ಯುಎಲ್‌ಟಿ ಟವರ್ 10, ಯುಎಲ್‌ಟಿ ಫೀಲ್ಡ್ 7. ಯುಎಲ್ ಫೀಲ್ಡ್ 1 ಹಾಗೂ ಯುಎಲ್‌ಟಿ ವೇರ್ (ಹೆಡ್‌ಫೋನ್) ಹೆಸರಿನ ಆವಿಷ್ಕಾರಿ ಉತ್ಪನ್ನಗಳನ್ನು ಸಂಸ್ಥೆಯು ದೆಹಲಿ ಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದೆ.
ಅಜಿತ್ ಕುಮಾರ್‌ಮಠದಬೆಟ್ಟು
ನವದೆಹಲಿ(ಮೇ.29): ಮ್ಯೂಸಿಕ್ ತಂತ್ರಜ್ಞಾನ ಜಗತ್ತಿನ ದಿಗ್ಗಜ ಸೋನಿ ಇದೀಗ ಮತ್ತೆ ಭಾರತದಲ್ಲಿ ಸದ್ದು ಮಾಡಲು ಹೊರಟಿದೆ. ಯುಎಲ್ ಪದರ್ ಸೌಂಡ್ ಸೀರೀಸ್‌ನಲ್ಲಿ ಹೆಡ್‌ಫೋನ್ ಸೇರಿ ನಾಲ್ಕು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಮ್ಯೂಸಿಕ್ ಸಿಸ್ಟಂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮತ್ತಷ್ಟು ವಿಸ್ತರಣೆಗೆ ಮುಂದಾಗಿದೆ. ಯುಎಲ್‌ಟಿ ಟವರ್ 10, ಯುಎಲ್‌ಟಿ ಫೀಲ್ಡ್ 7. ಯುಎಲ್ ಫೀಲ್ಡ್ 1 ಹಾಗೂ ಯುಎಲ್‌ಟಿ ವೇರ್ (ಹೆಡ್‌ಫೋನ್) ಹೆಸರಿನ ಆವಿಷ್ಕಾರಿ ಉತ್ಪನ್ನಗಳನ್ನು ಸಂಸ್ಥೆಯು ದೆಹಲಿ ಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದೆ.
undefined
ಸಂಗೀತ ಪ್ರೇಮಿಗಳ ಸಂಗೀತಾನುಭದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದಾದ ಆವಿಷ್ಕಾರಿ ಆಡಿಯೋ ಉತ್ಪನ್ನ ಬಿಡುಗಡೆಗೆ ನಾವು ಸದಾ ಉತ್ಸುಕರಾಗಿದ್ದೇವೆ. ಅತ್ಯುತ್ತಮ ಬಾಸ್ ಮತ್ತು ಸೌಂಡ್ ಕ್ವಾಲಿಟಿ ಹೊಂದಿರುವ ಯುಎಲ್ ಪವರ್ ಸೌಂಡ್ ಶ್ರೇಣಿ ಇದಕ್ಕೊಂದು ಉದಾಹರಣೆ ಎಂದು ಸೋನಿಯ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಸುನಿಲ್ ನಾಯರ್ ಈ ವೇಳೆ ಹೇಳಿದರು.
ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್, AI ಜನರೇಟೆಡ್ ಪ್ರೊಫೈಲ್ ಫೋಟೋ ಫೀಚರ್!
ಹೊಸ ಉತ್ಪನ್ನಗಳ ವಿಶೇಷತೆಗಳು ಯುಎಲ್‌ಟಿ ಟವರ್ 10: ಅತ್ಯುತ್ತಮ ಬಾಸ್ ಹೊಂದಿರುವ ಯುಎಲ್‌ಟಿಟವರ್ 10 ಸೌಂಡ್ ಸಿಸ್ಟಂ ಯಾವುದೇ ಸ್ಥಳವನ್ನು ಪಾರ್ಟಿ ವಾತಾವರಣಕ್ಕೆ ತಿರುಗಿಸಲ್ಲ ಸಾಮರ್ಥ ಹೊಂದಿದೆ. 360 ಡಿಗ್ರಿ ಮ್ಯೂಸಿಕ್ ಮತ್ತು ಅದರ ಜತೆಗೆ ಪಾರ್ಟಿಗೆ ಕಿಚ್ಚುಹಚ್ಚುವಂಥ ಲೈಟಿಂಗ್ ಇದರ ವಿಶೇಷತೆ 2 ಹೊಸ ಸೌಂಡ್ ಮೋಡ್ ಹೊಂದಿರುವ ಈ ಮ್ಯೂಸಿಕ್ ಸಿಸ್ಟಂ ಕರೋಕೆ ಮತ್ತು ಟಿವಿ ಸೌಂಡ್ ಬೂಸ್ಟಿಂಗ್ ವ್ಯವಸ್ಥೆಯನ್ನೂ ಒಳಗೊಂಡಿದೆ.
