ವಾಹನ ಸವಾರರಿಗೆ ಗುಡ್ ನ್ಯೂಸ್, ಇಂಧನ ಉಳಿಸಲು ಗೂಗಲ್ ಮ್ಯಾಪ್‍ನಿಂದ ಹೊಸ ಫೀಚರ್!

By Suvarna News  |  First Published Dec 15, 2023, 7:54 PM IST

ವಾಹನ ಸವಾರರಿಗೆ ಗೂಗಲ್ ಮ್ಯಾಪ್ ಹೊಸ ಫೀಚರ್ ಪರಿಚಯಿಸಿದೆ. ಈ ಫೀಚರ್ ಮೂಲಕ ಇಂಧನ ಉಳಿತಾಯ ಮಾಡಿ ನಿಗಧಿತ ಸ್ಥಳ ತಲಪಲು ಸಾಧ್ಯ. ನಿಮ್ಮ ಇಂಧನ ಉಳಿಸಲು ಗೂಗಲ್ ಮ್ಯಾಪ್ ಹೊರ ತಂದ ಹೊಸ ಫೀಚರ್ ಯಾವುದು?
 


ನವದೆಹಲಿ(ಡಿ.15) ಗೂಗಲ್ ಮ್ಯಾಪ್ ಅತೀ ಹೆಚ್ಚಾಗಿ ಬಳಕೆಯಾಗುವ ಆ್ಯಪ್. ವಾಹನ ಸವಾರರು, ಪ್ರಯಾಣಿಕರು ಸೇರಿದಂತೆ ಹಲವರು ಮ್ಯಾಪ್ ಬಳಕೆ ಮಾಡುತ್ತಾರೆ. ಗೂಗಲ್ ಕೂಡ ಇತ್ತೀಚೆಗೆ ಹೊಸ ಹೊಸ ಫೀಚರ್ ಪರಿಚಯಿಸುವ ಮೂಲಕ ಮತ್ತಷ್ಟು ಯೂಸರ್ ಫ್ರೆಂಡ್ಲಿಯಾಗಿ ಮಾಡಿದ್ದಾರೆ. ಇದೀಗ ಗೂಗಲ್, ವಾಹನ ಸವಾರರ ಇಂಧನ ಉಳಿಸಲು ಹೊಸ ಫೀಚರ್ಸ್ ಪರಿಚಯಿಸಿದೆ. ಹೊಸ ಫೀಚರ್ ಮೂಲಕ ಗೂಗಲ್ ಇಕೋ ಫ್ರೆಂಡ್ಲಿ ರೂಟ್ ಆಯ್ಕೆ ಮೂಲಕ ಸವಾರರು, ಪ್ರಯಾಣಿಕರ ಇಂಧನ ಉಳಿತಾಯಕ್ಕೆ ಬಹುದೊಡ್ಡ ಕೊಡುಗೆ ನೀಡಲಿದೆ.

ಗೂಗಲ್ ಮ್ಯಾಪ್‌ನಲ್ಲಿ ಯಾವುದೇ ಸ್ಥಳ ತಲುಪಲು ಮ್ಯಾಪ್ ಹಾಕಿದ ಬಳಿಕ ಗೂಗಲ್ ಮ್ಯಾಪ್ ಫಾಸ್ಟೆಸ್ಟ್ ಮಾರ್ಗ ತೋರಿಸುತ್ತದೆ. ಹೊಸ ಫೀಚರ್‌ನಿಂದಾಗಿ ನಿಮಗೆ ಎರಡು ಮಾರ್ಗಗಳನ್ನು ತೋರಿಸಲಿದೆ. ಒಂದು ಫಾಸ್ಟೆಸ್ಟ್ ರೂಟ್ ಮತ್ತೊಂದು ಇಕೋ ಫ್ರೆಂಡ್ಲಿ ರೂಟ್. ಇಕೋ ಫ್ಲೆಂಡ್ಲಿ ರೂಟ್, ಮಾರ್ಗ ಮಧ್ಯದಲ್ಲಿ ಸಿಗವು ಟ್ರಾಫಿಕ್ ಜಾಮ್, ಗುಂಡಿ ಬಿದ್ದ ರಸ್ತೆಗಳ ಬದಲು ಬೇರೆ ರಸ್ತೆಗಳ ಮೂಲಕ ಹೆಚ್ಚು ಇಂಧನ ಖರ್ಚಾಗದಂತೆ ನಿಗದಿತ ಸ್ಥಳ ತಲುಪಿಸುವ ಮಾರ್ಗವನ್ನು ತೋರಿಸಲಿದೆ. ನಿಮ್ಮ ವಾಹನ ಪೆಟ್ರೋಲ್, ಡೀಸೆಲ್, ಹೈಬ್ರಿಡ್, ಎಲೆಕ್ಟ್ರಿಕ್ ಮಾದರಿಯನ್ನು ಆಧರಿಸಿ ಇಕೋ ಫ್ರೆಂಡ್ಲಿ ಮಾರ್ಗದ ಇಂಧನ ದಕ್ಷತೆ ಅಂದಾಜನ್ನು ಗೂಗಲ್ ಮ್ಯಾಪ್ ತೋರಿಸುತ್ತದೆ.  

