ಇನ್ನು ವಾಟ್ಸಪ್‌ನಲ್ಲೂ ಲಸಿಕೆ, ಕೊರೋನಾ ಕೇಂದ್ರದ ಮಾಹಿತಿ| ಸೇವೆಯನ್ನು ಪಡೆಯಲು ಗ್ರಾಹಕರು 9013-151-515 ಸಂಖ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿ| ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರ ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿ
ನವದೆಹಲಿ(ಮೇ.04): ಹತ್ತಿರದ ಕೊರೋನಾ ಪರೀಕ್ಷಾ ಕೇಂದ್ರಗಳು ಮತ್ತು ಲಸಿಕಾ ಕೇಂದ್ರಗಳ ಪತ್ತೆಗೆ ಸಹಕರಿಸುವಂತಹ ಸೇವೆಯನ್ನು ವಾಟ್ಸಾಪ್ ಆರಂಭಿಸಿದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು 9013-151-515 ಸಂಖ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು. ಬಳಿಕ ಈ ಮೊಬೈಲ್ ಸಂಖ್ಯೆಯೊಂದಿಗೆ ಚಾಟ್ ಮಾಡಿದ್ದಲ್ಲಿ ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರ ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿಗಳು ಪರದೆ ಮೇಲೆ ತೆರೆದುಕೊಳ್ಳಲಿವೆ.
undefined
ಈ ಸೇವೆ ಪಡೆಯುವುದು ಹೇಗೆ?
* ಮೊದಲಿಗೆ 9013-151-515 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ
* ಬಳಿಕ ಈ ಸಂಖ್ಯೆಗೆ namaste(ನಮಸ್ತೆ) ಎಂಬ ಸಂದೇಶ ರವಾನಿಸಿ
* ನಂತರ ಕೋವಿಡ್ ಹೆಲ್ಪ್‌ಡೆಸ್ಕ್ ತೆರೆದುಕೊಳ್ಳಲಿದೆ
* ನೀವು ಇರುವ ಪ್ರದೇಶದ ಪಿನ್‌ಕೋಡ್ ನಮೂದಿಸಿ
* ಆಗ ಸುತ್ತಮುತ್ತಲಿನ ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರಗಳ ಮಾಹಿತಿ ತೆರೆದುಕೊಳ್ಳಲಿದೆ
* ನಿಮ್ಮ ಏರಿಯಾ ಸುತ್ತಮುತ್ತ ಕೇಂದ್ರಗಳ ಮಾಹಿತಿ ತೋರಿಸದಿದ್ದರೆ, ನಿಮಗೆ ಹತ್ತಿರದ ಏರಿಯಾ ಪಿನ್‌ಕೋಡ್ ಹಾಕಿ
* ಆಗ ಸುತ್ತಮುತ್ತಲಿನ ಕೊರೋನಾ ಪರೀಕ್ಷಾ ಕೇಂದ್ರಗಳು ಮತ್ತು ಲಸಿಕಾ ಕೇಂದ್ರಗಳ ಮಾಹಿತಿ ಲಭ್ಯವಾಗಲಿದೆ.
* ಕೋವಿನ್ ಆ್ಯಪ್‌ಗೆ ನೋಂದಣಿಯಾಗಲು ಇದು ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona