ಡೆಸ್ಕ್‌ಟಾಪ್‌ಗಳಿಗೆ ಡಾರ್ಕ್ ಥೀಮ್ ಪರಿಚಯಿಸಿದ ಗೂಗಲ್

By Suvarna News  |  First Published Sep 13, 2021, 2:07 PM IST

ನಮ್ಮ ನಿತ್ಯದ ಬದುಕಿನ ಅನಿವಾರ್ಯವೇ ಆಗಿರುವ ಗೂಗಲ್ ಸರ್ಚ್ ಎಂಜಿನ್ ಡೆಸ್ಕ್‌ಟಾಪ್‌ಗಳಿಗೆ ಡಾರ್ಕ್ ಥೀಮ್ ಪರಿಚಯಿಸುತ್ತಿದೆ. ಈಗಾಗಲೇ ಕೆಲವರು ಈ ಆಪ್ಷನ್ ಅನ್ನು ಬಳಸುತ್ತಿದ್ದಾರೆ. ಕಂಪನಿಯು ಈ ಹಿಂದೆಯೇ ಈ ಫೀಚರ್‌ ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿತ್ತು. ಇದೀಗ ಡಾರ್ಕ್ ಥೀಮ್ ಆರಂಭಿಸಿದೆ.


ಇಂಟರ್ನೆಟ್ ದೈತ್ಯ ಕಂಪನಿ ಗೂಗಲ್, ತನ್ನ ಬಳಕೆದಾರರಿಗೆ ಹೊಸ ಫೀಚರ್‌ವೊಂದನ್ನು ಪರಿಚಯಿಸುತ್ತಿದೆ. ಡಾರ್ಕ್ ಮೋಡ್- ಇದು ಗೂಗಲ್‌ ಬಳಕೆದಾರರಿಗೆ ನೀಡುತ್ತಿರುವ ಹೊಸ ವೈಶಿಷ್ಟ್ಯವಾಗಿದೆ. ಈಗಾಗಲೇ ನೀವು ಡಾರ್ಕ್ ಮೋಡ್ ಆಯ್ಕೆಯನ್ನು ಗೂಗಲ್ ಪೇಜ್ ತೆರೆದಾಗ ನೋಡಿರಲೂಹುದು.

ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಗೂಗಲ್ ಅಂತಿಮವಾಗಿ ಡೆಸ್ಕ್‌ಟಾಪ್‌ನಲ್ಲಿ ಹುಡುಕಾಟಕ್ಕಾಗಿ ಡಾರ್ಕ್ ಆಯ್ಕೆಯನ್ನು ಅನುಷ್ಠಾನಗೊಳಿಸಿದೆ. ಮೊಬೈಲ್ ಆಪ್‌ನಲ್ಲೂ ಈ ಡಾರ್ಕ್ ಥೀಮ್ ಬಳಸುವ ಸಂಬಂಧ ಪರೀಕ್ಷೆಗಳನ್ನು ಗೂಗಲ್ ನಡೆಸುತ್ತಿದೆ ಎಂದು ತಿಳಿದು ಬಂದಿದೆ. 

Tap to resize

Latest Videos

undefined

App ಮೂಲಕ ಜಿಮೇಲ್ ಬಳಕೆದಾರರು ವಾಯ್ಸ್, ವಿಡಿಯೋ ಕಾಲ್ ಮಾಡಬಹುದು!

ಡೆಸ್ಕ್‌ಟಾಪ್‌ಗೆ ಡಾರ್ಕ್ ಮೋಡ್‌ ಪರಿಚಯಿಸುವ ವಿಷಯವನ್ನು ಡಿಸೆಂಬರ್ 2020 ರ ಮುಂಚೆಯೇ ತಿಳಿದು ಬಂದಿತ್ತು. ಆದರೆ ಈಗ ಅದನ್ನು ಎಲ್ಲಾ ಬಳಕೆದಾರರಿಗೆ ಕಳುಹಿಸಲಾಗುತ್ತಿದೆ. ಎಲ್ಲಾ ಬಳಕೆದಾರರು ಅದನ್ನು "ಮುಂದಿನ ಹಲವು ವಾರಗಳಲ್ಲಿ" ಸ್ವೀಕರಿಸುವುದರೊಂದಿಗೆ ಗೂಗಲ್, ಹಂತ ಹಂತಗಳಲ್ಲಿ ನವೀಕರಣವನ್ನು ಜಾರಿ ಮಾಡಲಿದೆ ಎಂದು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಗೂಗಲ್ ಈ ಸುದ್ದಿಯನ್ನು ಪ್ರಕಟಿಸಿದೆ. 

