ಜಿಮೇಲ್, ಯ್ಯೂಟ್ಯೂಬ್, ಮ್ಯಾಪ್, ನ್ಯೂಸ್ ಸೇರಿ ಗೂಗಲ್ ಸೇವೆ ಡೌನ್, ಬಳಕೆದಾರರ ಆಕ್ರೋಶ!

By Chethan Kumar  |  First Published May 31, 2024, 7:46 PM IST

ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಗೂಗಲ್ ಸರ್ವೀಸ್ ಡೌನ್ ಆಗಿದೆ. ಭಾರತದಲ್ಲಿ ಗೂಗಲ್ ನ್ಯೂಸ್, ಗೂಗಲ್ ಡಿಸ್ಕವರಿ ಸೇರಿ ಕೆಲ ಸೇವೇಗಳು ಡೌನ್ ಆಗಿದೆ. ಆದರೆ ಹಲವು ರಾಷ್ಟ್ರಗಳಲ್ಲಿ ಈ ಸೇವೆ ಜೊತೆಗೆ ಜಿಮೇಲ್, ಯ್ಯೂಟ್ಯೂಬ್ ಸೇವೆಗಳು ಡೌನ್ ಆಗಿದೆ.
 


ನವದೆಹಲಿ(ಮೇ.31) ಗೂಗಲ್ ಸರ್ವೀಸ್ ಡೌನ್ ಆಗಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರದಲ್ಲಿ ಗೂಗಲ್ ಸೇವೆಗಳ ಸರ್ವರ್ ಡೌನ್ ಆಗಿ ಬಳಕೆದಾರರು ಪರದಾಡುವಂತಾಗಿದೆ. ಭಾರತದಲ್ಲಿ ಪ್ರಮುಖವಾಗಿ ಗೂಗಲ್ ನ್ಯೂಸ್, ಗೂಗಲ್ ಡಿಸ್ಕವರಿ ಸೇವೆಗಳು ಡೌನ್ ಆಗಿದೆ. ಈ ಕುರಿತು ಬಳಕೆದಾರರು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಮೂಲಕ ದೂರು ದಾಖಲಿಸಿದ್ದಾರೆ. ಜೊತೆಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ವಿಶ್ವಾದ್ಯಂತ ಗೂಗಲ್ ಸೇವೆ ಡೌನ್ ಆಗಿದೆ. ಪ್ರಮುಖವಾಗಿ ಜಿಮೇಲ್, ಗೂಗಲ್ ನ್ಯೂಸ್, ಯೂಟ್ಯೂಬ್, ಗೂಗಲ್ ಮ್ಯಾಪ್, ಗೂಗಲ್ ಡಿಸ್ಕವರಿ ಸೇರಿದಂತೆ ಇತರ ಕೆಲ ಸೇವೆ ಡೌನ್ ಆಗಿದೆ. ಸರ್ವರ್ ಡೌನ್ ಸೇರಿದಂತೆ ಇತರ ತಾಂತ್ರಿಕ ಸಮಸ್ಯೆಗಳನ್ನು ಪತ್ತೆ ಹಚ್ಚಿ ವರದಿ ನೀಡುವ ಡೌನ್ ಡಿಟೆಕ್ಟರ್ ಇದೀಗ ಗೂಗಲ್ ಸೇವೆ ಡೌನ್ ಕುರಿತು ವರದಿ ಮಾಡಿದೆ.

Tap to resize

Latest Videos

undefined

ಜೂನ್ 4 ರಿಂದ ಹಲವು ದೇಶದಲ್ಲಿ ಗೂಗಲ್ ಪೇ ಸ್ಥಗಿತ, ಭಾರತದಲ್ಲಿ ಮುಂದುವರಿಯುತ್ತಾ?

ಗೂಗಲ್ ನೀಡುವ ಹಲವು ಸೇವೆಗಳು ಇಂದು ಸಂಜೆ 6 ಗಂಟೆಯಿಂದ ಸಮಸ್ಯೆ ಎದುರಿಸುತ್ತಿದೆ ಎಂದು ಡೌನ್ ಡಿಟೆಕ್ಟರ್ ವರದಿ ಮಾಡಿದೆ. ಡೌನ್ ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದೆ. ಈ ಪೈಕಿ ಶೇಕಡಾ 66 ರಷ್ಟು ಮಂದಿ ಗೂಗಲ್ ವೆಬ್‌ಸೈಟ್‌ನಲ್ಲಿ ಸಮಸ್ಯೆ ಇದೆ ಎಂದು ದೂರಿದ್ದಾರೆ. ಇನ್ನು ಶೇಕಡಾ 21 ರಷ್ಟು ಮಂದಿ ಗೂಗಲ್ ಸರ್ಚ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದ್ದಾರೆ. ಇನ್ನು ಶೇಕಡಾ 3 ರಷ್ಟು ಮಂದಿ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದಾರೆ.

ಭಾರತದಲ್ಲಿ ಗೂಗಲ್ ಸರ್ಚ್, ಗೂಗಲ್ ಮ್ಯಾಪ್, ಗೂಗಲ್ ನ್ಯೂಸ್ ಸೇರಿದಂತೆ ಇತರ ಕೆಲ ಗೂಗಲ್ ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಲವು ಬಳಕೆದಾರರು ಟ್ವಿಟರ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗೂಗಲ್ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ. ನಿಮಗೂ ಈ ಅನುಭವಾಗುತ್ತಿದೆಯಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಆದರೆ ಗೂಗಲ್ ಸರ್ವರ್ ಡೌನ್, ತಾಂತ್ರಿಕ ಸಮಸ್ಯೆ ಕುರಿತು ಗೂಗಲ್ ಇದುವರೆಗೂ ಯಾವುದೇ ಅಧಿಕೃತ ಪ್ರಕಟನೆ, ಹೇಳಿಕೆ ನೀಡಿಲ್ಲ. ಗೂಗಲ್ ಅಫೀಶಿಯಲ್ ಡ್ಯಾಶ್‌ಬೋರ್ಡ್ ಸರ್ವೀಸ್‌ನಲ್ಲಿ ಈ ಕುರಿತ ಯಾವುದೇ ಅಪ್‌ಡೇಟ್ ಲಭ್ಯವಿಲ್ಲ. ಗೂಗಲ್ ಡ್ಯಾಶ್‌ಬೋರ್ಡ್ ಸರ್ವೀಸ್ ಈಗಲೂ ಗೂಗಲ್ ಸೇವೆಗಳು ಸೇವೆ ನೀಡುತ್ತಿದೆ ಎಂದೇ ಸೂಚಿಸಿದೆ. ಸದ್ಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೇ ವಿಶ್ವಾದ್ಯಂತ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಬೆಸ್ಟ್ ವರ್ಕ್ ಪಾರ್ಟ್ನರ್ ಇವರೇ ನೋಡಿ!
 

click me!