ನವದೆಹಲಿ(ಸೆ.11): ಡಿಜಿಟಲ್ ಯುಗದಲ್ಲಿ ಎಲ್ಲಾ ದೇಶಗಳು ಎದುರಿಸುತ್ತಿರುವ ಅತೀ ದೊಡ್ಡ ಸವಾಲು ಡಿಜಿಟಲ್ ಮಾಹಿತಿ ಸೋರಿಕೆ. ಡಿಜಿಟಲ್ ಉಲ್ಲಂಘನೆ ಮಾಡಿದ ಹಲವು ಆ್ಯಪ್‌ಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಇದೀಗ ಬಹಿರಂಗವಾಗಿರುವ ಮಾಹಿತಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರ ಅತೀ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸೂಚನೆ ನೀಡಿದೆ. ಕಾರಣ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಹಿತಿ ಸೋರಿಕೆ ಮಾಡುವ 19,300 ಆ್ಯಪ್ ಇದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಜಾಗತಿಕ ಸೈಬರ್ ಸೆಕ್ಯೂರಿಟಿ ಸೂಚ್ಯಂಕದಲ್ಲಿ ಭಾರತಕ್ಕೆ 10ನೇ ಸ್ಥಾನ; ಚೀನಾ, ಪಾಕ್‌ಗಿಂತ ಸುರಕ್ಷಿತ!
undefined
ಡಿಜಿಟಲ್ ಸೆಕ್ಯೂರಿಟಿ ಅವಾಸ್ಟ್ ಈ ಮಹತ್ವದ ಮಾಹಿತಿ ಪ್ರಕಟಿಸಿದೆ. ಬಳಕೆದಾರರ ವೈಯುಕ್ತಿಕ ಡೇಟಾ ಸೋರಿಕೆ ಮಾಡುವ, ವ್ಯಕ್ತಿಯನ್ನು ಅಭದ್ರತೆಗೆ ತಳ್ಳುವ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಕ್ರಿಯವಾಗಿದೆ ಎಂದು ಅವಾಸ್ಟ್ ಹೇಳಿದೆ.
19,300ಕ್ಕೂ ಹೆಚ್ಚು ಆ್ಯಂಡ್ರಾಯ್ಡ್ ಆ್ಯಪ್ ಬಳಕೆದಾರರ ಡೇಟಾ ಸೋರಿಕೆ ಮಾಡುತ್ತಿದೆ. ಹಲವು ಆ್ಯಪ್‌ಗಳ ಫೈರ್‌ಬೇಸ್ ಡೇಟಾ ಸಮಸ್ಯೆಯಿಂದ ಮಾಹಿತಿ ಸೋರಿಕೆಯಾಗುತ್ತಿದೆ. ಇನ್ನು ಹಲವು ಆ್ಯಪ್‌ಗಳು ಮಾಹಿತಿ ಕದಿಯಲು ಅಭಿವೃದ್ಧಿ ಮಾಡಲಾಗಿದೆ ಎಂದು ಡಿಜಿಟಲ್ ಭದ್ರತಾ ಕಂಪನಿ ಹೇಳಿದೆ.
ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!
19,300ಕ್ಕೂ ಹೆಚ್ಚು ಆ್ಯಪ್‌ಗಳು ಬಳಕೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಪಾಸ್‌ವರ್ಡ್, ಬ್ಯಾಂಕ್ ಖಾತೆ ವಿವರಗಳು, ಅಂತರ್ಜಾಲದಲ್ಲಿನ ಚಟುವಟಿಕೆ, ಸಾಮಾಜಿಕ ಜಾಲತಾಣದಲ್ಲಿನ ಸಂದೇಶಗಳನ್ನು ಸೋರಿಕೆ ಮಾಡಿದೆ ಎಂದು ವರದಿ ಹೇಳುತ್ತಿದೆ. ಡಿಜಿಟಲ್ ಭದ್ರತಾ ಕಂಪನಿ ಸೂಚನೆ ಮೇರೆಗೆ ಗೂಗಲ್ ಈಗಾಗಲೇ 19,300 ಆ್ಯಪ್‌ಗಳಿಗೆ ವಾರ್ನಿಂಗ್ ನೀಡಿದೆ. ತಕ್ಷಣವೇ ಫೈರ್‌ಬೇಸ್ ಡೇಟಾ ಸಂರಕ್ಷಿಸುವಂತೆ ತಾಕೀತು ಮಾಡಿದೆ.