
ಫೇಸ್‌ಬುಕ್ ಒಡೆತನದ ವಾಟ್ಸಾಪ್ ತ್ವರಿತ ಸಂದೇಶ ರವಾನೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಈ ವಾಟ್ಸಾಪ್ ಕಾಲಕಾಲಕ್ಕೆ ಬಳೆಕದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗಿರುವ ಹೊಸ ಫೀಚರ್ ಏನೆಂದರೆ- ಶೀಘ್ರವೇ ವಾಟ್ಸಾಪ್‌ನಲ್ಲಿ ಆನ್‌ಲೈನ್ ಸ್ಟೇಟಸ್ ಅನ್ನು ಕೂಡಾ ಮರೆ ಮಾಚಬಹುದು.
App ಮೂಲಕ ಜಿಮೇಲ್ ಬಳಕೆದಾರರು ವಾಯ್ಸ್, ವಿಡಿಯೋ ಕಾಲ್ ಮಾಡಬಹುದು!
ಹೌದು ನೀವು ಓದುತ್ತಿರುವುದು ನಿಜ. ವಾಟ್ಸಾಪ್ ಅಂಥದೊಂದು ವೈಶಿಷ್ಟ್ಯವನ್ನು ಶೀಘ್ರವೇ ಪರಿಚಯಿಸಲಿದೆ. ವಾಟ್ಸಾಪ್ ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಹೈಡ್ ಮಾಡಬಹುದು. ಆ ಮೂಲಕ ನಂಬಿಗಸ್ಥ ಅಲ್ಲದವರಿಂದ ನಿರಂತರ ಸಂದೇಶಗಳನ್ನು ತಪ್ಪಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ವಾಟ್ಸಾಪ್ ಅಭಿವೃದ್ಧಿಪಡಿಸುತ್ತಿರುವ ಟೂಲ್‌ನಿಂದಾಗಿ ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯವಾಗಲಿದೆ.
ಲಾಸ್ಟ್ ಸೀನ್, ಪ್ರೊಫೈಲ್ ಪಿಕ್ಚರ್ ಮತ್ತು ಅಬೌಟ್ ಇತ್ಯಾದಿ ಸಂಗತಿಗಳನ್ನು ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಇರುವ ಎಲ್ಲರೂ ನೋಡಬಹುದು ಇಲ್ಲವೇ ಯಾರಿಗೂ ನೋಡಲಾಗುವುದಿಲ್ಲ ಆ ರೀತಿಯಾಗಿ ಸೆಟ್ ಮಾಡಿಕೊಳ್ಳಬಹುದು. ಈ ಆಯ್ಕೆಯಲ್ಲಿ ಯಾವುದೇ ರೀತಿಯ ಕಸ್ಟಮೈಸ್ ಮಾಡಿಕೊಳ್ಳಲು ಅವಕಾಶವಿಲ್ಲ. ಹಾಗಾಗಿಯೇ ವಾಟ್ಸಾಪ್ ಈ ಆಪ್ಷನ್ ಅನ್ನು ಬಳಕೆದಾರರು ತಮ್ಮ ಆಯ್ಕೆಗೆ ತಕ್ಕಂತ ಬದಲಿಸಿಕೊಳ್ಳಲು ಅನುಕೂಲವಾಗುವಂತೆ ಮಾಡಲು ಮುಂದಾಗಿದೆ. ಈಗಾಗಲೇ ಈ ಸಂಬಂಧ ಪರೀಕ್ಷೆಗಳನ್ನು ವಾಟ್ಸಾಪ್ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಒಂದೊಮ್ಮೆ ಈ ಫೀಚರ್ ಅನುಷ್ಠಾನಕ್ಕೆ ಬಂದರೆ ಸಾಕಷ್ಟು ಲಾಭವಿದೆ. ಆಯ್ಕೆಯನ್ನು ಬಳಸಿಕೊಂಡು ಲಾಸ್ಟ್ ಸೀನ್ ಸಂಗತಿಯನ್ನು ಯಾರಿಗೆ ಬೇಕೋ ಅವರಿಗೆ ಮಾತ್ರವೇ ಕಾಣಿಸುವ ಹಾಗೆ ಮತ್ತು ಯಾರಿಗೆ ಬೇಡ್ವೋ ಅವರಿಗೆ ಕಾಣದ ಹಾಗೆ ಮಾಡಲು ಸಾಧ್ಯವಾಗಲಿದೆ. ಮೊದಲಾದರೆ ಈ ಆಯ್ಕೆಯನ್ನು ಕಾಂಟಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ಎಲ್ಲರಿಗೂ ಅನ್ವಯಿಸಬೇಕಾಗುತ್ತಿತ್ತು. ಇದೇ ಆಯ್ಕೆಯನ್ನು ನೀವು ಪ್ರೊಫೈಲ್ ಪಿಕ್ಚರ್ಸ್, ಬಯೋಡೇಟಾ ಸೇರಿ ಇನ್ನಿತರ ಸಂಗತಿಗಳ ಮೇಲೆ ನಿಯಂತ್ರಣ ಮಾಡಬಹುದು. ಈ ಮೂಲಕ ನಿಮ್ಮ ಖಾಸಗಿತನದ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ. ಲಾಸ್ಟ್ ಸೀನ್ ಅನ್ನು ನಿಷ್ಕ್ರಿಯಗೊಳಿಸುವುದು ಮತ್ತು ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿರುವ ಜನರ ಗುಂಪಿನಿಂದ ಅದನ್ನು ಮರೆಮಾಡಿದರೆ, ಪ್ರತಿಯಾಗಿ ವಾಟ್ಸಾಪ್ ತಮ್ಮ ಮಾಹಿತಿಯನ್ನು ಮರೆಮಾಡುತ್ತದೆ.
ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5ಪ್ರೋ ಲ್ಯಾಪ್‌ಟ್ಯಾಪ್ ಬಿಡುಗಡೆ
ಈ ಫೀಚರ್ ಈಗಾಗಲೇ ಐಒಎಸ್‌ನಲ್ಲಿ ಕಾಣಿಸಿಕೊಂಡಿದೆ. ಫೀಚರ್ ಪೂರ್ತಿಯಾದ ಮೇಲೆ ಎಲ್ಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ದೊರೆಯಲಿದೆ. ಈ ಮುಂಚೆ, ಜನಪ್ರಿಯ ಸಂದೇಶ ಅಪ್ಲಿಕೇಶನ್ ಇದು ಒಮ್ಮೆ ವೀಕ್ಷಿಸಿದ ನಂತರ ಶಾಶ್ವತವಾಗಿ ಕಣ್ಮರೆಯಾಗುವ ಸಂದೇಶಗಳನ್ನು ಒಮ್ಮೆ ನೋಡುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿತ್ತು. ಸಂದೇಶಗಳಲ್ಲಿನ ಪ್ರತಿಕ್ರಿಯೆಗಳ ಕುರಿತು ವಾಟ್ಸಾಪ್‌ನ ಅನುಷ್ಠಾನದ ಮೊದಲ ನೋಟದ ನಂತರ, ಕಂಪನಿಯು ಐಒಎಸ್ ಸಾಧನಗಳಿಗಾಗಿ ಮರುವಿನ್ಯಾಸಗೊಳಿಸಲಾದ ಚಾಟ್ ಬಬಲ್ಸ್ ಮೇಲೆ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯವು ಅಭಿವೃದ್ಧಿಯಲ್ಲಿದೆ ಮತ್ತು ಭವಿಷ್ಯದ ನವೀಕರಣದಲ್ಲಿ ಬಿಡುಗಡೆಯಾಗಲಿದೆ ಎಂದು ವೆಬ್‌ತಾಣಗಳು ವರದಿ ಮಾಡಿವೆ.
ಮರುವಿನ್ಯಾಸಗೊಳಿಸಲಾದ ಬಬಲ್ಸ್ ವೃತ್ತಾಕಾರದಲ್ಲಿದ್ದು ಮತ್ತು ಹೊಸ ಹಸಿರ ಬಣ್ಣವನ್ನು ಹೊಂದಿವೆ. ಹಾಗೆಯೇ, ಕತ್ತಲು ಮತ್ತು ಲೈಟ್ ಮೋಡ್‌ಗಳ ನಡುವೆ ಸ್ವಲ್ಪ ಮಟ್ಟಿಗಿನ ವ್ಯತ್ಯಾಸವನ್ನು ನೀವು ಗುರುತಿಸಬಹುದಾಗಿದೆ. ಮರುವಿನ್ಯಾಸಗೊಳಿಸಲಾದ ಬಬಲ್ಸ್ ಹೆಚ್ಚು ದೊಡ್ಡದಾಗಿದ್ದು ಮತ್ತು ನೋಡಲು ಒಂಚೂರು ಮಾಡರ್ನ್ ತರಹ ಕಾಣುತ್ತವೆ ಎಂದು ಹೇಳಲಾಗಿದೆ.
IT ನಿಯಮದಡಿ 30 ಲಕ್ಷಕ್ಕೂ ಅಧಿಕ ಖಾತೆ ನಿಷೇಧಿಸಿದ ವಾಟ್ಸಾಪ್!
ಆಧುನಿಕ ಜೀವನದಲ್ಲಿ ವಾಟ್ಸಾಪ್ ನಮ್ಮೆಲ್ಲರ ಬದುಕಿನ ಭಾಗವೇ ಆಗಿದೆ. ಜೊತೆಗೆ, ನಮಗೆ ವಾಟ್ಸಾಪ್ ಅನಿವಾರ್ಯೂ ಆಗದೆ. ಹಾಗಾಗಿ, ವಾಟ್ಸಾಪ್ ಒಡೆತನದ ಫೇಸ್‌ಬುಕ್ ಕಂಪನಿಯು, ಆ ಆಪ್ ಅನ್ನು ಬಳಕೆದಾರರಸ್ನೇಹಿಯಾಗಿಡಲು ಪ್ರಯತ್ನಿಸುತ್ತಲೇ ಇರುತ್ತದೆ. ಕಾಲಕಾಲಕ್ಕೆ ಅಪ್‌ಡೇಟ್ ಮತ್ತು ಹೊಸ ಹೊಸ ಫೀಚರ್‌ಗಳನ್ನು ಸೇರಿಸುವ ಮೂಲಕ ವಾಟ್ಸಾಪ್ ಬಳಕೆಯನ್ನು ಹೆಚ್ಚು ಸರಳಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.