ಇದರ ಬೆಲೆ 89,990 ರು. ಯುಎಲ್‌ಟಿ ಫೀಲ್ಡ್ 7:
ಸುಲಭವಾಗಿ ಎಲ್ಲಿಗೂ ಕೊಂಡೊಯ್ಯಬಹುದಾದ ಸ್ವಲ್ಪ ಬೇಕೆನ್ನುವವರಿಗೆ ಯುಎಲ್‌ಟಿ ಫೀಲ್ಡ್ 7 ಬಿಡುಗಡೆಮಾಡಲಾಗಿದೆ. ಕರೋಕೆಗೋಸ್ಕರವೇ ಪ್ರತ್ಯೇಕ ಮೈಕ್ರೋಫೋನ್ ಮತ್ತು ಡೈನಾಮಿಕ್ ಲೈಟಿಂಗ್ ಒಳಗೊಂಡಿರುವ ಈ ಸೌಂಡ್ ಸಿಸ್ಟಂ ಡಸ್ಟ್, ವಾಟರ್ ರಿಸಿಸ್ಟೆಂಟ್ ಆಗಿದೆ. ತ್ವರಿತಗತಿ ಯಲ್ಲಿ ಚಾರ್ಜಿಂಗ್ ಮತ್ತು ಒಂದು ಬಾರಿ ಚಾರ್ಜ್ ಮಾಡಿದರೆ 30 ಗಂಟೆ ಸುದೀರ್ಘ ಬ್ಯಾಟರಿ ಜೀವಿತಾವಧಿ ಹೊಂದಿದೆ. ಅಲ್ಲದೆ ಈ ಯುಎಲ್‌ಟಿ ಫೀಲ್ಡ್ ಅನ್ನು 100 ಸ್ಪೀಕರ್‌ಗಳ ಜತೆಗೆ ಏಕಕಾಲದಲ್ಲಿ ಕನೆಕ್ಟ್ ಮಾಡಬಹುದು. ಈ ಸೌಂಡ್ ಸಿಸ್ಟಂನ ಬೆಲೆ 39,990 ರು.
ಜಿಯೋ ಬಂಪರ್ ಆಫರ್, 15 ಒಟಿಟಿ ಆ್ಯಪ್ಲಿಕೇಷನ್ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್!
ಯುಎಲ್‌ಟಿ ಫೀಲ್ಡ್ 1:
ಇದು ಸೋನಿಯ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀರ್ಕ. ಎಲ್ಲಿಬೇಕಿ ದ್ದರೂ ಸುಲಭವಾಗಿ ಕೊಂಡೊಯ್ಯಬಹುದು. ಒಮ್ಮೆ ಚಾರ್ಜ್ ಮಾಡಿದರೆ 12 ಗಂಟೆ ನಿರಂತರ ಸಂಗೀತ ಆಲಿಸಬಹುದು. ಉತ್ತಮ ಬಾಸ್, ಸುಧಾರಿತ ನಾಯ್ಸ್ ಕಂಟ್ರೋಲ್ ವ್ಯವಸ್ಥೆ ಇದರ ವೈಶಿಷ್ಟ್ಯ. ನೀರು ಹಾಗೂ ತುಕ್ಕು ನಿರೋಧಕ ಆಗಿರುವ ಯುಎಲ್‌ಟಿ ಫೀಲ್ಡ್! ಕಿರುಗಾತ್ರದ ಪೋರ್ಟೆಬಲ್ ಸೌಂಡ್ ಸಿಸ್ಟಂ ದರ 10,990.ರು.
ಯುಎಲ್‌ಟಿ ವೇರ್:
(ಯುಎಲ್) ಮತ್ತು ಯುಎಲ್ ಟಿ 2 ಎಂಬ ಎರಡು ಸೌಂಡ್ ಮೋಡ್ ಈ ಹೆಡ್‌ಫೋನ್ ಒಳಗೊಂಡಿದೆ. ಡೀಪ್ ಲೋಫ್ರೀಕ್ವೆನ್ಸಿ ಬಾಸ್‌ಗಾಗಿ ಯುಎಲ್ ಟಿ!, ಶಕ್ತಿಶಾಲಿ ಬಾಸ್‌ಗಾಗಿ ಯುಎಲ್‌ಟಿ2 ಆಯ್ಕೆ ಇದೆ. ಸೋನಿಯ ಪ್ರಶಸ್ತಿ ವಿಜೇತ 1000 ಹೆಡ್ ಫೋನ್ ಸರಣಿಯಲ್ಲಿರುವ ವಿ ಪ್ರೊಸೆಸರ್ ಅನ್ನು ಯುಎಲ್ ವೇರ್ ಹೊಂದಿದೆ. ಡ್ಯುಯೆಲ್ ನಾಯ್ಸ್ ಸೆನ್ಸರ್ ತಂತ್ರಜ್ಞಾನ ಮತ್ತು ಇಂಟೆಗ್ರೇಟೆಡ್ ಪ್ರೊಸೆಸರ್ ವಿ. ಯುಎಲ್ ವೇರ್ ಅನ್ನು ವಿಭಿನ್ನವಾಗಿಸುತ್ತದೆ. ಇದರಲ್ಲಿರುವ ಸೆನ್ಸರ್ ನೀವು ಯುಎಲ್ ವೇರ್ ಅನ್ನು ಕಿವಿಯಿಂದ ತೆಗೆದಾಗ ತನ್ನಷ್ಟಕ್ಕೆ ಆಫ್ ಆದರೆ ಧರಿಸಿದಾಗ ಆನ್ ಆಗುತ್ತದೆ. ನಾಯ್ಸ್ ಕ್ಯಾನ್ಸಲಿಂಗ್ ಆನ್ ಮಾಡಿದಾಗ 30 ಗಂಟೆ, ಸಾಮಾನ್ಯ ಸಂದರ್ಭದಲ್ಲಿ ಒಮ್ಮೆ ಚಾರ್ಜ್ ಮಾಡಿದ್ರೆ ನಿರಂತರ 50 ಗಂಟೆ ಸಂಗೀತ ಆಲಿಸಬಹುದು. ಬೆಲೆ 16,990 ರು.