ಸೆಟ್ಟಿಂಗ್‌ಗಳ ಮೆನುಗೆ ನ್ಯಾವಿಗೇಟ್ ಮಾಡುವ ಮೂಲಕ ಬಳಕೆದಾರರು ಹೊಸ ಡಾರ್ಕ್ ಥೀಮ್ ಅನ್ನು ಉಪಯೋಗಿಸಿಕೊಳ್ಳಬಹುದು. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕೆಲವು ಬಳಕೆದಾರರು ಸೂರ್ಯನ ಚಿಹ್ನೆ(ಸನ್ ಸಿಂಬಲ್)ಯನ್ನು ಶೋಧಿಸಿದ್ದಾರೆ. ಅದನ್ನು ಸೆಟ್ಟಿಂಗ್‌ಗಳ ಪುಟಕ್ಕೆ ಭೇಟಿ ನೀಡದೆ ಆನ್ ಅಥವಾ ಆಫ್ ಮಾಡಲು ಬಳಸಬಹುದು. ಆ ಮೂಲಕ ನೀವು ಗೂಗಲ್ ಪೇಜ್‌ನಲ್ಲಿ ಡಾರ್ಕ್ ಥೀಮ್ ಅನ್ವಯಿಸಿ ಬಳಸಬಹುದಾಗಿದೆ.
 

ಇಷ್ಟು ಮಾತ್ರವಲ್ಲದೇ ನೀವು, ಸೆಟ್ಟಿಂಗ್ಸ್‌ ಹೋಗಿ ಅಲ್ಲಿ  ಸರ್ಚ್ ಸೆಟ್ಟಿಂಗ್ಸ್‌ ಮೇಲೆ ಟ್ಯಾಪ್ ಮಾಡಬೇಕು ಮತ್ತು ಡಾರ್ಕ್ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕವೂ ಡಾರ್ಕ್ ಥೀಮ್ ಅನ್ನ ಅನ್ವಯಿಸಿಕೊಳ್ಳಬಹುದು. ನಿಮ್ಮ ಸಾಧನದ ಸೆಟ್ಟಿಂಗ್‌ಗಳ ಆಧಾರದ ಮೇಲೆ ಥೀಮ್ ಅನ್ನು ಸ್ವಯಂಚಾಲಿತವಾಗಿ ಬದಲಾಯಿಸುವ "ಸಾಧನ ಡೀಫಾಲ್ಟ್" ಆಯ್ಕೆಯೂ ಇದೆ. ವರದಿಗಳ ಪ್ರಕಾರ, ಕೆಲವು ಬಳಕೆದಾರರು ಸೂರ್ಯನ ಚಿಹ್ನೆಯನ್ನು ನೋಡಿದ್ದಾರೆ ಅದನ್ನು ಆನ್ ಮತ್ತು ಆಫ್ ಮಾಡಲು ಬಳಸಲಾಗುತ್ತದೆ. ಆದಾಗ್ಯೂ, ಇದು ನವೀಕರಣದ ನಿಜವಾದ ಅಂಶವೋ ಅಥವಾ ಇನ್ನೊಂದು ಪರೀಕ್ಷೆಯೋ ಎಂಬುದು ಸ್ಪಷ್ಟವಾಗಿಲ್ಲ. ಹೊಸ "ಗೋಚರತೆ(ಅಫೀಯರೆನ್ಸ್)" ಸೆಟ್ಟಿಂಗ್‌ಗಳಲ್ಲಿ ಬಳಕೆದಾರರಿಗೆ ಮೂರು ಆಯ್ಕೆಗಳಿವೆ: ಸಾಧನ ಡೀಫಾಲ್ಟ್, ಡಾರ್ಕ್ ಥೀಮ್ ಮತ್ತು ಲೈಟ್ ಥೀಮ್.