Tap to resize

Latest Videos

ಗೂಗಲ್ ಮ್ಯಾಪಲ್ಲಿ ರಸ್ತೆ ಹೇಳ್ತಾಳಲ್ಲ, ಆ ಮಹಿಳೆ ವಾಯ್ಸ್‌ ಯಾರದ್ದು ಹೇಳಿ ನೋಡೋಣ?

ಗೂಗಲ್ ಮ್ಯಾಪ್‌ನಲ್ಲಿ ನೀವು ಇಕೋ ಫ್ಲೆಂಡ್ಲಿ ಆಯ್ಕೆ ಟರ್ನ್ ಆನ್ ಮಾಡಬೇಕು. ಹೀಗಾದಲ್ಲಿ ಮಾತ್ರ ಎರಡು ಮಾರ್ಗಗಳನ್ನು ತೋರಿಸುತ್ತದೆ. ಇಕೋ ಫ್ಲೆಂಡ್ಲಿ ಟರ್ನ್ ಆನ್ ಮಾಡಿದರೆ, ಈ ಮಾರ್ಗದಲ್ಲಿ ಸಾಗುವಾಗ ನಿಮ್ಮ ವಾಹನ ಇಂಧನ ಆಧರಿಸಿ ಇಂಧನ ದಕ್ಷತೆ ಅಂದಾಜು ಲೆಕ್ಕವನ್ನು ಗೂಗಲ್ ಮ್ಯಾಪ್ ತೋರಿಸಲಿದೆ. ಗೂಗಲ್ ಮ್ಯಾಪ್ ಈ ಇಕೋ ಫ್ಲೆಂಡ್ಲಿ ಹಾಗೂ ದಕ್ಷತೆ ಅಂದಾಜು ಮಾಡಲು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಿದೆ. AI ಕಾರಣದಿಂದ ಗೂಗಲ್ ಮ್ಯಾಪ್ ಇಕೋ ಫ್ಲೆಂಡ್ಲಿ ಮಾರ್ಗದಲ್ಲಿ ಕಡಿಮೆ ಟ್ರಾಫಿಕ್, ಪರ್ವತ, ಘಾಟಿ ರಸ್ತೆಗಳು, ಹಾಳಾದ ರಸ್ತೆಗಳನ್ನು ಹೊರತುಪಡಿಸಿ ಇಂಧನ ದಕ್ಷತೆ ಹೆಚ್ಚಿಸುವಂತೆ ಮಾರ್ಗ ಸೂಚಿಸಲಿದೆ. 

ಗೂಗಲ್ ಮ್ಯಾಪ್ ಸಟ್ಟಿಂಗ್ಸ್‌ನಲ್ಲಿ ಕ್ಲಿಕ್ ಮಾಡಿ ನ್ಯಾವಿಗೇಶನ್ ಸೆಟ್ಟಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ರೂಟ್ ಆಪ್ಶನ್ ಆಯ್ಕೆ ಮಾಡಿಕೊಂಡರೆ ಫ್ಯೂಯೆಲ್ ಎಫೀಶಿಯನ್ಸಿ ಆಯ್ಕೆ ಲಭ್ಯವಾಗಲಿದೆ. ಈ ಇಕೋ ಫ್ಲೆಂಡ್ಲಿ ಫ್ಯೂಯೆಲ್ ಎಫೀಶಿಯನ್ಸಿ ಆಯ್ಕೆಯನ್ನು ಟರ್ನ್ ಆನ್ ಮಾಡಿಕೊಳ್ಳುವಾಗ ನಿಮ್ಮ ವಾಹನದ ಎಂಜಿನ್ ಮಾದರಿ ವಿವರವನ್ನು ನೀಡಬೇಕು. ಅಂದರೆ ಪೆಟ್ರೋಲ್, ಡೀಸೆಲ್ ಎಂಜಿನ್ ಅಥವಾ ಹೈಬ್ರಿಡ್-ಎಲೆಕ್ಟ್ರಿಕ್ ಎಂಜಿನ್ ಅನ್ನೋದನ್ನು ಉಲ್ಲೇಖಿಸಬೇಕು. ಇದಕ್ಕೆ ತಕ್ಕಂತೆ ನೀವು ಪ್ರಯಾಣಿಸಬೇಕಾದ ಇಕೋ ಫ್ಲೆಂಡ್ಲಿ ಮಾರ್ಗದಲ್ಲಿ ನಿಮಗೆ ಆಗುವ ಇಂಧನ ಲಾಭವನ್ನು ಗೂಗಲ್ ಮ್ಯಾಪ್ AI ತಂತ್ರಜ್ಞಾನ ಅಂದಾಜು ಮಾಡಲಿದೆ. 

ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

ಸದ್ಯ ಬಹುತೇಕ ಎಲ್ಲಾ ದೇಶದಲ್ಲಿ ಈ ಫೀಚರ್ ಪರಿಚಯಿಸಲಾಗಿದೆ. ಶೀಘ್ರದಲ್ಲೇ ಭಾರತದಲ್ಲೂ ಹೊಸ ಫೀಚರ್ ಜಾರಿಗೆ ಬರಲಿದೆ. 

click me!