಸ್ ಜಿಯೋ ಇದೀಗ ತನ್ನ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಉಚಿತ 50 ಜಿಬಿ ಎಐ ಪವರ್ ಕ್ಲೌಡ್ ಸ್ಟೋರೇಜ್ ಘೋಷಿಸಿದೆ. 

ಇತ್ತೀಚೆಗೆ ಬಹುತೇಕರಿಗೆ ಜಿಮೇಲ್ ಖಾತೆ ತೆರೆದಾಗ, ಗೂಗಲ್ ಡ್ರೈವ್ ಕ್ಲಿಕ್ ಮಾಡಿದಾಗ ಸ್ಟೋರೇಜ್ ಫುಲ್ ಅನ್ನೋ ಸಂದೇಶ ಬರುತ್ತಿದೆಯಾ? ನಿಮ್ಮ ಫೋನ್ ಮೂಲಕ ತೆಗೆದ ಫೋಟೋಗಳನ್ನು ಸೇವ್ ಮಾಡಿಕೊಳ್ಳಲು ಸ್ಟೋರೇಜ್ ಸಾಲುತ್ತಿಲ್ಲವೇ? ಈ ವೇಳೆ ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್ ಸೇರಿದಂತೆ ಕೆಲ ಟೆಕ್ ದಿಗ್ಗಜರು ಕ್ಲೌಡ್ ಸ್ಟೋರೇಜ್ ನೀಡುತ್ತಿದೆ. ತಿಂಗಳಿಗೆ ಇಷ್ಟು ಪಾವತಿಸಿ ಎಂದು ಸಂದೇಶ ಕಳುಹಿಸುತ್ತಾರೆ. ಆದರೆ ಇದೀಗ ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ 50ಜಿಬಿ ವರೆಗೆ ಕ್ಲೌಡ್ ಸ್ಟೋರೇಜ್ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಇದು ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಪವರ್ಡ್ ಕ್ಲೌಡ್ ಸ್ಟೋರೇಜ್ ಆಗಿದೆ. 

Latest Videos

ಐಪಿಎಲ್ ಲೈವ್ ಜೊತೆ ಉಚಿತ ಡೇಟಾ, ಕಾಲ್ ಆನಂದಿಸಲು ವಿಐ ನಿಂದ 101 ರೂ ರೀಚಾರ್ಜ್ ಪ್ಲಾನ್

ವಿಶೇಷ ಅಂದರೆ ಈ 50 ಜಿಬಿ ಪೈಕಿ 5 ರಿಂದ 15 ಜಿಬಿ ಜಿಮೇಲ್ ಸ್ಟೋರೇಜ್‌ಗೆ ಜಿಯೋ ನೀಡಲಿದೆ. ಇದರಿಂದ ಬಹುತೇಕರ ಸಮಸ್ಯೆ ಪರಿಹಾರವಾಗಲಿದೆ. ಇನ್ನುಳಿದ ಕ್ಲೌಡ್ ಸ್ಟೋರೇಜ್ ಗೂಗಲ್ ಡ್ರೈವ್ ಸೇರಿದಂತೆ ಇತರ ಸ್ಟೋರೇಜ್‌ಗೆ ಬಳಕೆಯಾಗಲಿದೆ. ಇದರಿಂದ ಫೋನ್ ಮೂಲಕ ತೆಗೆದ ಫೋಟೋ ವಿಡಿಯೋ ಡಿಲೀಟ್ ಮಾಡುವ ಅನಿವಾರ್ಯ ಪರಿಸ್ಥಿತಿ ಬರುವುದಿಲ್ಲ. 50 ಜಿಬಿ ಹೆಚ್ಚುವರಿಯಾಗಿ ಜೊತೆಗೆ ಉಚಿತವಾಗಿ ಸಿಗಲಿದೆ.

ಬಹುತೇಕರು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಾರೆ. ಎಲ್ಲವೂ ಕ್ಲೌಡ್ ಸ್ಟೋರೇಜ್ ಮೂಲಕ ಸೇವ್ ಮಾಡಲಾಗುತ್ತಿದೆ. ಜಿಮೇಲ್, ಗೂಗಲ್ ಫೋಟೋಸ್, ಗೂಗಲ್ ಡ್ರೈವ್ ಸೇರಿದಂತೆ ಕ್ಲೌಡ್ ಸ್ಟೋರೇಜ್ ಬಹುಬೇಗನೆ ತುಂಬಲಿದೆ. ಬಳಿಕ ಪಾವತಿ ಮಾಡಿ ಸ್ಟೋರೇಜ್ ಹೆಚ್ಚಿಸಿಕೊಳ್ಳಬೇಕು. ಆದರೆ ಜಿಯೋ ಹೊಸ ಘೋಷಣೆಯಿಂದ ಇದೀಗ ಗ್ರಾಹಕರು ಖುಷಿಯಾಗಿದ್ದಾರೆ. ಜೊತಗೆ ಕ್ಲೌಡ್ ಸ್ಟೋರೇಜ್ ಖರೀದಿಸುವ ಸಮಸ್ಯೆಯಿಂದ ಪಾರಾಗಿದ್ದಾರೆ.

ಪ್ರಿಪೇಯ್ಡ್ ಗಾಹಕರಿಗೆ ಉಚಿತ ಕ್ಲೌಡ್ ಸ್ಟೋರೇಜ್
ಜಿಯೋ ಪ್ರಿಪೇಯ್ಡ್ ಗ್ರಾಹಕರು ಉಚಿತ ಕ್ಲೌಡ್ ಸ್ಟೋರೇಜ್ ಪಡೆಯಲು ಕನಿಷ್ಠ 299 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಅಂದರೆ ನೀವು ಈಗಾಗಲೇ ಡೇಟಾ, ಅನ್‌ಲಿಮಿಟೆಡ್ ಕಾಲ್‌ಗಾಗಿ ಮಾಡಿರುವ ರೀಚಾರ್ಜ್ 299 ರೂಪಾಯಿಗಿಂತ ಮೇಲ್ಪಟ್ಟಿದ್ದರೆ ನೀವು ಉಚಿತವಾಗಿ 50 ಜಿಬಿ ಕ್ಲೌಡ್ ಸ್ಟೋರೇಜ್ ಪಡೆಯಲಿದ್ದೀರಿ. ಇದಕ್ಕಿಂತ ಕಡಿಮೆ ರೀಚಾರ್ಜ್ ಮಾಡಿದ್ದಲ್ಲಿ, ಕ್ಲೌಡ್ ಸ್ಟೋರೇಜ್ ಪಡೆಯಲು ಮುಂದಿನ ರೀಚಾರ್ಜ್ ವೇಳೆ ಕನಿಷ್ಠ 299 ರೂಪಾಯಿ ಮಾಡಿ ಉಚಿತ ಕ್ಲೌಡ್ ಸ್ಟೋರೇಜ್ ಸಕ್ರಿಯಗೊಳಿಸಿ.

IPL ಫ್ಯಾನ್ಸ್‌ಗಾಗಿ Jioದಿಂದ ಅನ್‌ಲಿಮಿಟೆಡ್‌ ಪ್ಲಾನ್; JioHotstar ಮೆಂಬರ್‌ಶಿಪ್‌ ಜೊತೆ ಮತ್ತಷ್ಟು ಮಗದಷ್ಟು ಆಫರ್
 

vuukle one pixel image
click me!