ನಿಮ್ಮ ವಾಟ್ಸಾಪ್‌ ಆನ್‌ಲೈನ್ ಸ್ಟೇಟಸ್ ಮರೆಮಾಚಬಹುದು!

ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ಹುಡುಕಾಟ ಪುಟಗಳು, ಗೂಗಲ್ ಮುಖಪುಟ, ಹುಡುಕಾಟ ಫಲಿತಾಂಶಗಳ ಪುಟ ಮತ್ತು ಹುಡುಕಾಟ ಸೆಟ್ಟಿಂಗ್ಗಳನ್ನು ಒಳಗೊಂಡಿವೆ ಎಂದು ಹೇಳಿದೆ. ಡೆಸ್ಕ್ಟಾಪ್ನಲ್ಲಿ, ಬಳಕೆದಾರರು ತಮ್ಮ  ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡಿದಾಗಲೆಲ್ಲಾ  ಬೂದುಬಣ್ಣದ ಹಿನ್ನೆಲೆ ತೋರಿಸುತ್ತದೆ. ಈ ವೈಶಿಷ್ಟ್ಯವನ್ನು ಬಳಕೆದಾರರು ವಿನಂತಿಸಿದ್ದಾರೆ ಎಂದು ಗೂಗಲ್ ಸಹ ಗುರುತಿಸಿದೆ ಮತ್ತು ಮುಂಬರುವ ವಾರಗಳಲ್ಲಿ ಸರ್ಚ್ ಡಾರ್ಕ್ ಥೀಮ್ ಅನ್ನು ಸಂಪೂರ್ಣವಾಗಿ ಪ್ರವೇಶಿಸಬಹುದು ಎಂದು ಹೇಳಿದೆ. ಕಾರ್ಯಕ್ಷಮತೆಯನ್ನು ಮೊಬೈಲ್ನಲ್ಲಿಯೂ ಪರೀಕ್ಷಿಸಲಾಗುತ್ತಿದೆ, ಆದರೂ ಇದು ಇನ್ನೂ ಬಿಡುಗಡೆಯಾಗಿಲ್ಲ.

ಬಹುದೊಡ್ಡ ಸರ್ಚ್ ಎಂಜಿನ್ ಎನಿಸಿಕೊಂಡಿರುವ ಗೂಗಲ್ ತನ್ನ ಬಳಕೆದಾರರಿಗೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗುವಂಥ ಅನೇಕ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಬಳಕೆದಾರರ ಸ್ನೇಹಿ ಎನಿಸುವಂತೆ ಯಾವುದೇ ರೀತಿ ವೈಶಿಷ್ಟ್ಯಗಳನ್ನು ಅದು ನೀಡದೇ ಹೋಗುವುದಿಲ್ಲ.  ಡಾರ್ಕ್ ಥೀಮ್ ಕೂಡ ಅದೇ  ರೀತಿಯಲ್ಲಿ ವಿನ್ಯಾಸಗೊಂಡಿದ್ದು ಎಂದು ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ಈ ಡಾರ್ಕ್ ಥೀಮ್ ತುಂಬ ಜನಪ್ರಿಯವಾಗುತ್ತಿದೆ. ವಿಶೇಷವಾಗಿ ಮೊಬೈಲ್ ಆಪ್‌ಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಕಣ್ಣಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಡಾರ್ಕ್ ಥೀಮ್ ಹೆಚ್ಚು ಉಪಯೋಗಿಕಾರಿಯಾಗಿದೆ. ಹಾಗಾಗಿ, ಬಹುತೇಕ ಆಪ್‌ಗಳು ಇದೀಗ ಡಾರ್ಕ್ ಥೀಮ್ ಆಪ್ಷನ್‌ನೊಂದಿಗೆ ಬರುತ್ತಿವೆ. ಇದೀಗ ಗೂಗಲ್ ಕೂಡ ತನ್ನ ಬಳಕೆದಾರರಿಗೆ ಡಾರ್ಕ್ ಥೀಮ್ ಪರಿಚಯಿಸುತ್ತಿದೆ. 

ದೀಪಾವಳಿಗೆ ಜಿಯೋ ನೆಕ್ಸ್ಟ್ ಸ್ಮಾರ್ಟ್‌ಫೋನ್ ಲಾಂಚ್ ಪಕ್ಕಾ

click me!