ಕೋವಿಡ್ ಎರಡನೇ ಹೆಚ್ಚುತ್ತಿದ್ದು, ಅದರಿಂದ ಬಚಾವ್ ಆಗಲು ಎಲ್ಲರೂ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಸರ್ಕಾರ CoWIN ಎಂಬ ಪೋರ್ಟಲ್ ಶುರು ಮಾಡಿದೆ. ಇದೀಗ ಸರ್ಕಾರ ಈ ಪೋರ್ಟಲ್ ಸೆಕ್ಯುರಿಟಿ ಕೋಡ್ ಫೀಚರ್ ಪರಿಚಯಿಸಿದೆ. ಯಾರು ಕೋವಿನ್ ಮೂಲಕ ಲಸಿಕೆಗೆ ನೋಂದಣಿ ಮಾಡಿಸಿಕೊಳ್ಳುತ್ತಾರೆ ಅವರಿಗೆ ಇದು ಅನ್ವಯವಾಗುತ್ತದೆ.
ಒಮ್ಮೊಮ್ಮೆ ತಾಂತ್ರಿಕತೆಯ ನಮಗೆ ಲಾಭವನ್ನು ಮಾಡುವುದರ ಬದಲು ತೊಂದರೆಯನ್ನು ಹೆಚ್ಚಿಸಿ ಬಿಡುತ್ತದೆ. ಇದಕ್ಕೆ ಕೋವಿನ್(CoWIN) ಉದಾಹರಣೆಯಾಗಿ ನೀಡಬಹುದು. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರು ಕೋವಿನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಹೇಳಿತ್ತು. ಅದರ ಪ್ರಕಾರ, ನೋಂದಣಿ ಮಾಡಿಸಿಕೊಂಡವರಿಗೆ ನಿಮಗೆ ಲಸಿಕೆ ನೀಡಲಾಗಿದೆ ಇಲ್ಲವೇ ನೀಡಲಾಗಿದ್ದ ಅಪಾಯಿಂಟ್ಮೆಂಟ್ ರದ್ದಾಗಿದೆ ಎಂಬಂಥ ಸಂದೇಶಗಳು ಬರಲಾರಂಭಿಸಿದ್ದವು. ಈ ಬಗ್ಗೆ ಬಹಳಷ್ಟು ಕಂಪ್ಲೇಂಟ್ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಕೋವಿನ್ ಅನ್ನು ಮತ್ತಷ್ಟು ಸುಧಾರಿಸಿದೆ. ಆಗುತ್ತಿರುವ ತಪ್ಪುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನಾಲ್ಕು ಡಿಜಿಟ್‌ಗಳ ಸೆಕ್ಯುರಿಟಿ ಕೋಡ್(ಒಟಿಪಿ) ನೀಡಲಾಗುತ್ತಿದೆ.
ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?
undefined
ಕೋವಿಡ್ ಪೋರ್ಟಲ್‌ನಲ್ಲಿ ಲಸಿಕೆ ಪಡೆಯಲು ಇಚ್ಛಿಸುವವರು ನೋಂದಣಿಯನ್ನು ಮಾಡಿಸಿದ ಬಳಿಕ ಅವರ ಮೊಬೈಲ್‌ಗೆ ಸೆಕ್ಯುರಿಟಿ ಕೋಡ್ ಕಳುಹಿಸಲಾಗುತ್ತದೆ. ಈ ಕೋಡ್ ಅನ್ನು ಬಳಕೆದಾರರು ಲಸಿಕೆ ಪಡೆದುಕೊಳ್ಳುವ ಮುನ್ನ ಲಸಿಕೆ ಹಾಕುವ ಆರೋಗ್ಯ ಸಿಬ್ಬಂದಿ ಅಥವಾ ತಪಾಸಣಾ ಸಿಬ್ಬಂದಿಗೆ ತೋರಿಸಬೇಕಾಗುತ್ತದೆ. ಈ ವೇಳೆ ಸಕ್ಸಸ್ ಫಲಿತಾಂಶ ಬಂದು ಕೂಡಲೇ ಆಗ ಸಿಬ್ಬಂದಿ ಲಸಿಕೆಯನ್ನು ನೀಡುತ್ತಾರೆ. ಮತ್ತು ಕೋವಿನ್ ಪೋರ್ಟಲ್‌ನಲ್ಲೂ ಅದನ್ನು ದಾಖಲಿಸಬೇಕಾಗುತ್ತದೆ. ಸ್ವೀಕೃತಿ ಪತ್ರದಲ್ಲಿಯೂ ಈ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ತಾಂತ್ರಿಕ ದೋಷಗಳನ್ನು ಕಡಿಮೆ ಮಾಡಲು ಮತ್ತು ಇದರಿಂದಾಗಿ ಫಲಾನುಭವಿಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು ಕೋವಿನ್ ವ್ಯವಸ್ಥೆಯು ಮೇ 8 ರಿಂದ ಕೋವಿನ್ ಅಪ್ಲಿಕೇಶನ್‌ನಲ್ಲಿ 4-ಅಂಕಿಯ ಭದ್ರತಾ ಕೋಡ್‌ನ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಯಾರು ಆನ್‌ಲೈನ್ ಮೂಲಕ ವ್ಯಾಕ್ಸಿನೇಷನ್‌ಗೆ ಸ್ಲಾಟ್ ಬುಕ್ ಮಾಡಿಕೊಳ್ಳುತ್ತಾರೋ ಅವರಿಗೆ ಮಾತ್ರವಷ್ಟೇ ಈ ಹೊಸ ಫೀಚರ್ ಅನ್ವಯವಾಗಲಿದೆ ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯವು, ನಾಲ್ಕು ಸಂಖ್ಯೆಗಳ ಸೆಕ್ಯುರಿಟಿ ಕೋಡ್ ಅನ್ನು ಅಪಾಯಿಂಟ್ಮೆಂಟ್ ಸ್ವೀಕೃತಿ ಪತ್ರದ ಮೇಲೂ ನಮೂದಿಸಲಾಗುವುದು ಮತ್ತು ಈ ಬಗ್ಗೆ ವ್ಯಾಕ್ಸಿನೇಟರ್‌ಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಪಾಯಿಂಟ್ಮೆಂಟ್ ಬಕ್ಕಿಂಗ್ ಸಕ್ಸೆಸ್ ಆದಮೇಲೆ ಫಲಾನುಭವಿ ಫೋನ್ ನಂಬರ್‌ಗೆ ಒಂದು ದೃಢೀಕರಣದ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಜೊತೆಗೆ ಫಲಾನುಭವಿಗಳು ಈ ಅಪಾಯಿಂಟ್ಮೆಂಟ್ ಸ್ವೀಕೃತಿ ಪತ್ರವನ್ನು ಮೊಬೈಲ್‌ನಲ್ಲಿ ಉಳಿಸಿಕೊಳ್ಳಬಹುದು ಮತ್ತು ಸಂಬಂಧಿಸಿದವರಿಗೆ ತೋರಿಸಬಹುದು ಎಂದು ತಿಳಿಸಲಾಗಿದೆ.
ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ
ಆನ್‌ಲೈನ್ ಅಪಾಯಿಂಟ್ಮೆಂಟ್ ಕಾಯ್ದಿರಿಸಿದಂತಹವರಿಗೆ, ನಾಗರಿಕರ ವ್ಯಾಕ್ಸಿನೇಷನ್ ಸ್ಥಿತಿಗೆ ಸಂಬಂಧಿಸಿದ ಡೇಟಾಗಳನ್ನು ಸರಿಯಾಗಿ ನಮೂದಿಸಲು ಮತ್ತು ಅವರಿಗೆ ಕಾಯ್ದಿರಿಸಿದ ಕೇಂದ್ರದಲ್ಲಿ ಸೇವೆಗಳನ್ನು ಪಡೆಯುವವರಿಗೆ ಈ ಫೀಚರ್ ಅದನ್ನು ಖಚಿತಪಡಿಸುತ್ತದೆ. ಇದರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸೆಕ್ಯುರಿಟಿ ಕೋಡ್ ನೆರವು ನೀಡುತ್ತದೆ ಎಂದು ತಿಳಿಸಲಾಗಿದೆ.
ಕೋವಿನ್ ಪೋರ್ಟಲ್ ಬಗ್ಗೆ ಅನೇಕ ತಕರಾರುಗಳಿವೆ. ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವರದಿಗಳಿವೆ. ಈಗ ಸರ್ಕಾರವು ತಾಂತ್ರಿಕೆ ಸಮಸ್ಯೆಗಳನ್ನು ಸರಿ ಮಾಡಲು ಹೊರಟಿರುವುದು ಫಲಾನುಭವಿಗಳ ಹಿತದೃಷ್ಟಿಯಿಂದ ಒಳ್ಳೆಯದು. ಬಹಳಷ್ಟು ಸಂದರ್ಭದಲ್ಲಿ ಕೋವಿನ್ ಮೂಲಕ ನಮೂದಿಸಿಕೊಂಡು, ಲಸಿಕೆ ಹಾಕಿಸಿಕೊಳ್ಳಲು ಅಪಾಂಟ್ಮೆಂಟ್ ತೆಗೆದುಕೊಂಡವರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದವು ಮತ್ತು ಅವೆಲ್ಲವೂ ತಾಂತ್ರಿಕ ಕಾರಣಗಳೇ ಆಗಿದ್ದವು. ಇದೀಗ ಸರ್ಕಾರ ಈ ನಾಲ್ಕು ಸಂಖ್ಯೆಗಳ ಸೆಕ್ಯುರಿಟಿ ಕೋಡ್ ಬಳಸಲು ಮುಂದಾಗುವ ಮೂಲಕ ಗರಿಷ್ಠ ತಾಂತ್ರಿಕ ಸಮಸ್ಯೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ.
ಕೋವಿನ್ ಪೋರ್ಟಲ್ ಡೇಟಾ ಸುರಕ್ಷತೆಯ ದೃಷ್ಟಿಯಿಂದಲೂ ಇದು ಸೆಕ್ಯುರಿಟ್ ಕೋಡ್ ಅಗತ್ಯವಾಗಿತ್ತು ಮತ್ತು ಈ ಕ್ರಮದಿಂದಾಗಿ ಮಾನವ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲ. ಇದರಿಂದ ವ್ಯವಸ್ಥೆಯ ಸರಳೀಕರಣಕ್ಕೆ ಹೆಚ್ಚು ಅನುಕೂಲವಾಗುತ್ತದೆ. ದಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